ಅಶ್ವಿನಿ ಪುನೀತ್ ರಾಜ್ ಕುಮಾರ್
ವೈರಲ್ ಆಗುತ್ತಿದೆ ಅಶ್ವಿನಿ ಪುನೀತ್ ಅವರು ಎಂಎಲ್ಎ ಮಗರೊಬ್ಬರ ಜೊತೆ ತೆಗೆಸಿಕೊಂಡ ಫೋಟೋ, ಇದು ರಾಜಕೀಯಕ್ಕಿಳಿಯುವ ಸೂಚನೆನಾ.?
ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ಅಗಲಿಕೆ ಬಳಿಕ ಅಪ್ಪು ಹೆಸರನ್ನು ಉಳಿಸುವ ಹಾಗೂ ದೊಡ್ಡಮನೆ ಕೀರ್ತಿ ಬೆಳಗುವ ಕೆಲಸವನ್ನು ಬಹಳ ಜವಾಬ್ದಾರಿತವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಅಪ್ಪು ಅವರೇ ನಿರ್ಮಾಣ ಮಾಡಿದ ಪಿ ಆರ್ ಕೆ ಪ್ರೊಡಕ್ಷನ್ ಹಾಗೂ ಪಿ ಆರ್ ಕೆ ಆಡಿಯೋ ಕಂಪನಿಗಳ ನಿರ್ವಹಣೆ ಮಾಡುತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ಅವರ ಕನಸಂತೆ ಕನ್ನಡದ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ.
ಜೊತೆಗೆ ಅಪ್ಪು ಅವರ ಅನುಪಸ್ಥಿತಿಯಲ್ಲಿ ಅವರಿರಬೇಕಾದ ಜಾಗದಲ್ಲಿ ಇದ್ದು ಮಕ್ಕಳ ಪೋಷಣೆ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಪುನೀತ್ ಅವರು ಇರುವ ತನಕ ಹೆಚ್ಚಾಗಿ ಎಲ್ಲಿ ಹೊರಗಡೆ ಕಾಣಿಸಿಕೊಳ್ಳದ ಹಾಗೂ ಕ್ಯಾಮರ ಎದುರು ಹೆಚ್ಚಾಗಿ ಬರದೇ ನಾಚಿಕೆಯ ಸ್ವಭಾವ ತೋರುತ್ತಿದ್ದ ಅಶ್ವಿನಿ ಅವರು ಅಪ್ಪು ಅಗಲಿಕೆ ನಂತರ ಬಹಳ ಗಟ್ಟಿಯಾಗಿ ನಿಂತಿದ್ದು ತನ್ನ ಎಲ್ಲಾ ನೋವುಗಳನ್ನು ಬಚ್ಚಿಟ್ಟುಕೊಂಡು ದೊಡ್ಮನೆ ಸೊಸೆಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವರ್ಷದಿಂದ ಅಶ್ವಿನಿ ಅವರ ಕುರಿತ ಸಾಕಷ್ಟು ವರದಿಗಳು ಪ್ರಸಾರವಾಗಿವೆ. ಆದರೆ ಇದೀಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ರಾಜಕೀಯ ಪ್ರವೇಶ ಮಾಡಲಿದ್ದಾರಾ ಎಂದು ಅನುಮಾನ ತರೆಸುವ ಫೋಟೋ ಒಂದು ಬಹಳ ವೈರಲಾಗುತ್ತಿದ್ದು ಅದರ ಸತ್ಯಾನುಸತ್ಯತೆ ಈ ರೀತಿ ಇದೆ.
ಅಶ್ವಿನಿ ಪುನೀತ್ ರಾಜಕುಮಾರ್ ಅವರು ಹೆಬ್ಬಾಳದ ಶಾಸಕರಾದ ಬೈರತಿ ಸುರೇಶ್ ಅವರ ಪುತ್ರ ಸಂಜಯ್ ಸುರೇಶ್ ಅವರ ಜೊತೆ ತೆಗೆದುಕೊಂಡಿರುವ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಜೊತೆ ಸಂಜಯ್ ಸುರೇಶ್ ಮತ್ತು ವಿನಯ ರಾಘವೇಂದ್ರ ರಾಜಕುಮಾರ್ ಅವರು ಸಹ ಇದ್ದಾರೆ.

ಹೀಗಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ರಾಜಕೀಯ ವಿಚಾರದ ಕುರಿತವಾಗಿ ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದಾರಾ ಎಂದು ಕೆಲವರು ಕೇಳುತ್ತಿದ್ದರೆ ಇಲ್ಲ ಇದು ಯಾವುದೋ ಸಮಾರಂಭದ ಸಮಯದಲ್ಲಿ ಒಟ್ಟಿಗೆ ಸಿಕ್ಕಾಗ ಅಭಿಮಾನದಿಂದ ತೆಗೆಸಿಕೊಂಡಿರುವ ಫೋಟೋ ಇರಬೇಕು ಎಂದು ಕೂಡ ಕೆಲವರು ಮಾತನಾಡುತ್ತಿದ್ದಾನೆ.
ದೊಡ್ಮನೆ ಕುಟುಂಬ ರಾಜಣ್ಣ ಇದ್ದ ದಿನದಿಂದಲೂ ರಾಜಕೀಯದಿಂದ ದೂರ ಉಳಿದಿತ್ತು. ಕರ್ನಾಟಕ ಕಂಡ ಮೇರು ನಟ ಡಾ. ರಾಜಕುಮಾರ್ ಅವರಿಗೆ ಇಡೀ ಕರ್ನಾಟಕವೇ ಗೌರವ ಕೊಟ್ಟು ಪ್ರೀತಿಯಿಂದ ಅಣ್ಣನಂತೆ ಕಾಣುತ್ತಿತ್ತು. ಅಲ್ಲದೆ ಗೋಕಾಕ್ ಚಳುವಳಿ ಮುಂತಾದ ಸಂದರ್ಭಗಳಲ್ಲಿ ಅವರು ಹೋರಾಟ ಮಾಡಿದ್ದರು, ಎಲ್ಲಾ ಪಕ್ಷದವರ ಜೊತೆಗೂ ಕೂಡ ಸ್ನೇಹದಿಂದ ಇದ್ದರು.
ಹಲವು ಬಾರಿ ಇವರಿಗೆ ರಾಜಕೀಯ ಪ್ರವೇಶಿಸುವ ಅವಕಾಶ ಸಿಕ್ಕರು ಅದನ್ನು ನಯವಾಗಿ ತಿರಸ್ಕರಿಸಿ ದೂರವೇ ಉಳಿದಿದ್ದರು. ಅಂದು ಅವರು ಮನಸ್ಸು ಮಾಡಿದ್ದರೆ ಕರ್ನಾಟಕದ ಮುಖ್ಯಮಂತ್ರಿ ಬೇಕಾದರು ಆಗಬಹುದಿತ್ತು ಆದರೆ ರಾಜಣ್ಣ ಎಂದಿಗೂ ಆ ಕಡೆ ಮುಖ ಮಾಡಿದವರಲ್ಲ. ಪುನೀತ್ ರಾಜಕುಮಾರ್ ಸಹಾ ಅಪ್ಪನ ಹಾಗೆ ಬಿಜೆಪಿ ಪಕ್ಷದಿಂದ ಕರೆ ಬಂದರು ಯಾವ ಪಕ್ಷದಲ್ಲೂ ಸೇರಿಕೊಳ್ಳದೆ ರಾಜಕೀಯೇತರವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡರು.
ಬಹುತೇಕ ಈಗ ಅಪ್ಪು ಅಭಿಮಾನಿಗಳೆಲ್ಲರೂ ಅಶ್ವಿನಿ ಅವರು ಸಹ ಅಪ್ಪು ಅವರಂತೆ ಇದೆ ಮಾರ್ಗದಲ್ಲಿ ನಡೆಯುತ್ತಾರೆ ಎಂದು ಹೇಳುತ್ತಿದ್ದಾರೆ. ಅವರ ಮುಂದಿನ ನಡೆ ಏನೇ ಇದ್ದರೂ ಕೂಡ ಅದರಿಂದ ಅವರ ಕುಟುಂಬಕ್ಕೆ ಹಾಗೂ ಕರ್ನಾಟಕಕ್ಕೆ ಒಳಿತಾಗಲಿ ಎಂದು ಹರಸೋಣ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.