ಆದಾಯ ತೆರಿಗೆ ಇಲಾಖೆಯು ನೀಡುವ ಗುರುತಿನ ಚೀಟಿ ಆದ ಪ್ಯಾನ್ ಕಾರ್ಡ್ ಎಷ್ಟು ಅಗತ್ಯವಾದ ದಾಖಲೆ ಎನ್ನುವುದು ಈಗಾಗಲೇ ದೇಶದ ಎಲ್ಲರಿಗೂ ತಿಳಿದಿದೆ. ಯಾಕೆಂದರೆ ಪಾನ್ ಕಾರ್ಡ್ ಇಲ್ಲದೆ ಹೋದರೆ ಯಾವ ಆರ್ಥಿಕ ಚಟುವಟಿಕೆಗಳು ಕೂಡ ನಡೆಯುವುದಿಲ್ಲ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಿಮ್ಮ ಹಣಕಾಸಿನ ವಹಿವಾಟು ನಡೆಯಬೇಕು ಎಂದರೆ ಪ್ಯಾನ್ ಕಾರ್ಡ್ ಇರಲೇಬೇಕು, ನೀವು ಪಾನ್ ಸಂಖ್ಯೆ ಹೊಂದಿರಲೇಬೇಕು.
ಜೊತೆಗೆ ಕೆಲವು ಖಾಸಗಿ ವಲಯದ ಸಂಸ್ಥೆಗಳು ಕೂಡ ಪ್ಯಾನ್ ಕಾರ್ಡ್ ಅನ್ನು ಒಂದು ಅಗತ್ಯ ದಾಖಲೆಯಾಗಿ ಪರಿಶೀಲಿಸುತ್ತವೆ. ಖಾಸಗಿ ಹಣಕಾಸಿನ ಸಂಸ್ಥೆಗಳಲ್ಲೂ ಕೂಡ ಹಣಕಾಸಿನ ವ್ಯವಹಾರ ನಡೆಸುವಾಗ ಈ ರೀತಿ ಪ್ಯಾನ್ ಕಾರ್ಡ್ ಹೊಂದಿರುವುದು ಕಡ್ಡಾಯ. ಅದಕ್ಕಾಗಿ ಇಂತಹ ಪ್ರಮುಖ ಗುರುತು ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕೂಡ ಮುಖ್ಯ ಎಂದು ಸರ್ಕಾರ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲು ನಿಯಮ ಹೇರಿತ್ತು.
ಆರಂಭದಲ್ಲಿ ಇದಕ್ಕೆ ಉಚಿತವಾಗಿ ಕಾಲಾವಕಾಶ ನೀಡಿದ ಸರ್ಕಾರವು ಜನರ ಆಸಕ್ತಿ ಕಡಿಮೆ ಇರುವುದನ್ನು ಗಮನಿಸಿ ಮಾರ್ಚ್ 31 , 2013 ರ ಒಳಗೆ 1000ರೂ. ದಂಡ ಸಮೇತ ಪ್ಯಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಇಲ್ಲವಾದಲ್ಲಿ ಅಂತವರನ್ನು ಪ್ಯಾನ್ ಕಾರ್ಡನ್ನು ಕ್ಯಾನ್ಸಲ್ ಗೊಳಿಸಲಾಗುವುದು ಎಂದು ಘೋಷಿಸಿತ್ತು. ಆ ಬಳಿಕ ಎಚ್ಚೆತ್ತ ಜನರು ಕೊನೆ ಸಮಯದಲ್ಲಿ ಈ ನಿಯಮದ ವಿರುದ್ಧ ತಿರುಗಿ ಬಿದ್ದರು.
ಜನಸಾಮಾನ್ಯರಿಗೆ ಇನ್ನೂ ಸಹ ಮಾಹಿತಿ ಕೊರತೆ ಇತ್ತು ಹಾಗೂ ಕಡೆ ದಿನಗಳಲ್ಲಿ ಸರ್ವರ್ ಸಮಸ್ಯೆ ಆಗಿತ್ತು ಎಂದು ಮತ್ತೆ 1000ರೂ. ದಂಡ ಸಮೇತವಾಗಿ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕಡೆ ಅವಕಾಶವನ್ನು ಜೂನ್ ಮೂವತ್ತರವರೆಗೆ ವಿಸ್ತರಿಸಿ ಮೂರು ತಿಂಗಳ ಹೆಚ್ಚಿನ ಕಾಲಾವಧಿಯನ್ನು ಸರ್ಕಾರ ನೀಡಿದೆ.
ಒಂದು ವೇಳೆ ಈ ಸಮಯದಲ್ಲೂ ಕೂಡ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಆಗದೆ ಹೋದರೆ ಅಂತವರು ಮುಂದಿನ ದಿನಗಳಲ್ಲಿ ಇನ್ನು ದೊಡ್ಡ ಮಟ್ಟದ ದಂಡ ಕಟ್ಟಬೇಕಾಗುತ್ತದೆ. ಹಾಗೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಮತ್ತು ನಿಮಗೆ ಯಾವುದೇ ಬ್ಯಾಂಕ್ ಇಂದ ಸಾಲ ಸಿಗುವುದಿಲ್ಲ ಜೊತೆಗೆ ನೀವು ತೆರಿಗೆ ಸಹ ಕಟ್ಟಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ನೀವು ಪ್ಯಾನ್ ಕಾರ್ಡ್ ಮಾನ್ಯತೆ ಹಾಗೆ ಉಳಿಸಿಕೊಂಡಿದ್ದರೆ ಅಲ್ಲದೆ ಈಗಾಗಲೇ ನೀವು ಪಾನ್ ಕಾರ್ಡ್ ಹೊಂದಿದ್ದರೆ,
ಈಗಷ್ಟೇ 18 ವರ್ಷ ಪೂರೈಸಿ ಪ್ಯಾನ್ ಕಾರ್ಡ್ ಪಡೆದಿದ್ದಾರೆ 50,000 ದಿಂದ ಒಂದು ಲಕ್ಷದವರೆಗೆ ಬಡ್ಡಿ ರಹಿತವಾಗಿ ಸಾಲ ಕೊಡಲು ಸರ್ಕಾರ ನಿರ್ಧರಿಸಿದೆ. ದೇಶದಲ್ಲಿರುವ ಪ್ರತಿಯೊಬ್ಬರು ಕೂಡ ಸರ್ಕಾರದ ಸಹಾಯ ಪಡೆದುಕೊಂಡು ಆರ್ಥಿಕವಾಗಿ ಭದ್ರತೆ ಹೊಂದಬೇಕು, ಈ ರೀತಿ ಸಾಲ ಸೌಲಭ್ಯದಿಂದ ತಮ್ಮ ಬದುಕು ಕಟ್ಟಿಕೊಳ್ಳಬೇಕು ಅವರ ವಿದ್ಯಾಭ್ಯಾಸದ ಅಥವಾ ಉದ್ಯಮಕ್ಕೆ ಇದು ಸಹಾಯವಾಗಬೇಕು ಎಂದು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಎಲ್ಲಾ ಬ್ಯಾಂಕ್ ಗಳಲ್ಲೂ ಕೂಡ ಪಾನ್ ಕಾರ್ಡ್ ಹೊಂದಿದವರಿಗೆ ಸಾಲ ಕೊಡುವ ಪ್ರಕ್ರಿಯೆ ನಡೆಯುತ್ತಿದೆ. ಇಂತಹ ಸಮಯದಲ್ಲಿ ಕಾಗದ ವ್ಯವಹಾರವು ಕಡಿಮೆ ಇರುತ್ತದೆ. ನೀವು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹೊಂದಿದ್ದರೆ ಸಾಕು ನಿಮ್ಮ ಖಾತೆಗೆ ಬಡ್ಡಿ ರಹಿತವಾದ 50,000 ರಿಂದ 1 ಲಕ್ಷದವರೆಗೆ ಸಾಲ ಮಂಜೂರಾಗುತ್ತದೆ. ನೀವೇನಾದರೂ ಸಾಲ ಬಯಸುತ್ತಿದ್ದರೆ ನಿಮ್ಮ ಬಳಿ ಪಾನ್ ಕಾರ್ಡ್ ಇದ್ದರೆ ಈ ಕೂಡಲೇ ಹತ್ತಿರದಲ್ಲಿರುವ ಬ್ಯಾಂಕ್ ಶಾಖೆಗಳಿಗೆ ಭೇಟಿ ಕೊಟ್ಟು ಈ ಬಗ್ಗೆ ವಿಚಾರಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.