ಯುಪಿಎಸ್ ನಮ್ಮ ದೇಶದ ಅತ್ಯುನ್ನತ ಹುದ್ದೆಗಳಿಗಾಗಿ ನಡೆಸುವ ಪರೀಕ್ಷೆಯಾಗಿದೆ. ಹೆಸರೇ ಹೇಳುವಂತೆ ಇದು ಐಎಎಸ್, ಐಪಿಎಸ್ ಮತ್ತು ಐಆರ್ಎಸ್ ಹಾಗೂ ಐಎಫ್ಎಸ್ ಹುದ್ದೆಗಳಿಗಾಗಿ ನಡೆಸುವ ಪರೀಕ್ಷೆ ಆದ್ದರಿಂದ ಅಷ್ಟೇ ಮಟ್ಟದ ಸ್ಪರ್ಧೆ ಈ ಪರೀಕ್ಷೆಗೆ ಇರುತ್ತದೆ. ಪದವಿ ಪಡೆದ ಪ್ರತಿಯೊಬ್ಬರೂ ಈ ಪರೀಕ್ಷೆ ಬರೆಯಬೇಕು ಎಂದು ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ಇದರಲ್ಲಿ ಉತ್ತೀರ್ಣ ಹೊಂದಬೇಕು ಎಂದರೆ ಅಷ್ಟೇ ಮಟ್ಟದ ಶ್ರದ್ಧೆ ಹಾಗೂ ಸಮರ್ಪಣಾ ಭಾವದಿಂದ ಓದಿರಬೇಕು. ಇದಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ಹಳ್ಳಿ ಬಿಟ್ಟು ಪಟ್ಟಣಕ್ಕೆ ಬಂದು ಕೋಚಿಂಗ್ ಕ್ಲಾಸ್ ಗಳನ್ನು ಸೇರಿಕೊಂಡು, ತಮ್ಮದೇ ಆದ ಸಮಾನ ಮನಸ್ಕ ಗುಂಪಿನಲ್ಲಿ ಸೇರಿಕೊಂಡು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಹಗಲು-ರಾತ್ರಿಯೆನ್ನದೆ ಶ್ರಮವಹಿಸಿ ಅಭ್ಯಾಸ ಮಾಡುತ್ತಾರೆ. ಆದರೂ ಸಹ ಮೊದಲ ಬಾರಿಗೆ ಇದರಲ್ಲಿ ಯಶಸ್ಸು ದೊರೆಯುತ್ತದೆ ಎಂದು ಊಹಿಸುವುದು ಬಹಳ ಕಷ್ಟ.
ಈ ಪರೀಕ್ಷೆಯನ್ನು ಪಾಸು ಮಾಡುವ ವರ್ಷಗಳು ಹೆಚ್ಚಾದಂತೆ ಅತ್ತ ಕುಟುಂಬದ ಹೊರೆಯೂ ಹೆಚ್ಚಾಗಿ,ಇತ್ತಾ ಕೋಚಿಂಗ್ ಕ್ಲಾಸ್ ಗಳಿಗೆ ಹಣ ಕಟ್ಟಲು ಆಗದೆ ಪರದಾಡುವ ಪರಿಸ್ಥಿತಿಗಳನ್ನು ಎದುರಿಸುವ ವಿದ್ಯಾರ್ಥಿಗಳು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಇಂತಹ ಮಕ್ಕಳಿಗೆ ಹಲವಾರು ಸಂಸ್ಥೆಗಳ ವತಿಯಿಂದ ಉಚಿತವಾಗಿ ಕೋಚಿಂಗ್ ಕೊಡುವ ವ್ಯವಸ್ಥೆ ದೇಶದಾದ್ಯಂತ ಇದೆ. ಹಾಗೆಯೇ ನಮ್ಮ ಕರ್ನಾಟಕದಲ್ಲಿ ಸಹ ಪ್ರತಿಷ್ಠಿತ ಕೋಚಿಂಗ್ ಸೆಂಟರ್ ಗಳು ಹಲವಾರು ಇವೆ ಹಾಗೂ ಇದರಲ್ಲಿ ಬಡ ಮಕ್ಕಳು ಹಾಗೂ ಹಿಂದುಳಿದ ವರ್ಗದ ಮಕ್ಕಳಿಗೆ ಉಚಿತವಾಗಿ ಕೋಚಿಂಗ್ ಸೌಲಭ್ಯ ನೀಡುವ ಹಲವಾರು ಅಕಾಡೆಮಿಗಳು ಇವೆ. ಅವುಗಳಲ್ಲಿ ಒಂದು ಡಾಕ್ಟರ್ ರಾಜಕುಮಾರ್ ಅಕಾಡೆಮಿ. ಬೆಂಗಳೂರಿನಲ್ಲಿರುವ ಈ ಅಕಾಡೆಮಿಯಲ್ಲಿ ಕರ್ನಾಟಕದ ಮೂಲೆ ಮೂಲೆಗಳಿಂದ ಬರುವ ಅರ್ಹ ವಿದ್ಯಾರ್ಥಿಗಳಿಗೆ ಯುಪಿಎಸ್ಸಿ ಕೆಪಿಎಸ್ಸಿ ಮತ್ತು ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತವಾಗಿ ಶಿಕ್ಷಣ ನೀಡಲಾಗುತ್ತದೆ.
ಪ್ರತಿ ವರ್ಷವೂ ಸಹ ಅಕಾಡೆಮಿಯಿಂದ ಸಾಕಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿ ಕರ್ನಾಟಕ ಮತ್ತು ಭಾರತದಾತ್ಯಂತ ಅನೇಕ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. 2021 ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಗಳ ಫಲಿತಾಂಶ ನೆನ್ನೆಯಷ್ಟೆ ಹೊರಬಿದ್ದಿದೆ. ಅದರಲ್ಲಿ ಭಾರತದ 749 ಹುದ್ದೆಗಳಿಗಾಗಿ ಈ ಪರೀಕ್ಷೆಯನ್ನು ನಡೆಸಲಾಗಿತ್ತು. ಅದರಲ್ಲಿ 685 ಮಂದಿ ತೇರ್ಗಡೆಯಾಗಿದ್ದಾರೆ ಎಂದು ಪ್ರಾಥಮಿಕ ಪಟ್ಟಿಯಲ್ಲಿ ಬಿಡುಗಡೆಯಾಗಿದೆ. ಐಎಎಸ್ ಕೇಡರ್ ಗೆ 180 ಹುದ್ದೆ, ಐಎಫ್ಎಸ್ ಕೇಡರ್ ಗೆ 37 ಹುದ್ದೆ ಮತ್ತು ಐಪಿಎಸ್ ಕೇಡರ್ ಗೆ 200 ಹುದ್ದೆ ಇದರ ಜೊತೆ ಸೆಂಟ್ರಲ್ ಸರ್ವಿಸ್ ಗ್ರೂಪ್ ಎ ಮತ್ತು ಗ್ರೂಪ್ ಬಿ ಕೇಡರ್ ಗೆ 242 ಮಂದಿಯನ್ನು ಆಯ್ಕೆ ಮಾಡುವುದಾಗಿ ಈ ಪಟ್ಟಿಯಲ್ಲಿ ತಿಳಿಸಿದೆ. ಇದು ಪ್ರಾಥಮಿಕ ಪಟ್ಟಿ ಯಾಗಿದ್ದು ಇನ್ನು ಉತ್ತೀರ್ಣರಾದವರು ಪಟ್ಟಿ ಅಪ್ಡೇಟ್ ಆಗಬೇಕಾಗಿದೆ. ಇಷ್ಟು ಹುದ್ದೆಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ಪಾಲಿಗೆ 27 ಹುದ್ದೆಗಳು ದೊರೆತಿದ್ದು, ಅದರಲ್ಲೂ ಒಂದೇ ಅಕಾಡೆಮಿಯ ಎಂಟು ಮಂದಿ ಹೆಸರು ಲಿಸ್ಟಿನಲ್ಲಿ ಇದೆ.
ಇದು ಡಾಕ್ಟರ್ ರಾಜಕುಮಾರ್ ಅವರ ಅಕಾಡೆಮಿಯಲ್ಲಿ ಕಲಿತ ವಿದ್ಯಾರ್ಥಿಗಳ ಸಾಧನೆಯಾಗಿದೆ. ಅಕಾಡೆಮಿಯಲ್ಲಿ ಕೋಚಿಂಗ್ ಪಡೆಯುತ್ತಿದ್ದ ಬೆನಕ ಪ್ರಸಾದ್ (92 ನೇ ರ್ಯಾಂಕ್), ಮೇಘನಾ ಕೆ ಟಿ (425 ನೇ ರ್ಯಾಂಕ್), ರಾಜೇಶ್ ಪೊನ್ನಪ್ಪ(222 ನೇ ರ್ಯಾಂಕ್), ಪ್ರೀತಿ ಪಂಚಾಲ್ (449 ನೇ ರ್ಯಾಂಕ್), ಪ್ರಶಾಂತ್ ಕುಮಾರ್(641 ನೇ ರ್ಯಾಂಕ್), ರವಿನಂದನ್ ಬಿಎಂ (455ನೇ ರಾಂಕ್), ನಿಖಿಲ್ ಬಿ ಪಾಟೀಲ್ (139 ನೇ ರ್ಯಾಂಕ್ ), ದೀಪಕ್ ಆರ್ ಸೇಟ್(311 ನೇ ರ್ಯಾಂಕ್) ಪಡೆದಿದ್ದಾರೆ.