ವಾರದ ಮೊದಲ ದಿನವಾದ ಭಾನುವಾರ ಹುಟ್ಟಿದವರು ಸದಾ ಉತ್ಸಾಹಿಗಳಾಗಿರುತ್ತಾರೆ. ಇವರನ್ನು ಬೇರೆಯವರು ಮೋಟಿವೇಟ್ ಮಾಡುವ ಅವಶ್ಯಕತೆ ಇಲ್ಲ ಇವರು ಸೆಲ್ಫ್ ಮೋಟಿವೇಟ್ ಪರ್ಸನ್ ಆಗಿರುತ್ತಾರೆ. ಸದಾ ಸುಖದ ಜೀವನವನ್ನು ಕಳೆಯಲು ಇಷ್ಟಪಡುವವರು ಇವರು. ಕಲ್ಪನೆಯಲ್ಲೂ ಅತ್ಯಂತ ಸುಖದಿಂದ ಇರುವಂತೆ ಕಲ್ಪಿಸಿಕೊಳ್ಳುತ್ತಾರೆ. ಸ್ವಭಾವತಃ ಇವರು ನ್ಯಾಯವಾದಿಗಳಾಗಿರುತ್ತಾರೆ.
ಸತ್ಯದ ದಾರಿಯಲ್ಲಿ ಧರ್ಮದ ಹಾದಿದಲ್ಲಿ ನಡೆಯಲು ಇಷ್ಟ ಪಡುತ್ತಾರೆ. ಸುಳ್ಳು ಹೇಳುವವರು, ಮೋಸ ಮಾಡುವವರು, ವಂಚನೆ ಮಾಡುವವರನ್ನು ಕಂಡರೆ ಇವರಿಗೆ ಆಗುವುದಿಲ್ಲ. ಎಲ್ಲರಿಗೂ ಸಹಾಯ ಮಾಡುವ ಗುಣ ಉಳ್ಳವರಾಗಿರುತ್ತಾರೆ ಮತ್ತು ಆರೋಗ್ಯ ಸಮಸ್ಯೆಗಳು ಆಗಲಿ ಆರ್ಥಿಕ ಸಮಸ್ಯೆಯೇ ಆಗಲಿ ಇವರಿಗೆ ಬರುವುದಿಲ್ಲ. ಸೋಮವಾರ ಹುಟ್ಟಿದವರ ಗುಣಲಕ್ಷಣಗಳು ಹೀಗಿರುತ್ತದೆ. ಇವರು ಶಾಂತ ಸ್ವಭಾವದವರು ಹಾಗೂ ನೇರವಾಗಿ ಮಾತನಾಡುವವರು.
ಹತ್ತಿರದವರು ಕಷ್ಟದಲ್ಲಿದ್ದರೆ ಎಂತಹ ಸಹಾಯಕ್ಕೆ ಬೇಕಾದರೂ ಮುಂದಾಗುತ್ತಾರೆ. ದಾನ ಧರ್ಮದ ಗುಣಳ್ಳವರಾಗಿರುತ್ತಾರೆ. ಮಕ್ಕಳ ಮೇಲೆ ಹೆಚ್ಚು ಪ್ರೀತಿ ಹೊಂದಿರುತ್ತಾರೆ ಹೆಣ್ಣು ಮಕ್ಕಳ ಸೋಮವಾರ ಹುಟ್ಟಿದರೆ ಅವರಿಗೆ ಗಂಡ ಹಾಗೂ ಮಕ್ಕಳಷ್ಟೇ ಅವರ ಪ್ರಪಂಚವಾಗಿರುತ್ತದೆ. ಮಂಗಳವಾರ ಹುಟ್ಟಿದವರು ಯಾವಾಗಲೂ ಹೆಚ್ಚು ಆಕ್ಟಿವ್ ಆಗಿರುತ್ತಾರೆ. ಅಂದುಕೊಂಡು ತಕ್ಷಣವೇ ಎಲ್ಲಾ ಕೆಲಸ ಕಾರ್ಯವನ್ನು ಮಾಡಿ ಮುಗಿಸುತ್ತಾರೆ.
ಸೂಕ್ಷ್ಮ ಗುಣದವರಾಗಿದ್ದು ಹಠಮಾರಿತನದಿಂದ ಕಷ್ಟಕ್ಕೆ ಸಿಲುಕುತ್ತಾರೆ ಹಾಗೂ ಬುದ್ಧಿವಂತಿಕೆಯಿಂದ ಅಷ್ಟೇ ಬೇಗ ಪರಿಹಾರ ಮಾಡಿಕೊಳ್ಳುತ್ತಾರೆ. ಬುಧವಾರ ಹುಟ್ಟಿದವರು ಹೆಚ್ಚಾಗಿ ಸಿನಿಮಾ ಸಂಗೀತ ನಾಟಕ ಈ ರೀತಿ ಯಾವುದಾದರೂ ಒಂದು ಕಲೆ ಕರಗತ ಮಾಡಿಕೊಂಡಿರುತ್ತಾರೆ, ಜೊತೆಗೆ ಆ ಕ್ಷೇತ್ರದಲ್ಲಿ ಚಾಪು ಮೂಡಿಸುತ್ತಾರೆ. ಇವರು ರಸಿಕರಾಗಿದ್ದು, ಸುಖಭೋಗಿಗಳು ಆಗಿರುತ್ತಾರೆ. ಹಾಗೆ ಇವರು ಚಂಚಲ ಸ್ವಭಾವದವರು.
ಆಗಾಗ ಅನಾರೋಗ್ಯ ಸಮಸ್ಯೆಯೂ ಇವರನ್ನು ಬಾಧಿಸುತ್ತಿರುತ್ತದೆ. ಇವರು ಬುದ್ಧಿವಂತಿಕೆಯಿಂದ ಎಲ್ಲರ ನಡುವೆಯೂ ಗಮನ ಸೆಳೆಯುತ್ತಾರೆ. ಗುರುವಾರ ಜನಿಸಿದವರು ಸ್ಥಿರ ಬುದ್ಧಿ ಉಳ್ಳವರಾಗಿರುತ್ತಾರೆ. ಕೆಲಸದಿಂದ ತಪ್ಪಿಸಿಕೊಳ್ಳಲು ಕಾರಣ ನೀಡುವುದಾಗಲಿ ಅಥವಾ ಕೆಲಸಕ್ಕೆ ಇತರರ ಸಹಾಯವನ್ನು ಕೇಳುವುದಾಗಲಿ ಇವರಿಗೆ ಇಷ್ಟ ಇರುವುದಿಲ್ಲ. ಬಂಡವಾಳ ಹೂಡಿ ಸಂಪಾದನೆ ಮಾಡಲು ಇವರು ಇಷ್ಟಪಡುತ್ತಾರೆ ಮತ್ತು ಇವರು ಭೋಜನ ಪ್ರಿಯರಾಗಿರುತ್ತಾರೆ.
ಯಾವುದೇ ವಸ್ತುವಿನ ಮೇಲೆ ಅತಿಯಾದ ವ್ಯಾಮೋಹ ಇಟ್ಟುಕೊಳ್ಳುವುದಿಲ್ಲ. ಎಲ್ಲರನ್ನೂ ಪ್ರೀತಿಸುವ ಮನಸ್ಸು ಗುರುವಾರ ಹುಟ್ಟಿದವರಿಗೆ ಇರುತ್ತದೆ. ಶುಕ್ರವಾರ ಜನಿಸಿದವರು ಕೀರ್ತಿ ಶಾಲಿಗಳು, ಬುದ್ಧಿವಂತರು ಮತ್ತು ಅದೃಷ್ಟವಂತರಾಗಿರುತ್ತಾರೆ. ಪಕ್ಷಿ ಮತ್ತು ಪ್ರಾಣಿಗಳ ಮೇಲೆ ವಿಶೇಷ ಪ್ರೀತಿ ಹೊಂದಿರುತ್ತಾರೆ. ನಮ್ಮ ಸ್ನೇಹಿತರ ಹಾಗೂ ಕುಟುಂಬದವರನ್ನು ಬಹಳ ಪ್ರೀತಿಸುತ್ತಾರೆ.
ಬೇರೆಯವರ ಮನಸ್ಸನ್ನು ಬೇಗ ಅರ್ಥ ಮಾಡಿಕೊಳ್ಳುತ್ತಾರೆ. ಇವರಿಗೆ ಮೂಗಿನ ಮೇಲೆ ಕೋಪ ಇದ್ದರು ಕೂಡ ಬೇರೆಯವರ ತಪ್ಪನ್ನು ಕ್ಷಮಿಸುವಷ್ಟು ಉದಾರ ಮನಸ್ಸು ಕೂಡ ಇವರಿಗಿರುತ್ತದೆ. ಅಂತರ್ಮುಖಿಗಳಾಗಿದ್ದು ತಮ್ಮ ಕಷ್ಟವನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಶನಿವಾರದ ಜನಿಸಿದವರ ಗುಣ ಈ ರೀತಿ ಇರುತ್ತದೆ. ಇವರು ನ್ಯಾಯವಾದಿಗಳಾಗಿರುತ್ತಾರೆ, ಅನ್ಯಾಯವನ್ನು ಇವರು ಸಹಿಸುವುದಿಲ್ಲ ಹಾಗೂ ತಕ್ಷಣವೇ ಅದನ್ನು ಖಂಡಿಸುತ್ತಾರೆ. ಇವರ ಎದುರು ಯಾರೇ ತಪ್ಪು ಮಾಡಿದರೂ ಅದನ್ನು ನೇರವಾಗಿ ಅಲ್ಲೇ ಹೇಳುವ ಧೈರ್ಯವಂತರಾಗಿರುತ್ತಾರೆ.
ಇವರ ಈ ಗುಣದಿಂದಲೇ ಇವರು ಎಲ್ಲರ ಕೋಪಕ್ಕೆ ಗುರಿ ಆಗುತ್ತಾರೆ. ಜೀವನದಲ್ಲಿ ಒಳ್ಳೆ ದಾರಿಯಲ್ಲಿ ನಡೆಯಬೇಕು ಎನ್ನುವ ಮಹತ್ವಕಾಂಕ್ಷೆಯಿಂದ ಬದುಕುತ್ತಾರೆ. ಕಡಿಮೆ ಸ್ನೇಹಿತರು ಹೊಂದಿದ್ದರೂ ಕೂಡ ಅರ್ಹತೆ ಇದ್ದವರನ್ನು ಮಾತ್ರ ಹತ್ತಿರ ಇಟ್ಟುಕೊಳ್ಳುತ್ತಾರೆ. ತನ್ನ ಸುತ್ತಲೂ ಇರುವವರ ಆಯ್ಕೆ ಬಗ್ಗೆ ಚೂಸಿ ಆಗಿರುತ್ತಾರೆ.
https://youtu.be/GGVZhtmq5QQ