ಇತ್ತೀಚಿಗೆ ನಾವು ಚಿತ್ರರಂಗದ ಒಂದೊಂದೇ ಮುತ್ತುಗಳನ್ನು ಕಳೆದು ಕೊಳ್ಳುತ್ತಿದ್ದೇವೆ. ಈಗ ನಾಲ್ಕೈದು ದಿನಗಳ ಹಿಂದೆ ಹಿರಿಯ ನಟ ಲಕ್ಷ್ಮಣ್ ಅವರು ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದರು. ಈಗ ಅದೇ ದಾರಿಯಲ್ಲಿ ಮತ್ತೊಬ್ಬ ಹಿರಿಯ ಕಲಾವಿದ ಮಂದೀಪ್ ರಾಯ್ (Mandip Roy) ಅವರು ಹೋಗುತ್ತಿದ್ದು ನಮ್ಮ ನೆಚ್ಚಿನ ಹಾಸ್ಯ ಕಲಾವಿದ ಇನ್ನಿಲ್ಲವಲ್ಲ ಎನ್ನುವ ನೋವನ್ನು ಹೆಚ್ಚು ಮಾಡುತ್ತಿದೆ.
ನಮ್ಮ ಬಾಲ್ಯದ ದಿನಗಳಲ್ಲಿ ಬರುತ್ತಿದ್ದ ಟಿವಿ ಸಿನಿಮಾಗಳಲ್ಲಿ ನಟಿಸಿ ನಮ್ಮನ್ನು ನಗೆಗಡಲಿನಲ್ಲಿ ತೇಲಿಸುತ್ತಿದ್ದ ವಿಶೇಷ ಹಾವಭಾವದ ಶ್ರೇಷ್ಠ ಕಲಾವಿದ ಮಂದೀಪ್ ರಾಯ್ ಅವರು ವಯೋಸಹಜ ಕಾಯಿಲೆಯಿಂದ ಅಸುನೀಗಿದ್ದಾರೆ. 500ಕ್ಕೂ ಹೆಚ್ಚು ಸಿನಿಮಾಗಳಿಗೆ ಬಣ್ಣ ಹಚ್ಚಿ ಅತಿ ಹೆಚ್ಚು ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಂದೀಪ್ ರಾಯ್ ಅವರು ಕನ್ನಡ ಚಿತ್ರರಂಗದ ಒಂದು ಭಾಗ. ಈಗ ಇವರ ಸಾ.ವು ಇಡೀ ಕರ್ನಾಟಕಕ್ಕೆ ತುಂಬಲಾಗದ ನ.ಷ್ಟ ಆಗಿದೆ.
ಮಂದೀಪ್ ರಾಯ್ ಅವರಿಗೆ ಹಿಂದಿನ ದಿನ ಎದೆ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಹೋಗಿ ಇಸಿಜಿ ಮಾಡಿಸಿ ಮರಳಿ ಮನೆಗೆ ಕರೆದುಕೊಂಡು ಬಂದು ಸುಧಾರಿಸಿಕೊಂಡಿದ್ದಾರೆ ಎಂದು ಅಂದುಕೊಳ್ಳುವಷ್ಟರಲ್ಲಿ ಪ್ರಾ.ಣ ಬಿಟ್ಟಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 500 ಚಿತ್ರಗಳಿಗೆ ಬಣ್ಣ ಹಚ್ಚಿರುವ ಮಂದೀಪ್ ರಾಯ್ ಅವರ ಅಂತಿಮ ದರ್ಶನಕ್ಕೆ ಕನ್ನಡ ಚಿತ್ರರಂಗದಿಂದ ಬಂದಿದ್ದ ಕಲಾವಿದ ಸಂಖ್ಯೆ ಕೇವಲ 20 ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಚರ್ಚೆಕ್ಕೆ ಕಾರಣ ಆಗಿದೆ.
ಮಂದೀಪ್ ಅವರ ಅಂತಿಮ ದರ್ಶನದ ಮತ್ತು ಅಂತ್ಯ ಸಂಸ್ಕಾರದ ವಿಡಿಯೋಗಳು ಸಾಮಾಜಿಕ ಜಾಲತಾಣವಾದಲ್ಲಿ ಹರಿದಾಡುತ್ತಿದ್ದಂತೆ ಬಳಕೆದಾರರು ಈ ವಿಷಯದ ಕುರಿತು ಕಿಡಿ ಕಾರುತ್ತಿದ್ದಾರೆ. ನೆನ್ನೆ ಮೊನ್ನೆ ಹುಟ್ಟಿಕೊಂಡ ಸ್ಟಾರ್ ಮದುವೆಗೆ ಆದರೆ ಕುಟುಂಬ ಸಮೇತ ದಂಡು ದಂಡಾಗಿ ಹೋಗುತ್ತಿರಿ. ಇವರು ಸಹಾ ಕನ್ನಡ ತಾಯಿ ಸೇವೆ ಮಾಡಿಲ್ವಾ ಪದೇ ಪದೇ ಯಾಕೆ ಹೀರೋಗಳಿಗೆ ಒಂದು ತರಹ, ಸಹ ಕಲಾವಿದರಿಗೆ ಒಂದು ಮಾಡುತ್ತೀರಲ್ಲಾ ಎಂದು ಪ್ರಶ್ನಿಸಿದ್ದಾರೆ.
ಕೊನೆ ಪಕ್ಷ ಅವರ ಜೊತೆ ಸಿನಿಮಾ ಮಾಡಿದ್ದ ಅವರ ಜೊತೆ ತೆರೆ ಹಂಚಿಕೊಂಡಿದ್ದ ಹೀರೋಗಳು ಆದರೂ ಹೋಗಬಹುದಿತ್ತಲ್ಲ? ಇದೇನಾ ನೀವು ಹಿರಿಯರಿಗೆ ತೋರುತ್ತಿರುವ ಗೌರವ? ಎತ್ತ ಸಾಗುತ್ತಿದೆ ನಮ್ಮ ಕರ್ನಾಟಕ ಸಂಸ್ಕೃತಿ ಎಂದು ಪ್ರಶ್ನೆ ಎತ್ತಿದ್ದಾರೆ. ಹಾಗಾದರೆ ನಮ್ಮ ಇಂಡಸ್ಟ್ರಿಯಲ್ಲಿ ಹೀರೋ ಆದವರಿಗೆ ಮಾತ್ರ ಬೆಲೆ ಅವರನ್ನು ಕಳೆದುಕೊಂಡಾಗ ಮಾತ್ರ ನಷ್ಟ ಆಗುತ್ತಿದೆಯಾ ಇವರು ಸಹ ಸಿನಿಮಾದ ಭಾಗವೇ ಅಲ್ಲವೇ ಇವರಿಲ್ಲದೆ ಸಿನಿಮಾ ಆಗಿ ಹೋಯ್ತಾ.
ಪದೇ ಪದೇ ತಪ್ಪು ತಿದ್ದಿಕೊಳ್ಳದೆ ಈ ರೀತಿ ವರ್ತಿಸುತ್ತಿದ್ದೀರಲ್ಲ ಎಲ್ಲಿ ಹೋಗಿದ್ದೀರ ದೊಡ್ಡ ದೊಡ್ಡ ಕಲಾವಿದರು ಎನಿಸಿಕೊಂಡವರು ಯಾಕೆ ಯಾರು ಮಾತನಾಡುತ್ತಿಲ್ಲ ಎಂದು ಕೇಳುತ್ತಿದ್ದಾರೆ. ಇವರ ಈ ಬೇಸರದಲ್ಲೂ ಅರ್ಥವಿದೆ ಅನಿಸುತ್ತಿದೆ. ಯಾಕೆಂದರೆ ಯಾವುದಾದರೂ ಸ್ಟಾರ್ ಹೀರೋಗಳ ಸಂತೋಷದ ಕೂಟದಲ್ಲಿ ಎಲ್ಲರೂ ಇರುತ್ತಾರೆ. ಆದರೆ ಯಾವುದೋ ಹಿರಿಯ ಕಲಾವಿದನ ಕೊನೆಯ ವಿದಾಯ ಹೇಳುವ ಸಮಯದಲ್ಲಿ ಯಾರು ಪತ್ತೆಗೆ ಇರುವುದಿಲ್ಲ ಎನ್ನುವುದು ಇವರ ಕೋಪಕ್ಕೆ ಕಾರಣವಾಗಿತ್ತು.
ಲಕ್ಷ್ಮಣ್ ಅವರು ಮ.ರ.ಣ ಹೊಂದಿದ ದಿನವೂ ಕೂಡ ಇದೇ ವಿಷಯ ಚರ್ಚೆಯಾಗಿತ್ತು, ಆಗ ಅದು ದೊಡ್ಡದಾಗದೆ ಹೋದರು ಈಗ ಮಂದೀಪ್ ಅವರ ಸಾ.ವಿ.ನ.ಲ್ಲೂ ಕೂಡ ಇದೇ ರೀತಿ ಬೇಧ ಭಾವ ಮಾಡುತ್ತಿರುವುದು ಕಂಡು ಜನತೆ ಈಗ ಚಿತ್ರರಂಗದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇನ್ನಾದರೂ ಈ ವಿಷಯ ಅವರಿಗೆ ಮುಟ್ಟಿ ಅರ್ಥ ಕೊಳ್ಳುತ್ತಾರಾ ಎಂದು ಕಾದು ನೋಡೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ