ರಾಜವಂಶಕ್ಕೆ ಹೋಲಿಕೆ ಮಾಡಬೇಡಿ ದರ್ಶನ್ ಫ್ಯಾನ್ಸ್ ವಾದ
ಸೋಶಿಯಲ್ ವಿಡಿಯೋದಲ್ಲಿ ದರ್ಶನ್ ಅಭಿಮಾನಿಗಳು ಹಾಗೂ ಅಪ್ಪು ಅಭಿಮಾನಿಗಳು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ಚರ್ಚೆ ಮಾಡುತ್ತಾ ಇರುವುದರ ಬಗ್ಗೆ ನಿಮಗೆ ತಿಳಿದೇ ಇದೆ. ಅದರಲ್ಲಿಯೂ ಕೂಡ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಪ್ರಕರಣ ನಡೆದ ಮೇಲಂತೂ ಇದರ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೌದು ದರ್ಶನ್ ಅಭಿಮಾನಿಗಳು ಹೊಸ ಪೇಟೆಯಲ್ಲಿ ದರ್ಶನ್ ಅವರಿಗೆ ಆದ ಅಪಮಾನಕ್ಕೆ ನೇರವಾಗಿ ಅಪ್ಪು ಅಭಿಮಾನಿಗಳೇ ಕಾರಣ ಎಂದು ಹೇಳುತ್ತಿದ್ದಾರೆ.
ಅಷ್ಟೇ ಅಲ್ಲದೆ ತಪ್ಪಿತಸ್ಥರು ಯಾರೇ ಇದ್ದರೂ ದರ್ಶನ್ ಅವರಿಗೆ ಕ್ಷಮೆ ಕೇಳಬೇಕು ಅಂತ ಹೇಳುತ್ತಿದ್ದರು ಆದರೆ ಅಪ್ಪು ಅಭಿಮಾನಿಗಳು ಮಾತ್ರ ನಾವು ಇಂತಹ ಹೀನ ಕೃತ್ಯವನ್ನು ನಾವು ಮಾಡಿಲ್ಲ ಅಪ್ಪು ಅಭಿಮಾನಿಗಳು ಸತ್ಕಾರ್ಯವನ್ನು ಮಾಡುತ್ತಿರೋ ಹೊರತು ಇಂತಹ ಕೆಟ್ಟ ಕೆಲಸಕ್ಕೆ ಕೈ ಹಾಕುವುದಿಲ್ಲ. ಅಪ್ಪು ಅವರ ಒಳ್ಳೆಯ ಸಮಾಜಮುಖಿ ಸೇವೆಗಳನ್ನು ನಡೆಸಿಕೊಂಡು ಹೋಗುತ್ತೇವೆ ಅಷ್ಟೇ ಎಂದು ಹೇಳಿದ್ದಾರೆ ಆದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳು ಅಪ್ಪು ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಳ್ಳುವುದು ಹಾಗೂ ಅಪ್ಪು ಅಭಿಮಾನಿಗಳು ದರ್ಶನ್ ಅವರನ್ನು ಮತ್ತು ಅವರ ಅಭಿಮಾನಿಗಳನ್ನು ಅವಹೇಳನ ಕರೆ ಮಾಡುತ್ತಾ ಇರುವುದರ ಬಗ್ಗೆ ನಿಮಗೆ ತಿಳಿದೇ ಇದೆ.
ಅದರಲ್ಲಿಯೂ ಅಪ್ಪು ಅಭಿಮಾನಿಗಳು ರಾಜವಂಶದ ಬಗ್ಗೆ ಎಂದಿಗೂ ಮಾತನಾಡಬೇಡಿ ಕರ್ನಾಟಕಕ್ಕೆ ಇರುವುದು ಒಂದೇ ರಾಜವಂಶ ಅದು ನಮ್ಮ ಡಾಕ್ಟರ್ ರಾಜಕುಮಾರ್ ಅವರ ವಂಶದಲ್ಲಿ ಇರುವಂತಹ ಎಲ್ಲರೂ ಕೂಡ ಸದ್ಗುಣವನ್ನು ಬೆಳೆಸಿಕೊಂಡು ಬಂದವರು ಸರಳತೆಯನ್ನು ಮೈಗೂಡಿಸಿಕೊಂಡಿದ್ದಾರೆ. ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ ರಾಜವಂಶದ ಬಗ್ಗೆ ಮಾತನಾಡಬೇಕಾದರೆ ಯೋಗ್ಯತೆ ಇರಬೇಕು. ಅಷ್ಟೇ ಅಲ್ಲದೆ ಇನ್ನೊಮ್ಮೆ ರಾಜವಂಶದ ಬಗ್ಗೆ ಮಾತನಾಡಿದರೆ ಇದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಕಡಕ್ ಎಚ್ಚರಿಕೆ ನೀಡಿದರೂ.
ಅಷ್ಟೇ ಅಲ್ಲದೆ ಡಿಸೆಂಬರ್ 29 ನೇ ತಾರೀಕು ಬೆಂಗಳೂರಿನ ಗಾಂಧಿನಗರದಲ್ಲಿ ಇರುವಂತಹ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೋಗಿ ಅಪ್ಪು ಅಭಿಮಾನಿಗಳು ದರ್ಶನ್ ಅಭಿಮಾನಿಗಳ ವಿರುದ್ಧ ದೂರು ದಾಖಲು ಮಾಡಿದರು. ದರ್ಶನ್ ಅವರನ್ನು ಕರೆಸಿ ಅವರಿಗೆ ಬುದ್ಧಿವಾದ ಹೇಳಬೇಕು ಇನ್ನು ಮುಂದೆ ಈ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ದರ್ಶನ್ ಅವರಿಗೆ ನೀವು ಎಚ್ಚರಿಕೆ ನೀಡದೇ ಇದ್ದರೆ ಅವರ ಅಭಿಮಾನಿಗಳ ಹಾರಾಟ ಇನ್ನಷ್ಟು ಜೋರಾಗುತ್ತದೆ. ಅಷ್ಟೇ ಅಲ್ಲದೆ ರಾಜವಂಶದ ಬಗ್ಗೆ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಪೋಸ್ಟರ್ ಗಳನ್ನೂ ಹಾಕುತ್ತಿದ್ದಾರೆ ಇವೆಲ್ಲವನ್ನು ಮಾಡುತ್ತಿದ್ದರೆ ಅದನ್ನು ನೋಡಿಕೊಂಡು ಸುಮ್ಮನೆ ಇರುವುದಕ್ಕೆ ಸಾಧ್ಯವಿಲ್ಲ ಇದು ನಿಮಗೆ ಕೊನೆಯ ಎಚ್ಚರಿಕೆ ಈ ಬಾರಿ ನೀವು ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಫಿಲಂ ಚೇಂಬರ್ ಗೆ ಮನವಿ ಸಲ್ಲಿಸಿದರು.
ಇದರ ಆಧಾರದ ಮೇಲೆ ಫಿಲಂ ಚೇಂಬರ್ ನ ಮುಖ್ಯಸ್ಥರಾದಂತಹ ಭಾಮಾ ಹರೀಶ್ ಹಾಗೂ ಪ್ರಧಾನ ಕಾರ್ಯದರ್ಶಿ ಆದಂತಹ ಸುಂದರ್ ರಾಜ್ ಅವರು ಕೂಡ ಪ್ರಕರಣಕ್ಕೆ ಸಂಬಂಧ ಪಟ್ಟಂತಹ ಮನವಿಯನ್ನು ಸ್ವೀಕಾರ ಮಾಡಿ ದರ್ಶನ್ ಅವರನ್ನು ಕರೆಸಿ ಮಾತನಾಡುವಂತಹ ಪ್ರಯತ್ನ ನಾವು ಮಾಡುತ್ತೇವೆ ಹಾಗೂ ದರ್ಶನ್ ಅಭಿಮಾನಿಗಳು ಇನ್ನು ಮುಂದೆ ಈ ರೀತಿಯ ಪೋಸ್ಟಲ್ ಗಳನ್ನು ಹಾಕಬೇಡಿ ಕೆಟ್ಟ ಕಮೆಂಟ್ಗಳನ್ನು ಮಾಡಬೇಡಿ ಅಂತ ತಿಳಿ ಹೇಳಿದರು. ಆದರೆ ಇದೀಗ ದರ್ಶನ್ ಅಭಿಮಾನಿಗಳು ಮತ್ತೊಂದು ಅಭಿನಯ ಪ್ರಾರಂಭಿಸಿದ್ದಾರೆ ಹೌದು ಅಪ್ಪು ಅಭಿಮಾನಿಗಳು ಕರ್ನಾಟಕದಲ್ಲಿ ಇರುವುದು ಒಂದೇ ವಂಶ ಅದು ರಾಜವಂಶ ಅವರ ಬಗ್ಗೆ ಮಾತನಾಡಬೇಡಿ ಎಂದು ಹೇಳುತ್ತಿದ್ದರು.
ಹಾಗಾಗಿ ದರ್ಶನ ಅಭಿಮಾನಿಗಳು ಕರ್ನಾಟಕಕ್ಕೆ ಇರುವುದು ಒಂದೇ ವಂಶ ಹೌದು ಅದು ಮೈಸೂರಿನ ಒಡೆಯರ್ ವಂಶ ಅದು ನಮ್ಮ ನಿಜವಾದ ರಾಜವಂಶ ಅದನ್ನು ಬಿಟ್ಟು ಬೇರೆ ವಂಶದವರನ್ನು ರಾಜವಂಶಕ್ಕೆ ಹೋಲಿಕೆ ಮಾಡಬೇಡಿ ಎಂದು ಪೋಸ್ಟರ್ ಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಈ ರೀತಿಯ ಪೋಸ್ಟರ್ ಗಳನ್ನು ನೋಡಿದಂತಹ ಅಪ್ಪು ಅಭಿಮಾನಿಗಳು ಇನ್ನಷ್ಟು ಆ.ಕ್ರೋ.ಶ.ವನ್ನು ವ್ಯಕ್ತಪಡಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಕಡಿಮೆಯಾಗಬೇಕಾದಂತಹ ಕೋಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಆದಷ್ಟು ಬೇಗ ಈ ಇಬ್ಬರು ಅಭಿಮಾನಿಗಳು ಸಮಾಧಾನವನ್ನು ತಂದುಕೊಳ್ಳಲಿ ಫ್ಯಾನ್ ವಾರ್ ಅನ್ನು ಬಿಟ್ಟು ಸಹಬಾಳ್ವೆಯಿಂದ ಸಮಾಜದಲ್ಲಿ ಜೀವನ ಸಾಗಿಸಲಿ ಎಂಬುವುದೇ ನಮ್ಮ ಆಶಯ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ.