Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಹಳದಿ ಶಾಸ್ತ್ರದ ಅರಿಶಿಣದಲ್ಲಿ ಮಿಂದೆದ್ದ ನಟಿ ಅದಿತಿ ಪ್ರಭುದೇವ ಈ ಕ್ಯೂಟ್ ವಿಡಿಯೋ ನೋಡಿ, ದೇವತೆಯೇ ಧರೆಗಿಳಿದ ಹಾಗೇ ಕಂಗೊಳಿಸುತ್ತಿದ್ದಾರೆ.

Posted on November 26, 2022November 26, 2022 By Kannada Trend News No Comments on ಹಳದಿ ಶಾಸ್ತ್ರದ ಅರಿಶಿಣದಲ್ಲಿ ಮಿಂದೆದ್ದ ನಟಿ ಅದಿತಿ ಪ್ರಭುದೇವ ಈ ಕ್ಯೂಟ್ ವಿಡಿಯೋ ನೋಡಿ, ದೇವತೆಯೇ ಧರೆಗಿಳಿದ ಹಾಗೇ ಕಂಗೊಳಿಸುತ್ತಿದ್ದಾರೆ.

 

ನಟಿ ಅತಿಥಿ ಪ್ರಭುದೇವ ಅವರು ಈಗ ಕನ್ನಡ ಚಿತ್ರರಂಗದಲ್ಲಿ ಬೆಳೆಯುತ್ತಿರುವ ಪ್ರತಿಭೆ. ವರ್ಷಪೂರ್ತಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಅಧಿತಿ ಪ್ರಭುದೇವ್ ಅವರು ಸಿನಿಮಾ ಜರ್ನಿಯ ಜೊತೆ ಬದುಕಿನ ಹೊಸ ಪ್ರಯಾಣವನ್ನು ಶುರು ಮಾಡಲು ನಿರ್ಧರಿಸಿದ್ದು ಮದುವೆ ಆಗುವ ನಿರ್ಧಾರ ಮಾಡಿದ್ದಾರೆ. ಅದರಂತೆ ಕುಟುಂಬಸ್ಥರ ನೋಡಿ ಒಪ್ಪಿದ ಹುಡುಗನೊಂದಿಗೆ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಇದಾದ ನಂತರವೂ ವರ್ಷದಿಂದ ಸಿನಿಮಾಗಳ ಕಡೆ ಮುಖ ಮಾಡಿ ಕಂಟಿನ್ಯೂ ಶೂಟಿಂಗ್ ಅಲ್ಲಿ ಬ್ಯುಸಿ ಆಗಿದ್ದ ಇವರು ಈಗ ಬ್ರೇಕ್ ಪಡೆದುಕೊಂಡು ಅದ್ದೂರಿಯಾಗಿ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಇವರ ವಿವಾಹ ಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿ ಇವರ ಮದುವೆಯ ಶಾಸ್ತ್ರಗಳ ವಿಡಿಯೋಗಳು ಹಾಗೂ ಫೋಟೋಗಳು ಹರಿದಾಡುತ್ತಿವೆ.

ಉತ್ತಮ ಗ್ಲಾಮರ್ ಬ್ಯೂಟಿಗೆ ತಕ್ಕಹಾಗೆ ಟ್ಯಾಲೆಂಟ್ ಎಲ್ಲವನ್ನು ಹೊಂದಿರುವ ಅಧಿತಿ ಪ್ರಭುದೇವ್ ಅವರು ಬಣ್ಣದ ಲೋಕ ಸೇರಲು ಕನಸು ಕಾಣುತ್ತಿದ್ದರು. ಅಂದುಕೊಂಡಂತೆ ಅವರಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ನಾಗಕನ್ನಿಕೆ ಎನ್ನುವ ಧಾರಾವಾಹಿಯ ಮುಖ್ಯಪಾತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಅವಕಾಶ ದೊರೆಯಿತು.

ಈ ಧಾರಾವಾಹಿ ಖ್ಯಾತಿ ಬೆಳಗುತ್ತಿದ್ದಂತೆ ಒಂದರ ಹಿಂದೆ ಇದರಂತೆ ಸಾಲು ಸಾಲು ಸಿನಿಮಾ ಅವಕಾಶಗಳು ಇವರನ್ನು ಅರಸಿ ಬಂದವು. ಅಜಯ್ ರಾವ್ ಅವರೊಂದಿಗೆ ಶಿವ ತೇಜಸ್ ಅವರ ನಿರ್ದೇಶನದ ಸಿನಿಮಾದಲ್ಲಿ ಮೊದಲ ಬಾರಿಗೆ ಹಿರಿತೆರೆ ಪ್ರವೇಶಿಸಿದ ಇವರು ಆ ನಂತರ ಅನೇಕ ಕನ್ನಡ ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದರು. ರಂಗನಾಯಕಿ, ಬಜಾರ್, ಸಿಂಗ, ಧೈರ್ಯಂ, ಓಲ್ಡ್ ಮಾಂಕ್, ಗಜಾನನ ಗ್ಯಾಂಗ್, ಬ್ರಹ್ಮಚಾರಿ, ತೋತಾಪುರಿ ಮುಂತಾದ ಸಿನಿಮಾಗಳಲ್ಲಿ ನಾಯಕ ನಟಿ ಆಗಿ ಅಭಿನಯಿಸಿರುವ ಅಧಿತಿ ಪ್ರಭುದೇವ ಅವರು ವರ್ಷಪೂರ್ತಿ ಸಿನಿಮಾದಲ್ಲಿ ಬಿಸಿ ಆಗಿರುವ ನಟಿ.

ಇದೇ ವರ್ಷ ಇವರು ಡಾಲಿ ಧನಂಜಯ್ ಅವರೊಂದಿಗೆ ಅಭಿನಯಿಸಿರುವ ಜಮಾಲಿಗುಡ್ಡ ಸಿನಿಮಾ ಕೂಡ ರಿಲೀಸ್ ಆಗಲಿದೆ ಮತ್ತು ಈಗಷ್ಟೇ ಬಿಡುಗಡೆ ಆಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಮೂರು ನಾಯಕಿಯರು ಇರುವ ತ್ರಿಬ್ಬಲ್ ರೈಡಿಂಗ್ ಸಿನಿಮಾದಲ್ಲಿ ರಚನಾ ಮತ್ತು ಮೇಘ ಶೆಟ್ಟಿ ಅವರೊಂದಿಗೆ ಅಧಿತಿ ಪ್ರಭುದೇವ ಅವರು ಸಹ ಒಬ್ಬ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ.

ವೃತ್ತಿ ಜೀವನದಲ್ಲಿ ಅಂದುಕೊಂಡಂತೆ ಪುಟ್ಟ ಪುಟ್ಟ ಮೆಟ್ಟಿಲೇರುತ್ತಾ ಸಾಧನದ ಶಿಖರ ಏರಲು ಕನಸು ಕಂಡಿರುವ ಇವರು ಕೆರಿಯರ್ ಜೊತೆ ವೈಯಕ್ತಿಕ ಜೀವನದ ಕಡೆ ಕೂಡ ಬಹಳ ಗಮನ ಕೊಡುತ್ತಾರೆ. ಉತ್ತರ ಕರ್ನಾಟಕದ ಹಳ್ಳಿ ಹೆಣ್ಣುಮಗಳಾದ ಇವರು ಬೆಂಗಳೂರಿನಲ್ಲಿ ನೆಲೆಸಿದ್ದರು ಕೂಡ ತನ್ನ ಊರಿಗೆ ಹೋದಾಗ ಸಾಮಾನ್ಯ ಹಳ್ಳಿ ಹುಡುಗಿಯಂತೆಯೇ ಕಾಣಿಸಿಕೊಳ್ಳುತ್ತಾರೆ ಮತ್ತು ಮನೆಯ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ.

ಇವರು ಸೇರುತ್ತಿರುವ ಮನೆಯು ಕೂಡ ಕೃಷಿ ಕುಟುಂಬ ಆಗಿದ್ದು ಇವರು ಕೈಹಿಡಿಯುತ್ತಿರುವ ಯಶಸ್ ಅವರು ಕಾಫಿ ತೋಟದ ಒಡೆಯರಾಗಿದ್ದಾರೆ. ಕಳೆದ ವರ್ಷ ಎಂಗೇಜ್ಮೆಂಟ್ ಆಗಿದ್ದ ಜೋಡಿ ಈಗ ಕುಟುಂಬಸ್ಥರು ಸ್ನೇಹಿತರು ಮತ್ತು ಸ್ಯಾಂಡಲ್ವುಡ್ ನ ಸಹೋದ್ಯೋಗಿಗಳ ನಡುವೆ ಶಾಸ್ತ್ರೋತ್ತವಾಗಿ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ನಟಿ ಪ್ರಭುದೇವ ಅವರಿಗೆ ಅರಿಶಿನ ಶಾಸ್ತ್ರ ನಡೆದಿರುವ ಫೋಟೋಗಳು ವಿಡಿಯೋಗಳು ವೈರಲ್ ಆಗುತ್ತಿದ್ದು ದೇವಲೋಕದ ಅಪ್ಸರೆಯಂತೆ ಬಿಳಿ ಬಣ್ಣದ ಉಡುಗೆಯಲ್ಲಿ ಅಧಿತಿ ಮಿಂಚುತ್ತಿದ್ದಾರೆ.

ಹಳದಿ ಶಾಸ್ತ್ರವಾದ ಕಾರಣ ಬಿಳಿ ಬಣ್ಣದಲ್ಲಿ ಇದ್ದ ಇವರ ವಸ್ತ್ರವು ಹಳದಿ ಬಣ್ಣಕ್ಕೆ ಆಗುವಷ್ಟು ಬಣ್ಣದ ನೀರು ಇವರಿಗೆ ಹಾಕಲಾಗಿದ್ದು ವಿಭಿನ್ನ ರೀತಿಯಲ್ಲಿ ಫೋಟೋಶೂಟ್ ಹಾಗೂ ವಿಡಿಯೋ ಮಾಡಿಸಲಾಗಿದೆ. ಯಾವ ಸಿನಿಮಾ ಶೂಟಿಂಗು ಕಡಿಮೆ ಇರದಂತೆ ಸಖತ್ ಸೆಟ್ ನಡುವೆ ಅಧಿತಿ ಯಶಸ್ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ.

Entertainment Tags:Adithi Prabhudeva, Adithi Yashashwi, Aditi Wedding
WhatsApp Group Join Now
Telegram Group Join Now

Post navigation

Previous Post: Puneeth Rajkumar: ಅಪ್ಪು ನಟಿಸಿಬೇಕಿದ್ದ ದ್ವಿತ್ವ ಚಿತ್ತಕ್ಕೆ ಬೇರೆ ನಟ ಆಯ್ಕೆಯಾಗಿದ್ದಾರೆ ಯಾರದು ಗೊತ್ತ.?
Next Post: ಗಂಡನ ದುಡ್ಡಲ್ಲಿ ದಿನಕ್ಕೊಂದು ದೇಶ ಸುತ್ತುತ ಮಜ ಮಾಡ್ತ ಇದಿಯಾ ಎಂದು ಕೆಟ್ಟದಾಗಿ ಕಾಮೆಂಟ್ ಮಾಡಿದವರ ವಿರುದ್ಧ ಸಿಡಿದೆದ್ದು ಕಣ್ಣೀರು ಹಾಕುತ್ತ ನಿವೇದಿತಾ ಗೌಡ ಹೇಳಿದ್ದೇನು ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore