
ನಮ್ಮ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೊಳಲಿ ಎನ್ನುವಲ್ಲಿ ಪುರಾಣ ಪ್ರಸಿದ್ದಿಯಾದ ಶ್ರೀ ರಾಜರಾಜೇಶ್ವರಿ ತಾಯಿಯ ದೇವಸ್ಥಾನ ಇದೆ. ಈ ದೇವಾಲಯವನ್ನು ಸಾವಿರ ವರ್ಷಗಳ ಹಿಂದೆ ಸ್ಥಾಪಿಸಲಾಗಿದೆ ಎಂದು ನಂಬಲಾಗಿದ್ದು, ಈ ದೇವಸ್ಥಾನದ ಪ್ರತಿಷ್ಠಾಪನೆ ಹಿಂದೆ ಕೂಡ ಒಂದು ಕಥೆ ಇದೆ. ಸುರಥ ಮಹಾರಾಜ ಎನ್ನುವ ಮಹಾರಾಜನು ಯುದ್ಧದಲ್ಲಿ ಸೋತು ಶತ್ರುಗಳಿಂದ ತನ್ನ ಎಲ್ಲಾ ಸಂಪತ್ತನ್ನು ಕಳೆದುಕೊಂಡಿರುತ್ತಾನೆ.
ಬಳಿಕ ಜೀವನದಲ್ಲಿ ಬೇಸರವಾಗಿ ಕಾಡು ಮಾರ್ಗದಲ್ಲಿ ಹೋಗುತ್ತಿರುವಾಗ ಸುಮೇಧ ಎನ್ನುವ ಒಬ್ಬ ಮುನಿ ಸಿಗುತ್ತಾರೆ. ಋಷಿಮುನಿಯ ಜೊತೆ ತನ್ನೆಲ್ಲಾ ಕಷ್ಟವನ್ನು ಹೇಳಿಕೊಂಡಾಗ ಋಷಿಮುನಿಯು ಅರಸನಿಗೆ ಶ್ರೀ ರಾಜರಾಜೇಶ್ವರಿಯ ಮಂತ್ರೋಪದೇಶವನ್ನು ಕೊಟ್ಟು ಸದಾ ತಾಯಿ ಧ್ಯಾನದಲ್ಲಿದ್ದರೆ ಪರಿಹಾರ ಸಿಗುತ್ತದೆ ಎಂದು ಹೇಳುತ್ತಾರೆ. ಇದನ್ನೇ ಪಾಲಿಸುತ್ತಿದ್ದ ರಾಜನಿಗೆ ಒಂದು ದಿನ ಕನಸಿನಲ್ಲಿ ಆಸ್ಥಾನರೂಢರಾದ ಶ್ರೀಮಾತೆಯು ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ.
ಅದನ್ನು ಋಷಿಮುನಿಗೆ ತಿಳಿಸಿದಾಗ ಕನಸಿನಲ್ಲಿ ಕಂಡಂತೆಯೇ ಆ ಜಾಗದಲ್ಲಿ ತಾಯಿಯನ್ನು ಪ್ರತಿಷ್ಠಾಪಿಸಬೇಕು ಎಂದು ಆಶಿಸುತ್ತಾರೆ. ಮೊದಲಿಗೆ ಮಣ್ಣಿನಲ್ಲಿ ತಾಯಿಯನ್ನು ಪ್ರತಿಷ್ಠಾಪಿಸಿ ಪೂಜಿಸಲು ಶುರು ಮಾಡಿದ ಸುರಥ ಮಹಾರಾಜನು ಜೀವನದಲ್ಲಿ ಕಳೆದುಕೊಂಡಿದ್ದೆಲ್ಲಾ ಮತ್ತೆ ಬರಲು ಶುರು ಆಗುತ್ತದೆ. ಬಳಿಕ ರಾಜ ಹಿಂದಿನಂತೆ ತನ್ನ ಸಂಪತ್ತು ರಾಜ್ಯವನ್ನೆಲ್ಲಾ ವಾಪಸ್ಸು ಪಡೆಯುತ್ತಾರೆ. ತಾಯಿಯ ದೇವಸ್ಥಾನವನ್ನು ಲೋಕ ವಿಖ್ಯಾತಿಯಾಗುವಂತೆ ಜೀರ್ಣೋದ್ದಾರ ಗೊಳಿಸುತ್ತಾರೆ.
ಪುಳನ, ಪೊಳಲ್ ಎಂದರೆ ಮಣ್ಣು ಎನ್ನುವ ಅರ್ಥ ಬರುವುದಿಂದ ಈ ಕ್ಷೇತ್ರಕ್ಕೆ ಪುಳಿನಪುರ ಎನ್ನುವ ಹೆಸರು ಇದೆ. ಇಲ್ಲಿ ಪ್ರಥಮ ದೇವತೆ ಶ್ರೀ ರಾಜರಾಜೇಶ್ವರಿ ತಾಯಿ ಹಾಗೆಯೇ ಎಡ ಭಾಗದಲ್ಲಿ ಭದ್ರಕಾಳಿಯನ್ನು ಬಲಭಾಗದಲ್ಲಿ ಶ್ರೀ ಸುಬ್ರಮಣ್ಯ ಸ್ವಾಮಿ, ಬ್ರಹ್ಮವಟು, ವಿಷ್ಣುವಟು, ಶೂಲಿನಿ, ದಂಡಿನಿ, ಮುಂಡಿನಿ ಪರಿವಾರ ಗಣಗಳ ಆಳೆತ್ತರದ ವಿಗ್ರಹಗಳನ್ನು ಪ್ಯತಿಷ್ಟಾಪಿಸಲಾಗಿದೆ. ಭಾರತ ದೇಶದಲ್ಲಿ ಅತ್ಯಂತ ಬೃಹತಾಕಾರದ ವಿಗ್ರಹಗಳು ಇಲ್ಲೇ ಇರುವುದು ಎನ್ನುವ ಖ್ಯಾತಿಗೆ ಒಳಗಾಗಿದೆ.
ದೇವಸ್ಥಾನದ ಹೊರಾಂಗಣದಲ್ಲಿ ಭಾಗದಲ್ಲಿ ಸುಮೇಧ ಮುನಿಯವರ ಪ್ರತಿಷ್ಠಾಪಿಸಿದ ದುರ್ಗಾಪರಮೇಶ್ವರಿ ಅಮ್ಮನವರ ಗುಡಿ ಇದ್ದು, ಎಡ ಭಾಗದಲ್ಲಿ ಶ್ರೀ ಕ್ಷೇತ್ರಪಾಲನ ಸನ್ನಿಧಿ ಇದೆ. ದೈನಂದಿಕ ಪೂಜೆಯಲ್ಲಿ ಪ್ರಥಮ ಪೂಜೆ ಹೊರಾಂಗಣದಲ್ಲಿರುವ ದುರ್ಗಾಪರಮೇಶ್ವರಿ ಅಮ್ಮನಿಗೆ ಆಗುತ್ತದೆ. ನಂತರ ಕ್ಷೇತ್ರದ ಅದಿದೇವತೆ ಶ್ರೀ ರಿಜರಾಜೇಶ್ವರಿ ಅಮ್ಮನಿಗೆ ಪೂಜಾ ಕಾಂಕರ್ಯ ನಡೆಯುತ್ತಿದೆ. ಫಲ್ಗುಣಿ ನದಿ ದಂಡೆಯ ಮೇಲೆ ಬೆಟ್ಟಗುಡ್ಡಗಳ ತಪ್ಪಲಿನಲ್ಲಿ ಸುತ್ತ ಹಸಿರಿನ ನಡುವೆ ದೇವಾಲಯವು ದೇವಲೋಕದಿಂದ ಇಳಿದಿರುವಂತೆ ಕಂಗೊಳಿಸುತ್ತದೆ.
ದೇವಾಲಯದ ಪ್ರಖ್ಯಾತಿ ಹೆಚ್ಚಾಗುತ್ತಿದ್ದು ಈ ದೇವಸ್ಥಾನಕ್ಕೆ ಹೋಗುವುದರಿಂದ ಜೀವನದಲ್ಲಿ ಏನನ್ನೇ ಕಳೆದುಕೊಂಡಿದ್ದರು ಅದು ವಾಪಸ್ ಬರುತ್ತದೆ ಎನ್ನುವ ನಂಬಿಕೆ ಜನರಲ್ಲಿ ಬೆಳೆಯುತ್ತದೆ ಹಾಗೂ ನಂಬಿಕೆಗೆ ತಕ್ಕ ಹಾಗೆ ಪವಾಡಗಳ ನಡೆಯುತ್ತಿರುವುದು ಅಗಾಧ ಪ್ರಮಾಣದ ಭಕ್ತರನ್ನು ಸೆಳೆಯುತ್ತಿದೆ. ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ ಸ್ವರೂಪಳಾದ ಈ ಮಾತೆಯು ಭಕ್ತರ ಪಾಲಿನ ಇಷ್ಟಪ್ರಧಾಯಿನಿಯಾಗಿ ಇಲ್ಲಿ ಮೆರೆಯುತ್ತಿದ್ದಾರೆ.
ಕ್ಷೇತ್ರವನ್ನು ಸಾವಿರ ಸೀಮೆಯ ದೇವಸ್ಥಾನ ಎಂದು ಕೂಡ ಕರೆಯುತ್ತಾರೆ. ದಿನ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಮೂರು ಸಮಯದಲ್ಲೂ ಪೂಜೆ ನಡೆಯುತ್ತದೆ. ಮಂಗಳವಾರ, ಶುಕ್ರವಾರ ಮತ್ತು ಭಾನುವಾರದಂದು ವಿಶೇಷ ಪೂಜೆಗಳು ಜರುಗುತ್ತವೆ. ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಮಧ್ಯದಲ್ಲಿ ಈ ಜಾತ್ರಾ ಮಹೋತ್ಸವ ಜರುಗುತ್ತದೆ. ರಾಜರಾಜೇಶ್ವರಿ ಅಮ್ಮ ಹಾಗೂ ಸುಬ್ರಹ್ಮಣ್ಯ ಸ್ವಾಮಿಯ ಜಾತ್ರೋತ್ಸವ ಜರಗುತ್ತದೆ. 12 ವರ್ಷಗಳಗೊಮ್ಮೆ ನಡೆಯುವ ಲೇಪಾಷ್ಟ ಗಂಧ ಬ್ರಹ್ಮ ಕಲಶಾಭಿಷೇಕ ವಿಶೇಷವಾಗಿದೆ. ನೀವು ಜೀವನದಲ್ಲಿ ಒಮ್ಮೆಯಾದರೂ ಈ ಕ್ಷೇತ್ರಕ್ಕೆ ಭೇಟಿ ನೀಡಿ ತಾಯಿ ರಾಜರಾಜೇಶ್ವರಿಯ ಕೃಪಾಕಟಾಕ್ಷಕ್ಕೆ ಒಳಗಾಗಿ.