ಹುಟ್ಟುವಾಗ ಯಾರಿಗೂ ಹೆಸರಿರುವುದಿಲ್ಲ ಉಸಿರು ಇರುತ್ತದೆ. ಆದರೆ ಉಸಿರು ನಿಂತ ಮೇಲೂ ಕೂಡ ಉಳಿಯುವಂತದ್ದು ಹೆಸರು. ಹಾಗಾಗಿ ಇಡುವ ಹೆಸರು ಶ್ರೇಷ್ಠವಾಗಿರಬೇಕು, ಆ ಹೆಸರಿನಲ್ಲಿ ಒಂದು ಸ್ಟ್ರೆಂಥ್ ಇರಬೇಕು, ಅದು ಅವರ ಏಳಿಗೆಗೆ ಪೂರಕವಾಗಿರಬೇಕು. ಹಾಗಾಗಿ ನಮ್ಮ ಸಂಸ್ಕೃತಿಯಲ್ಲಿ ಹೆಸರಿಗೆ ವಿಶೇಷವಾದ ಸ್ಥಾನ ಇದೆ. ಹೆಸರು ಇಡುವುದನ್ನು ಕೂಡ ನಾಮಕರಣ ಎನ್ನುವ ಒಂದು ಕಾರ್ಯಕ್ರಮ ಮಾಡಿ ಶಾಸ್ತ್ರೋಕ್ತವಾಗಿ ಇಡಲಾಗುತ್ತದೆ.
ಇದುವರೆಗೂ ಕೂಡ ಎಲ್ಲರೂ ಹೆಸರಿಡುವಾಗ ಮಗು ಹುಟ್ಟಿದ ನಕ್ಷತ್ರ ರಾಶಿ ಇವುಗಳ ಆಧಾರದ ಮೇಲೆ ಹೆಸರು ಇಡುತ್ತಿದ್ದರು. ಇದು ಜನ್ಮನಾಮವಾಗುತ್ತದೆ. ಆದರೆ ಮಗು ಸರ್ವತೋಮುಖವಾಗಿ ಏಳಿಗೆ ಆಗಬೇಕು ಜೀವನದಲ್ಲಿ ಕೀರ್ತಿ ಹೊಂದಬೇಕು ಎಂದರೆ ನ್ಯೂಮರಜಿ ಪ್ರಕಾರ ಹೆಸರಿಡಬೇಕು ಎನ್ನುತ್ತಾರೆ ಸಂಖ್ಯಾಶಾಸ್ತ್ರಜ್ಞರು.
ಸಂಖ್ಯಾಶಾಸ್ತ್ರದಲ್ಲಿ ಮಗು ಹುಟ್ಟಿದ ದಿನಾಂಕ ಬರ್ತ್ ಸಂಖ್ಯೆ ಆದರೆ ದಿನಾಂಕ, ತಿಂಗಳು ವರ್ಷವನ್ನೆಲ್ಲ ಕೂಡಿದಾಗ ಬರುವ ಭಾಗ್ಯ ಸಂಖ್ಯೆಯನ್ನು ಫೇಟ್ ಸಂಖ್ಯೆ ಎನ್ನಲಾಗುತ್ತದೆ. ಇವುಗಳ ಆಧಾರದ ಮೇಲೆ ಆ ಮಗುವಿಗೆ ಒಂದು ಅಲ್ಫಬೆಟ್ ಆರಿಸಿ ಹೆಸರಿಡಲಾಗುತ್ತದೆ. ಈ ರೀತಿ ಇಟ್ಟ ಹೆಸರಿನಿಂದ ಮಕ್ಕಳು ಕೀರ್ತಿ ಹೊಂದುವುದರಲ್ಲಿ ಯಾವುದೇ ಅನುಮಾನ ಇಲ್ಲ ಆದರೆ ಈಗಿನ ಕಾಲದಲ್ಲಿ ತಂದೆ ತಾಯಿಯರು ಫ್ಯಾಷನ್ ಹೆಸರನ್ನು ಇಷ್ಟಪಡುತ್ತಾರೆ.
ಯಾರು ಇಡದ ಹೆಸರನ್ನು ಇಡಬೇಕು ಎಂದು ಅಥವಾ ಯಾರೋ ಇಟ್ಟಿದ್ದ ಹೆಸರು ಚೆನ್ನಾಗಿದೆ ಎನ್ನುವ ಕಾರಣಕ್ಕೆ ಅಥವಾ ಅವರಿಗೆ ಇಷ್ಟವಾದ ಸೆಲೆಬ್ರಿಟಿ ಹೆಸರು ಅಥವಾ ಇನ್ಯಾರೋ ಆ ಹೆಸರಿನಿಂದ ಕೀರ್ತಿ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಹೆಸರುಗಳನ್ನು ಇಡುತ್ತಾರೆ. ಆ ಹೆಸರುಗಳನ್ನು ಇಟ್ಟುಕೊಂಡು ಅವರು ಕೀರ್ತಿ ಹೊಂದಿದ್ದರು ಕೂಡ ಅದು ಅವರುಗಳ ಜನ್ಮ ದಿನಾಂಕ ಕ್ಕೆ ಅಥವಾ ಭಾಗ್ಯ ಸಂಖ್ಯೆಗೆ ಹೊಂದಿಕೊಂಡಿರುವುದು ಕಾರಣ ಇರಬಹುದು ಆದರೆ ಅದೇ ನಿಮ್ಮ ಹುಟ್ಟಿದ ದಿನಾಂಕಕ್ಕೆ ಹೊಂದಾಣಿಕೆ ಆಗುತ್ತದೆ ಎಂದು ಹೇಳಲು ಬರುವುದಿಲ್ಲ.
ಎಲ್ಲರಿಗೂ ಕೂಡ ಟಿ ಮತ್ತು ಪಿ ಅಕ್ಷರಗಳ ಹೆಸರುಗಳು ಆಗಿ ಬರುವುದಿಲ್ಲ. ಸಂಖ್ಯಾಶಾಸ್ತ್ರದಲ್ಲಿ ಸಾಧಕತಾರೆ, ಬಾಧಕ ತಾರೆ, ಕ್ಷೇಮತಾರೆ ಇವುಗಳನ್ನೆಲ್ಲ ಲೆಕ್ಕ ಹಾಕಿ ಹೆಸರನ್ನು ಇಡುವುದರಿಂದ ಅದು ಅವರಿಗೆ ಅದೃಷ್ಟ ತರುತ್ತದೆ ಎಂದು ಹೇಳಲಾಗುತ್ತದೆ ಈ ಅಂಕಣದಲ್ಲಿ ಯಾವ ಹೆಸರುಗಳನ್ನು ಇಡಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಯಾವ ಹೆಸರುಗಳನ್ನು ಇಡಬಾರದು ಎನ್ನುವುದನ್ನು ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ.
ಹೆಸರಿನ ಮಧ್ಯ END, WAR, ASH, NIL ಈ ರೀತಿ ಪದಗಳು ಬರುವ ಹೆಸರುಗಳು ಉದಾಹರಣೆಗೆ ಐಶ್ವರ್ಯ ಮಹೇಶ್ವರಿ ಅನಿಲ್ ಸುನಿಲ್ ಆಶಿತಾ ಈ ರೀತಿ ಹೆಸರುಗಳನ್ನು ಯಾವುದೇ ಕಾರಣಕ್ಕೂ ಮಕ್ಕಳಿಗೆ ಇಡಬಾರದು ಮತ್ತು ಸಾತ್ವಿಕ್ ಎಂದು ಕರೆದಾಗ ಅದರಲ್ಲಿ ಮೊದಲಿಗೆ SAT & ಕೊನೆಯಲ್ಲಿ ವೀಕ್ ಎನ್ನುವುದು ಬರುವುದರಿಂದ ಆ ಮಗು ಎಷ್ಟು ಪ್ರಯತ್ನ ಪಟ್ಟರು ಕೂಡ ಅದೃಷ್ಟ ಕೈ ಹಿಡಿಯುವುದಿಲ್ಲ.
ಹಾಗೆಯೇ ಡಿಂಪಲ್ ಎನ್ನುವ ಅಕ್ಷದಲ್ಲಿ ಡಿಮ್ ಎಂದು ಸ್ಟಾರ್ಟ್ ಆಗುವುದರಿಂದ ವಿಕ್ರಂ ಈ ಹೆಸರಿನಲ್ಲೂ ಕೂಡ ವೀಕ್ ಎನ್ನುವುದು ಇರುವುದರಿಂದ ಈ ಹೆಸರುಗಳನ್ನು ಇಡಬಾರದು. ರಾಜಕುಮಾರ್ ರಜನಿಕಾಂತ್ ವಿಷ್ಣುವರ್ಧನ್ ರಮ್ಯಾ ರಕ್ಷಿತಾ ಮುಂತಾದವರು ಹೆಸರನ್ನು ಬದಲಾಯಿಸಿದ ನಂತರವೇ ಜೀವನದಲ್ಲಿ ಬಹುದೊಡ್ಡ ತಿರುವನ್ನು ಪಡೆದುಕೊಂಡಿದ್ದನ್ನು ನಾವು ನೋಡಿದ್ದೇವೆ. ಆದ್ದರಿಂದ ಬಹಳ ಶಕ್ತಿಯುತವಾದ ಹಾಗೂ ಅರ್ಥ ಬದ್ಧವಾದ ಹೆಸರನ್ನು ಇಡಬೇಕು. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ವಿವರವಾಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.