Home Entertainment ದೇವರಕೊಂಡಗೆ ಕೈ ಕೊಟ್ಟು, ಬೆಲ್ಲಂಕೊಂಡ ಜೊತೆ ಡೇಟಿಂಗ್ ಶೂರು ಮಾಡಿದ ನಟಿ ರಶ್ಮಿಕಾ ಮಂದಣ್ಣ.

ದೇವರಕೊಂಡಗೆ ಕೈ ಕೊಟ್ಟು, ಬೆಲ್ಲಂಕೊಂಡ ಜೊತೆ ಡೇಟಿಂಗ್ ಶೂರು ಮಾಡಿದ ನಟಿ ರಶ್ಮಿಕಾ ಮಂದಣ್ಣ.

0
ದೇವರಕೊಂಡಗೆ ಕೈ ಕೊಟ್ಟು, ಬೆಲ್ಲಂಕೊಂಡ ಜೊತೆ ಡೇಟಿಂಗ್ ಶೂರು ಮಾಡಿದ ನಟಿ ರಶ್ಮಿಕಾ ಮಂದಣ್ಣ.

 

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ದೇಶದಾದ್ಯಂತ ಫೇಮಸ್, ಕನ್ನಡತಿಯ ಖ್ಯಾತಿ ಈಗ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಹಬ್ಬಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲೂ ಕೂಡ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವ ಅದೃಷ್ಟ ಪಡೆದುಕೊಂಡಿರುವ ಈಕೆ ಸಿನಿಮಾ ವಿಚಾರವಾಗಿ ಸದಾ ಸುದ್ದಿಯಲ್ಲಿ ಇರುವುದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಕೂಡ ಇವರ ಡೇಟಿಂಗ್ ವಿಚಾರ ಸದಾ ಚರ್ಚೆಯಲ್ಲಿ ಇರುತ್ತದೆ.

ಕರ್ನಾಟಕದ ಟ್ರೋಲ್ ಪೇಜ್ ಗಳ ಪಾಲಿಗಂತೂ ಈಕೆ ಸದಾ ಕಂಟೆಂಟ್. ರಶ್ಮಿಕಾ ಮಂದಣ್ಣ ಕೊಡುವ ಪ್ರತಿಯೊಂದು ಸ್ಟೇಟ್ಮೆಂಟ್ ಗಳು ಹಾಗೂ ಕನ್ನಡ ಮತ್ತು ಕರ್ನಾಟಕದ ಬಗೆಗಿನ ವಿಷಯದಲ್ಲಿ ಅವರು ನಡೆದುಕೊಳ್ಳುವ ನಡವಳಿಕೆಗಳು ಅದೇ ರೀತಿ ಇರುವುದರಿಂದ ಕರ್ನಾಟಕದಲ್ಲಿ ಸದಾ ಇವರು ಟ್ರೊಲ್ ಆಗುತ್ತಲೇ ಇರುತ್ತಾರೆ. ಟ್ರೋಲ್ ವಿಚಾರವನ್ನು ಬಿಟ್ಟರೆ ಅವರ ಪರ್ಸನಲ್ ವಿಚಾರ ಕೂಡ ಸದಾ ಸೋಶಿಯಲ್ ಮೀಡಿಯಾದಲ್ಲಿ ಕಾರ್ನರ್ ಪಾಯಿಂಟ್ ಆಗಿರುತ್ತದೆ.

ರಶ್ಮಿಕ ಪ್ರೀತಿ, ಬ್ರೇಕ್ ಅಪ್, ಡೇಟಿಂಗ್ ಇತ್ಯಾದಿ ವಿಚಾರಗಳು ಪದೇಪದೇ ಚರ್ಚೆಯಾಗುತ್ತಲೇ ಇರುತ್ತವೆ. ಇದುವರೆಗೆ ತೆಲುಗು ನಟ ವಿಜಯ್ ದೇವರಕೊಂಡ ಜೊತೆ ರಶ್ಮಿಕ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದೇ ಎಲ್ಲರೂ ನಂಬಿದ್ದರು. ಇವರಿಬ್ಬರ ಕೆಮಿಸ್ಟ್ರಿ ತೆರೆ ಮೇಲೆ ಚೆನ್ನಾಗಿ ವರ್ಕ್ ಆಗುತ್ತಿರುವುದರಿಂದ ಆಫ್ ಸ್ಕ್ರೀನ್ ಅಲ್ಲೂ ಕೂಡ ಇವರಿಬ್ಬರೂ ಬಹಳ ಆತ್ಮೀಯರಾಗಿದ್ದಾರೆ ಎನ್ನುವ ಸುದ್ದಿಗಳು ಹಬ್ಬಿದ್ದವು. ಗೀತಾ ಗೋವಿಂದಂ ಸಿನಿಮಾ ರಿಲೀಸ್ ಆದ ಮೇಲೆ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ನಡುವಿನ ನಿಶ್ಚಿತಾರ್ಥ ಮುರಿದು ಬಿದ್ದಕ್ಕೂ ವಿಜಯ ದೇವರಕೊಂಡ ಅವರೇ ಕಾರಣ ಎನ್ನುವ ಮಾತುಗಳು ಕೇಳಿ ಬಂದಿದ್ದವು.

ಇದುವರೆಗೂ ಕೂಡ ತಮ್ಮ ನಡುವಿನ ಪ್ರೀತಿ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಳ್ಳದೇ ಇರುವ ಈ ಜೋಡಿ ತಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಗಳು ಅಷ್ಟೇ ಎಂದೇ ಹೇಳುತ್ತಿದ್ದಾರೆ. ಇವರಿಬ್ಬರ ಹಂಚಿಕೊಳ್ಳುವ ವಿದೇಶಿ ಪ್ರವಾಸದ ಫೋಟೋಗಳು ಮತ್ತು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ರೀತಿಯು ಇಬ್ಬರು ಅಘೋಷಿತ ಜೋಡಿಗಳು ಎನ್ನುವುದನ್ನೇ ಖಚಿತ ಪಡಿಸುತ್ತವೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಗೀತ ಗೋವಿಂದಂ ಬಳಿಕ ಡಿಯರ್ ಕಾಮ್ರೆಡ್ ಸಿನಿಮಾದಲ್ಲಿ ಕೂಡ ಇವರಿಬ್ಬರ ಕಾಂಬಿನೇಷನ್ ಚೆನ್ನಾಗಿ ವರ್ಕ್ ಆಗಿದೆ.

ಟಾಲಿವುಡ್ ವಲಯದಲ್ಲಿ ಇವರಿಬ್ಬರ ನಡುವೆ ಸ್ನೇಹಕ್ಕೂ ಮೀರಿದ ಅನ್ಯೋನ್ಯತೆ ಇದೆ ಎನ್ನುವುದು ಬಲವಾಗಿ ನಂಬಲಾಗಿತ್ತು. ಆದ್ರೆ ನಟಿಯ ಇತ್ತೀಚಿನ ವರ್ತನೆ ಇವರಿಬ್ಬರ ನಡುವೆ ಏನೋ ಸರಿ ಇಲ್ಲ ಅನ್ನುವುದನ್ನು ಸೂಚಿಸುತ್ತಿದೆ. ಅದಲ್ಲದೆ ವಿಜಯದೇವರಕೊಂಡ ಅವರ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದಾರಾ ಎನ್ನುವ ಅನುಮಾನವನ್ನು ಕೂಡ ತರಿಸುತ್ತಿದೆ.

ರಶ್ಮಿಕ ಮಂದಣ್ಣ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಅವರೊಂದಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಇಬ್ಬರು ಒಟ್ಟಿಗೆ ಪಾಪರಾಜಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಸಿನಿಮಾ ವಿಷಯ ಹೊರತುಪಡಿಸಿ ಆಗಾಗ ಒಟ್ಟಿಗೆ ಸಾರ್ವಜನಿಕವಾಗಿ ಇವರಿಬ್ಬರು ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ನಡುವೆ ಪ್ರೀತಿ ಕೂಡ ಇದೆ ಎನ್ನುವ ಗಾಸಿಪ್ ಸಹಾ ಹರಿದಾಡುತ್ತಿದೆ.

ಇದರ ಸಂಬಂಧಿತವಾಗಿ ಸೋಶಿಯಲ್ ಮೀಡಿಯಾದಲ್ಲೂ ಕೂಡ ನಿನ್ನೆಯಿಂದ ಸಾಕಷ್ಟು ವಿಚಾರಗಳು ಹರಿದಾಡಿವೆ. ಆದರೆ ಅಧಿಕೃತವಾಗಿ ಇವರೇ ಒಪ್ಪಿಕೊಳ್ಳುವ ತನಕ ಯಾವುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಬಹುತೇಕರಿಗೆ ವಿಜಯದೇವರಕೊಂಡ ಮತ್ತು ರಶ್ಮಿಕ ಜೋಡಿ ಇಷ್ಟವಾಗಿರುವುದರಿಂದ ಈ ಸುದ್ದಿ ಸುಳ್ಳಾಗಲಿ ಎನ್ನುವುದನ್ನು ಇಚ್ಚಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

 

LEAVE A REPLY

Please enter your comment!
Please enter your name here