ಒಳ್ಳೆ ಹುಡುಗ ಎಂದು ತಮಗೆ ತಾವೇ ಕಳೆದುಕೊಂಡಿರುವ ಪ್ರಥಮ್ ಅವರು ಇಡೀ ಕರ್ನಾಟಕಕ್ಕೆ ಮನೆ ಮಗ ಇದ್ದಂತೆ. ಸದಾ ಹರಳು ಹುರಿದಂತೆ ಪಟಪಟ ಎಂದು ಮಾತನಾಡಿ ಮೋಡಿ ಮಾಡುವ ಈತ ಸಿನಿಮಾ ಇಂಡಸ್ಟ್ರಿ ಬಗ್ಗೆ ಅರೆದು ಕುಡಿದವರು ಎಂದರೆ ತಪ್ಪಾಗಲಾರದು. ಯಾಕೆಂದರೆ ಯಾವುದೇ ಸ್ಟಾರ್ ಯಾವ ಸಿನಿಮಾ ಯಾವಾಗ ರಿಲೀಸ್ ಆಯಿತು ಎನ್ನುವ ಅನುಮಾನ ಆದಾಗ ರೆಕಾರ್ಡ್ ತೆಗೆದು ನೋಡುವ ಬದಲು ಪ್ರಥಮ್ ಅವರನ್ನು ಕೇಳಿದರೆ ಸಾಕು ದಿನಾಂಕ ವಾರದ ಸಮೇತ ಸರಿಯಾದ ಮಾಹಿತಿ ಕೊಟ್ಟು ಬಿಡುತ್ತಾರೆ.
ಅಷ್ಟರ ಮಟ್ಟಿಗೆ ಇಂಡಸ್ಟ್ರಿ ಬಗ್ಗೆ ಕುತೂಹಲ ಉಳಿಸಿಕೊಂಡಿರುವ, ಆಸಕ್ತಿ ಬೆಳೆಸಿಕೊಂಡಿರುವ ಪ್ರಥಮ್ ಅವರು ಸದ್ಯಕ್ಕೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಎಲ್ಲಾ ಕಲಾವಿದರಿಗೂ ಕೂಡ ಪರಿಚಯಸ್ಥರು ಮಾತ್ರವಲ್ಲದೆ ಅಷ್ಟೇ ಆತ್ಮೀಯರು. ಸಿಂಪಲ್ ಹುಡುಗ ಪ್ರಥಮ ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ಪ್ರಚಲಿತ ವಿಷಯದ ಬಗ್ಗೆ ತಮಗೆ ಅನಿಸಿದ ಮಾತುಗಳನ್ನು ಹೇಳಿಬಿಡುತ್ತಾರೆ. ಹೀಗೆ ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದ ಅವರು ದರ್ಶನ್ ಹಾಗೂ ಸುದೀಪ್ ಅವರ ಫ್ರೆಂಡ್ ಶಿಪ್ ಬಗ್ಗೆ ಕೂಡ ಮಾತನಾಡಿದ್ದಾರೆ.
ಎಲ್ಲರಂತೆ ಇವರಿಗೂ ಸಹ ದರ್ಶನ್ ಮತ್ತು ಸುದೀಪ್ ಅವರ ಟ್ವೀಟ್ ಕುರಿತು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ ಪ್ರಥಮ ಅವರು ಅದಕ್ಕೂ ಮೊದಲು ದರ್ಶನ್ ಅವರ ಮೇಲಾದ ಚಪ್ಪಲಿ ಎಸೆತದ ಇನ್ಸಿಡೆಂಟ್ ಬಗ್ಗೆ ಮಾತನಾಡಿದ್ದಾರೆ. ಎಲ್ಲರೂ ಸಹ ದರ್ಶನ್ ಅವರ ಇನ್ಸಿಡೆಂಟ್ ಬಗ್ಗೆ ಮಾತನಾಡುತ್ತಾರೆ ನಾನು ಕೂಡ ಅದರ ಬಗ್ಗೆ ಮಾತನಾಡಲು ಇಚ್ಚಿಸುತ್ತೇನೆ ಯಾಕೆಂದರೆ ಯಾವುದೇ ಕಲಾವಿದನಿಗೂ ಕೂಡ ಈ ರೀತಿ ಆಗಬಾರದು.
ಈ ರೀತಿ ಮಾಡುವುದು ಕೋಟ್ಯಾನ ಕೋಟಿ ಜನರ ದುಡ್ಡನ್ನು ಲೂಟಿ ಹೊಡೆದುಕೊಂಡು ಹೋಗಿ ಮೋಸ ಮಾಡಿದವರಿಗೆ ಆದರೆ ನಮ್ಮ ಜನ ಅಂತವರು ಎದುರಿಗೆ ಸಿಕ್ಕರೆ ಮನೆಗೆ ಕರೆದು ಮಣೆ ಹಾಕುತ್ತಾರೆ. ಬಣ್ಣ ಹಚ್ಚಿ ಅವರನ್ನು ಮನೋರಂಜಿಸಲು ಪ್ರಯತ್ನ ಪಡುವ ಕಲಾವಿದನಿಗೆ ಗೌರವ ಕೊಡುವುದು ಬಿಟ್ಟು ಈ ರೀತಿ ನಡೆದುಕೊಳ್ಳುತ್ತಾರೆ ಇದು ಖಂಡನೀಯ.
ಈ ಘಟನೆ ಬಗ್ಗೆ ಮೊದಲು ಹೇಳಿಕೆ ಕೊಟ್ಟಿದ್ದು ಶಿವಣ್ಣ, ಆ ಬಳಿಕ ಎಲ್ಲರೂ ಕೂಡ ದರ್ಶನ್ ಅವರ ಪರ ನಿಂತಿದ್ದಾರೆ. ನನ್ನನ್ನು ಸಹ ನೀವು ಯಾಕೆ ಸ್ಟ್ಯಾಂಡ್ ವಿತ್ ದರ್ಶನ್ ಎಂದು ಪೋಸ್ಟ್ ಹಾಕಿಲ್ಲ ಎಂದು ಕೇಳುತ್ತಾರೆ ಯಾಕೆಂದರೆ ನಾನು ದರ್ಶನ್ ಅವರ ಪರ ನಿಲ್ಲಕಾಗಲ್ಲ ನಾನು ಅವರ ಜೊತೆ ಕುಳಿತುಕೊಳ್ಳುತ್ತೇನೆ ಎಂದು ತಮ್ಮದೇ ಸ್ಟೈಲಲ್ಲಿ ಎಲ್ಲಾ ಕಾಲಕ್ಕೂ ದರ್ಶನ್ ಜೊತೆಗೆ ನಾನು ಇರುತ್ತೇನೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.
ಮುಂದುವರೆದು ಅಂದು ಆ ಇನ್ಸಿಡೆಂಟ್ ಬಗ್ಗೆ ಸುದೀಪ್ ಟ್ವೀಟ್ ಮಾಡಿ, ದರ್ಶನ್ ಅವರು ಅದಕ್ಕೆ ಥ್ಯಾಂಕ್ಸ್ ಹೇಳಿದ ಕೂಡಲೇ ಎಲ್ಲರೂ ಸಂತೋಷವಾಯಿತು. ನಾನು ಅವರಲ್ಲಿ ಒಬ್ಬ. ಈ ರೀತಿ ಬೆಳವಣಿಗೆಗಳು ಆಗಬೇಕು. ಅವರು ದರ್ಶನ್ ಅವರ ಸಿನಿಮಾದ ಸಂಭ್ರಮದಲ್ಲಿ ಜೊತೆಗಿರದೆ ಇದ್ದರೂ ಸ್ನೇಹಿತರ ಕಷ್ಟದ ಕಾಲದಲ್ಲಿ ನಾನು ನಿನ್ನ ಜೊತೆ ಇರುತ್ತೇನೆ ಎನ್ನುವ ಸಂದೇಶ ಕೊಟ್ಟಿದ್ದಾರೆ.
ಇದೇ ಮುಖ್ಯವಾಗಿ ಈ ಮನುಜ ಕುಲಕ್ಕೆ ಬೇಕಾಗಿರುವುದು. ಅಷ್ಟು ಹೇಳಿದರೆ ಸಾಕು ಅದೇ ದೊಡ್ಡ ಧೈರ್ಯ ಅದೇ ದೊಡ್ಡ ಶಕ್ತಿ ಇನ್ನಾದರೂ ನಮ್ಮ ಇಂಡಸ್ಟ್ರಿಯಲ್ ಇರುವ ಎಲ್ಲಾ ಕೋಲ್ಡ್ ವಾರ್ ಗಳು ಮುಗಿದು ಸಂತೋಷದ ಬೆಳವಣಿಗೆಗಳು ಮೂಡಿಬರಲಿ ಅದು ಈ ಇನ್ಸಿಡೆಂಟ್ ಮೂಲಕ ಶುರುವಾಗಲಿ ಎಂದು ಹೇಳುತ್ತೇನೆ. ನಮ್ಮ ಇಂಡಸ್ಟ್ರಿಯ ಪ್ರತಿಯೊಬ್ಬರಿಗೂ ಶುಭವಾಗಲಿ ಎಂದು ಹರಿಸಿದ್ದಾರೆ ಪ್ರಥಮ್.