ಮಂಡ್ಯ ರಮೇಶ್ ಕನ್ನಡ ರಂಗಭೂಮಿಯ ಹೆಮ್ಮೆ ಕರ್ನಾಟಕದಲ್ಲಿ ರಂಗಭೂಮಿಯು ಇನ್ನು ಉಸಿರಾಡುತ್ತಿರುವುದಕ್ಕೆ ಮಂಡ್ಯ ರಮೇಶ್ ಅವರ ಸೇವೆ ಕೂಡ ದೊಡ್ಡ ಮಟ್ಟದ್ದು. ಕನ್ನಡ ಚಲನಚಿತ್ರ ರಂಗದಲ್ಲಿ ಹಾಸ್ಯನಟನಾಗಿ ಗುರುತಿಸಿಕೊಳ್ಳುತ್ತಿರುವ ಮಂಡ್ಯ ರಮೇಶ್ ಅವರು ಸದ್ಯಕ್ಕೆ ಮಜಾ ಟಾಕೀಸ್ ಎನ್ನುವ ಕಾರ್ಯಕ್ರಮದಲ್ಲಿ ವಯಸ್ಸಾದರೂ ಮದುವೆಯಾಗದೆ ಉಳಿದಿರುವ ಮುದ್ದೇಶ ಎನ್ನುವ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಇವರ ಈ ಅಭಿನಯ ನೋಡಿ ನಗದ ಕನ್ನಡಿಗರೇ ಇಲ್ಲ. ಆದರೆ ಇವರು ಕೇವಲ ಹಾಸ್ಯಕಷ್ಟೇ ಸೀಮಿತ ಅಲ್ಲ. ರಂಗಭೂಮಿಯಲ್ಲಿ ಇವರ ಪಯಣದ ಬಗ್ಗೆ ಹೇಳಲು ಪದಗಳೇ ಸಾಲದು. ನಟನಾ ಎನ್ನುವ ನಾಟಕ ತಂಡವನ್ನು ಕಟ್ಟಿ ಆ ಮೂಲಕ ಅಭಿನಯದ ಕನಸು ಹೊತ್ತು ಬರುವ ಎಷ್ಟೋ ಜನ ಯುವಕ-ಯುವತಿಯರನ್ನು ಪಳಗಿಸಿ ಆ ಮೂಲಕ ಕನ್ನಡಕ್ಕೆ ಉತ್ತಮ ನಟರನ್ನು, ಬರಹಗಾರನನ್ನು, ನಿರ್ದೇಶಕರನ್ನು ಕೊಡುತ್ತಿರುವ ಖ್ಯಾತಿ ಇವರದ್ದು.
ಸದ್ಯಕ್ಕೆ ಈಗ ಕನ್ನಡ ಚಲನಚಿತ್ರ ರಂಗದಲ್ಲಿ ಇರುವ ಹೊಸ ಕಲಾವಿದರಲ್ಲಿ ಕನಿಷ್ಠ 50% ಕಲಾವಿದರಾದರು ಮಂಡ್ಯ ರಮೇಶ್ ಅವರ ನಟನ ತಂಡದಿಂದಲೇ ಬಂದವರಾಗಿದ್ದಾರೆ. ಮಂಡ್ಯ ರಮೇಶ್ ಅವರು ನೋಡಲು ತುಂಬಾ ಪೆದ್ದುಪೆದ್ದಾದ ಪಾತ್ರಗಳಲ್ಲಿ ಕಂಡರು ಅಭಿನಯದಲ್ಲಿ ಅವರ ಜ್ಞಾನ, ನಾಟಕದಲ್ಲಿ ಅವರಿಗಿರುವ ಆಸಕ್ತಿ ಈದಿನ ರಂಗಭೂಮಿಯಲ್ಲಿ ಅವರು ಎಷ್ಟು ಎತ್ತರದ ಹೆಸರು ಗಳಿಸಲು ಕಾರಣವಾಯಿತು. ಇಂದಿಗೂ ಸಹ ಇವರ ನಟನ ಶಾಲೆಯಲ್ಲಿ ಬೇಸಿಗೆ ಶಿಬಿರಗಳು ನಡೆಯುತ್ತಿದ್ದು, ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಇಲ್ಲಿ ತಂದು ಸೇರಿಸಿ ಸಂಗೀತ ಸಾಹಿತ್ಯ ಹಾಡು ನಟನೆ ನೃತ್ಯ ಈ ರೀತಿಯಾಗಿ ಮಕ್ಕಳನ್ನು ಉತ್ತಮ ಅಭ್ಯಾಸಗಳ ಕಡೆ ಒಗ್ಗುವಂತೆ ಮಾಡಲು ಪೋಷಕರು ಕಾಯುತ್ತಿರುತ್ತಾರೆ. ಆದರೆ ಈ ಅವಕಾಶ ಕೇವಲ ಕೆಲವೇ ಸೀಟುಗಳಿಗೆ ಸೀಮಿತವಾಗಿದ್ದು ಬಂದವರಿಗೆ ಅಚ್ಚುಕಟ್ಟಾಗಿ ಹೇಳಿಕೊಡುವ ಕಾರ್ಯವನ್ನು ಮಂಡ್ಯ ರಮೇಶ್ ಅವರ ಮುಖ್ಯಸ್ಥಿಕೆಯಲ್ಲಿ ನಟನಾ ನಾಟಕ ತಂಡವು ಮಾಡುತ್ತಿದೆ.
ಮಂಡ್ಯ ರಮೇಶ್ ಅವರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಪುನೀತ್ ಅವರ ಅಗಲಿಕೆಯ ನೋ’ವು ಹಾಗೂ ಆದಿನ ಅವರಿಗಾದ ಅನುಭವದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿ ಇಷ್ಟು ದಿನ ತಮ್ಮ ಮನದಲ್ಲಿ ಇಟ್ಟುಕೊಂಡಿದ್ದ ನೋವನ್ನೆಲ್ಲ ಆಚೆ ಹಾಕಿದ್ದಾರೆ. ಇಲ್ಲಿ ಅವರು ಹೇಳಿರುವ ಒಂದೊಂದು ಮಾತು ಸಹ ಪುನೀತ್ ಅವರ ನೆನಪನ್ನು ಕಣ್ಮುಂದೆ ತಂದು ಎಲ್ಲರ ಕಣ್ಣು ಒದ್ದೆಯಾಗುವಂತೆ ಮಾಡುತ್ತದೆ. ಅಕ್ಟೋಬರ್ 29, 2021 ಈ ದಿನ ಕರುನಾಡಿಗೆ ಗ್ರಹಣ ಹಿಡಿದ ದಿನ ಏಕೆಂದರೆ ಕನ್ನಡದ ಅಮೂಲ್ಯ ಮುತ್ತೊಂದು ಆ ದಿನ ಕಳೆದುಹೋಗಿತ್ತು. ಪ್ರೀತಿಯಿಂದ ಎಲ್ಲರ ಮನಸ್ಸನ್ನು ಗೆದ್ದಿದ್ದ ರಾಜಕುಮಾರ ಅಂದು ಮೌನವಾಗಿ ಮಲಗಿದ್ದ. ಇದನ್ನು ನೋಡುತ್ತಿದ್ದ ಕರುನಾಡ ಜನತೆ ಸಂ’ಕ’ಟ’ವನ್ನು ತಾಳಲಾರದೆ ಇಂದಿಗೂ ಸಹ ಅದೇ ನೋ’ವಿ’ನಲ್ಲಿ ಬೇಯುತ್ತಿದ್ದಾರೆ. ಈ ಸಾ’ವು ಪುನೀತ್ ಅವರ ಕುಟುಂಬಕ್ಕೆ ಹಾಗೂ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಕರುನಾಡಿಗೆ ಮಗನನ್ನು ಕಳೆದುಕೊಂಡ ಸೂತಕವನ್ನು ಸೃಷ್ಟಿ ಮಾಡಿತ್ತು.
ಪುನೀತ್ ಅವರ ಅಗಲಿಕೆಗೆ ಸಂತಾಪ ಸೂಚಿಸದ ಕನ್ನಡಿಗನಿಲ್ಲ ಊರೂರುಗಳಲ್ಲಿ ಕೇರಿಕೇರಿಗಳಲ್ಲಿ ಗಲ್ಲಿಗಲ್ಲಿಗಳಲ್ಲೂ ಸಹ ಪುನೀತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪೋಸ್ಟ್ಗಳನ್ನು ಇಂದಿಗೂ ಸಹ ಅಭಿಮಾನಿಗಳಿಗೆ ಇಳಿಸಲು ಮನಸ್ಸು ಬರುತ್ತಿಲ್ಲ. ಈ ಸಾ’ವಿ’ಗೆ ದೇಶ ಮಾತ್ರವಲ್ಲದೆ ವಿದೇಶದ ಸುದ್ದಿಚಾನೆಲ್ ಕೂಡ ಸಂತಾಪ ಸೂಚಿಸಿ, ಇಡಿ ವಿಶ್ವವೇ ಒಮ್ಮೆ ಪುನೀತ್ ಅವರ ಗಳಿಸಿದ ಪ್ರೀತಿಯ ಅಭಿಮಾನಿಗಳ ದಾಖಲೆಯನ್ನು ನೋಡಲು ಕಂಠೀರವ ಸ್ಟುಡಿಯೋ ಕಡೆ ತಿರುಗಿ ನೋಡುವಂತೆ ಮಾಡಿತ್ತು. ಭಾರತದಲ್ಲಿ ಯಾವ ಒಬ್ಬ ಸಿನಿಮಾ ನಾಯಕನಿಗೆ ಆಗಲಿ, ರಾಜಕೀಯ ನಾಯಕನಿಗೆ ಆಗಲಿ, ಸಮಾಜ ಸೇವಕನಿಗೆ ಆಗಲಿ ಸೇರದಷ್ಟು ಜನ ಪುನೀತ್ ಅಂತ್ಯ ಸಂಸ್ಕಾರಕ್ಕೆ ಸೇರಿ ಹೊಸ ದಾಖಲೆ ಬರೆದಿದ್ದರು. ಅಕ್ಷರಶಃ ಜನ ಅಂದು ಪುನೀತ್ ರಾಜಕುಮಾರ್ ಅವರನ್ನು ದೇವರು ಎಂದೇ ಕಂಡರು. ಯಾಕೆಂದರೆ ಪುನೀತ್ ಅವರ ಅಗಲಿಕೆ ನಂತರ ಅವರು ಸಮಾಜಕ್ಕೆ ಮಾಡಿದ್ದ ಸೇವೆಯ ವಿವರಗಳು ಒಂದೊಂದಾಗಿ ಸುದ್ದಿ ಮಾಧ್ಯಮದಲ್ಲಿ ಹೊರಬರಲು ಶುರುವಾಯಿತು.
ಅವರ ಸಹೃದಯದ ವಿಶಾಲತೆ ಅರಿತ ಜನ ದೇವತಾ ಮನುಷ್ಯನನ್ನು ಕಳೆದುಕೊಂಡು ದುಃ’ಖವನ್ನು ತಡೆಯಲಾರದೆ ಕಂಗಾಲಾಗಿ ಹೋಗಿದ್ದರು. ನಟ ಮಂಡ್ಯ ರಮೇಶ್ ಅವರಿಗೂ ಅಷ್ಟೇ ಅವರು ಹೇಳಿದ ಪ್ರಕಾರ ನಾನು ಪುನೀತ್ ರಾಜಕುಮಾರ್ ಅವರನ್ನು ಬಾಲ್ಯದಿಂದಲೂ ಬಲ್ಲೆ ಅವರ ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಬೆಟ್ಟದಹೂವು, ಭಕ್ತ ಪ್ರಹ್ಲಾದ ಈ ಸಿನಿಮಾಗಳನ್ನು ನೋಡಿ ಅವರ ಅಭಿನಯಕ್ಕೆ ನಾನು ಬೆರಗಾಗಿ ಹೋಗಿದ್ದೆ. ಆ ದಿನಗಳಿಂದಲೂ ನನಗೆ ಅವರು ಗೊತ್ತಿತ್ತು ಆದರೆ ಬೆಳೆಯುತ್ತ ನನ್ನ ದಾರಿ ಬದಲಾಗಿ ಬಹಳ ದಿನಗಳ ಬಳಿಕ ಜನುಮದ ಜೋಡಿ ಶೂಟಿಂಗ್ ಸಮಯದಲ್ಲಿ ಮತ್ತೆ ನಾನು ಅವರನ್ನು ನೋಡಿದ್ದೆ ಅಂದು ನನಗೆ ಹೂಹಾರ ಹಾಕಿ ಅವರೇ ಸ್ವಾಗತಿಸಿದರು. ಆಗ ಕೂಡ ನಾನು ಮತ್ತೆ ಯಾವಾಗ ಹೀರೋ ಆಗುತ್ತೀಯಾ ಎಂದು ಕೇಳಿದೆ ಅದಕ್ಕೆ ನನಗೆ ಮೆಚ್ಚುಗೆಯಾಗುವ ಕಥೆ ಸಿಕ್ಕಿಲ್ಲ ಸಿಕ್ಕಾಗ ಖಂಡಿತ ಮಾಡುತ್ತೇನೆ ಎಂದಿದ್ದರು.
ಅವರು ಅಂದಿದ್ದ ಮಾತಿನಂತೆಯೇ ಪ್ರತಿ ಕಥೆಗಳ ಆಯ್ಕೆಯಲ್ಲೂ ತುಂಬಾ ಪ್ರಬುದ್ಧತೆಯಿಂದ ನಿರ್ಧಾರ ತೆಗೆದುಕೊಳ್ಳುತ್ತಾ ಇದ್ದ ಅಪ್ಪು ನಂತರ ಒಂದೊಂದೇ ಸಿನಿಮಾ ಗೆಲ್ಲುತ್ತ ಬೆಳೆಯುತ್ತಿದ್ದಂತೆ ಬದುಕುವ ಶೈಲಿಯನ್ನು ಬದಲಿಸಿಕೊಂಡರು. ಸಮಾಜ ಸೇವೆಯತ್ತ ಮುಖ ಮಾಡಿ ಎಲ್ಲಾ ನಟರಿಗೂ ಮಾದರಿಯಾದರು. ಆದರೆ ನಾನು ಭತ್ತದ ಕಾಳುಗಳು ಎನ್ನುವ ಸಿನಿಮಾ ಕಥೆಯನ್ನು ನನ್ನ ಗೆಳೆಯನಾದ ಕಾರ್ತಿಕ್ ಸರಗೂರು ಅವರಿಂದ ಪುನೀತ್ ಅವರಿಗೆ ಹೇಳಲು ಬಯಸಿದ್ದೆ ಮತ್ತು ರಾಜ್ ಕುಮಾರ್ ಅವರ ಹೆಸರಲ್ಲಿ ಚಾಮರಾಜನಗರದ ತಾಲೂಕುಗಳಲ್ಲಿ ರಂಗಮಂದಿರ ಕಟ್ಟಿಸುವ ಮೂಲಕ ಹಳ್ಳಿ ಪ್ರತಿಭೆಗಳಿಗೆ ನಾಟಕಗಳನ್ನು ಮಾಡಲು ಅನುಕೂಲ ಮಾಡಿಕೊಡುವಂತೆ ಅವರ ಬಳಿ ಕೇಳಿಕೊಳ್ಳಲು ಯೋಜನೆ ಹಾಕಿಕೊಂಡಿದ್ದೆ. ಆದರೆ ಅವರ ಸುತ್ತಲೂ ಇದ್ದ ವ್ಯೂಹವನ್ನು ಭೇದಿಸಿ ಅವರ ಬಳಿ ಮಾತನಾಡಲು ನನಗೆ ಯಾಕೋ ಆಗಲಿಲ್ಲ ಆದರೆ ಮತ್ತೊಂದು ಪ್ರಯತ್ನ ಮಾಡುವ ಮುನ್ನವೇ ವಿಧಿ ಅವರನ್ನು ನಮ್ಮಿಂದ ದೂರ ಮಾಡಿಬಿಟ್ಟಿದ್ದೆ ಇದು ಇಡೀ ಕರುನಾಡಿಗೆ ಆಗಿರುವ ನ’ಷ್ಟ ಎಂದು ತುಂಬಾ ನೋ’ವಿ’ನಿಂದ ನುಡಿದಿದ್ದಾರೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.