ದಯವಿಟ್ಟು ನಮ್ಮನ್ನು ನಮ್ಮ ಪಾಡಿಗೆ ಇರೋಕೆ ಬಿಡಿ ಹತ್ತು ವರ್ಷ ಸಂಸಾರ ಮಾಡಿದವರಿಗೆ ಹೇಗೆ ನಿಭಾಯಿಸಬೇಕು ಅನ್ನೋದು ಗೊತ್ತಿದೆ, ಈ ರೀತಿ ಯಾಕೆ ಟಾರ್ಚರ್ ಮಾಡುತ್ತಿದ್ದೀರಿ ಎಂದು ಕಮೆಂಟ್ ಮಾಡುವವರ ವಿರುದ್ಧ ಕಿಡಿಕಾರಿದ ಕಿರಿಕ್ ಕೀರ್ತಿ. ಕಳೆದು ಒಂದು ವಾರದಿಂದ ಸೋಶಿಯಲ್ ಮೀಡಿಯಾದಲೆಲ್ಲಾ ಕಿರಿಕ್ ಕೀರ್ತಿ ಮತ್ತು ಅರ್ಪಿತಾಳ ದಾಂಪತ್ಯದಲ್ಲಿ ಬಿರುಕು ಬಿದ್ದಿದೆ ಎನ್ನುವ ಸುದ್ದಿ ಕುರಿತ ಸಾಕಷ್ಟು ಪೋಸ್ಟ್ಗಳು ಹಾಗೂ ವಿಡಿಯೋಗಳು ಹರಿದಾಡುತ್ತಿವೆ. ಮುಂದುವರಿದು ಅವರ ದಾಂಪತ್ಯ ಮುರಿದು ಬಿದ್ದಿದೆ ಎನ್ನುವ ಹಂತಕ್ಕೆ ಈ ವಿಚಾರಗಳು ಚರ್ಚೆ ಆಗುತ್ತಿದೆ.
ಈಗ ಇದೆಲ್ಲದಕ್ಕೂ ಕೂಡ ಕ್ಲಾರಿಟಿ ಕೊಡಲು ಲೈವ್ ಬಂದ ಕಿರಿಕ್ ಕೀರ್ತಿಯವರು ನೇರವಾಗಿ ತಮ್ಮ ವಿಷಯದ ಬಗ್ಗೆ ಪೋಸ್ಟ್ ಹಾಕುವವರು ಹಾಗೂ ಕಮೆಂಟ್ ಮಾಡುವವರ ಬಗ್ಗೆ ಮೊದಲು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ದಯವಿಟ್ಟು ನಮ್ಮನ್ನು ಬದುಕಲು ಬಿಡಿ ಯಾಕೆ ಈ ರೀತಿ ಸೋಶಿಯಲ್ ಮೀಡಿಯಾದಲ್ಲಿ ನಮ್ಮ ವಿಷಯ ಚರ್ಚೆ ಮಾಡಿ ಟಾರ್ಚರ್ ಕೊಡುತ್ತಿದ್ದೀರಾ, ನಿಮಗೆ ನನ್ನ ಸೈದ್ದಾಂತಿಕ ನಿಲುವುಗಳನ್ನು ಎದುರಿಸಲಾರದವರು ಅಲ್ಲಿ ವಿರೋಧಿಸಲು ಸಾಧ್ಯವಾಗಲಿಲ್ಲ ಎಂದು ಈ ರೀತಿ ವೈಯಕ್ತಿಕ ವಿಚಾರವನ್ನು ಎಳೆದು ಕುಗ್ಗಿಸಲು ಪ್ರಯತ್ನಿಸುತ್ತಿದ್ದೀರಾ ಅಷ್ಟೇ.
ಹಾಗೆ ನನ್ನ ಲೈಫಲ್ಲಿ ಏನಾಗ್ತಿದೆ ನನಗೆ ಗೊತ್ತಿಲ್ಲ, ಇನ್ನು ನನ್ನ ಕುಟುಂಬವೇ ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ನೀವು ನೀವೇ ಊಹಿಸಿಕೊಂಡು ಏನೇನೋ ಕಲ್ಪನೆ ಮಾಡಿಕೊಂಡು ಮನಸ್ಸಿಗೆ ಬಂದಂತೆ ಪೋಸ್ಟ್ಗಳನ್ನು ಹಾಕುತ್ತಿದ್ದೀರಾ, ಕಾಮೆಂಟ್ಸ್ಗಳನ್ನು ಮಾಡುತ್ತಿದ್ದೀರಲ್ಲಾ, ಆ ಕಮೆಂಟ್ ಹಾಕುವವರಲ್ಲಿ ಎಷ್ಟೋ ಜನಕ್ಕೆ ಅವರ ಪ್ರೊಫೈಲ್ ಫೋಟೋ ಹಾಕುವ ಯೋಗ್ಯತೆಯೂ ಇಲ್ಲ ಆ ರೀತಿ ಎಲ್ಲೋ ಇದ್ಕೊಂಡು ಇನ್ನೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಕಮೆಂಟ್ ಹಾಕಿ ಅವರ ಕುಟುಂಬದ ಹೊಟ್ಟೆ ಯಾಕೆ ಉರಿಸುತ್ತೀರಾ.
ಅವಳು ಹೀಗಂತೆ, ಅವನು ಹಾಗಂತೆ ಹೀಗೆಲ್ಲ ಬರೆಯುತ್ತೀರಲ್ಲ ನಿಮಗೆ ಯಾರಿಗೂ ಫ್ಯಾಮಿಲಿ ಇಲ್ವಾ, ನಿಮ್ಮ ಅಕ್ಕ ತಂಗಿ ಅಣ್ಣ ತಮ್ಮ ಅಂದುಕೊಂಡು ನಮ್ಮ ವಿಚಾರವನ್ನು ನಮಗೆ ಬಿಡಿ. ನಾವು ಹಾಕಿದ ಪೋಸ್ಟ್ ಗಳ ಆಧಾರದ ಮೇಲೆ ನಮ್ಮ ಬದುಕನ್ನು ಹೀಗೆ ಆಗಿದೆ ಎಂದು ಊಹೆ ಮಾಡುತ್ತೀರಲ್ಲ ಅದು ಹೇಗೆ ಸಾಧ್ಯ? ನೀವೇನಾದರೂ ಬಂದು ನಮ್ಮ ಮನೆಯಲ್ಲಿ ವಾಸ ಮಾಡಿದ್ದೀರಾ ಅಥವಾ ನಾವೇನಾದ್ರೂ ಬಂದು ನಿಮ್ಮ ಹತ್ತಿರ ಹೇಳಿಕೊಂಡಿದ್ದಿವಾ, ಒಂದು ವೇಳೆ ಎಲ್ಲವನ್ನು ನಿಮಗೆ ಹೇಳಬೇಕಾದ ಸಮಯ ಸಂದರ್ಭ ಬಂದಾಗ ನಾವೇ ಅದರ ಬಗ್ಗೆ ಬಂದು ಕ್ಲಾರಿಟಿ ಕೊಡುತ್ತೇವೆ.
ಅಲ್ಲಿಯವರೆಗೂ ನಿಮ್ಮ ಪಾಡಿಗೆ ನಿಮ್ಮ ಕೆಲಸ ನೋಡಿಕೊಂಡು ಇರಿ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುತ್ತದೆ ಅದನ್ನು ಬಿಟ್ಟು ನಮ್ಮ ತಟ್ಟೆಯಲ್ಲಿ ನೊಣ ಹುಡುಕುತ್ತಿರುತ್ತೀರ, ಎಲ್ಲರ ಕುಟುಂಬದಲ್ಲಿ ಎಲ್ಲರ ಜೀವನದಲ್ಲಿ ಏರುಪೇರು ಆಗುವುದು ಸಹಜ. ಅದನ್ನು ನಾವು ಅನುಸರಿಸಿಕೊಳ್ಳುತ್ತೇವೆ ಅಥವಾ ಅನುಭವಿಸುತ್ತೇವೆ. ನನಗೆ ಏಳು ವರ್ಷದ ಮಗನಿದ್ದಾನೆ 62 ವರ್ಷದ ತಾಯಿ ಇದ್ದಾರೆ, ಎಲ್ಲರೂ ಇದನ್ನು ಗಮನಿಸುತ್ತಿರುತ್ತಾರೆ ಅವರ ಮನಸ್ಸಿನಲ್ಲಿ ಯಾವ ರೀತಿ ಪರಿಣಾಮ ಬೀರಬಹುದು.
ಇಲ್ಲಿ ಚಿಕಿತ್ಸೆ ತೆಗೆದುಕೊಳ್ಳುವವರು, ಡಿಪ್ರೇಶನ್ ಅಲ್ಲಿ ಇರುವವರು ಎಲ್ಲರೂ ಇರುತ್ತಾರೆ ಸ್ವಲ್ಪ ನಿಮ್ಮ ಕಮೆಂಟ್ಗಳ ಮೇಲೆ ಗಮನ ಇರಲಿ ನಿಮ್ಮ. ಬದುಕು ನೀವು ನೆಟ್ಟಗೆ ನೋಡಿಕೊಳ್ಳಿ. ನನ್ನ ಜೀವನದಲ್ಲಿ ಆಗಿರುವಷ್ಟು ಹೋರಾಟ ಅಥವಾ ಈಗ ನಾನು ಇರುವ ಪರಿಸ್ಥಿತಿಯಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ನೀವೆಲ್ಲಾ ಏನಾಗುತ್ತಿದ್ದೀರೋ ಗೊತ್ತಿಲ್ಲ ನಾನಿದನ್ನೆಲ್ಲ ಬ್ಯಾಲೆನ್ಸ್ ಮಾಡುತ್ತಿದ್ದೇನೆ ಎಂದರೆ ನಾನು ಸರಿಯಾದ ದಾರಿಯಲ್ಲಿ ಇದ್ದೇನೆ ಎಂದು ಅರ್ಥ ಇತ್ಯಾದಿ ನಡೆಗಳನ್ನು ಬಹಳ ಗಂಭೀರವಾಗಿ ಕೋಪದಿಂದ ನುಡಿದಿದ್ದಾರೆ.
https://youtu.be/dYXTBOYXwnM