ಕ್ರೇಜಿಸ್ಟಾರ್ ರವಿಚಂದ್ರನ್ (Crazy star Ravichandran) ಅವರು ಹೆಚ್ಚಾಗಿ ರಾಜಕೀಯ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ ಆದರೆ ಹೂವಿನ ಹಡಗಲಿ ಅಲ್ಲಿ ಸಮಾಜ ಸೇವಕ ಕೃಷ್ಣನಾಯಕ್ (Krishna Nayak) ಅವರು ಏರ್ಪಡಿಸಿದ್ದ ಕಾರ್ಯಕ್ರಮಕ್ಕಾಗಿ ಅಲ್ಲಿಗೆ ಹೋಗಿದ್ದಾರೆ. ಹತ್ತಿರದಲ್ಲೇ ದಾಂಡೇಲಿ ಅಲ್ಲಿ ಶೂಟಿಂಗ್ ಅಲ್ಲಿ ಇದ್ದ ಕಾರಣ ಆಯೋಜಕರ ಒತ್ತಾಯದ ಮೇರೆಗೆ ತಮ್ಮ ಪ್ರೀತಿಯ ಅಭಿಮಾನಿಗಳನ್ನು ಕಾಣುವ ಆಸೆಯಿಂದ ಕೂಡ ಹೂವಿನ ಹಡಗಲಿಗೆ (Hoovina hadagali) ಹೋಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ರವಿಚಂದ್ರನ್ ಅವರು ಮಾತಿಗಿಳಿದ ಸಮಯದಲ್ಲಿ ಅನೇಕ ವಿಷಯಗಳನ್ನು ಅಭಿಮಾನಿಗಳ ಜೊತೆ ನೇರವಾಗಿ ಹಂಚಿಕೊಂಡಿದ್ದಾರೆ. ರವಿಚಂದ್ರನ್ ಅವರು ವೇದಿಕೆಗೆ ಬರುತ್ತಿದ್ದಂತೆ ಅವರ ಮೇಲೆ ಹೂವು ಹಾಕಿ ಸ್ವಾಗತಿಸಲಾಯಿತು ಮತ್ತು ರವಿಚಂದ್ರನ್ ಅವರು ನನಗೂ ಇಲ್ಲಿಗೂ ನಮ್ಮ ತಂದೆಯ ಕಾರದಿಂದ ಬಾಂಧವ್ಯ ಇದೆ ಎನ್ನುತ್ತಾ ಮಾತು ಶುರು ಮಾಡಿದರು. ನಾನು ಹೆಚ್ಚಾಗಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಎಲ್ಲರಿಗೂ ಗೊತ್ತು ಆದರೆ ಇದು ವಿಶೇಷ ಕಾರ್ಯಕ್ರಮ ಎನ್ನುವ ಕಾರಣಕ್ಕೆ ಬಂದೆ ಜೊತೆಗೆ ನಮ್ಮ ಈಶ್ವರಿ ಸಂಸ್ಥೆಗೆ ನೀವೆಲ್ಲ ತೋರಿರುವ ಪ್ರೀತಿಯ ಋಣಕ್ಕಾಗಿ ನಿಮ್ಮನ್ನೆಲ್ಲಾ ನೋಡಿಕೊಂಡು ಹೋಗೋಣ ಎಂದು ಬಂದೆ.
ಹೂವಿನ ಹಡಗಲಿ ಹೆಸರಿಗೆ ತಕ್ಕ ಹಾಗೆ ಹೂವಿನ ಮಳೆಗೈದು ಸ್ವಾಗತಿಸಿದೆ ಎಂದು ಹೇಳಿ ಇಂಡಸ್ಟ್ರಿಗೆ ಸಂಬಂಧಿಸಿದಂತೆ ಮಾತಿಗಿಳಿದಿದ್ದಾರೆ. ನನಗೆ 40 ವರ್ಷ ಎಕ್ಸ್ಪೀರಿಯನ್ಸ್ ಇದೆ ಇಂಡಸ್ಟ್ರಿಯಲ್ಲಿ ನೀವು ನನಗೆ ಹಾಕುವ ಚಪ್ಪಾಳೆ ಶಿಲ್ಲೆ ಇಡಿ ಇಂಡಸ್ಟ್ರಿಗೆ ಸಲ್ಲುತ್ತದೆ. ಕಲಾವಿದ ಎಂದ ಮೇಲೆ ಎಲ್ಲರೂ ಒಂದೇ. ಆಗ ಹೀರೋ, ಈಗ ನಿಮ್ಮ ಹೀರೋ ದರ್ಶನ್ (Darshan) ಗೆ ಅಪ್ಪನಾಗಿದ್ದೇನೆ. ಅಂದಿನಿಂದ ಇಂದಿನವರೆಗೂ ನನಗೆ ಗೊತ್ತಿರುವುದು ಒಂದೇ ಸಿನಿಮಾ ಮಾತ್ರ ನನ್ನ. ಪಾಲಿಸಿ ಹೀಗೆ ಇರುವುದು ಇರುವ ತನಕ ಪ್ರೀತಿ ಹಂಚಬೇಕು ಸಾಧ್ಯವಾದರೆ ಇನ್ನೊಬ್ಬರ ಮುಖದಲ್ಲಿ ನಗು ತರಬೇಕು, ಇಲ್ಲ ಅಂದ್ರೆ ಸುಮ್ಮನೆ ಇದ್ದುಬಿಡಬೇಕು.
ನಮ್ಮ ಮುಖ ನೋಡಿ ಯಾರಾದರೂ ಮುಖದಲ್ಲಿ ನಗು ತುಂಬಿ ಕೊಂಡರೆ ಅದೇ ನಮ್ಮ ಬದುಕಿಗೆ ಸಾರ್ಥಕ ಎಂದು ಅರ್ಥ .ಇಂದು ನಾನು ಇಲ್ಲಿ ಬಂದಿರುವುದಕ್ಕೆ ನೀವೆಲ್ಲ ಇಷ್ಟು ಸಂತೋಷಪಡುತ್ತಿದ್ದೀರಲ್ಲ ನನಗೆ ಈಗ ನನ್ನ ಜನ್ಮ ಸಾರ್ಥಕ ಎನಿಸಿತು. ಆದರೆ ಜನ ನನ್ನ ಬಗ್ಗೆ ಬೇರೆ ಮಾತಾಡುತ್ತಾರೆ. ಇತ್ತೀಚೆಗೆ ಬಂದಿರುವ ಈ ಜನರೇಶನ್ ಅವರು ನಮಗೆ ಏನೂ ಗೊತ್ತಿಲ್ಲ ಎಂದು ಕೊಳ್ಳುತ್ತಾರೆ. ಅವರು ಗೊತ್ತಿಲ್ಲ ಎಂದುಕೊಂಡಿರುವುದೇ ತಪ್ಪು, ಏನು ಗೊತ್ತಿಲ್ಲದೆ ನಲವತ್ತು ವರ್ಷ ನಾವು ಸಿನಿಮಾ ಪ್ರಪಂಚದಲ್ಲಿ ಸುಮ್ಮನೆ ಇಲ್ಲಿತನಕ ಬಂದಿಲ್ಲ.
40 ವರ್ಷದಲ್ಲಿ ನನಗೆ ವ್ಯವಹಾರ ಗೊತ್ತಿಲ್ಲ ವ್ಯಾಪಾರ ಗೊತ್ತಿಲ್ಲ ಹಣ ಎಂದರೇನು ಅಂತ ಗೊತ್ತಿಲ್ಲ ನನಗೆ ಗೊತ್ತಿರುವುದು ಬರೀ ಪ್ರೀತಿ ಮಾತ್ರ. ನನಗೆ ಸಿನಿಮಾ ಮೇಲೆ ಪ್ರೀತಿ ಸಿನಿಮಾ ಬಿಟ್ಟು ನನಗೆ ಬೇರೆ ಏನು ಗೊತ್ತಿಲ್ಲ ನನ್ನನ್ನು ಗೆದ್ದ ,ಸೋತ ಎಂದು ಮಾತನಾಡುತ್ತಾರೆ. ನಾನು ಗೆದ್ದು ಇಲ್ಲ ಸೋತು ಇಲ್ಲ ಅದು ನನ್ನ ಗೆಲುವು ಸೋಲಲ್ಲ ಎಲ್ಲವೂ ನಿಮ್ಮದು. ನೀವು ನಾನು ಗೆದ್ದರೆ ನೀವು ಗೆದ್ದಂತೆ ನೀವು ಸೋತರೆ ನಾನು ಸೋತಂತೆ ನಾನು ಏನಾಗಬೇಕು ಎಂದು ನೀವೇ ನಿರ್ಧರಿಸಬೇಕು.
ಯೂಟ್ಯೂಬಲ್ಲಿ ರವಿಚಂದ್ರನ್ ಮನೆ ಮಾರಿಕೊಂಡ ಎಂದು ಹಾಕುತ್ತಾರೆ. ನಾನಲ್ಲ ಮಾರಿಕೊಂಡಿರುವುದು ನೀವು ಅದಕ್ಕೆ ನೀವು ಉತ್ತರ ಕೊಡಬೇಕು. ನಿಮ್ಮೆಲ್ಲರ ಪ್ರೀತಿ ಅಭಿಮಾನ ವಿಶ್ವಾಸ ಇರುವ ತನಕ ನಾನು ಎಂದೂ ಸೋಲುವುದಿಲ್ಲ ಮನೆಯನ್ನು ಮಾರಿಕೊಳ್ಳುವುದಿಲ್ಲ ಹೀಗೆ ನಿಮ್ಮ ಸಹಕಾರವನ್ನು ನಾನು ಇರುವವರೆಗೂ ಕೊಟ್ಟು ನೋಡಿಕೊಳ್ಳಿ ನನಗೆ ಗೊತ್ತಿರುವುದು ಸಿನಿಮಾ ನಿಮ್ಮೆಲ್ಲರ ಮತ್ತು ಪ್ರೀತಿ ಇದಿಷ್ಟೇ ಎಂದು ಹೇಳಿ ತಮ್ಮ ಮಾತುಗಳನ್ನು ಮುಗಿಸಿದ್ದಾರೆ. ರವಿಚಂದ್ರನ್ ಅವರ ಈ ಪರಿಸ್ಥಿತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ.