ಪ್ರತಿಯೊಬ್ಬ ಮನುಷ್ಯ ಕೂಡ ವಿಭಿನ್ನ. ಹೀಗಾಗಿ ಪ್ರತಿಯೊಬ್ಬರನ್ನು ಗುರುತಿಸುವ ಕಾರಣಕ್ಕಾಗಿ ಹೆಸರು ಅವಶ್ಯಕ. ಮೊದಲಿಗೆ ಈ ಉದ್ದೇಶದಿಂದ ಶುರುವಾದ ಹೆಸರಿಡುವಿಕೆ ನಂತರ ಅವರ ನಾಮ ನಕ್ಷತ್ರ, ಜನ್ಮ ನಕ್ಷತ್ರ, ಹುಟ್ಟಿದ ದಿನಾಂಕ ಮತ್ತು ಅವರು ಇರುವ ಅಂದ ಚಂದ ಈ ಎಲ್ಲಾ ಕಾರಣಕ್ಕಾಗಿ ಮತ್ತೊಂದು ರೀತಿಯಲ್ಲಿ ಹೊಸ ಹೆಸರು ಇರುವ ವಿದ್ಯಮಾನ ಶುರುವಾಯಿತು. ಅದರಲ್ಲೂ ಈ ಇಂಟರ್ನೆಟ್ ಯುಗ ಬಂದ ಮೇಲೆ ಯಾರು ಇಟ್ಟಿರದ ಹೆಸರನ್ನು ಮಕ್ಕಳಿಗೆ ಇಡಬೇಕು ಎನ್ನುವ ಕಾರಣಕ್ಕೆ ಇಂಟರ್ನೆಟ್ ನಲ್ಲಿ ಮಾಸಗಟ್ಟಲೇ ಹುಡುಕಿ ತಮ್ಮ ಮುದ್ದು ಮಕ್ಕಳಿಗೆ ಹೆಸರನ್ನು ಸೆಲೆಕ್ಟ್ ಮಾಡುತ್ತಾರೆ.
ಈ ರೀತಿ ಯಾವುದೇ ಹೆಸರನ್ನು ಇಟ್ಟರೂ ಕೂಡ ಹೆಣ್ಣು ಮಗುವಿಗೆ ಕೆಲ ಹೆಸರುಗಳನ್ನು ಇಡಲೇಬಾರದು ಎಂದು ತಿಳಿಸುತ್ತದೆ ಶಾಸ್ತ್ರ. ಅದು ಯಾವ ಹೆಸರುಗಳು ಮತ್ತು ಅದಕ್ಕೆ ಕಾರಣ ಏನು ಗೊತ್ತಾ? ಗಾಂಧಾರಿ (Gandhari) ಎನ್ನುವ ಹೆಸರನ್ನು ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳಿಗೆ ಇಡಬಾರದು ಎಂದು ಹೇಳುತ್ತಾರೆ. ಯಾಕೆಂದರೆ ಗಾಂಧಾರಿ ಗಾಂಧಾರ ದೇಶದ ರಾಜಕುಮಾರನ ಮಗಳಾಗಿ ಹುಟ್ಟಿ ಅಣ್ಣ ಶಕುನಿ ಇಡೀ ರಾಜ ಪರಿವಾರದ ಉಪಚಾರದಿಂದ ಮುದ್ದು ಕಣ್ಮಣಿಯಾಗಿ ಬೆಳೆದಿರುತ್ತಾಳೆ.
ಇರುಳಿನಲ್ಲೂ ಕೂಡ ಅಂಧಕಾರ ಕಾಣಲು ಆಸೆ ಪಡೆದ ಈಕೆ ಧೃತರಾಷ್ಟ್ರರನ್ನು ಕೈಹಿಡಿದ ಕಾರಣ ಬದುಕು ಪೂರ್ತಿ ಕತ್ತಲಲ್ಲಿ ಕಳೆಯಬೇಕಾಗುತ್ತದೆ. ಗಂಡನಿಗೆ ಇರದ ದೃಷ್ಟಿ ತನಗೂ ಬೇಡ ಎಂದು ತಾನೇ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪಾತಿವ್ರತ್ಯ ಪಾಲಿಸಿ ಬದುಕು ಸವಿಸುತ್ತಾರೆ. ಆದರೆ ಬದುಕಿನ ಪೂರ್ತಿ ದುಷ್ಟಮಕ್ಕಳು ಹಾಗೂ ದುರೀಣ ಮಕ್ಕಳಿಂದ ಸದಾ ಕಣ್ಣಿರಿನಲ್ಲಿ ಕೈ ತೊಳೆಯುವ ರೀತಿ ಆಗುತ್ತದೆ, ಆದ ಕಾರಣಕ್ಕೆ ಯಾವುದೇ ಹೆಣ್ಣಿಗೂ ಗಾಂಧಾರಿ ಹೆಸರು ಇಡಬಾರದು. ಮತ್ತು ಕುಂತಿ ಈ ಹೆಸರು ಕೂಡ ಮಹಾಭಾರತದಲ್ಲಿ ಬರುವ ಒಂದು ಶ್ರೇಷ್ಠ ಹೆಸರು.
ಪಂಚಪಾಂಡವರ ತಾಯಿಯಾದ ಕುಂತಿ (Kunthi) ಮಾತೆಯು ಸಹ ಹುಟ್ಟಿನಿಂದರೇ ಧೈರ್ಯವಂತೆ, ಶೌರ್ಯವಂತೆ, ರೂಪವಂತೆ ಆಗಿದ್ದರು ತಾನು ಪಡೆದ ವರಗಳಿಂದಲೇ ಶಾಪವನ್ನು ಅನುಭವಿಸುವ ರೀತಿ ಆಗುತ್ತದೆ. ಯುವರಾಣಿಯಾಗಿ ಬೆಳೆದಿದ್ದರೂ ಕಾಡು ಮೇಡಿನಲ್ಲಿ ಹೆಚ್ಚು ವಾಸ ಮಾಡಿ ಬದುಕು ಕಳೆಯುತ್ತಾರೆ ಮತ್ತು ಚಿಕ್ಕ ವಯಸ್ಸಿಗೆ ವಿಧವೆ ಸಹ ಆಗುತ್ತಾರೆ. ಇವರೂ ಸಹ ಬದುಕಿನಲ್ಲಿ ತುಂಬಾ ದುಃಖವನ್ನು ಪಟ್ಟ ಕಾರಣ ಯಾರಿಗೂ ಈ ಹೆಸರನ್ನು ಇಡುವುದಿಲ್ಲ.
ಇದೇ ಮಹಾಭಾರತದಲ್ಲಿ ಬರುವ ಮತ್ತೊಂದು ಹೆಸರು ದ್ರೌಪದಿ (Draupadi) . ಈ ಹೆಸರಿಗೆ ತುಂಬಾ ಶಕ್ತಿ ಇದೆ ಪಂಚ ಪತಿವ್ರತೆಯರಲ್ಲಿ ಒಬ್ಬರು ಎಂದು ಕರೆಸಿಕೊಂಡಿರುವ ದ್ರೌಪದಿಯ ಹೆಸರನ್ನು ಕೂಡ ಯಾರು ಹೆಣ್ಣು ಮಕ್ಕಳಿಗೆ ಇಡಬಾರದು. ಯಾಕೆಂದರೆ ಈಕೆ ತಂದೆಯ ಯಜ್ಞದ ಫಲವಾಗಿ ಹುಟ್ಟಿದವರಾದರೂ ಅವರಿಂದಲೇ ಸಾಕಷ್ಟು ಅವಮಾನಗಳನ್ನು ಅನುಭವಿಸುತ್ತಾರೆ. ನಂತರ ಅರ್ಜುನನನ್ನು ಸ್ವಯಂವರದಲ್ಲಿ ಆರಿಸಿಕೊಂಡರು ಪಂಚ ಪತಿಯರಿಗೆ ಪತ್ನಿ ಆಗಬೇಕಾದ ಸಂದರ್ಭ ಬರುತ್ತದೆ. ಸೃಷ್ಟಿಯಲ್ಲಿ ನಡುಗುವಂತಹ ಅಪಮಾನವನ್ನು ವಸ್ತ್ರಾಪಹರಣ ಸಮಯದಲ್ಲಿ ಎದುರಿಸಬೇಕಾಗುತ್ತದೆ. ಇಂಥ ಕಷ್ಟ ಕಾರ್ಪಣ್ಯಗಳನ್ನು ನೋಡಿದ ದ್ರೌಪದಿ ಹೆಸರನ್ನು ಯಾರು ಇಡಬಾರದು.
ಕೊನೆಯದಾಗಿ ಮಂಡೋದರಿ (Mandodari) ಈಕೆಯು ಶ್ರೇಷ್ಠ ಶಿವಭಕ್ತ ರಾವಣನ ಪತ್ನಿ ಆಗಿದ್ದರು ಇಡೀ ಲಂಕಾಧಿಪತಿಗೆ ಒಡತಿ ಆಗಿದ್ದರು ತನ್ನ ಪತಿಯ ದುರ್ಗುಣಗಳಿಂದ ಬಹಳ ನೋವು ತಿನ್ನುತ್ತಾರೆ ಆದ್ದರಿಂದ ಇವರ ಹೆಸರನ್ನು ಯಾರು ಇಡಬಾರದು. ರಾವಣ ತಂಗಿಯಾದ ಶೂರ್ಪಣಕಿ (Shoorpanaki) ಹೆಸರನ್ನು ಕೂಡ ಯಾರು ಹೆಣ್ಣು ಮಕ್ಕಳಿಗೆ ಇಡಬಾರದು. ಯಾಕೆಂದರೆ ರಾಮಾಯಣ ಹುಟ್ಟಲು ಶೂರ್ಪಣಕಿಯೇ ಕಾರಣ ಎನ್ನುವ ಗಾದೆ ಮಾತು ಇದೆ ಆದ್ದರಿಂದ ಇವರ ಹೆಸರನ್ನು ಯಾರು ಇಷ್ಟ ಪಡುವುದಿಲ್ಲ.