ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಕಷ್ಟಗಳು ಇದ್ದೇ ಇರುತ್ತವೆ. ಸಮಸ್ಯೆಗಳು ಬರುವುದು ಹೊಸದೇನಲ್ಲ ಹಾಗೆ ಅವುಗಳನ್ನು ನಿವಾರಿಸಿಕೊಂಡು ಬದುಕಿನಲ್ಲಿ ಮುಂದೆ ಹೋಗುವುದು ಮುಖ್ಯ. ಈ ರೀತಿ ನಮಗೆ ಯಾವುದೇ ಸಮಸ್ಯೆಗಳು ಆದಾಗ ಯಾವುದೇ ರೀತಿಯ ಹಣ ಖರ್ಚು ಆಗದಂತೆ ಮನೆಯಲ್ಲೇ ಸಿಗುವ ಕೆಲವು ವಸ್ತುಗಳಿಂದ ಪರಿಹಾರ ಮಾಡಿಕೊಳ್ಳಬಹುದು.
ಇದಕ್ಕೆ ತಂತ್ರ ಎಂದು ಕರೆಯುತ್ತಾರೆ. ಈ ತಂತ್ರಗಳನ್ನು ಮಾಡುವುದರಿಂದ ಯಾವುದೇ ರೀತಿಯಅಡ್ಡ ಪರಿಣಾಮ ಆಗುವುದಿಲ್ಲ. ಬದಲಾಗಿ ಪರಿಣಾಮಕಾರಿಯಾಗಿ ಅತಿ ಶೀಘ್ರವಾಗಿ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ. ಹೆಚ್ಚು ಖರ್ಚು ಇಲ್ಲದೆ ಚಿಕ್ಕ ಚಿಕ್ಕ ವಸ್ತುಗಳನ್ನು ಉಪಯೋಗಿಸುವ ಮೂಲಕ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಅತಹದೇ ಒಂದು ತಂತ್ರದ ಬಗ್ಗೆ ಇಂದು ನಾವು ತಿಳಿಸಿ ಕೊಡುತ್ತಿದ್ದೇವೆ. ನಿಮ್ಮ ಮನೆಯಲ್ಲಿ ನೆಗೆಟಿವ್ ವೈಬ್ರೇಶನ್ ಇದೆ ಎಂದು ನಿಮಗೆ ಅನಿಸಿದರೆ, ಮನೆಯ ವಾತಾವರಣ ಚೆನ್ನಾಗಿಲ್ಲ ಅನಿಸಿದರೆ, ಎಷ್ಟೇ ದುಡಿಯುತ್ತಿದ್ದರು ಹಣ ಕೈ ಸೇರುತ್ತಿಲ್ಲ ಎನ್ನುವುದಾದರೆ, ಬಂದ ಹಣ ಕೈಯಲ್ಲಿ ಉಳಿಯದೆ ವಿನಾಕಾರಣ ಖರ್ಚಾಗುತ್ತಿದೆ, ಮನೆಯಲ್ಲಿ ಒಂದು ರೀತಿಯ ವಿಚಿತ್ರ ವಾತಾವರಣ, ಮನೆಗೆ ಏನೇ ಮಾಡಿದರೂ ಸಾಕಾಗುತ್ತಿಲ್ಲ.
ಏನೇ ತಂದರೂ ಸಾಕಾಗುತ್ತಿಲ್ಲ, ಮನೆಯಲ್ಲಿರುವ ಎಲ್ಲರ ನಡುವೆ ಒಂದಲ್ಲ ಒಂದು ಮನಸ್ತಾಪ ವಿನಾಕಾರಣ ಜಗಳ ಕೋಪ ಈ ರೀತಿ ಏನೇ ಇದ್ದರೂ ಈ ಒಂದು ಉಪಾಯದಿಂದ ಇದನ್ನೆಲ್ಲ ಪರಿಹಾರ ಮಾಡಬಹುದು. ಈ ಒಂದು ಉಪಾಯ ನೀವು ಮಾಡುವುದರಿಂದ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಆರೋಗ್ಯ ಸಕಲ ಸಂಪತ್ತು ಐಶ್ವರ್ಯ ಎಲ್ಲವೂ ಕೂಡ ತುಂಬಿ ತುಳುಕಾಡುತ್ತದೆ. ಸುಲಭವಾಗಿ ಈ ಒಂದು ಪ್ರಯೋಗವನ್ನು ಮಾಡಿ.
ಇದಕ್ಕೆ ಹೆಚ್ಚಿಗೆ ಏನು ಮಾಡುವ ಅಗತ್ಯ ಇಲ್ಲ. ನಿಮ್ಮ ಮನೆಯ ದೇವರ ಕೋಣೆಯಲ್ಲಿ ಒಂದು ವಸ್ತು ಇಟ್ಟರೆ ಸಾಕು. ಅದು ಯಾವುದೆಂದರೆ ಜೇನುತುಪ್ಪ, ಜೇನುತುಪ್ಪ ತುಂಬಿದ ಬಾಟಲಿಯನ್ನು ದೇವರ ಮನೆಯಲ್ಲಿ ಇಡಿ. ಅದರಲ್ಲೂ ಶುದ್ದ ಜೇನು ತುಪ್ಪ, ಕೆಮಿಕಲ್ ರಹಿತವಾದ ಜೇನುತುಪ್ಪವಾಗಿದ್ದರೆ ಇನ್ನೂ ಒಳ್ಳೆಯದು. ಆ ಬಾಟಲ್ ತುಂಬಿರಬೇಕು, ಅಂಗಡಿಯಿಂದ ಖರೀದಿಸಿ ತಂದರೆ ಬಾಟಲ್ ಓಪನ್ ಮಾಡದೆ ಅದರಲ್ಲಿ ಒಂದು ಚೂರು ಕೂಡ ನೀವು ಬಳಸದೆ ಅದನ್ನು ಹಾಗೆ ಇಡಿ.
ನೀವು ನಿಮ್ಮ ಶಕ್ತಿಯನುಸಾರ ಚಿಕ್ಕದಾದರೂ ಇಡಬಹುದು ಅಥವಾ ದೊಡ್ಡ ಬಾಟೆಲ್ ಕೂಡ ಇಡಬಹುದು. ಎಷ್ಟೇ ದಿನಗಳಾದರೂ ಕೂಡ ಅದು ಅಲ್ಲಿಯೇ ಇರಲಿ. ಪ್ರತಿ ಬಾರಿ ದೇವರ ಮನೆ ಕ್ಲೀನ್ ಮಾಡುವಾಗ ಅದನ್ನು ತೆಗೆದರು ಮತ್ತೆ ಅಲ್ಲೇ ಇಡಿ ಈ ರೀತಿ ಮಾಡುವುದರಿಂದ ನಿಮ್ಮ ಮನೆಯ ಸಂಪತ್ತು ವೃದ್ದಿ ಆಗುತ್ತದೆ.
ಹಾಗೆ ಜೇನುತುಪ್ಪದ ಇನ್ನೊಂದು ಉಪಾಯ ಏನೆಂದರೆ ನೀವು ಯಾವುದೇ ಒಂದು ಶುಭಕಾರ್ಯ ಶುರು ಮಾಡಿದಾಗ,ನೀವು ಸೈಟ್ ಖರೀದಿಸಲು ಸೈಟ್ ವಿಸಿಟ್ ಗೆ ಹೋದಾಗ, ಮನೆ ಕಟ್ಟಿಸುವ ಕೆಲಸಕ್ಕಾಗಿ ಲೋನ್ ತೆಗೆದುಕೊಳ್ಳಲು ಬ್ಯಾಂಕುಗಳಿಗೆ ಹೋದಾಗ, ನಿಮ್ಮ ಮನೆಯ ಮಗಳ ಅಥವಾ ಮಗನಿಗೆ ವಧುವರರನ್ನು ಹುಡುಕಲು, ಮದುವೆ ಮಾತುಕತೆಗೆ ಮಾಡಲು ಹೋದಾಗ, ಕೆಲಸ ಹುಡುಕಲು ಹೋದಾಗ,
ಇಂಟರ್ವ್ಯೂಗೆ ಹೋದಾಗ ಅಥವಾ ಹೊಸ ಕೆಲಸಕ್ಕೆ ಹೋಗುವಾಗ, ಪರೀಕ್ಷೆ ಬರೆಯಲು ಹೋಗುವಾಗ ಹೀಗೆ ಯಾವುದೇ ಕೆಲಸಕ್ಕೆ ಹೋಗುವಾಗಲೂ ಕೂಡ ಒಂದು ಸ್ವಲ್ಪ ಜೇನುತುಪ್ಪವನ್ನು ಸೇವಿಸಿ ಹೋಗಿ. ದೇವರ ಮನೆಯಲ್ಲಿರುವ ಆ ಬಾಟಲಿಯಲ್ಲಿ ಓಪನ್ ಮಾಡಿ ತಿನ್ನಬಾರದು ಪ್ರತ್ಯೇಕವಾಗಿ ಮತ್ತೊಂದು ಬಾಟಲಿ ಜೇನುತುಪ್ಪವನ್ನು ನಿಮ್ಮ ಮನೆಯಲ್ಲಿ ಇಟ್ಟು ಕೊಂಡಿರಬೇಕು. ಅದದಿಂದ ತೆಗೆದುಕೊಂಡು ಸ್ವಲ್ಪ ಸೇವಿಸಿ ನೀವು ಹೋಗುವ ಕೆಲಸ ಆಗುತ್ತದೆ.