ಭಕ್ತರ ಬೇಡಿಕೆಯನ್ನು ತಕ್ಷಣ ಸಾಕಾರ ಮಾಡುವ ದೇವರು ಒಬ್ಬನೇ ಸಾಂಬಸದಾಶಿವ ಶಂಕರ. ರಾವಣನಂತಹ ರಾಕ್ಷಸನಿಗೂ ತನ್ನ ಆತ್ಮ ಲಿಂಗವನ್ನೇ ಕೊಟ್ಟಂತಹ ಮಹಾನುಭಾವ ಈ ಹರ. ಅದರಿಂದ ಈತನನ್ನು ತಪಸ್ಸಿಗೆ ಬೇಗನೆ ಒಲಿಯುವ ದೈವ, ಬೇಡಿದ ಭಕ್ತರ ಬೇಡಿಕೆಯನ್ನು ಬಿಡದೆ ನೆರವೇರಿಸುವಾತ ಎನ್ನುತ್ತಾರೆ. ಈ ರೀತಿ ಕರುಣಾಮಯಿ ಭಕ್ತರಪ್ರಿಯ ಶಿವನ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಆತನ ಪವಾಡ ಶಕ್ತಿ ಮತ್ತು ಪ್ರಭಾವ ಎಂತಹದು ಎಂದು ಆತನನ್ನು ಬೇಡುವ ಭಕ್ತರಿಗಷ್ಟೇ ತಿಳಿದಿರುತ್ತದೆ.
ಇಂದಿಗೂ ಸಹ ಈ ಕಲಿಗಾಲದಲ್ಲೂ ಶಿವನ ದೇವಾಲಯದಲ್ಲಿರುವ ಲಿಂಗಸ್ವರೂಪಿ ದೇವರ ಪರಶಿವನನ್ನು ನೋಡುವುದರಿಂದಲೇ ಸಾಕಷ್ಟು ಕಷ್ಟಗಳು ಪಾಪಗಳು ಪರಿಹಾರವಾಗಿ ಜೀವನ ಸಾರ್ಥಕವಾದ ಅನುಭವ ಬರುತ್ತದೆ. ಮಾನಸಿಕವಾಗಿ ನೆಮ್ಮದಿ ತರುವುದರ ಜೊತೆಗೆ ದೈಹಿಕವಾದ ಸಮಸ್ಯೆಗಳನ್ನು ಈಡೇರಿಸುವ ಶಕ್ತಿಯು ಕೂಡ ಓಂಕಾರ ಸ್ವರೂಪಿಗೆ ಇದೆ ಇದು ಆಶ್ಚರ್ಯ ತಂದರು ಕೂಡ ಸತ್ಯ.
ಇದುವರೆಗೂ ಕೂಡ ಶಿವನ ದೇವಾಲಯಕ್ಕೆ ಹೋಗುವುದರಿಂದ ನಮಗೆ ಆತನ ಅನುಗ್ರಹ ಆಗುತ್ತದೆ. ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳು ಪರಿಹಾರ ಆಗುತ್ತವೆ, ಮನಸ್ಸಿಗೆ ಶಾಂತಿ ದೊರೆಯುತ್ತದೆ ಇದನ್ನೆಲ್ಲ ಕೇಳಿದ್ದೆವು. ಆದರೆ ಮೊದಲ ಬಾರಿಗೆ ದೈಹಿಕ ಆರೋಗ್ಯ ಸಮಸ್ಯೆಗೂ ಕೂಡ ಶಿವಲಿಂಗ ದರ್ಶನ ಔಷಧಿ ಆಗುವುದರ ಬಗ್ಗೆ ಮಾತನಾಡುತ್ತಿದ್ದೇವೆ. ಇದು ಅಚ್ಚರಿ ಎನಿಸಬಹುದು. ಆದರೆ ಇಂತಹದೊಂದು ಶಿವನ ದೇವಾಲಯ ಬೆಂಗಳೂರಿನಲ್ಲಿಯೇ ಇದೆ.
ರಾಜ್ಯ ರಾಜಧಾನಿಯಲ್ಲಿರುವ ಈ ಶಿವ ದೇವಾಲಯದಲ್ಲಿ ಶಿವನ ದರ್ಶನ ಕಂಡು ದೇಹದಲ್ಲಿರುವ ಬೆನ್ನು ನೋವು ಮೂಳೆ ನೋವು ಮಂಡಿ ನೋವು ಮುಂತಾದ ನೋವುಗಳನ್ನು ನಿವಾರಣೆ ಮಾಡಿಕೊಳ್ಳುವ ಸಲುವಾಗಿಯೇ ಸಾವಿರಾರು ಕಿಲೋಮೀಟರ್ ಗಳಿಂದಲೂ ಕೂಡ ಭಕ್ತರ ದಂಡು ಬರುತ್ತಿದೆ. ದಿನೇ ದಿನೇ ಈ ದೇವಸ್ಥಾನದ ಶಿವನ ಶಕ್ತಿಯ ಪ್ರಖ್ಯಾತಿ ಹೆಚ್ಚುತ್ತಲೇ ಇದೆ.
ಬೆಂಗಳೂರಿನ ಬನಶಂಕರಿ ದೇವಸ್ಥಾನದ ಪ್ರಾಣಾಂಗಣದ ಒಳಗೆ ಇರುವ ಶ್ರೀ ಓಂಕಾರೇಶ್ವರನ ಸನ್ನಿಧಿಯನ್ನು ಬನಶಂಕರಿ ತಾಯಿಯ ಸನ್ನಿಧಾನಕ್ಕೆ ಭೇಟಿ ಕೊಟ್ಟ ಎಲ್ಲರೂ ಕೂಡ ನೋಡಿರುತ್ತಾರೆ. ಬನಶಂಕರಿಗೆ ತಾಯಿಯ ಗರ್ಭಗುಡಿ ಪಕ್ಕದಲ್ಲಿಯೇ ಪ್ರತಿಷ್ಠಾಪನೆ ಆಗಿರುವ ಈ ಓಂಕಾರೇಶ್ವರ ಶಿವಲಿಂಗದ ನ ಪಡೆದರೆ ಸಾಕು ದೇಹದಲ್ಲಿರುವ ಎಲ್ಲಾ ನೋವುಗಳು ಕೂಡ ನಿವಾರಣೆ ಆಗುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತರ ನಂಬಿಕೆ.
ಬಿಲ್ವಾಣಂ ದರ್ಶನಂ ಪುಣ್ಯಂ, ಸ್ಪರ್ಷನಂ ಪಾಪ ನಾಶನಂ। ಅಘೋರಂ ಪಾಪ ಸಂಹಾರಂ ಏಕಬಿಲ್ವಂ ಶಿವಾರ್ಪಣಂ ॥ ಎನ್ನುವ ಸ್ತೋತ್ರವನ್ನು ನಾವು ಕೇಳುತ್ತೇವೆ. ಈಗ ನನ್ನನ್ನು ದರ್ಶನ ಮಾಡಿದ ಭಕ್ತಾದಿಗಳಿಗಿರುವ ಕೈ ಕಾಲು ನೋವು ಮೂಳೆ ನೋವು ಮಂಡಿ ನೋವು ಬೆನ್ನು ನೋವು ಇನ್ನು ಮುಂತಾದ ದೇಹದಲ್ಲಿ ಆಗಿರುವ ಎಲ್ಲಾ ನೋವುಗಳನ್ನು ಕೂಡ ಈ ಓಂಕಾರೇಶ್ವರ ನಿವಾರಣೆ ಮಾಡುತ್ತಿದ್ದಾರೆ.
ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಓಂಕಾರೇಶ್ವರ ಎದುರು ನಿಂತು ಭಕ್ತಿಯಿಂದ ಪ್ರಾರ್ಥಿಸುವುದರ ಜೊತೆಗೆ ತಪ್ಪದೆ ಮೃತ್ಯುಂಜಯ ಹೋಮ ಹಾಗೂ ಅನ್ನದಾನವನ್ನು ಮಾಡಿಸಬೇಕು. ಅನ್ನದಾನಕ್ಕೆ 200 ರೂಪಾಯಿಗಳು ಹಾಗೂ ಮೃತ್ಯುಂಜಯ ಹೋಮಕ್ಕೆ 400 ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ. ಈ ಓಂಕಾರೇಶ್ವರನ ಪಕ್ಕದಲ್ಲಿಯೇ 12 ಜ್ಯೋತಿರ್ಲಿಂಗ ಸ್ವರೂಪವಾದ ಶಿವಲಿಂಗಗಳನ್ನು ಕಪ್ಪು ಬಣ್ಣದ ಕಲ್ಲಿನಿಂದ ಕೆತ್ತಲಾಗಿದೆ.
ಈ ಶಿವಲಿಂಗಗಳನ್ನು ದರ್ಶನ ಮಾಡುವುದರಿಂದ 13,000 ಲಿಂಗಗಳನ್ನು ಕಂಡಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದೆ. ಪುರಾಣ ಪ್ರಸಿದ್ದಿಯಾದ ಈ ದೇವಾಲಯಕ್ಕೆ ಬೆಂಗಳೂರು ಹಾಗೂ ಬೆಂಗಳೂರಿನ ಹೊರವಲಯದವರೂ ಕೂಡ ಬರುತ್ತಾರೆ. ಈ ರೀತಿ ಆರೋಗ್ಯ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ತಪ್ಪದೆ ಒಮ್ಮೆ ಈ ದೇವಾಲಯಕ್ಕೆ ಭೇಟಿ ಕೊಟ್ಟು, ಈ ರೀತಿಯಾಗಿ ಓಂಕಾರೇಶ್ವರನನ್ನು ಪ್ರಾರ್ಥಿಸಿ.