Home Serial Loka ಮಂಗಳಗೌರಿ ಸೀರಿಯಲ್ ಗೆ ಎಂಟ್ರಿ ಕೊಟ್ಟ ಮತ್ತಿಬ್ಬ ನಟಿಯರು, ಇದನ್ನು ನೋಡಿದ ನೆಟ್ಟಿಗರು ಹೇಳಿದ್ದೇನು ಗೊತ್ತ.?

ಮಂಗಳಗೌರಿ ಸೀರಿಯಲ್ ಗೆ ಎಂಟ್ರಿ ಕೊಟ್ಟ ಮತ್ತಿಬ್ಬ ನಟಿಯರು, ಇದನ್ನು ನೋಡಿದ ನೆಟ್ಟಿಗರು ಹೇಳಿದ್ದೇನು ಗೊತ್ತ.?

0
ಮಂಗಳಗೌರಿ ಸೀರಿಯಲ್ ಗೆ ಎಂಟ್ರಿ ಕೊಟ್ಟ ಮತ್ತಿಬ್ಬ ನಟಿಯರು, ಇದನ್ನು ನೋಡಿದ ನೆಟ್ಟಿಗರು ಹೇಳಿದ್ದೇನು ಗೊತ್ತ.?

 

ಮಂಗಳಗೌರಿ ಮದುವೆ ಈ ದಾರಾವಾಹಿಯು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಹೆಸರಾಂತ ಧಾರಾವಾಹಿ. ಮೊದಲು ಪುಟ್ಟಗೌರಿ ಮದುವೆ ಎಂದು ಶುರುವಾದ ಈ ಧಾರಾವಾಹಿಯು ಕಥೆಯು ಮುಂದುವರೆದು ಪುಟ್ಟಗೌರಿಯು ಬೆಳೆದು ದೊಡ್ಡವಳಾದ ನಂತರ ಅವಳ ಜೀವನದ ಕಥೆಯನ್ನು ತೋರಿಸಿ ನಂತರ ಅದೇ ಧಾರಾವಾಹಿಯಲ್ಲಿ ಒಂದು ಪ್ರಮುಖ ಪಾತ್ರಧಾರಿವಾಗಿದ್ದ ಮಂಗಳ ಗೌರಿ ಎನ್ನುವ ಪಾತ್ರದ ಕಥೆಯನ್ನು ಹೇಳುವ ಮೂಲಕ ಮಂಗಳಗೌರಿ ಮದುವೆ ಎನ್ನುವ ಧಾರಾವಾಹಿ ಆಯಿತು. ಈ ಧಾರಾವಾಹಿ ಗೆ ಮೊದಲಿಂದಲೂ ಅದರದೇ ಆದ ಒಂದು ದೊಡ್ಡ ಅಭಿಮಾನಿ ಬಳಗವೇ ಇದೆ. ಬಹಳ ಜನರು ಪ್ರತಿ ದಿನವೂ ತಪ್ಪದೇ ಈ ಧಾರವಾಹಿಯನ್ನು ನೋಡುತ್ತಾರೆ. ಪ್ರತಿವಾರದ ಟಿಆರ್ ಪಿ ರೇಟಿಂಗ್ ನಲ್ಲಿ ಇದು ಒಳ್ಳೆಯ ಸ್ಥಾನ ಗಿಟ್ಟಿಸಿಕೊಂಡಿರುತ್ತದೆ. ಆದರೆ ಕೆಲವು ಜನರು ಮಾತ್ರ ಸೋಶಿಯಲ್ ಮೀಡಿಯಾ ಗಳಲ್ಲಿ ಈ ಧಾರಾವಾಹಿ ಬೇಗ ಮುಗಿದರೆ ಸಾಕು ಎಂದು ಕಮೆಂಟ್ ಮಾಡುತ್ತಿರುತ್ತಾರೆ.

ಆದರೆ ಇದರ ಬಗ್ಗೆ ಸದ್ಯಕ್ಕೆ ಮುಗಿಯುವ ಯಾವ ಸೂಚನೆಗಳು ಕೂಡ ಇಲ್ಲ ಎನ್ನುವುದಾಗಿ ಮಂಗಳ ಗೌರಿ ಧಾರಾವಾಹಿ ತಂಡವು ಸ್ಪಷ್ಟ ಪಡಿಸಿದೆ. ಬದಲಾಗಿ ಇನ್ನು ಮುಂದೆ ಇನ್ನು ಹೆಚ್ಚಿನ ಮಟ್ಟಿಗೆ ಧಾರಾವಾಹಿಯೂ ಮುಂದುವರಿಯುತ್ತದೆ ಎನ್ನುವುದರ ಬಗ್ಗೆ ಸೂಚನೆಗಳು ಸಿಗುತ್ತಿವೆ. ಇದುವರೆಗೆ ಈ ಧಾರಾವಾಹಿ ಅಲ್ಲಿ ಹಲವಾರು ರೀತಿಯ ಬದಲಾವಣೆಗಳು ಆಗಿವೆ. ಈ ಪ್ರಕಾರವಾಗಿ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಈವರೆಗೆ ಇದ್ದ ಹಲವಾರು ಪಾತ್ರಗಳಿಗೆ ಕಲಾವಿದರುಗಳು ಬದಲಾಗಿದ್ದಾರೆ. ಮತ್ತು ಕೆಲವೊಂದು ಪಾತ್ರಗಳು ಕೆಲವೊಂದು ದಿನಗಳವರೆಗೆ ಕಾಣಿಸುವುದೇ ಇಲ್ಲ. ಈ ಧಾರವಾಹಿಯಲ್ಲಿ ತುಂಬಾ ಫೇಮಸ್ ಆಗಿದ್ದ ನೆಗೆಟಿವ್ ರೋಲ್ ನಲ್ಲಿ ಎಲ್ಲರ ಮನ ಸೆಳೆದಿದ್ದ ಬಳ್ಳಿ ಮತ್ತು ಸೌಂದರ್ಯ ಎನ್ನುವ ಪಾತ್ರಗಳು ಕಳೆದ ಕೆಲವು ದಿನಗಳಿಂದ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.

ಇತ್ತೀಚಿಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಇನ್ನು ಮುಂದೆ ಈ ಧಾರಾವಾಹಿಯಲ್ಲಿ ಬಳ್ಳಿ ಹಾಗೂ ಸೌಂದರ್ಯ ಪಾತ್ರಗಳು ಮೊದಲಿನಂತೆಯೇ ಕಾಣಿಸಿಕೊಳ್ಳಲಿವೆಯಂತೆ. ಈ ಧಾರಾವಾಹಿಯಲ್ಲಿ ಬಳ್ಳಿ ಎನ್ನುವ ಪಾತ್ರವನ್ನು ಕೃತಿ ಅವರು ಮಾಡುತ್ತಿದ್ದರು. ಇದು ವಿಲನ್ ಜೊತೆ ಕಾಮಿಡಿ ಆಗಿ ಕಾಣಿಸಿಕೊಳ್ಳುವ ಪಾತ್ರವಾಗಿತ್ತು. ಈ ಪಾತ್ರವನ್ನು ಕೃತಿ ಅವರು ತುಂಬಾ ಚೆನ್ನಾಗಿ ನಿಭಾಯಿಸುತ್ತಿದ್ದರು ಹಾಗೂ ಪ್ರೇಕ್ಷಕರು ಕೂಡ ಈ ಪಾತ್ರದಲ್ಲಿ ಅವರನ್ನು ತುಂಬಾ ಮೆಚ್ಚಿಕೊಂಡಿದ್ದರು. ಹಾಗೆಯೇ ಸೌಂದರ್ಯ ಎನ್ನುವ ಪಾತ್ರವನ್ನು ತನಿಷ ಎನ್ನುವವರು ಮಾಡುತ್ತಿದ್ದರು. ಇವರೇ ಆ ಧಾರಾವಾಹಿಯಲ್ಲಿ ವಿಲನ್ ಆಗಿದ್ದರು. ಈ ಹಿಂದೆ ಹಲವು ಧಾರಾವಾಹಿಗಳಲ್ಲಿ ತನಿಷಾ ಅವರು ಕಾಣಿಸಿಕೊಂಡಿದ್ದರು ಮಂಗಳ ಗೌರಿ ಧಾರಾವಾಹಿಯ ಸೌಂದರ್ಯ ಪಾತ್ರದಲ್ಲಿ ಜನರು ಇವರನ್ನು ಹೆಚ್ಚಿಗೆ ಗುರುತಿಸುವುದು. ಈಗ ಮತ್ತೆ ಈ ಇಬ್ಬರು ಮಂಗಳಗೌರಿ ತಂಡವನ್ನು ಮತ್ತೆ ಸೇರಿಕೊಂಡಿದ್ದು, ಶೂಟಿಂಗ್ ನಲ್ಲಿ ಕೂಡ ಪಾಲ್ಗೊಂಡಿದ್ದಾರೆ.

ಇದರ ಜೊತೆಗೆ ಮಂಗಳ ಗೌರಿ ಮದುವೆ ಸೀರಿಯಲ್ ನಲ್ಲಿ ಹೊಸ ಅಧ್ಯಾಯವೊಂದು ಶುರುವಾಗಲಿದೆಯಂತೆ. ಇದರ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಈ ಧಾರಾವಾಹಿ ಸದ್ಯಕ್ಕೆ ಮುಗಿಯುವುದಿಲ್ಲ ಎನ್ನುವುದಕ್ಕೆ ಸ್ಟ್ರಾಂಗ್ ಮುನ್ಸೂಚನೆ ಇದೆ ಆಗಿದೆ. ಈ ಧಾರಾವಾಹಿ ಇದೇ ರೀತಿ ಮತ್ತಷ್ಟು ವರ್ಷ ಮುಂದುವರೆದು ಕಿರುತೆರೆ ಪ್ರೇಕ್ಷಕರನ್ನು ಇದೇ ರೀತಿ ರಂಜಿಸುತ್ತಾ ಇರಲಿ ಎಂದು ಮಂಗಳಗೌರಿ ಧಾರಾವಾಹಿ ತಂಡಕ್ಕೆ ಹಾರೈಸೋಣ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ.

LEAVE A REPLY

Please enter your comment!
Please enter your name here