Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕಾಂತಾರ ಸಿನಿಮಾದ ಅಭಿನಯಕ್ಕಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ನಟ ರಿಷಬ್ ಶೆಟ್ಟಿ ಕಾಂತರಾ ಸಿನಿಮಾ ಸಕ್ಸಸ್ ಗೆ ಮತ್ತೊಂದು ಗರಿ.

Posted on February 15, 2023 By Kannada Trend News No Comments on ಕಾಂತಾರ ಸಿನಿಮಾದ ಅಭಿನಯಕ್ಕಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ನಟ ರಿಷಬ್ ಶೆಟ್ಟಿ ಕಾಂತರಾ ಸಿನಿಮಾ ಸಕ್ಸಸ್ ಗೆ ಮತ್ತೊಂದು ಗರಿ.

 

ಕಾಂತರಾ (Kanthara) ಸಿನಿಮಾ ಕನ್ನಡದ ಒಂದು ಹೆಮ್ಮೆ ಸಿನಿಮಾ. ತುಳುನಾಡಿನ ಭಾಗದ ದೈವದ ಅಂಶವನ್ನು ಪ್ರಧಾನವಾಗಿ ಹೊಂದಿದ್ದ ಈ ಚಿತ್ರವು ದೇಶ ಭಾಷೆಗಳ ಅಂತರವಿಲ್ಲದೆ ಎಲ್ಲರ ಗಮನ ಸೆಳೆದು ಸೂಪರ್ ಹಿಟ್ ಆಗಿದೆ. ಕನ್ನಡ ಸಿನಿಮಾ ವಾಗಿ ಕಡಿಮೆ ಬಜೆಟ್ ಅಲ್ಲಿ ತಯಾರಾಗಿದ್ದರು ಪ್ಯಾನ್ ಇಂಡಿಯಾ ಸಿನಿಮಾ (pan india movie) ಆಗಿ ಹೊರಹೊಮ್ಮುವ ಮೂಲಕ ಹೊಸದೊಂದು ಇತಿಹಾಸವನ್ನೇ ಸೃಷ್ಟಿಸಿದೆ. ರಿಷಭ್ ಶೆಟ್ಟಿ ಅವರಿಗೆ ನಿರ್ದೇಶಕನಾಗಿ ಮತ್ತು ನಟನಾಗಿ ಈ ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿದೆ.

ಈಗಾಗಲೇ ಸಿನಿಮಾ ಹಲವು ವಿಭಾಗಗಳ ದಾಖಲೆಗಳನ್ನು ಮುರಿದಿದ್ದು ಈಗ ಒಂದು ಹೆಜ್ಜೆ ಮುಂದೆ ಹೋಗಿ ಪ್ರಶಸ್ತಿಯ ಭೇಟೆಗಳನ್ನು ಆಡುತ್ತಿದೆ. ಇನ್ನು ಹಲವು ವರ್ಷಗಳ ಕಾಲ ನಡೆಯುವ ಎಲ್ಲಾ ಅವಾರ್ಡ್ ಫಂಕ್ಷನ್ಗಳಿಗೂ ಖಂಡಿತವಾಗಿಯೂ ಕಾಂತಾರ ಸಿನಿಮಾ ಗೆ ಅವಾರ್ಡ್ಗಳು ಬರುತ್ತಲೇ ಇರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾಂತಾರ ಎನ್ನುವ ಕನ್ನಡ ಸಿನಿಮಾ ಆಸ್ಕರ್ ಗೆ ನಾಮಿನೇಟ್ (nominate for Oscar) ಆಗಿರುವುದು ಕನ್ನಡಿಗರ ಸಂತಸವನ್ನು ಇಮ್ಮಡಿಗೊಳಿಸಿತ್ತು.

ಮತ್ತೊಮ್ಮೆ ಈಗ ರಿಷಬ್ ಶೆಟ್ಟಿ ಅಭಿಮಾನಿಗಳು ಮತ್ತು ಕರುನಾಡ ಜನತೆಗೆ ಸಂತಸ ವಾಗುವ ಮತ್ತೊಂದು ವಿಷಯ ಕಾಂತಾರ ಸಿನಿಮಾ ಕುರಿತು ನಡೆದಿದೆ. ಅದೇನೆಂದರೆ ದೇಶದ ಚಿತ್ರೋದ್ಯಮದ ಅತ್ಯಂತ ಶ್ರೇಷ್ಠ ಪ್ರಶಸ್ತಿ ಎಂದು ಕರೆಸಿಕೊಳ್ಳಲಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೆ ರಿಷಭ್ ಶೆಟ್ಟಿ (Rishabh Shetty) ಬಾಜನರಾಗಿದ್ದಾರೆ. ಈ ಕುರಿತ ಅಪ್ಡೇಟ್ ಹೊರಬಿದ್ದಿದ್ದು ಫೆಬ್ರವರಿ 20ರಂದು ಮುಂಬೈ ತಾಜ್ ಲ್ಯಾಂಡ್ ಹೋಟೆಲ್ ಅಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಕಾರಣ ಎಂದು ಹೇಳುವ ಅಗತ್ಯವೇ ಇಲ್ಲ, ಇದೆಲ್ಲಾ ಸಾಧ್ಯ ಆಗಿರುವುದು ಕಾಂತರಾ ಸಿನಿಮಾದ ನಟನೆ ಹಾಗೂ ನಿರ್ದೇಶನದಿಂದ ಎಂದು ಮತ್ತೊಮ್ಮೆ ಹೇಳಬೇಕಾಗಿಲ್ಲ. ಕಾಂತರಾ ಸಿನಿಮಾದಿಂದ ಡಿವೈನ್ ಸ್ಟಾರ್ (Divine star title) ಎಂದು ಬಡ್ತಿ ಪಡೆದಿರುವ ರಿಷಭ್ ಶೆಟ್ಟಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಚಿತ್ರೋದ್ಯಮ ಪ್ರಶಸ್ತಿಯು (Dada Saheb phalke International award) ಭರವಸೆಯ ನಾಯಕ ನಟ ಎನ್ನುವ ವಿಭಾಗದಿಂದ ದೊರೆಯುತ್ತಿದೆ. ಈ ಮೂಲಕ ಕನ್ನಡದ ಕೀರ್ತಿ ಪತಾಕೆ ಹಾರಿಸುತ್ತಿರುವ ರಿಷಬ್ ಶೆಟ್ಟಿ ಅವರಿಗೆ ಅಭಿಮಾನಿಗಳು ಸಂತಸದಿಂದ ಶುಭವನ್ನು ಕೂಡ ಹಾರೈಸಿದ್ದಾರೆ.

ಈಗಷ್ಟೇ ಕಾಂತರಾ ಸಿನಿಮಾವು 100 ದಿನಗಳನ್ನು ಪೂರೈಸಿದ ಸಂಭ್ರಮವನ್ನು ಬೆಂಗಳೂರಿನ ವಿಜಯನಗರದ ಭಂಟರ ಭವನದಲ್ಲಿ ತಂಡ ಆಚರಿಸಿಕೊಂಡಿತ್ತು. ಇಡೀ ಸಭಾಂಗಣವನ್ನು ಕಾಂತಾರ ಸಿನಿಮಾ ಶೂಟಿಂಗ್ ಸೆಟ್ ರೀತಿಯೇ ಸೆಟ್ ಹಾಕಿ ಈ ಚಿತ್ರದ ಸಕ್ಸಸ್ ಆಗಿ ದುಡಿದ ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರಿಗೆ ಸ್ಮರಣಿಕೆ ಕೊಟ್ಟು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾಂತಾರ ಸಿನಿಮಾದ ಮುಂದುವರಿದ ಭಾಗ ಅಲ್ಲ ಹಿಂದಿನ ಕಥೆಯನ್ನು ಸೀಕ್ವೆನ್ಸ್ ಬದಲು ಫ್ರೀಕ್ವೆನ್ಸ್ ಆಗಿ ತರಲಿದ್ದೇವೆ ಎಂದು ಹೇಳಿಕೊಂಡ ರಿಷಭ್ ಶೆಟ್ಟಿ ಅವರು ಆ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ.

ಇದರ ನಡುವೆಯೇ ಮೊನ್ನೆ ಅಷ್ಟೇ ಪ್ರಧಾನಿ ಮೋದಿಯವರು (Prime minister Narendra Modi) ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದ ಸಮಯದಲ್ಲಿ ಇಲ್ಲಿನ ಪ್ರಮುಖರಿಗೆ ಔತಣ ಕೂಟಕ್ಕೆ ಆಹ್ವಾನ ಕೊಟ್ಟಿದ್ದರು ಎನ್ನುವುದು ವಿಶೇಷವಾಗಿತ್ತು. ಕನ್ನಡ ಚಿತ್ರರಂಗದ ಪರವಾಗಿ ರಾಕಿಂಗ್ ಸ್ಟಾರ್ ಯಶ್, ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಮತ್ತು ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಆಹ್ವಾನಿಸಲಾಗಿತ್ತು. ದೇಶದ ಪ್ರಧಾನ ಬಾಯಿಯಲ್ಲೂ ಸಹ ಕಾಂತಾರ ಸಿನಿಮಾದ ಬಗ್ಗೆ ಮಾತುಗಳು ಬಂದಿದ್ದವು ಎನ್ನುವುದು ಸಿನಿಮಾ ಬೀರಿರುವ ಪ್ರಭಾವದ ಆಳವನ್ನು ತಿಳಿಸುತ್ತದೆ.

Entertainment Tags:Kantara, Rishab Shetty
WhatsApp Group Join Now
Telegram Group Join Now

Post navigation

Previous Post: ಚಿತ್ರರಂಗದಲ್ಲಿ ಅವಕಾಶಗಳಿಲ್ಲದೆ ಕಣ್ಮರೆ ಆಗಿರುವ ನಟ ಗುರುದತ್ ಅವರ ನೋವಿನ ಕಥೆ ಇದು. ಒಮ್ಮೆ ಇವರ ಮಾತು ಕೇಳಿ.
Next Post: ಎರಡು ಪಕ್ಷದವರು ಮನೆಗೆ ಬಂದಿದ್ದು & ರಾಜಕೀಯ ಮಾತುಕತೆ ಆಗಿದ್ದು ನಿಜ ಸತ್ಯ ಒಪ್ಪಿಕೊಂಡ ಕಿಚ್ಚ. ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore