ತಾನೇ ಇಷ್ಟಪಟ್ಟು ಮಾಡಿದ್ದ ತನ್ನದೇ ಸಿನಿಮಾವನ್ನು ನೋಡಲು ಥಿಯೇಟರ್ ಗೆ ಜನ ಬರಲಿಲ್ಲವಲ್ಲ ಎಂದು ಬೇಸರ ಮಾಡಿಕೊಂಡ ಶಿವಣ್ಣ.
ಶಿವಣ್ಣ ಅವರು ಮಾಡುತ್ತಿದ್ದ ಸಿನಿಮಾಗಳು ಅಣ್ಣಾವ್ರು ಮಾಡುತ್ತಿದ್ದ ಸಿನಿಮಾ ಕಥೆಗಳಂತೆ ಜನರಿಗೆ ಬಹಳ ಇಷ್ಟವಾಗುತ್ತಿತ್ತು. ಹೀಗಾಗಿಯೇ ಇವರು ಮಾಡಿದ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳೇ. ಮೊದಲ ಮೂರು ಸಿನಿಮಾಗಳು ಸೂಪರ್ ಹಿಟ್ ಆದ ಕಾರಣ ಇವರಿಗೆ ಹ್ಯಾಟ್ರಿಕ್ ಹೀರೋ ಎನ್ನುವ ಟೈಟಲ್ ಕೂಡ ಬಂತು. ಸಿನಿಮಾಗಳು ಸೋಲು ಗೆಲುವು ಎನ್ನುವುದು ಎಲ್ಲಾ ಹೀರೋಗಳ ಸಿನಿ ಕೆರಿಯರ್ ಅಲ್ಲಿ ಸಾಮಾನ್ಯ ವಿಷಯ.
ಹಾಗೆಯೇ ಶಿವಣ್ಣ ಅವರು ಬಹಳ ಇಷ್ಟಪಟ್ಟು ಸಿನಿಮಾ ಮಾಡಿದ್ದರು. ಈ ಸಿನಿಮಾಗೆ ಕಥೆಯನ್ನು ಪಾರ್ವತಮ್ಮ ಡಾಕ್ಟರ್ ರಾಜಕುಮಾರ್ ಹಾಗೂ ವರದಣ್ಣ ಅವರೇ ಸೆಲೆಕ್ಟ್ ಮಾಡಿ ನಿರ್ದೇಶನದ ಜವಾಬ್ದಾರಿಯನ್ನು ಟಿಎಸ್ ನಾಗಾಭರಣ ಅವರಿಗೆ ನೀಡಿದ್ದರು, ಸಂಗೀತ ನಿರ್ದೇಶನದ ಹೊಣೆ ವಿ ಮನೋಹರ್ ಅವರು ಹೊತ್ತಿದ್ದರು.
ಈ ಹಿಂದೆ ಇವರ ಕಾಂಬಿನೇಷನ್ ಅಲ್ಲಿ ಬಂದಿದ್ದ ಜನುಮದ ಜೋಡಿ ಎನ್ನುವ ಚಿತ್ರವು ಮ್ಯೂಸಿಕ್ ಹಿಟ್ ಅಲ್ಲದೆ ಬ್ಲಾಕ್ ಬ್ಲಾಸ್ಟರ್ ಆಗಿತ್ತು. ಸಿನಿಮಾ ವನ್ನು ಜನ ಬಹಳ ಇಷ್ಟ ಪಟ್ಟು ನೋಡಿ ಗೆಲ್ಲಿಸಿದ್ದಲ್ಲದೇ ಹಾಡುಗಳಂತೂ ಇಂದಿಗೂ ಜನರ ಫೇವರೆಟ್ ಲಿಸ್ಟ್ ನಲ್ಲಿ ಇದೆ. ಹಾಗಾಗಿ ಇದೇ ನಿರೀಕ್ಷೆಯೊಂದಿಗೆ ಈ ತಂಡದೊಂದಿಗೆ ತೆರೆದ ಮತ್ತೊಂದು ಸಿನಿಮಾ ಚಿಗುರಿದ ಕನಸು.
ಈ ಸಿನಿಮಾ ಕೂಡ ವಿಶಿಷ್ಟ ಕಥೆ ಯನ್ನು ಹೊಂದಿತ್ತು, ಈ ಕಥೆ ಜನರಿಗೆ ಇಷ್ಟವಾಗಿಯೇ ಆಗುತ್ತದೆ ಎಂದು ಎಲ್ಲರಿಗೂ ನಂಬಿಕೆ ಇತ್ತು. ತಾಯಿ ನೆಲವನ್ನು ಬಿಟ್ಟು ದೂರ ಹೋಗಿದ್ದ ಯುವಕನೊಬ್ಬ ತನ್ನ ಮೂಲವನ್ನು ತಿಳಿದುಕೊಂಡಾಗ ಅಲ್ಲಿಗೆ ಮರಳಿ ಬರುವ ಕಥೆಯನ್ನು ಈ ಸಿನಿಮಾ ಹೊಂದಿತ್ತು.
ತನ್ನ ಮೂಲವನ್ನು ಹುಡುಕಿ ಹಳ್ಳಿಗೆ ಬಂದ ಯುವಕನಿಗೆ ಇಲ್ಲಿಯ ಜಲ ನೆಲ ಭಾಷೆ ತನ್ನವರು ಎನ್ನುವ ಭಾವನೆ ಬೆಳೆಯುತ್ತದೆ. ಆಗ ಆತ ತನ್ನ ಹಿಂದಿನ ಪ್ರೇಮ ಕಥೆ ಹಾಗೂ ಅಲ್ಲಿನ ಸನ್ನಿವೇಶಕ್ಕೆ ಸಿಲುಕಿ ಹಾಕಿಕೊಂಡು ಒದ್ದಾಡುವ ಪ್ರಸಂಗದೊಂದಿಗೆ ಮ್ಯೂಸಿಕ್ ಹಾಗೂ ಹಾಡು ಮಲೆನಾಡಿನ ಸುಂದರ ವಾತಾವರಣ ಎಲ್ಲವೂ ಸಿನಿಮಾಗೆ ಇತ್ತು.
ಕಥೆಗೆ ಅವಶ್ಯಕತೆ ಇದ್ದ ಕಾರಣ ಎರಡು ಶೇಡ್ ಅಲ್ಲಿ ಶಿವಣ್ಣ ಕಾಣಿಸಿಕೊಂಡು ತನ್ನ ಹಿರಿಯರ ಸ್ಟೋರಿ ಹೇಳುವಾಗಲೂ ತಾತನ ಪಾತ್ರದಲ್ಲಿ ಶಿವಣ್ಣ ಅವರೇ ಕಾಣಿಸಿಕೊಂಡಿದ್ದರು. ಈ ಸಿನಿಮಾ ಯಾವುದೆಂದು ನೀವೆಲ್ಲರೂ ಗೆಸ್ ಮಾಡುತ್ತೀರಾ ಇದು ಬೇರಾವುದು ಅಲ್ಲ ಚಿಗುರಿದ ಕನಸು ಎನ್ನುವ ಸಿನಿಮಾ.
ಈ ಸಿನಿಮಾವನ್ನು ಇಡೀ ತಂಡ ಹಾಗೂ ಸ್ವತಃ ಶಿವಣ್ಣನು ಸಹ ಬಹಳ ಆಸೆಪಟ್ಟು ಮಾಡಿದ್ದರು. ಆದರೆ ಈ ಸಿನಿಮಾ ರಿಲೀಸ್ ಆದಾಗ ಥೀಯೇಟರ್ ಕಡೆ ಜನ ಬರಲೇ ಇಲ್ಲ ಸಿನಿಮಾ ಫ್ಲಾಫ್ ಆಗಿ ಹೋಯಿತು ಆಗ ಎಲ್ಲರೂ ಬಹಳ ಬೇಸರ ಪಟ್ಟಿ ಕೊಂಡಿದ್ದರಂತೆ. ಜನರಿಗೆ ಎಂತಹ ಕಥೆ ನೀಡಬೇಕು ಎನ್ನುವುದೇ ಅರ್ಥವಾಗುತ್ತಿಲ್ಲ ಎಂದು ಗೊಂದಲಕ್ಕೆ ಒಳಗಾಗಿದ್ದಾರಂತೆ.
ಆದರೆ ಅದೇ ಸಿನಿಮಾ ಟಿವಿಯಲ್ಲಿ ಬಂದ ಮೇಲೆ ಜನ ಬಹಳ ಇಷ್ಟ ಪಟ್ಟಿದ್ದಾರೆ ಈಗಲೂ ಸಹ ಬಂದು ಜನರು ಚಿಗುರಿದ ಕನಸು ಇಂತಹ ಸಿನಿಮಾಗಳನ್ನು ಮಾಡಿ ಎಂದು ಕೇಳುತ್ತಾರಂತೆ. ಅದಕ್ಕೆ ಶಿವಣ್ಣ ರಿಲೀಸ್ ಆದಾಗ ಸಿನಿಮಾ ಗೆದ್ದಿದ್ದಾರೆ ಅದೇ ರೀತಿ ಸಿನಿಮಾ ಮಾಡಲು ಹುರುಪು ಬರುತ್ತಿತ್ತು. ಸೋತ ಕಾರಣ ಆ ರೀತಿ ಸಿನಿಮಾ ಹೆಚ್ಚಾಗಿ ಮಾಡಲಾಗಲಿಲ್ಲ ಈಗ ಅದರ ಬಗ್ಗೆ ಹೇಳಿದರೆ ಏನು ಮಾಡುವುದು ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.