ಸ್ಯಾಂಡಲ್ ಪದ್ಮಾವತಿ ಕ್ರೇಜಿ ಕ್ವೀನ್ ರಮ್ಯಾ ಅವರು ಸದ್ಯಕ್ಕೆ ಈಗ ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕಿಯಾಗಿ ವಿಧಾನಸಭಾ ಎಲೆಕ್ಷನ್ ಗೆ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕ್ರಮದ ವೇಳೆ ಕ್ಯಾಮರಾ ಗೆ ಸಿಕ್ಕ ರಮ್ಯಾ ಅವರಿಗೆ ಮೀಡಿಯಾದವರಿಂದ ಪ್ರಶ್ನೆಗಳ ಸುರಿಮಳೆಯೇ ಸುರಿಯಿತು.
ರಮ್ಯಾ ಅವರು ಎಲೆಕ್ಷನ್ ಇದ್ದಾಗ ಮಾತ್ರ ಮಂಡ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವುದರಿಂದ ಹಿಡಿದು ಅಂಬರೀಶ್ ಅವರು ಸ.ತ್ತಾ.ಗ ಯಾಕೆ ಬರಲಿಲ್ಲ ಮತ್ತು ಸಿನಿಮಾ ರಂಗಕ್ಕೆ ಮತ್ತೆ ಬಂದಿದ್ದು ಯಾಕೆ, ಮುಂದೆ MP ಅಥವಾ MLA ಯಾವ ಸೀಟ್ ಕೇಳುತ್ತೀರಿ, ಮಂಡ್ಯದಲ್ಲೇ ಮನೆ ಮಾಡುವ ಬಗ್ಗೆ ಭರವಸೆ ಕೊಟ್ಟಿರಿ ಅದು ಏನಾಯಿತು ಎನ್ನುವ ಪ್ರಶ್ನೆಯಿಂದ ಹಿಡಿದು ಅವರ ಮದುವೆ ವಿಚಾರ ತನಕ ಸಾಕಷ್ಟು ಪ್ರಶ್ನೆಗಳು ಮೀಡಿಯಾದವರಿಂದ ಎದುರಾಯಿತು.
ಎಲ್ಲರಿಗೂ ಬಹಳ ಸ್ವಾರಸ್ಯಕರವಾದ ಉತ್ತರ ಎನಿಸಿದ್ದು ರಮ್ಯಾ ಅವರ ಮದುವೆ ಬಗ್ಗೆ ಮಾತನಾಡಿದ್ದು. ಪತ್ರಕರ್ತರೊಬ್ಬರು ರಮ್ಯಾ ಅವರಿಗೆ ನೀವು ಹೋದಲೆಲ್ಲಾ ಮದುವೆ ಬಗ್ಗೆ ಪ್ಯಶ್ನೆ ಕೇಳುತ್ತಾರೆ, ಇನ್ಸ್ಟಾಗ್ರಾಮಲ್ಲಂತೂ ಅದೇ ಪ್ರಶ್ನೆಗಳು ಕಮೆಂಟ್ ಬಾಕ್ಸ್ ನಲ್ಲಿ ತುಂಬಿರುತ್ತವೆ. ಮದುವೆ ಯಾವಾಗ ಆಗುತ್ತೀರಿ ಹೇಳಿ ಮೇಡಂ ಎಂದು ಕೇಳಿದ್ದಾರೆ. ಅದಕ್ಕೆ ರಮ್ಯಾ ಅವರು ನಾನು ಗೌಡ್ತಿ, ಗೌಡ್ರ ಹುಡುಗನನ್ನು ಹುಡುಕಿಕೊಟ್ಟರೆ ಮದುವೆ ಆಗ್ತೀನಿ. ನೀವೇ ಅದನ್ನು ನೋಡಿ ಬಿಡಿ ನನಗಂತೂ ಎಲ್ಲೂ ಹುಡುಗ ಕಾಣಿಸುತ್ತಾ ಇಲ್ಲ, ಹುಡುಕಿ ಹುಡುಕಿ ನನಗೆ ಸಾಕಾಗಿ ಹೋಗಿದೆ, ನೀವೇ ನೋಡಿ ನಿರ್ಧಾರ ಮಾಡಿಬಿಡಿ ಎಂದು ಉತ್ತರ ಕೊಟ್ಟಿದ್ದಾರೆ.
ಅದಕ್ಕಾಗಿ ಒಂದು ವೇದಿಕೆ ರೆಡಿ ಮಾಡೋಣವೇ ಎಂದು ಮರಳಿ ಮತ್ತೊಬ್ಬರು ಪ್ರಶ್ನೆ ಕೇಳಿದಕ್ಕೆ ಆಗಲಿ ಬಿಡಿ ಸ್ವಯಂವರವೇ ನಡೆಸೋಣ ಎಂದು ಉತ್ತರ ಕೊಟ್ಟಿದ್ದಾರೆ. ಅದರೊಂದಿಗೆ ಮಂಡ್ಯದ ಜೊತೆಗೆ ಇರುವ ಅನುಬಂಧದ ಬಗ್ಗೆ ಮಾತನಾಡಿದ ಅವರು ನಾನು ಗೌಡ್ತಿ ಎನ್ನುವುದನ್ನು ಯಾರಿಂದಲೂ ಕಿತ್ತುಕೊಳ್ಳಲು ಆಗುವುದಿಲ್ಲ. ತಾಯಿಯ ಊರು ಮಂಡ್ಯ, ನನ್ನ ತಂದೆ ಸತ್ತಿದ್ದು ಇಲ್ಲಿಯೇ, ಗೋಪಾಲಪುರದಲ್ಲಿ ನನ್ನ ತಾತನ ಮನೆ ಇದೆ. ನನ್ನ ಹಲವು ಸಂಬಂಧಿಕರು ಮಂಡ್ಯದಲ್ಲಿ ಇದ್ದಾರೆ. ನಾನು ಯಾವಾಗಲೂ ಇಲ್ಲಿಗೆ ಬರುತ್ತಿರುತ್ತೇನೆ.
ಇತ್ತೀಚೆಗಷ್ಟೇ ನಿಮಿಷಾಂಬ ದೇವಸ್ಥಾನಕ್ಕೂ ಬಂದಿದ್ದೆ. ಆದರೆ ನಾನು ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಕಾರಣಕ್ಕೆ ನಾನು ಮಂಡ್ಯದಲ್ಲಿ ಇಲ್ಲ ಮಂಡ್ಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಮಾತನಾಡುತ್ತಾರೆ. ಅದರ ಬಗ್ಗೆ ನಾನು ಏನು ಹೇಳಲಿ. ನನಗೂ ಮತ್ತು ಮಂಡ್ಯಕ್ಕೂ ಇರುವುದು ರಾಜಕೀಯವನ್ನು ಮೀರಿದ ಸಂಬಂಧ. ನನಗೆ ಮಂಡ್ಯ ಕುಟುಂಬದ ಹಾಗೆ ಮಂಡ್ಯದ ಜನ ನನ್ನ ಕಷ್ಟದಲ್ಲಿ ಕೈ ಹಿಡಿದಿದ್ದಾರೆ ನನ್ನ ಮತ್ತು ಮಂಡ್ಯ ಸಂಬಂಧವನ್ನು ರಾಜಕೀಯ ಲೇಪನ ಹಾಕಿ ಹೇಳುವುದು ಬೇಡ ಎಂದು ಉತ್ತರಿಸಿದ್ದಾರೆ.
ಜೊತೆಗೆ ಸಿನಿಮಾಗಳ ನಿರ್ಮಾಣ ಮತ್ತು ನಟನೆ ಬಗ್ಗೆ ಮಾತನಾಡಿದ ಅವರು ಇಂಡಸ್ಟ್ರಿ ಬಿಟ್ಟು ತುಂಬಾ ವರ್ಷ ಆಯ್ತು. ಬದುಕಲು ಮತ್ತೆ ದುಡ್ಡು ಮಾಡಬೇಕಲ್ಲ ಅದಕ್ಕಾಗಿ ಪ್ರೊಡಕ್ಷನ್ ಮಾಡಿದ್ದೇನೆ. ಒಂದೇ ಒಂದು ಸಿನೆಮಾಗೆ ಸೈನ್ ಮಾಡಿದ್ದೇನೆ ಧನಂಜಯ್ ಜೊತೆ ಉತ್ತರಕಾಂಡ ಸಿನಿಮಾದಲ್ಲಿ ಕಾಣಿಸಿಕೊಳ್ಳದಿದ್ದೇನೆ ಎನ್ನುವುದನ್ನು ಹೇಳಿಕೊಂಡರು. ಚುನಾವಣೆ ಪ್ರಚಾರದಲ್ಲಿ ಸ್ಟಾರ್ ಪ್ರಚಾರಕಿ ಆಗಿರುವ ಜವಬ್ದಾರಿ ಕೊಟ್ಟಿರುವುದರಿಂದ ಮಂಡ್ಯ ಮಾತ್ರ ಅಲ್ಲ ಆಯ್ದ ಕೆಲ ಪ್ರದೇಶಗಳಿಗೂ ಕೂಡ ಹೋಗಿ ಪ್ರಚಾರ ಮಾಡದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅಂತೂ ಇಂತೂ ರಮ್ಯಾ ಅವರು ಮದುವೆಗೆ ಒಪ್ಪಿಕೊಂಡಿರುವುದು ಅವರ ಅಭಿಮಾನಿಗಳಿಗೆ ಹಾಗೂ ಮಂಡ್ಯದ ಜನತೆಗೆ ಬಹಳ ಖುಷಿಯಾಗಿದೆ.