ಕಲಿಯುಗದಲ್ಲಿ ಎಲ್ಲಾ ದೇವರಿಗಿಂತಲೂ ಕೂಡ ಆಂಜನೇಯ ಸ್ವಾಮಿಯೇ ಮನುಷ್ಯರ ಕಷ್ಟಕ್ಕೆ ಬೇಗ ಕಿವಿಗೊಡುತ್ತಾರೆ ಎನ್ನುವ ಮಾತು ಪ್ರತೀತಿಯಲ್ಲಿದೆ. ಆಂಜನೇಯ ಸ್ವಾಮಿಗೆ ಮನುಷ್ಯರ ಕಷ್ಟ ಕೂಗು ಬೇಗ ಅರಿವಾಗುತ್ತದೆ. ಆಂಜನೇಯನನ್ನು ಸ್ಮರಿಸಿದರೆ ಸಾಕು ಆ ಕೂಗು ಬೇಗ ಅವರಿಗೆ ಮುಟ್ಟುತ್ತದೆ ಎಂದು ಜನ ನಂಬುತ್ತಾರೆ. ಆಂಜನೇಯ ಸ್ವಾಮಿ ಶಕ್ತಿ ಹಾಗೂ ಭಕ್ತಿಯ ಪ್ರತೀಕ. ಶ್ರೀ ರಾಮನ ಭಂಟನಾಗಿ ರಾಮನ ಕಷ್ಟಕಾಲದಲ್ಲಿ ಇದ್ದು ಸೀತಾಮಾತೆಯನ್ನು ಹುಡುಕುವ ಕೈಂಕರ್ಯದಲ್ಲಿ ಜೊತೆಗೂಡಿ ರಾವಣನಂತಹ ದು.ಷ್ಟನನ್ನು ಸಂ.ಹಾರ ಮಾಡುವ ತನಕ ಶ್ರೀ ರಾಮರ ಜೊತೆಗೆ ಇದ್ದ ಆಂಜನೇಯ ಸ್ವಾಮಿಯು ಬಳಿಕ ಅವರ ಆಜ್ಞೆಯಂತೆ ಕರ್ನಾಟಕದ ಈ ಒಂದು ದೇವಾಲಯದಲ್ಲಿ ನೆಲೆಸಿದ್ದಾರೆ ಇಲ್ಲಿ ಸ್ವತಃ ಆಂಜನೇಯ ಸ್ವಾಮಿಯೇ
ಮಾತನಾಡುತ್ತಾರೆ.
ಕನ್ನಡಿಗರಿಗೂ ಆಂಜನೇಯನಿಗೂ ಅವಿನಾಭಾವ ನಂಟು. ಯಾಕೆಂದರೆ ಆಂಜನೇಯ ಸ್ವಾಮಿಯ ಜನ್ಮ ತಾಳಿದ್ದು ಈ ನೆಲದಲ್ಲಿಯೇ. ಈಗ ಈ ಮಾತನಾಡುವ ಆಂಜನೇಯ ಸ್ವಾಮಿ ನೆಲೆಸಿರುವುದು ಕೂಡ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯಲಗೂರಿನಲ್ಲಿ. ಯಲಗೂರು ಆಂಜನೇಯ ಸ್ವಾಮಿ ದೇವಸ್ಥಾನ ಎಂದೇ ಈ ದೇವಸ್ಥಾನ ಫೇಮಸ್ ಆಗಿದೆ. ಇಲ್ಲಿ ಭಕ್ತಾದಿಗಳು ತಮ್ಮ ಕೋರಿಕೆ ನೆರವೇರುತ್ತದೆಯೋ ಅಥವಾ ಇಲ್ಲವೋ ಎನ್ನುವುದನ್ನು ಎರಡು ರೀತಿ ಪರೀಕ್ಷೆ ಮಾಡಿ ತಿಳಿದುಕೊಳ್ಳುತ್ತಾರೆ.
ಅದರಲ್ಲಿ ಆಂಜನೇಯ ಸ್ವಾಮಿ ಮಾತನಾಡುವ ಮೂಲಕ ಇದಕ್ಕೆ ಉತ್ತರ ಕೊಡುತ್ತಾರೆ ಎನ್ನುವುದು ಹೆಚ್ಚು ವಿಶೇಷ. ಸಾವಿರ ಜನ ಭಕ್ತರಲ್ಲಿ 990 ಜನ ಭಕ್ತರಿಗೆ ಆಂಜನೇಯ ಸ್ವಾಮಿ ಮಾತನಾಡುವ ಮೂಲಕ ಉತ್ತರ ಕೊಡುತ್ತಾರೆ. ದೇವಸ್ಥಾನದ ಕೀರ್ತಿ ಹೆಚ್ಚಿಸಲು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಅಥವಾ ದೇವಸ್ಥಾನದಲ್ಲಿ ಈ ರೀತಿ ಹೇಳಿ ದುಡ್ಡು ಮಾಡುವುದಕ್ಕಾಗಿ ಹೀಗೆ ಪುಕಾರು ಹಬ್ಬಿಸಿದ್ದಾರೆ ಎಂದೆಲ್ಲ ನೀವು ನಕಾರಾತ್ಮಕವಾಗಿ ಯೋಚನೆ ಮಾಡುತ್ತಿದ್ದರೆ ನಿಮ್ಮ ಆಲೋಚನೆ ತಪ್ಪು.
ಈಗಿನ ದಿನದಲ್ಲೂ ಕೂಡ ಆ ದೇವಸ್ಥಾನದಲ್ಲಿ ಯಾರು ದುಡ್ಡಿಗೆ ಆಸೆ ಪಡೆಯುವುದಿಲ್ಲ. ಶುದ್ಧ ಭಕ್ತಿಯಿಂದ ಇಲ್ಲಿ ಎಲ್ಲಾ ಪೂಜಾ ಕಾರ್ಯಗಳು ನೆರವೇರುತ್ತವೆ. ಮತ್ತು ಭಕ್ತಾದಿಗಳಿಂದ ಯಾರೇ ದುಡ್ಡು ಸಮರ್ಪಿಸಲು ಬಂದರೂ ಅಲ್ಲಿರುವ ಯಾರು ಸ್ವೀಕರಿಸುವುದಿಲ್ಲ. ನಿಮಗೆ ಮನಸಿದ್ದರೆ ಹುಂಡಿಯಲ್ಲಿ ಹಾಕಬಹುದು ಅಷ್ಟೇ. ಆಂಜನೇಯನ ಸೇವೆ ಮಾಡುತ್ತಾ ಭಕ್ತರಿಗೆ ನೆರವಾಗುವುದಷ್ಟೇ ದೇವಸ್ಥಾನ ಆಡಳಿತ ಮಂಡಳಿಯ ಉದ್ದೇಶ.
ಈ ದೇವಸ್ಥಾನದಲ್ಲಿ ನೀವು ಯಾವುದೇ ಹರಕೆ ಹೊತ್ತುಕೊಂಡು ಹೋಗಿ ಆಂಜನೇಯನ ವಿಗ್ರಹದ ಬಳಿ ನಿಂತು ಬೇಡಿಕೊಂಡರೆ ಆ ಕೋರಿಕೆ ನೆರವೇರುವುದಾದರೆ ಒಂದು ವಿಶೇಷವಾದ ಶಬ್ದ ನಿಮ್ಮ ಕಿವಿಗೆ ಬಂದು ಅಪ್ಪಳಿಸುತ್ತದೆ. ಯಾರೋ ನಿಮ್ಮ ಕಿವಿಬಂದು ಬಳಿ ನಿಂತು ಮಾತನಾಡಿದ ರೀತಿ ಅನುಭವವಾಗುತ್ತದೆ. ಹೀಗೆ ನೀವು ಕೇಳಿಸಿಕೊಂಡರೆ ನಿಮ್ಮ ಕೋರಿಕೆ ನೆರವೇರುತ್ತದೆ ಎಂದರ್ಥ, ಆ ಶಬ್ದವನ್ನು ಮಾಡಿದ್ದು ಬೇರೆ ಯಾರು ಅಲ್ಲ ಶ್ರೀ ಆಂಜನೇಯ ಸ್ವಾಮಿ ಎನ್ನುವುದು ಎಲ್ಲರ ನಂಬಿಕೆ.
ಒಂದು ವೇಳೆ ಇದನ್ನು ಕೇಳಿಸಿಕೊಳ್ಳಲು ಆಗದವರಿಗೆ ಕೋರಿಕೆ ಮಾಡಿಕೊಂಡ ತಕ್ಷಣ ಆಂಜನೇಯ ಸ್ವಾಮಿ ವರಪ್ರಸಾದ ಕೊಡುತ್ತಾರೆ. ಹೂವಿನ ಪ್ರಸಾದವು ಬಲಗಡೆಯಿಂದ ಬಿದ್ದರೆ ಕೋರಿಕೆ ನೆರವೇರುತ್ತದೆ, ಎಡಗಡೆಯಿಂದ ಬಿದ್ದರೆ ನೆರವೇರುವುದಿಲ್ಲ ಎಂದು ಅರ್ಥ. ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಬೃಂದಾವನಸ್ಥರಾಗುವ ಒಂದು ವರ್ಷದ ಹಿಂದೆ ಈ ದೇವಸ್ಥಾನಕ್ಕೆ ಬಂದಿದ್ದರು. ಆಗ ಸುಧೀರ್ಘ ಸಮಯದವರೆಗೆ ಅವರು ಆಂಜನೇಯ ಸ್ವಾಮಿ ಜೊತೆ ಚರ್ಚೆ ಮಾಡಿದ್ದನ್ನು ಅಲ್ಲಿದ್ದ ಎಲ್ಲ ಭಕ್ತಾದಿಗಳು ಕಣ್ಣಾರೆ ಕಂಡಿದ್ದರು ಎನ್ನುವ ಕಥೆಯೂ ಇದೆ.
ಆದರೆ 1900 ರಿಂದ ಈಚೆಗೆ ದೇವಸ್ಥಾನದ ಪ್ರಭಾವ ಕಡಿಮೆ ಆಗುತ್ತಿದೆ ಎಂದು ಕೂಡ ಜನ ಮಾತನಾಡುತ್ತಿದ್ದಾರೆ. ಇತ್ತೀಚೆಗಂತೂ ವರ್ಷಕ್ಕೆ ಕೋಟಿಗಟ್ಟಲೆ ಜನರು ಈ ದೇವಾಲಯಕ್ಕೆ ಭೇಟಿ ಕೊಡುತ್ತಿದ್ದಾರೆ ಜನ ಹೆಚ್ಚಾದಂತೆ ದೇವಸ್ಥಾನದ ಏಳು ಅಡಿ ಆಂಜನೇಯ ವಿಗ್ರಹದ ಹೊಳಪು ಕೂಡ ಕಡಿಮೆ ಆಗುತ್ತಿದೆ ಎನ್ನುವ ಮಾತುಗಳು ಇವೆ. ನೀವು ಆಂಜನೇಯನ ಭಕ್ತರಾಗಿದ್ದರೆ ತಪ್ಪದೆ ಒಮ್ಮೆ ಈ ದೇವಾಲಯಕ್ಕೆ ಭೇಟಿ ಕೊಡಿ.