ವಿಷ್ಣು ದಾದಾ
ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ಈ ಇಬ್ಬರು ನಟರು ಕೂಡ ಕರ್ನಾಟಕ ಕಂಡ ಶ್ರೇಷ್ಠ ಕಲಾವಿದರುಗಳು. ಇಬ್ಬರದು ವಿಭಿನ್ನ ಬಗೆಯ ವ್ಯಕ್ತಿತ್ವ ಹಾಗೂ ಸಿನಿಮಾ ಬಗ್ಗೆ ಬೇರೆ ರೀತಿಯ ಅಭಿರುಚಿ. ಇಬ್ಬರೂ ಪರಸ್ಪರ ವಿಭಿನ್ನ ರೀತಿಯ ಪಾತ್ರಗಳಲ್ಲಿ ನಟಿಸಿ ಜನರನ್ನು ಮನಸ್ಸು ಸೆಳೆದವರು. ಹೆಣ್ಣು ಮಕ್ಕಳ ಹಾರ್ಟ್ ಗೆದ್ದ ಡ್ರೀಮ್ ಬಾಯ್ ಆಗಿ ರವಿಚಂದ್ರನ್ ಅವರು ತೆರೆ ಮೇಲೆ ನಟಿಸಿ ಗೆದ್ದಿದ್ದರೆ.
ವಿಷ್ಣುವರ್ಧನ್ ಅವರು ಕೂಡ ಹೆಣ್ಣುಮಕ್ಕಳು ಇಷ್ಟ ಪಡುವಂತಹ ಪಾತ್ರಗಳಲ್ಲಿ ನಟಿಸಿ ಅತಿ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿರುವ ಕಲಾವಿದ ಎನ್ನುವ ಖ್ಯಾತಿಗೆ ಒಳಗಾಗಿದ್ದಾರೆ. ಇಬ್ಬರು ಒಂದೇ ಸಮಯದಲ್ಲಿ ಸಿನಿಮಾ ಇಂಡಸ್ಟ್ರಿ ಗೆ ಎಂಟ್ರಿ ಕೊಟ್ಟರೂ ಕೂಡ ಇಬ್ಬರು ಯಾವುದೇ ಕಾಂಪಿಟೇಶನ್ ಇಲ್ಲದೆ ಕಡೆವರೆಗೂ ಉತ್ತಮ ಸ್ನೇಹಿತರಾಗಿದ್ದು ಕನ್ನಡಿಗರನ್ನು ರಂಜಿಸಿದ್ದಾರೆ.
ಇಷ್ಟು ವರ್ಷದ ಸಿನಿ ಜರ್ನಿಯಲ್ಲಿ ಎಷ್ಟೋ ಬಾರಿ ಎಷ್ಟೋ ಕಥೆಗಳು ವಿಷ್ಣುವರ್ಧನ್ ಅವರು ಕೇಳಿದ್ದು ಆ ಬಳಿಕದಲ್ಲಿ ರವಿಚಂದ್ರನ್ ಅವರು ಅಭಿನಯಿಸಿರುತ್ತಾರೆ. ಅದೇ ರೀತಿ ರವಿಚಂದ್ರನ್ ಅವರಿಗೆ ಹೇಳಿದ ಕಥೆಗಳಲ್ಲಿ ಅವರು ಒಪ್ಪದಿದ್ದಾಗ ಅಥವಾ ಇನ್ಯಾವುದೋ ಕಾರಣಕ್ಕಾಗಿ ಅವರು ಆ ಪಾತ್ರ ಮಾಡಲಾಗದಿದ್ದಾಗ ಅವು ವಿಷ್ಣುವರ್ಧನ್ ಅವರ ಪಾಲಿಗೆ ಬಂದಿರುತ್ತವೆ.
ಈಗ ಅಂತಹದೊಂದು ಪಾತ್ರದ ಬಗ್ಗೆ ರವಿಚಂದ್ರನ್ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ರವಿಚಂದ್ರನ್ ಅವರು ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದರು ಆ ಸಮಯದಲ್ಲಿ ವಿಷ್ಣುವರ್ಧನ್ ಅವರ ಬಗ್ಗೆ ಮಾತನಾಡಬೇಕಾದಾಗ ಸಂದರ್ಭ ಬಂದಾಗ ನಾನು ನಟಿಸಬೇಕಾಗಿದ್ದ ಒಂದು ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿ ಹೊಸ ದಾಖಲೆ ಬರೆದು ಬಿಟ್ಟರು ಅದು ಅವರಿಗೆ ಬಹುದೊಡ್ಡ ಬ್ರೇಕ್ ತಂದು ಕೊಟ್ಟಿದ್ದು ಎಂದು ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ಆ ಸಿನಿಮಾ ಯಾವುದು? ಆ ಪಾತ್ರ ಯಾವುದು ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇದೆ. ರಮೇಶ್ ಅರವಿಂದ್, ಪ್ರೇಮ, ಸೌಂದರ್ಯ ದ್ವಾರಕೀಶ್, ಪ್ರಮಿಳ ಜೋಶಾಯ್, ಶಿವರಾಂ ಸತ್ಯಜಿತ್ ಹೀಗೆ ಬಹುದೊಡ್ಡ ತಾರಾಬಳಗವೇ ಒಟ್ಟಾಗಿ ಅಭಿನಯಿಸಿ ಕನ್ನಡದಲ್ಲಿ ಐತಿಹಾಸಿಕ ಕಥೆಯೊಂದಕ್ಕೆ ಸೈನ್ಸ್ ಟಚ್ ಕೊಟ್ಟು ತಯಾರಿಸಿದ ಚಿತ್ರವಾಗಿದ್ದ.
ಆಪ್ತಮಿತ್ರ ಚಿತ್ರದಲ್ಲಿ ವಿಷ್ಣು ದಾದಾ ಅಭಿನಯಿಸಿದ ವಿಜಯ ರಾಜೇಂದ್ರ ಬಹದ್ದೂರ್ ಹಾಗೂ ವಿಜಯ್ ಪಾತ್ರವನ್ನು ರವಿಚಂದ್ರನ್ ಅವರು ನಡೆಸಬೇಕಿತ್ತಂತೆ. ಪಿ ವಾಸ್ತು ಅವರು ಈ ಬಗ್ಗೆ ರವಿಚಂದ್ರನ್ ಅವರ ಜೊತೆ ಚರ್ಚಿಸಿದ್ದರಂತೆ. ಆದರೆ ಆ ಸಿನಿಮಾದಲ್ಲಿ ರವಿಚಂದ್ರನ್ ಅವರು ಅಭಿನಯಿಸಲು ಸಾಧ್ಯವಾಗಲಿಲ್ಲ ನಂತರ ಅವರು ಆ ಪಾತ್ರದಲ್ಲಿ ನಟಿಸಿ ಪಾತ್ರವೇ ತಾವೆನ್ನುವಂತೆ ಜೀವಂತಿಕೆ ತುಂಬಿ ಅಭಿನಯಿಸಿದರು ವಿಷ್ಣುವರ್ಧನ್.
ಸಿನಿಮಾ ಆರಂಭದಲ್ಲಿ ಒಳ್ಳೆ ಪ್ರದರ್ಶನ ಕಾಣದಿದ್ದರೂ ನಿಧಾನವಾಗಿ ಚೇತರಿಸಿಕೊಂಡು ಬರೋಬ್ಬರಿ 38 ವಾರಗಳ ಕಾಲ ಕರ್ನಾಟಕದಾದ್ಯಂತ ಭರ್ಜರಿ ಪ್ರದರ್ಶನ ಕಂಡಿತು. ದಾದಾ ಮಾಡಿದ ಆ ಪಾತ್ರದಲ್ಲಿ ಬೇರೆ ಯಾರನ್ನು ಸಹ ಈಗ ಊಹಿಸಿಕೊಳ್ಳಲು ಸಾಧ್ಯವಿಲ್ಲ, ಸಂದರ್ಶನದ ಕೊನೆಯಲ್ಲಿ ರವಿಚಂದ್ರನ್ ಅವರು ಇದೇ ಮಾತನ್ನು ಹೇಳಿದ್ದು ನಾನು ಆ ಪಾತ್ರದಲ್ಲಿ ನಟಿಸಿದ್ದರೆ ಖಂಡಿತವಾಗಿಯೂ ಅಷ್ಟೊಂದು ಅದ್ಭುತವಾಗಿ ನಟಿಸುತ್ತಿರಲಿಲ್ಲವೇನು ಎಂದು ಒಪ್ಪಿಕೊಂಡಿದ್ದಾರೆ.
ರವಿಚಂದ್ರನ್ ಹಾಗೂ ವಿಷ್ಣುವರ್ಧನ್ ಅವರು ಯಾರೆ ನೀನು ಚೆಲುವೆ, ಸಾಹುಕಾರ ಮುಂತಾದ ಸಿನಿಮಾಗಳು ಒಟ್ಟಾಗಿ ನಟಿಸಿದ್ದಾರೆ. ಸಾಹುಕಾರ ಸಿನಿಮಾ ಕೂಡ ಆಪ್ತಮಿತ್ರ ಸಿನಿಮಾ ರಿಲೀಸ್ ಆದ ವೇಳೆಯಲ್ಲಿ ರಿಲೀಸ್ ಆಗಿತ್ತು. ಸಾವುಕಾರ ಸಿನಿಮಾ ಕೂಡ ಆ ವರ್ಷದ ಸೂಪರ್ ಹಿಟ್ ಸಿನಿಮಾಗಳ ಪಟ್ಟಿಯಲ್ಲಿ ಸೇರಿತ್ತು.