ಪುನೀತ್ ರಾಜಕುಮಾರ್ ಎಂದರೆ ಸಮಾಜ ಸೇವೆಗೆ ಒಂದು ಬೆಂಚ್ಮಾರ್ಕ್ ಎಂದೇ ಹೇಳಬಹುದು ಪುನೀತ್ ರಾಜಕುಮಾರ್ ಅವರು ಯಾವುದೇ ಪ್ರಚಾರ ಪಡೆಯದೇ ನೊಂದವರ ಕಣ್ಣೀರು ಒರೆಸುವ ಕೆಲಸಕ್ಕೆ ಯಾವಾಗಲೂ ಮುಂದೆ ಇರುತ್ತಿದ್ದರು. ಹಲವು ರೀತಿಯಾಗಿ ಅವರು ಕರ್ನಾಟಕಕ್ಕೆ ಸೇವೆ ಮಾಡುತ್ತಾ ಇದ್ದರು ಇದರಲ್ಲಿ ಮುಖ್ಯವಾಗಿ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಯಾವಾಗಲೂ ತಮ್ಮಿಂದಾದಷ್ಟು ಸಹಾಯ ಮಾಡುತ್ತಲೇ ಬಂದಿದ್ದರು. ಮೈಸೂರಿನಲ್ಲಿ ಹೆಣ್ಣು ಮಕ್ಕಳಿಗಾಗಿ ಶಕ್ತಿಧಾಮ ಎನ್ನುವ ಆಶ್ರಮವನ್ನು ಕಟ್ಟಿ ಅಲ್ಲಿರುವ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ಪುನೀತ್ ರಾಜಕುಮಾರ್ ಅವರು ಹೊತ್ತುಕೊಂಡಿದ್ದರು. ಇದಲ್ಲದೆ ತಮ್ಮ ಬಳಿಗೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಥವಾ ಮಕ್ಕಳ ಖಾಯಿಲೆ ಚಿಕಿತ್ಸೆ ವಿಚಾರವಾಗಿ, ಮಕ್ಕಳಿಗಾಗಿ ನೆರವು ಕೇಳುತ್ತ ಬಂದವರಿಗೆ ಯಾರನ್ನೂ ಕೂಡ ಖಾಲಿ ಕೈಯಲ್ಲಿ ವಾಪಸ್ಸು ಕಳುಹಿಸದ ಸಹೃದಯಿ ನಮ್ಮ ಪುನೀತ್ ರಾಜ್ ಕುಮಾರ್ ಅವರು.
ಕನ್ನಡದ ಕೋಟ್ಯಾಧಿಪತಿ ಎನ್ನುವ ಶೋ ಅನ್ನು ನಡೆಸಿಕೊಡುತ್ತಿದ್ದ ಇವರು ಅಲ್ಲಿ ಬರುತ್ತಿದ್ದ ಕಂಟೆಸ್ಟೆಂಟ್ ಗಳಿಗೆ ಅನ್ಯಾಯ ಆಗದಿರಲಿ ಎಂದು ಅವರುಗಳ ಸೆಲೆಕ್ಷನ್ ಸಮಯದಲ್ಲಿ ಅವರ ಪ್ರೊಮೋ ಗಳನ್ನು ಇವರೂ ಸಹ ನೋಡಿ ಸೆಲೆಕ್ಟ್ ಮಾಡುತ್ತಿದ್ದರಂತೆ. ಇದರಲ್ಲೂ ಸಹ ಹೆಚ್ಚಾಗಿ ಬಡವರಿಗೆ ನೆರವಾಗಬೇಕು ಎನ್ನುವುದು ಅವರ ಮಹದಾಸೆಯಾಗಿತ್ತು. ಅಪ್ಪು ಅವರು ಚಿಕ್ಕವಯಸ್ಸಿನಲ್ಲಿಯೇ ನಟಿಸಲು ಶುರು ಮಾಡಿದ್ದರಿಂದ ಅವರು ಶಾಲೆಯಲ್ಲಿ ಹೋಗಿ ಕಲಿಯಲು ಹೆಚ್ಚಾಗಿ ಸಾಧ್ಯವಾಗಲಿಲ್ಲ. ಯಾವಾಗಲು ಸಿನಿಮಾ ಶೂಟಿಂಗ್ ನಲ್ಲಿ ಸಮಯ ಕಳೆಯುತ್ತಿದ್ದರಿಂದ ಎಲ್ಲರಂತೆ ಶಾಲೆಯಲ್ಲಿ ದಿನಗಳನ್ನು ಕಳೆಯಲು ಅವರಿಗೆ ಆಗಲಿಲ್ಲ. ಅದಕ್ಕಾಗಿ ಅವರು ಅನೇಕ ಬಾರಿ ಪಶ್ಚಾತಾಪ ಕೂಡ ಪಟ್ಟು ಕೊಂಡಿದ್ದಾರೆ. ಎಸೆಸೆಲ್ಸಿ ವರೆಗೆ ಮಾತ್ರ ಓದಿಕೊಂಡಿರುವ ಪುನೀತ್ ರಾಜಕುಮಾರ್ ಅವರ ಜ್ಞಾನ ಯಾವ ಮೇಧಾವಿಗಳಿಗೂ ಕಡಿಮೆ ಇರಲಿಲ್ಲ ಎಂದೇ ಹೇಳಬಹುದು.
ಅದರಲ್ಲೂ ನಿರರ್ಗಳ ಕನ್ನಡ ಮತ್ತು ಇಂಗ್ಲೀಷ್ ಮತ್ತಿತರ ಭಾಷೆಗಳ ಜ್ಞಾನ, ಅವರು ಜನರಲ್ ಟಾಪಿಕ್ ಗಳ ಬಗ್ಗೆ ತಿಳಿದುಕೊಂಡು ಮಾತನಾಡುತ್ತಿ ಪರಿ, ಸೈನ್ಸ್ ಮತ್ತೆ ಟೆಕ್ನಾಲಜಿ ಬಗ್ಗೆ ಅವರಿಗಿದ್ದ ಆಸಕ್ತಿ ಇದೆಲ್ಲವನ್ನು ಗಮನಿಸಿದರೆ ಯಾರೂ ಕೂಡ ಪುನೀತ್ ರಾಜಕುಮಾರ್ ಅವರು ಕೇವಲ ಎಸೆಸೆಲ್ಸಿ ಮಾತ್ರ ಓದಿದ್ದಾರೆ ಎಂದು ಅಂದು ಕೊಳ್ಳುತ್ತಿರಲಿಲ್ಲ. ಪುನೀತ್ ರಾಜಕುಮಾರ್ ಅವರ ಕುಟುಂಬವು ಅವರ ತಂದೆಯ ಹೆಸರಿನಲ್ಲಿ “ರಾಜ್ ಅಕಾಡೆಮಿ” ಎನ್ನುವ ಇನ್ಸ್ಟಿಟ್ಯೂಟ್ ಅನ್ನು ಸ್ಥಾಪಿಸಿ ಈ ಮೂಲಕ ಯುಪಿಎಸ್ಸಿ ಹಾಗೆಯೇ ಕೆಪಿಎಸ್ಸಿ ಕನಸು ಕಾಣುತ್ತಾ ಹಳ್ಳಿಯಿಂದ ಬೆಂಗಳೂರಿಗೆ ಬರುವ ಬಡಮಕ್ಕಳಿಗೆ ಉಚಿತವಾಗಿ ಕೋಚಿಂಗ್ ಕೊಡುತ್ತಿದ್ದಾರೆ. ಈ ಮೂಲಕ ಎಷ್ಟೋ ಜನ ಬಡ ಕುಟುಂಬದ ಮಕ್ಕಳು ಸರ್ಕಾರಿ ಉದ್ಯೋಗ ಪಡೆಯಲು ಅವರಿಗೆ ನೆರವಾಗಿದ್ದಾರೆ. ಇದೇ ರೀತಿಯಾಗಿ ಇನ್ನು ಅನೇಕ ಸೇವೆಗಳನ್ನು ವಿದ್ಯಾರ್ಥಿಗಳಿಗಾಗಿ ಮಾಡಿದ್ದಾರೆ.
ಪುನೀತ್ ಅವರು ಇಹಲೋಕ ತ್ಯಜಿಸುವ ಕೆಲವು ದಿನಗಳ ಹಿಂದಷ್ಟೇ ಶಾಲೆಯಿಂದ ವಂಚಿತರಾಗಿ ಅಥವಾ ಯಾವುದೋ ಕಾರಣಗಳಿಂದ ಶಾಲೆಗೆ ಹೋಗಿ ವಿದ್ಯಾಭ್ಯಾಸ ಕಲಿಯಲು ಆಗದೇ ನಿಲ್ಲಿಸಿದವರು, ಉದ್ಯೋಗ ಮಾಡುತ್ತಾ ವಿದ್ಯಾಭ್ಯಾಸ ಕಲಿಯುವವರು ಇವರೆಲ್ಲರಿಗೂ ವಿದ್ಯಾಭ್ಯಾಸ ಕಲಿಯಲು ನೆರವಾಗಲು ಯೋಜನೆಯೊಂದನ್ನು ಹಾಕಿಕೊಂಡು ಇದರ ಬಗ್ಗೆ ಪ್ರೊಮೊ ಗಳನ್ನು ಕೂಡ ರಿಲೀಸ್ ಮಾಡಿದ್ದರು. ಆದರೆ ಅದು ಎಲ್ಲೆಡೆ ತಲುಪುವ ಮುನ್ನವೇ ದೇವರು ಪುನೀತ್ ರಾಜಕುಮಾರ್ ಅವರಂತಹ ದೇವತಾ ಮನುಷ್ಯರನ್ನು ಭೂಮಿಯಿಂದ ಕರೆದುಕೊಂಡು ಬಿಟ್ಟಿದ್ದಾರೆ. ಇಷ್ಟೆಲ್ಲಾ ಕರ್ನಾಟಕದ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ತೋರಿಸುತ್ತಿರುವ ಪುನೀತ್ ರಾಜಕುಮಾರ್ ಅವರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕೇಳಿದರೆ ಖಂಡಿತವಾಗಿ ಕರ್ನಾಟಕದ ಜನ ಹೆಮ್ಮೆ ಪಡುತ್ತಾರೆ. ಪುನೀತ್ ರಾಜಕುಮಾರ್ ಮತ್ತು ಅಶ್ವಿನಿ ದಂಪತಿಗಳಿಗೆ ದೃತಿ ಪುನೀತ್ ರಾಜಕುಮಾರ್ ಮತ್ತು ವಂದಿತ ಪುನೀತ್ ರಾಜಕುಮಾರ್ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಧೃತಿ ಪುನೀತ್ ರಾಜಕುಮಾರ್ ಅವರು ತಮ್ಮ ಆರಂಭಿಕ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಹೋಗಿದ್ದಾರೆ. ಆದರೆ ಅವರು ವಿದ್ಯಾಭ್ಯಾಸ ಪಡೆಯುತ್ತಿರುವುದು ಅವರ ತಂದೆಯ ಹಣದಿಂದ ಅಲ್ಲ. ಧೃತಿ ಪುನೀತ್ ರಾಜಕುಮಾರ್ ತುಂಬಾ ಚೆನ್ನಾಗಿ ಓದುತ್ತಿದ್ದು ಇದರಿಂದ ಅವರು ಸ್ಕಾಲರ್ಶಿಪ್ ಪಡೆದು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಾರೆ. ಈ ಬಗ್ಗೆ ಅವರ ಕುಟುಂಬವು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಈಗ ಅದೇ ಸಾಲಿನಲ್ಲಿ ವಂದಿತಾ ಪುನೀತ್ ರಾಜಕುಮಾರ್ ಕೂಡ ಇದ್ದಾರೆ. ವಂದಿತ ಪುನೀತ್ ರಾಜಕುಮಾರ್ ಅವರು ಈ ಬಾರಿ ಎಸೆಸೆಲ್ಸಿ ಓದುತ್ತಿದ್ದರು. ಆದರೆ ಈ ವರ್ಷವೇ ಅವರು ಅವರ ತಂದೆಯನ್ನು ಕಳೆದುಕೊಂಡ ದುಃ’ಖ’ದಲ್ಲಿ ಇದ್ದಾರೆ. ಈ ನೋ’ವಿನ ನಡುವೆಯೇ ಎಸೆಸೆಲ್ಸಿ ಪರೀಕ್ಷೆಯನ್ನು ಬರೆದಿದ್ದರು ಇಡೀ ಕರ್ನಾಟಕವೇ ಅವರಿಗೆ ಶುಭವಾಗಲಿ ಎಂದು ಹರಸಿತ್ತು. ಮೊನ್ನೆಯಷ್ಟೇ ಎಸೆಸೆಲ್ಸಿ ರಿಸಲ್ಟ್ ಅನೌನ್ಸ್ ಆಗಿದ್ದು ಪುನೀತ್ ರಾಜ್ ಕುಮಾರ್ ಅವರ ಆಸೆಯಂತೆಯೇ ಮಗಳು ವಂದಿತ ಕೂಡ ಫಸ್ಟ್ ರಾಂಕ್ ನಲ್ಲಿ ಪಾಸಾಗಿದ್ದಾರೆ.
ಈ ವಿಷಯ ತಿಳಿದು ಅಶ್ವಿನಿ ಅವರು ಸಂತೋಷದಿಂದ ಭಾವುಕರಾಗಿದ್ದಾರೆ ಪುನೀತ್ ರಾಜ್ ಕುಮಾರ್ ಅವರಿಗೆ ಹೆಣ್ಣುಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು. ಈ ಕಾಲದಲ್ಲಿ ಎಲ್ಲರೂ ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಇರುವುದರಿಂದ ಹೆಣ್ಣುಮಕ್ಕಳು ಕೂಡ ಕೆಲಸ ಮಾಡುವಷ್ಟು ಸದೃಢರಾಗಬೇಕು. ನನನಗೆ ಯಾವಾಗಲೂ ನಮ್ಮ ಅಮ್ಮ ಸ್ಪೂರ್ತಿಯಾಗುತ್ತಾರೆ. ನಾನು ನನ್ನ ಮಕ್ಕಳಿಗೂ ಸಹ ಅದನ್ನೇ ಹೇಳುತ್ತೇನೆ. ನಮ್ಮಮ್ಮ ಅರ್ಥಿಕ ವಿಷಯವಾಗಿ ತುಂಬಾ ಸದೃಢವಾಗಿದ್ದರೂ, ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಮನೆಯಲ್ಲಿ ಅಮ್ಮನದೇ ಕೊನೆಯ ಮಾತು. ಹೀಗಾಗಿ ಎಲ್ಲಾ ಹೆಣ್ಣು ಮಕ್ಕಳು ಸಹ ಇದೇ ರೀತಿಯಾಗಿ ಬೆಳೆಯಬೇಕು ಅದಕ್ಕಾಗಿ ವಿದ್ಯಾಭ್ಯಾಸ ತುಂಬಾ ಮುಖ್ಯ ಎಂದು ಒಂದೊಮ್ಮೆ ಒಂದು ಕಿರುತೆರೆಯ ಕಾರ್ಯಕ್ರಮದಲ್ಲಿ ಹೇಳಿದ್ದರು. ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಆರು ತಿಂಗಳುಗಳೇ ಕಳೆದಿವೆ ಆದರೆ ಆದರೆ ಈಗ ಅವರು ನಮ್ಮೊಡನೆ ಇಲ್ಲ ಎನ್ನುವುದನ್ನು ಮಾತ್ರ ಕನ್ನಡ ಜನರು ಒಪ್ಪಿಕೊಳ್ಳಲು ರೆಡಿ ಇಲ್ಲ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.