ಕನಸುಗಾರ ರವಿಚಂದ್ರನ್ ಅವರು ನಮ್ಮ ಸ್ಯಾಂಡಲ್ ಕಂಡ ಒಬ್ಬ ಕ್ರೇಜಿ ನಟ ಸಿನಿಮಾ ಬಗ್ಗೆ ಇವರಿಗೆ ಇರುವ ಆಸಕ್ತಿ ಇಂಟರೆಸ್ಟ್ ಇವುಗಳಿಂದಲೇ ಕ್ರೇಜಿಸ್ಟಾರ್ ಎಂದು ಕರೆಸಿಕೊಂಡವರು. ನಿರ್ಮಾಪಕ ವಿ ವೀರಸ್ವಾಮಿ ಮಗನಾಗಿದ್ದ ರವಿಚಂದ್ರನ್ ಅವರು ಚಿಕ್ಕ ವಯಸ್ಸಿನಿಂದಲೂ ಕೂಡ ತಾನೊಬ್ಬ ಸ್ಟಾರ್ ನಟನಾಗಬೇಕು ಎಂದು ಆಸೆ ಪಟ್ಟವರು.
ಅಂದುಕೊಂಡ ಹಾಗೆ ಸಿನಿಮಾರಂಗವನ್ನು ಪ್ರವೇಶಿಸಿ ಪ್ರೇಮಲೋಕ, ರಣಧೀರ, ಅಂಜದಗಂಡು, ಶಾಂತಿ ಕ್ರಾಂತಿ, ಚಿನ್ನ, ಪುಟ್ನಂಜ, ಕಲಾವಿದ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು ಕನ್ನಡಿಗರಿಂದ ರವಿಮಾಮ ಎಂದು ಕರೆಸಿಕೊಂಡವರು. ರವಿ ಚಂದ್ರನ್ ಅವರ ಸಿನಿಮಾಗಳನ್ನು ನೋಡಲು ಒಂದು ಕಾಲದಲ್ಲಿ ಜನ ಥಿಯೇಟರ್ ಕಡೆ ಮುಗಿ ಬೀಳುತ್ತಿದ್ದರು.
ಇವರ ಹಳ್ಳಿ ಮೇಷ್ಟ್ರು, ಕಿಂದರಜೋಗಿ, ಪ್ರೀತ್ಸೋದ್ ತಪ್ಪಾ, ಮಾಂಗಲ್ಯಂ ತಂತು ನಾನೇನಾ, ಚೆಲುವ, ಯಾರೇ ನೀನು ಚೆಲುವೆ ಇಂತಹ ಸಿನಿಮಾಗಳಿಗೆ ಈಗಲೂ ಅಭಿಮಾನಿಗಳು ಇದ್ದಾರೆ. ಹೆಣ್ಣು ಮಕ್ಕಳ ಫೇವರೆಟ್ ಹೀರೋ ಆಗಿರುವ ರವಿ ಚಂದ್ರನ್ ಅವರನ್ನು ನೋಡಿ ಪತಿ ಎಂದರೆ ಇವರ ಇರಬೇಕು, ಇನಿಯನಾದರೆ ರವಿಚಂದ್ರನ್ ಅವರ ರೀತಿ ಪ್ರೀತಿ ಮಾಡಬೇಕು ಎಂದು ಹೆಣ್ಣು ಮಕ್ಕಳು ಆಸೆ ಪಡುವಂತೆ ಮಾಡಿದವರು.
ಕರ್ನಾಟಕದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮಹಿಳಾ ಅಭಿಮಾನಿಗಳನ್ನು ಹೊಂದಿರುವ ರವಿಚಂದ್ರನ್ ಅವರ ಮೇಲೆ ಎಲ್ಲರಿಗೂ ವಿಶೇಷ ಪ್ರೀತಿ. ಪ್ರೇಮಲೋಕ ಎನ್ನುವ ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಹೊಸದೊಂದು ರೀತಿಯಲ್ಲಿ ಮೈಲಿಗಲ್ಲು ಹಾಕಿ ಆ ಮೂಲಕ ಪ್ರೀತಿ ಪ್ರೇಮ ಕುರಿತ ಸಿನಿಮಾಗಳನ್ನು ಜನ ಮುಜುಗರವಿಲ್ಲದೆ ನೋಡುವ ರೀತಿ ಮಾಡಿದವರು.
ರವಿಚಂದ್ರನ್ ಅವರು ಪ್ರೀತಿ ಕೂಡ ಬದುಕಿನ ಭಾಗ ಎಂದು ಹೇಳಿದವರು, ಇವರ ಸಿನಿಮಾಗಳಲ್ಲಿ ಪ್ರೀತಿ ಪ್ರೇಮದ ಕುರಿತ ಕಥೆಗಳೇ ಹೆಚ್ಚಾಗಿ ಇರುತ್ತಿತ್ತು. ರವಿಚಂದ್ರನ್ ಅವರು ಸಿನಿಮಾ ವನ್ನು ಎಷ್ಟು ಇಷ್ಟಪಡುತ್ತಿದ್ದರು ಎಂದರೆ ಪ್ರತಿ ಸಿನಿಮಾವನ್ನು ಕೂಡ ಹಿಂದಿನ ಸಿನಿಮಗಿಂತ ಹೆಚ್ಚು ಗ್ರಾಂಡ್ ಆಗಿ ಮಾಡಬೇಕು ಎಂದು ಕ್ರಿಯೇಟಿವ್ ರೀತಿಯಲ್ಲಿ ಯೋಚಿಸಿ ಬಜೆಟ್ ಬಗ್ಗೆ ಎಂದು ತಲೆ ಕೆಡಿಸಿಕೊಳ್ಳದೆ ಸಿನಿಮಾವನ್ನು ಒಂದು ಅದ್ಭುತವಾಗಿದೆ ತೆರೆ ಮೇಲೆ ತರುತ್ತಿದ್ದವರು.
ಈ ವ್ಯಕ್ತಿ ಸಿನಿಮಾದಷ್ಟೇ ತನ್ನ ಕುಟುಂಬವನ್ನು ಕೂಡ ಇಷ್ಟ ಪಡುತ್ತಿದ್ದರು. ಈಗಲೂ ಕೂಡ ಸದಾ ತನ್ನ ತಂದೆ ತಾಯಿಯ ಬಗ್ಗೆ ಮಾತನಾಡುವ ಹೆಂಡತಿ ಮಕ್ಕಳ ಜೊತೆ ಇರುವ ಅನುಬಂಧದ ಬಗ್ಗೆ ಮಾತನಾಡುವ ರವಿಚಂದ್ರನ್ ಅವರು ತಂದೆ ಮತ್ತು ತಾಯಿಯ ಬಗ್ಗೆ ವಿಪರೀತ ಗೌರವ ಹಾಗೂ ಪ್ರೀತಿ ಹೊಂದಿದ್ದರು.
ರವಿಚಂದ್ರನ್ ಅವರು ಅವರ ತಂದೆಯ ಮಾತಿನಂತೆ ಅವರು ನೋಡಿದ ಹುಡುಗಿಯನ್ನೇ 14 ಫೆಬ್ರುವರಿ, 1986 ರಲ್ಲಿ ಮದುವೆಯಾದರು. ತಾವು ಹಿಂದೆ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದರು ಕೂಡ ಅವರ ತಂದೆ ಒಪ್ಪದ ಕಾರಣ ತಂದೆ ನೋಡಿದ ಹುಡುಗಿಯನ್ನೇ ಅರೆಂಜ್ ಮ್ಯಾರೇಜ್ ಆದ ರವಿ ಚಂದ್ರನ್ ಹಾಗೂ ಅವರ ಪತ್ನಿಯ ನಡುವಿನ ವಯಸ್ಸಿನ ಅಂತರ ಈಗ ಸೋಶಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆ ಆಗುತ್ತಿದೆ.
ರವಿ ಚಂದ್ರನ್ ಅವರ ಪತ್ನಿ ಸುಮತಿ ಅವರು ರವಿಚಂದ್ರನ್ ಅವರಿಗಿಂತ ಕೇವಲ ಮೂರು ವರ್ಷ ಚಿಕ್ಕವರಾಗಿದ್ದು ಇವರ ನಡುವೆ ವಯಸ್ಸಿನ ಅಂತರ ಕಡಿಮೆ ಇರುವುದರಿಂದ ಇಬ್ಬರ ನಡುವೆ ಹೊಂದಾಣಿಕೆ ಚೆನ್ನಾಗಿದೆ. ಇದೇ ಕಾರಣದಿಂದ ಚಂದನವನದ ಆದರ್ಶ ಜೋಡಿಗಳು ಎಂದು ಕರೆಸಿಕೊಂಡಿರುವ ಇವರು ವಿವಾದ ಇಲ್ಲದಂತೆ 36 ವರ್ಷಗಳ ದಾಂಪತ್ಯ ಜೀವನವನ್ನು ನಡೆಸಿದ್ದಾರೆ.