ಕಮಲ್ ಹಾಸನ್ (Kamal Hasan ) ಅವರ ವಿಕ್ರಂ (Vikram) ಸಿನಿಮಾವನ್ನು ತಮಿಳಿಗರು ಮಾತ್ರವಲ್ಲದೆ ಇದು ಪಾನ್ ಇಂಡಿಯಾ ಸಿನಿಮಾ ಆದ ಕಾರಣ ಭಾರತದಾದ್ಯಂತ ಅನೇಕರು ನೋಡಿದ್ದಾರೆ. ಕಳೆದ ವರ್ಷ ಭಾರತದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು ಎಂದು ಹೆಸರಾಗಿದ್ದ ಈ ಸಿನಿಮಾವನ್ನು ಎಲ್ಲರೂ ಒಪ್ಪಿ ಅಪ್ಪಿಕೊಂಡಿದ್ದಾರೆ. ಈ ಸಿನಿಮಾದ ಇತರೆ ಅಂಶಗಳ ಜೊತೆಗೆ ಆ ಸಿನಿಮಾದಲ್ಲಿ ನಾಯಕ ನಟಿ ಆಗಿದ್ದ ಸ್ವತಿಷ್ಠ ಕೃಷ್ಣ (Swathista Krishna) ಕೂಡ ಹೆಸರುವಾಸಿಯಾಗಿದ್ದಾರೆ.
ಇದರಲ್ಲಿ ಕನ್ನಡಿಗರು ಹೆಮ್ಮೆ ಪಡುವಂತ ವಿಷಯ ಕೂಡ ಇದೆ. ಯಾಕೆಂದರೆ ಸ್ವತಿಷ್ಠ ಕೃಷ್ಣ ಅವರು ಮೂಲತಃ ಕನ್ನಡಿಗರು. ಧಾರವಾಡ ಮೂಲಕ ಸ್ವತಿಷ್ಠ ಕೃಷ್ಣ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲು ಕನಸು ಕಟ್ಟಿಕೊಂಡು ಪ್ರಯತ್ನ ಪಡುತ್ತಿದ್ದರು. ವಿಕ್ರಂ ಸಿನಿಮಾದಿಂದ ಇವರಿಗೆ ದೊಡ್ಡ ಬ್ರೇಕ್ ಕೂಡ ಸಿಕ್ಕಿದೆ. ಇದಾದ ಬಳಿಕ ಒಂದಲ್ಲ ಒಂದು ಸಿನಿಮಾಗಳಲ್ಲಿ ಬಿಝಿಯಾಗಿರುವ ಈಕೆ ಈಗ ಕನ್ನಡದ ಕಡೆಗೂ ಕೂಡ ಧಾವಿಸುತ್ತಿದ್ದಾರೆ.
ಸ್ವತಿಷ್ಠ ಕೃಷ್ಣ ಅವರು ದೊಡ್ಮನೆ (Dodmane) ಕಿರಿಯ ರಾಜಕುಮಾರ ವಿನಯ್ ರಾಜಕುಮಾರ್ (Vinay Raj kumar) ಅವರ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಸಿಂಪಲ್ ಸುನಿ (Simple Suni) ಅವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿರುವುದು ಸ್ವತಿಷ್ಠ ಇರುವುದು ಕನ್ಫರ್ಮ್ ಆಗಿದೆ. ಸಿನಿಮಾ ಕಥೆಗೆ ಕನ್ನಡದ ಹುಡುಗಿಯೇ ಬೇಕು ಎಂದು ನಿರ್ದೇಶಕರು ಹುಡುಕುತ್ತಿದ್ದರಂತೆ. ಜೊತೆಗೆ ಈ ಸಿನಿಮಾದಲ್ಲಿ ಅವರಿರುವ ಬಗ್ಗೆ ಸ್ವತಃ ನಿರ್ದೇಶಕರಾದ ಸಿಂಪಲ್ ಸುನಿ ಅವರೇ ಮಾತನಾಡಿದ್ದು.

ನನ್ನ ಎಲ್ಲಾ ಸಿನಿಮಾಗಳಲ್ಲೂ ಕೂಡ ಕನ್ನಡದ ಹುಡುಗಿಯೇ ನಾಯಕಿ ಆಗಿರಬೇಕು, ಇದೇ ನನ್ನ ಮೊದಲ ಆದ್ಯತೆ. ನಾನು ಈ ಕಥೆಗೆ ಹುಡುಗಿಯನ್ನು ಹುಡುಕುತ್ತಿದ್ದಾಗ ವಿಕ್ರಂ ಸಿನಿಮಾದ ಸ್ವತಿಷ್ಠ ಕೃಷ್ಣನವರ ಪಾತ್ರ ನೆನಪಾಯಿತು. ಅದರಲ್ಲಿ ಅದ್ಭುತವಾಗಿ ನಟಿಸಿದ್ದಾರೆ ನನ್ನ ಕಥೆಗೂ ಅವರು ಸೂಟ್ ಆಗುತ್ತಾರೆ ಹಾಗಾಗಿ ಆಯ್ದುಕೊಂಡೆ. ಇವರು ಮೂಲತಃ ಉತ್ತರ ಕನ್ನಡದವರು ಆದಕಾರಣ ಅದು ಸಹ ಪ್ಲಸ್ ಪಾಯಿಂಟ್ ಆಯ್ತು ಎಂದು ಹೇಳಿಕೊಂಡಿದ್ದಾರೆ.
ಮೈಸೂರು ರಮೇಶ್ ಅವರು ಹಣ ಹೂಡಿಕೆ ಮಾಡುತ್ತಿರುವ ಈ ಸಿನಿಮಾಗೆ ವೀರ ಸಮರ್ಥ್ ಅವರು ಸಂಗೀತ ನಿರ್ದೇಶಕರಾಗಿದ್ದು ಸಭಾ ಅವರ ಛಾಯಾಗ್ರಹಣ ಚಿತ್ರಕ್ಕಿರಲಿದೆ. ಕಥೆ ಬಗ್ಗೆ ಹೇಳುವುದಾದರೆ ಮ್ಯೂಸಿಕ್ ಲವ್ ಸ್ಟೋರಿ ಸಿನಿಮಾವಂತೆ. ಚಿತ್ರದ ಇನ್ನಿತರ ಪಾತ್ರಗಳ ಬಗ್ಗೆ ಇನ್ನೂ ಫೈನಲ್ ಮಾಡಿಲ್ಲ ಸದ್ಯಕ್ಕೆ ನಾಯಕ ನಾಯಕಿ ಫಿಕ್ಸ್ ಮಾಡಿಕೊಂಡಿರುವ ಇವರು ಸದ್ಯದಲ್ಲೇ ಎಲ್ಲವನ್ನು ತಿಳಿಸುವುದಾಗಿ ಹೇಳಿಕೊಂಡಿದ್ದಾರೆ.
ನಿರ್ದೇಶನದಲ್ಲಿ ಜಾದು ಮಾಡಿರುವ ಸಿಂಪಲ್ ಸುನಿ ಮತ್ತು ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳ ಮೂಲಕ ಹಿಟ್ ಆಗಿರುವ ವಿನಯರಾಜಕುಮಾರ್ ಹಾಗೂ ವಿಕ್ರಂ ಸಿನಿಮಾದಿಂದ ದೇಶದಾದ್ಯಂತ ಫೇಮಸ್ ಆಗಿರುವ ಸ್ವತಿಷ್ಠ ಕೃಷ್ಣ ಈ ಮೂರು ಜನರ ಕಾಂಬಿನೇಷನ್ ಸಿನಿಮಾ ನೋಡಲು ಕನ್ನಡಿಗರು ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ.
ದಿನ ರಾಜಕುಮಾರ್ ಅವರು ಈ ಹಿಂದೆ ಅಭಿನಯಿಸಿದ್ದ ರನ್ ಆಂಟೋನಿ, ಸಿದ್ದಾರ್ಥ್ ಮತ್ತು ಅನಂತು ವರ್ಸಸ್ ನುಸ್ರತ್ ಈ ಮೂರು ಸಿನಿಮಾ ಕೂಡ ಬಾಕ್ಸ್ ಆಫೀಸ್ ಅಲ್ಲಿ ಒಳ್ಳೆ ಸದ್ದು ಮಾಡಿತ್ತು. ಹಾಡುಗಳು ಕೂಡ ಹಿಟ್ ಆಗಿ ಬಹಳಷ್ಟು ಹೆಂಗಳೆಯರ ಫೇವರೆಟ್ ಆಗಿತ್ತು. ಸ್ವತಿಷ್ಠ ಕೃಷ್ಣ ಅವರು ಸಹ ವಿಕ್ರಮ್ ಗೃ ಮುಂಚೆ ತಮಿಳಿನ ಸವರಕತ್ತಿ ಮತ್ತು ತೆಲುಗಿನ ಗುಂಡೆ ಕಥಾ ವಂಟಾರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಈ ಚಿತ್ರದ ಮೂಲಕ ಕನ್ನಡಕ್ಕೂ ಎಂಟ್ರಿ ಆಗುತ್ತಿದ್ದಾರೆ. ಸದ್ಯಕ್ಕೆ ಸಿನಿಮಾ ಟೈಟಲ್ ನಿಗದಿ ಆಗಿಲ್ಲ ಆದರೆ ಈ ಪ್ರಾಜೆಕ್ಟ್ ಗೆ ಶುಭವಾಗಲಿ ಎಂದು ನಾವೆಲ್ಲರೂ ಹರಸೋಣ.