Home Entertainment ಬಾಲಿವುಡ್ ಸಿನಿಮಾ ಗೆಲ್ಲಿಸುವುದಕ್ಕಾಗಿ ಸಖತ್ ಬೋಲ್ಡ್ ಆಗಿ ಶರೂಖ್ ಖಾನ್ ಜೊತೆ ಕಾಣಿಸಿಕೊಂಡ ದೀಪಿಕಾ ಪಡುಕೋಣೆ, ಫೋಟೋ ನೋಡಿ ಗರಂ ಆದ ನೆಟ್ಟಿಗರು.

ಬಾಲಿವುಡ್ ಸಿನಿಮಾ ಗೆಲ್ಲಿಸುವುದಕ್ಕಾಗಿ ಸಖತ್ ಬೋಲ್ಡ್ ಆಗಿ ಶರೂಖ್ ಖಾನ್ ಜೊತೆ ಕಾಣಿಸಿಕೊಂಡ ದೀಪಿಕಾ ಪಡುಕೋಣೆ, ಫೋಟೋ ನೋಡಿ ಗರಂ ಆದ ನೆಟ್ಟಿಗರು.

0
ಬಾಲಿವುಡ್ ಸಿನಿಮಾ ಗೆಲ್ಲಿಸುವುದಕ್ಕಾಗಿ ಸಖತ್ ಬೋಲ್ಡ್ ಆಗಿ ಶರೂಖ್ ಖಾನ್ ಜೊತೆ ಕಾಣಿಸಿಕೊಂಡ ದೀಪಿಕಾ ಪಡುಕೋಣೆ, ಫೋಟೋ ನೋಡಿ ಗರಂ ಆದ ನೆಟ್ಟಿಗರು.

ಮದುವೆ ಆದ ಬಳಿಕ ಮೊದಲ ಬಾರಿಗೆ ಗ್ಲಾಮರ್ ಅವತಾರದಲ್ಲಿ ದೀಪಿಕಾ ಪಡುಕೋಣೆ

ಒಂದು ಕಾಲದಲ್ಲಿ ಭಾರತದ ಸಿನಿಮಾ ಇಂಡಸ್ಟ್ರಿ ಎಂದರೆ ಬರೀ ಬಾಲಿವುಡ್ ಎಂದೇ ಬಿಂಬಿಸಿಕೊಳ್ಳಲಾಗುತ್ತಿತ್ತು. ಆದರೆ ಇಂದು ಕಾಲಚಕ್ರ ಬದಲಾಗಿ ಬಾಲಿವುಡ್ ಸಿನಿಮಾಗಳಿಗಿಂತಲೂ ಸೌತ್ ಇಂಡಿಯಾ ಸಿನಿಮಾಗಳು ಇಡೀ ಭಾರತದಲ್ಲಿ ರಾರಾಜಿಸುತ್ತಿವೆ. ಅಲ್ಲದೆ ಭಾರತದ ಖ್ಯಾತಿಯನ್ನು ಪರದೇಶಗಳಿಗೂ ಹಂಚುವ ಕೆಲಸವನ್ನು ದಕ್ಷಿಣ ಕನ್ನಡದ ಸಿನಿಮಾಗಳು ಮಾಡುತ್ತಿವೆ.

ಅದರಲ್ಲೂ ವಿಶೇಷವಾಗಿ ಈ ವರ್ಷ ಬಾಲಿವುಡ್ ಸಂಪೂರ್ಣವಾಗಿ ಮಕಾಡೆ ಮಲಗಿದೆ ಎಂದು ಹೇಳಬಹುದು. ಹಲವು ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುವಲ್ಲಿ ಸೋತು ಸಪ್ಪೆ ಆಗಿರುವ ಬಾಲಿವುಡ್ ಈ ವರ್ಷ ಇನ್ನು ಕುಸಿದಿದೆ. ಈಗ ಅಲ್ಲೂ ಕೂಡ ನಮ್ಮ ಸೌತ್ ಇಂಡಿಯಾದ ಪ್ಯಾನ್ ಇಂಡಿಯಾ ಸಿನಿಮಾಗಳು ಮಾತ್ರ ಗೆಲ್ಲುತ್ತಿವೆ. ಜನ ನಮ್ಮ ಕಥೆಗಳನ್ನು ನೋಡಿ ಮೆಚ್ಚಿ ಸಿನಿಮಾ ಎಂದರೆ ಈ ರೀತಿ ಇರಬೇಕೆಂದು ಕೊಂಡಾಡುತ್ತಿದ್ದಾರೆ.

ಇದಕ್ಕೆಲ್ಲಾ ಕಾರಣ ನಮ್ಮ ದಕ್ಷಿಣ ಕನ್ನಡದ ಸಿನಿಮಾಗಳ ಕಥೆಗಳು. ಬಾಲಿವುಡ್ ಸಿನಿಮಾಗಳಲ್ಲಿ ಒಂದೇ ರೀತಿಯ ಕಥೆಯಿಂದ ಬೇಸತ್ತು ಹೋಗಿರುವ ಜನಕ್ಕೆ ಇಲ್ಲಿನ ವಿಭಿನ್ನ ಪ್ರಯೋಗಗಳು ಹಾಗೂ ಸಿನಿಮಾದಿಂದ ಸಿನಿಮಾ ಗೆ ಆಗುತ್ತಿರುವ ಹೊಸ ರೀತಿ ಎಕ್ಸ್ಪರಿಮೆಂಟ್ ಗಳು ರುಚಿಸಿವೆ.

ಅಲ್ಲದೆ ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್ ಹಾಗೂ ಮಾಲಿವುಡ್ ಗಳಲ್ಲಿ ಬಹುತೇಕ ಎಲ್ಲಾ ಸ್ಟಾರ್ಗಳ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಗಳು ಆಗಿರುವುದರಿಂದ ಹಿಂದಿ ಭಾಷೆಯ ಪ್ರೇಕ್ಷಕರು ತಮ್ಮ ಭಾಷೆಯಲ್ಲಿಯೇ ಈ ಕಥೆಗಳನ್ನು ನೋಡುತ್ತಿದ್ದು ಇಲ್ಲಿನ ಸಿನಿಮಾವನ್ನೇ ಗೆಲ್ಲಿಸುತ್ತಿದ್ದಾರೆ.

ಹೀಗಾಗಿ ಸಹಜವಾಗಿ ಬಾಲಿವುಡ್ ಗೆ ಈಗ ದೊಡ್ಡ ಅಗ್ನಿಪರೀಕ್ಷೆ ಎಂದು ಎದುರಾಗಿದೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಜನರಿಗೆ ಮೆಚ್ಚುಗೆ ಆಗಿ ಇಷ್ಟಪಡುವ ಕಂಟೆಂಟ್ ಗಳನ್ನು ಕೊಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಖಾನ್ ಗಳ ಸಿನಿಮಾಗಳೂ ಕೂಡ ಈಗ ಅಲ್ಲಿ ವರ್ಕ್ ಆಗುತ್ತಿಲ್ಲ. ಅಲ್ಲದೆ ಕೆಲವರು ತೀರ ಕಡಿಮೆ ಸಿನಿಮಾಗಳನ್ನು ಮಾಡುತ್ತಿದ್ದಾರೆ ಅದರಲ್ಲಿ ಶಾರುಖ್ ಖಾನ್ ಅವರಂತೂ ತಮ್ಮ ಜೀರೋ ಸಿನಿಮಾ ಆದಮೇಲೆ ದೊಡ್ಡ ಬ್ರೇಕ್ ಪಡೆದುಕೊಂಡಿದ್ದಾರೆ.

ಇದೀಗ ಅವರ ಪಟಾಣ್ ಎನ್ನುವ ಚಿತ್ರದ ಬಗ್ಗೆ ಗಾಸಿಪ್ ಇದ್ದು ಚಿತ್ರತಂಡ ಮಾತ್ರ ಇದುವರೆಗೆ ಸಣ್ಣ ಸುಳಿವು ಕೂಡ ಬಿಟ್ಟುಕೊಡದೆ ಎಲ್ಲಿಯೂ ಸಹ ಪ್ರಚಾರ ಮಾಡದೆ ಚಿತ್ರಿಕರಣ ಮಾಡುತ್ತಿದೆ. ಶಾರುಖ್ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ಕೊಡಲು ಸಿದ್ಧತೆ ನಡೆದಿದ್ದು ಇದರ ಫಸ್ಟ್ ಲುಕ್ ಹಾಗೂ ಒಂದು ಸಾಂಗ್ ಬಿಡುಗಡೆ ಆಗಿದೆ. ಸ್ವತಃ ಶಾರುಖ್ ಖಾನ್ ಅವರೇ ಟ್ವೀಟ್ ಮಾಡಿ ತಮ್ಮ ಪಟಾಣ್ ಸಿನಿಮಾದ ಮೊದಲ ಹಾಡನ್ನು ನೋಡಲು ತಾವು ಸಹ ಕಾತುರದಿಂದ ಇರುವುದಾಗಿ ಬರೆದುಕೊಂಡಿದ್ದಾರೆ.

ಇಷ್ಟಾಗುತ್ತಿದ್ದಂತೆ ರಿಲೀಸ್ ಆದ ಕ್ಷಣದಲ್ಲೇ ದಾಖಲೆಗಟ್ಟಲೆ ವೀವ್ಸ್ ಕೂಡ ಈ ಹಾಡು ಪಡೆದಿದ್ದು ಹಾಡಿನಲ್ಲಿ ಶಾರುಖ್ ಅವರ ಹೊಸ ಗೆಟಪ್ ನೋಡಿ ಜನ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ. ಪಟಾಣ್ ಚಿತ್ರಕ್ಕೆ ದೀಪಿಕಾ ಪಡುಕೋಣೆ ಅವರು ನಾಯಕಿ ಆಗಿದ್ದಾರೆ, ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅವರ ಕೆಮಿಸ್ಟ್ರಿ ಈಗಾಗಲೇ ಓಂ ಶಕ್ತಿ ಓಂ ಮತ್ತು ಚೆನ್ನೈ ಎಕ್ಸ್ಪ್ರೆಸ್ ಸಿನಿಮಾಗಳಲ್ಲಿ ವರ್ಕ್ ಆಗಿದೆ.

ಈಗ ರಿಲೀಸ್ ಆಗಿರುವ ಪಟಾಣ್ ಸಿನಿಮಾದ ಹಾಡಿನಲ್ಲಿ ಕೂಡ ದೀಪಿಕಾ ಪಡುಕೋಣೆ ಮೊದಲಿನಂತೇ ಸಕ್ಕತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರಂತೆ. ಚಿತ್ರ ಗೆಲ್ಲಿಸಲೇಬೇಕೆಂಬ ಹಠದಿಂದ ಸಿನಿಮಾ ತಯಾರಾಗುತ್ತಿರುವ ರೀತಿ ಇದೆ. ಈ ಸಿನಿಮಾವಾದರೂ ಬಾಲಿವುಡ್ ಅಲ್ಲಿ ಸದ್ದು ಮಾಡಲಿದೆಯೇ ಎಂದು ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here