ನವೆಂಬರ್ 11ರಂದು ಬಿಡುಗಡೆ ಆಗುತ್ತಿರುವ ದಿಲ್ ಪಸಂದ್ ಚಿತ್ರವು ಸೆಟ್ಟೇರಿದ ದಿನದಿಂದಲೂ ಕೂಡ ಹೆಸರಿನ ಟೈಟಲ್ ಇಂದಲೇ ಅನೇಕರ ಕುತೂಹಲ ಕೆರಳಿಸಿದೆ. ಸಿನಿಮಾದ ಸಂಪೂರ್ಣ ಕೆಲಸಗಳು ಮುಗಿದಿದ್ದು ಈಗ ಅದರ ಪ್ರಿ ರಿಲೀಸ್ ಇವೆಂಟ್ ಕೂಡ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಅಧಿತಿ ಪ್ರಭುದೇವ್ ಆಗಮಿಸಿದ್ದರು.
ಹಾಗೂ ಚಿತ್ರದ ಪ್ರಮುಖ ಆಕರ್ಷಣೆಯಾದ ಜೊತೆ ಜೊತೆಯಲಿ ಧಾರಾವಾಹಿ ನಾಯಕಿ ಮೇಘಾ ಶೆಟ್ಟಿ ಮತ್ತು ಅಮ್ಮ ಐ ಲವ್ ಯು, ಗುರು ಶಿಷ್ಯರು ಸಿನಿಮಾ ಖ್ಯಾತಿಯ ನಿಶ್ಚಿಕ ನಾಯ್ಡು ಹಾಗೂ ಸಿನಿಮಾ ನಾಯಕ ಡಾರ್ಲಿಂಗ್ ಕೃಷ್ಣ, ಮಿಲನ್ ಕೃಷ್ಣ ಸೇರಿದಂತೆ ಸಿನಿಮಾದ ಇತರ ಕಲಾವಿದರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿನಿಮಾ ಪ್ರಚಾರ ಕಾರ್ಯ ಆರಂಭಿಸಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕದಲ್ಲಿ ನಿರೂಪಣೆಗೆ ಹೆಸರುವಾಸಿ ಆಗಿರುವ ಅನುಶ್ರೀ ಅವರು ನಡೆಸಿಕೊಟ್ಟರು. ಕಾರ್ಯಕ್ರಮದ ವಿಶೇಷತೆ ಏನೆಂದರೆ ಅನುಶ್ರೀ ಅವರ ಕಾಲಿಗೆ ಅಜಯ್ ಕೃಷ್ಣ ಬಿದ್ದಿದ್ದಾರೆ. ಕಿರುತರೆಯಲ್ಲಿ ತನ್ನ ಚಟಪಟ ಮಾತಿನಿಂದ, ನಗುವಿನಿಂದ, ಅಪ್ಪಟ ಕನ್ನಡದಿಂದ ಎಲ್ಲರ ಗಮನ ಸಳೆಯುತ್ತಿರುವ ನಿರೂಪಕಿ ಅನುಶ್ರೀ ಅವರು ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಅಲ್ಲಿ ಇತರರ ಕಾಲು ಎಳೆದು ತಮಾಷೆ ಮಾಡುತ್ತಾರೆ.
ಆದರೆ ಅನುಶ್ರೀ ಅವರ ಕಾಲಿಗೆ ಬೀಳುವ ಮೂಲಕ ಅನುಶ್ರೀ ಅವರ ಕಾಲೆಳೆದಿದ್ದಾರೆ. ನಿಮ್ಮಂತಹ ನಿರೂಪಕಿಯನ್ನು ನಾನು ಎಲ್ಲೂ ನೋಡಿಲ್ಲ ಎಂದು ಹೇಳಿ ತಮಾಷೆ ಮಾಡಿದ್ದಾರೆ. ಹಾಗೂ ಅನುಶ್ರೀ ಅವರನ್ನು ನೀವೆಷ್ಟು ಸುಂದರವಾಗಿದ್ದೀರ ಎಂದರೆ ನಾನು ಬೇರೆ ಕಡೆ ನೋಡಿ ಮಾತನಾಡಲು ಆಗುತ್ತಿಲ್ಲ, ಮ್ಯಾಗ್ನೆಟ್ ತರ ನೀವೇ ನನ್ನನ್ನು ಸೆಳೆಯುತ್ತಿದ್ದೀರಾ ನೀವು ನನ್ನನ್ನು ನೋಡಬೇಡಿ ಎಂದು ಹೇಳಿದರು ನಿಮ್ಮ ಮಾತಿಗೆ ಬೆಲೆ ಕೊಡದೆ ನಿಮ್ಮನೆ ನೋಡುತ್ತಾ ಮಾತನಾಡಬೇಕು ಅನಿಸುತ್ತಿದೆ ಎಂದು ತಮಾಷೆ ಮಾಡಿದ್ದಾರೆ.
ಸಿನಿಮಾ ಬಗ್ಗೆ ಕೂಡ ಮಾತನಾಡಿದ ಅಜಯ್ ಕೃಷ್ಣ ಅವರು ಶಿವ ತೇಜಸ್ ಮತ್ತು ನಾನು ತಾಜ್ ಮಹಲ್ ಸಿನಿಮಾ ಮಾಡಿದ ದಿನದಿಂದಲೂ ಪರಿಚಿತರು. ನನ್ನ ಧೈರ್ಯಂ ಸಿನಿಮಾವನ್ನು ಕೂಡ ಇವರೇ ನಿರ್ದೇಶನ ಮಾಡಿದ್ದರು. ದಿಲ್ ಪಸಂದ್ ಚಿತ್ರವು ಇಬ್ಬರು ನಾಯಕಿಯರೊಂದಿಗೆ ತಗಲಿ ಹಾಕಿಕೊಂಡಿರುವ ಒಬ್ಬ ನಾಯಕನ ಕಥೆ ಆಗಿದೆ, ನಿಜ ಜೀವನದಲ್ಲಿ ಇದು ನಿರ್ದೇಶಕರ ಕಥೆಯನ್ನೇ ಹೋಲುತ್ತದೆ ಎಂದು ನಿರ್ದೇಶಕರನ್ನು ಕೂಡ ತಮಾಷೆ ಮಾಡಿದ್ದಾರೆ.
ಈ ಸಿನಿಮಾದಲ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಜಯ್ ರಾವ್ ಅವರು ನಾನು ಈ ಸಿನಿಮಾದ ನಾಯಕನಾಗಬೇಕಿತ್ತು ಆದರೆ ಈಗಾಗಲೇ ಡಾರ್ಲಿಂಗ್ ಕೃಷ್ಣ ಅವರು ಅದಕ್ಕೆ ಒಪ್ಪಿಕೊಂಡಿದ್ದರು. ಹಾಗಾಗಿ ಈ ಅತಿಥಿ ಪಾತ್ರ ಕೂಡ ತುಂಬಾ ವಿಶೇಷವಾಗಿತ್ತು ಹಾಗಾಗಿ ಆ ಅವಕಾಶ ಸಿಕ್ಕ ಕೂಡಲೇ ಸಂತೋಷದಿಂದ ಒಪ್ಪಿಕೊಂಡೆ ಎಂದು ಹೇಳಿದ್ದಾರೆ. ಚಿತ್ರಕಥೆಯು ತುಂಬಾ ಸ್ಪೆಷಲ್ ಆಗಿದೆ, ಹೆಸರಿಗೆ ತಕ್ಕಂತೆ ಕಥೆಯ ಸ್ವಾದವು ಸಿನಿಮಾ ಪ್ರೇಕ್ಷಕರಿಗೆ ರುಚಿಸಲಿದೆ ಎಲ್ಲರೂ ಸಹ ಚಿತ್ರಮಂದಿರದಲ್ಲಿ ತಪ್ಪದೇ ಈ ಸಿನಿಮಾವನ್ನು ನೋಡಿ ಕನ್ನಡ ಸಿನಿಮಾಗಳನ್ನು ಬೆಂಬಲಿಸಿ ಎಂದು ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ಮತ್ತೊಬ್ಬ ಅತಿಥಿಯಾಗಿ ಆಗಮಿಸಿದ ಅಧಿತಿ ಪ್ರಭುದೇವ ಅವರು ಕೂಡ ಸಿನಿಮಾ ಬಗ್ಗೆ ಮಾತನಾಡಿ ಸಿನಿಮಾ ಬಹಳ ಚೆನ್ನಾಗಿ ಮೂಡಿ ಬಂದಿದೆ, ಕನ್ನಡದಲ್ಲಿ ಒಂದು ಎಂಟರ್ಟೈನ್ಮೆಂಟ್ ಚಿತ್ರವಾಗಿದೆ. ಅಲ್ಲದೆ ಈ ನಿರ್ದೇಶಕರು ನನ್ನ ಮೊದಲ ಸಿನಿಮಾದ ನಿರ್ದೇಶಕರು ಸಹ ಆಗಿರುವುದರಿಂದ ಆ ಕಾರಣಕ್ಕಾಗಿ ನಾನು ತಪ್ಪಿಸಿಕೊಳ್ಳದೆ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಚಿತ್ರತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.