ಪಡಿತರ ಚೀಟಿ ಮೂಲಕ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಹಲವು ಯೋಜನೆಗಳನ್ನು ಪಡಿತರ ಚೀಟಿದಾರರಿಗೆ ಕೊಡುತ್ತಿದ್ದಾರೆ. ಪಡಿತರ ಚೀಟಿ ಮೂಲಕ ಉಚಿತ ಆಹಾರ ಪದಾರ್ಥಗಳ ವಿತರಣೆ ಮತ್ತು ಕೆಲವು ಆರೋಗ್ಯ ವಿಮೆಗಳು ಆರೋಗ್ಯ ಸೇವೆಗಳು ಸೇರಿದಂತೆ ಇನ್ನು ಅನೇಕ ಸರ್ಕಾರದ ಯೋಜನೆಗಳು ಸಿಗುತ್ತಿವೆ. ಕೇಂದ್ರ ಸರ್ಕಾರದಿಂದ ಈ ರೀತಿ APL, BPL ಮತ್ತು AAY ರೇಷನ್ ಕಾರ್ಡ್ ಗಳು ವಿತರಣೆ ಆಗಿದ್ದು ಇದರಲ್ಲಿ BPL ಮತ್ತು AAY ಕಾರ್ಡುದಾರರು ಬಡತನ ರೇಖೆಗಿಂತ ಕೆಳಗಿರುವವರು ಎನ್ನುವುದನ್ನು ಗುರುತಿಸಿ ಅವರಿಗೆ ಸರ್ಕಾರ ಸಾಕಷ್ಟು ಅನುಕೂಲತೆಗಳನ್ನು ಮಾಡಿಕೊಡುತ್ತಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಈ ರೀತಿ ಪಡಿತರ ಚೀಟಿ ದಾರರಿಗೆ ಸಿಗುತ್ತಿರುವ ಉಚಿತ ಯೋಜನೆಗಳಲ್ಲಿ ಭಾರಿ ಅವ್ಯವಹಾರಗಳು ಕಂಡುಬಂದಿರುವುದನ್ನು ಗುರುತಿಸಿರುವ ಸರ್ಕಾರವು ಶೀಘ್ರವಾಗಿ ಅದಕ್ಕೆ ಕಡಿವಾಣ ಹಾಕಲು ನಿರ್ಧರಿಸಿ ಅದಕ್ಕಾಗಿ ಹೊಸ ಕಾನೂನು ಒಂದನ್ನು ಜಾರಿಗೆ ತಂದಿದೆ. ಸರ್ಕಾರವು ಪದೇಪದೇ ಈ ನಿಯಮವನ್ನು ಹೇರಿತ್ತು, ಆದರೆ ಜನಸಾಮಾನ್ಯನು ಇದರ ಬಗ್ಗೆ ಎಚ್ಚೆತ್ತುಕೊಂಡಿರಲಿಲ್ಲ. ಈಗ ಕಡ್ಡಾಯ ಎನ್ನುವ ನಿಯಮ ಮಾಡಿ ನಕಲಿಫಲಾನುಭವಿಗಳ ಹಾವಳಿಗೆ ಕಡಿವಾಣ ಹಾಕಲು ನಿರ್ಧರಿಸಿದೆ.
ಯಾಕೆಂದರೆ BPL ಕಾರ್ಡ್ ಹೊಂದಿದವರಿಗೆ ಸರ್ಕಾರದ ಉಚಿತ ಸಬ್ಸಿಡಿ ಸಿಲಿಂಡರ್ ಯೋಜನೆಯ ಅನುಕೂಲತೆ ಸಿಗುತ್ತಿತ್ತು. ಜೊತೆಗೆ ಸರ್ಕಾರದಿಂದ ಸಿಗುವ ಉಚಿತ ಪಡಿತರ ವಿತರಣೆಯು ಕೂಡ BPL ಮತ್ತು AAY ರೇಷನ್ ಕಾರ್ಡ್ ಹೊಂದಿದ ಕುಟುಂಬಗಳಿಗೆ ಮಾತ್ರ ಇತ್ತು. ಆದರೆ ಶ್ರೀಮಂತರು ಸಹ ಈ ಕಾಡುಗಳನ್ನು ಪಡೆದಿದ್ದಾರೆ. ಅಂತಹವರನ್ನು ಗುರುತಿಸಿ ಅವರ ಕಾರ್ಡುಗಳನ್ನು ರದ್ದುಗೊಳಿಸುವ ಯೋಚನೆ ಮಾಡಿರುವ ಸರ್ಕಾರ ಇದನ್ನು ಕಂಡು ಹಿಡಿಯಲು ಒಂದು ಹೊಸ ನಿಯಮವನ್ನು ಜಾರಿಗೆ ತಂದಿದೆ.
ಪಡಿತರ ಚೀಟಿಯಲ್ಲಿ ಇರುವ ಎಲ್ಲಾ ಸದಸ್ಯರು ಕೂಡ ಅವರ ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿ ಜೊತೆ ಲಿಂಕ್ ಮಾಡಿಕೊಳ್ಳಬೇಕು. ಇದರಿಂದ ಒಂದಕ್ಕಿಂತ ಹೆಚ್ಚು ಕಾರ್ಡುಗಳಲ್ಲಿ ಹೆಸರು ಹೊಂದಿರುವವರು ಮತ್ತು ಅನರ್ಹರಾಗಿದ್ದರು ಕೂಡ BPL ಮತ್ತು AAY ಕಾರ್ಡ್ ಹೊಂದಿರುವವರು, ಒಂದು ವೇಳೆ ವ್ಯಕ್ತಿ ಮೃತಪಟ್ಟಿದ್ದ ಪಕ್ಷದಲ್ಲಿ ಅವರ ಹೆಸರನ್ನು ತೆಗೆದು ಹಾಕಿಸದೆ ಇನ್ನು ಸಹ ಅವರ ಹೆಸರಿನಲ್ಲಿ ಉಚಿತ ಯೋಜನೆಗಳನ್ನು ಪಡೆಯುತ್ತಿರುವುದು ಎಲ್ಲವೂ ಬೆಳಕಿಗೆ ಬರುತ್ತದೆ.
ಈ ಕಾರಣಕ್ಕಾಗಿ ಶೀಘ್ರವಾಗಿಯೇ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬೇಕು ಎನ್ನುವ ನಿಯಮವನ್ನು ಸರ್ಕಾರ ಹೇರಿದೆ. ಈ ಹಿಂದೆಯೇ ಇದಕ್ಕೆ ಆದೇಶ ನೀಡಿತ್ತಾದರೂ ಕೊನೆ ದಿನಾಂಕ ನಿಗದಿ ಆಗಿರಲಿಲ್ಲ. ಈಗ ಜೂನ್ 30 ರ ಒಳಗೆ ಎಲ್ಲಾ ಪಡಿತರ ಚೀಟಿದಾರಲು ಕೂಡ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬೇಕು ಎಂದು ಹೇಳಿದೆ. ಇದು ಕರ್ನಾಟಕ ರಾಜ್ಯದ ಜನತೆಗೂ ಕೂಡ ಅಪ್ಲೈ ಆಗಲಿದೆ.
ಒಂದು ವೇಳೆ ನಿರ್ಲಕ್ಷ ತೋರಿದಲ್ಲಿ ಅಥವಾ ಪಡಿತರ ಚೀಟಿಯಲ್ಲಿರುವ ಸದಸ್ಯರ ಹೆಸರಲ್ಲಿ ಯಾರದ್ದಾದರೂ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಎಂದರೆ ಆ ಕಾರಾಡ್ ಗಳು ರದ್ದಾಗುತ್ತವೆ ಅಥವಾ ಆ ಹೆಸರು ಪಟ್ಟಿಯಿಂದ ಬಿಟ್ಟು ಹೋಗಬಹುದು ಮತ್ತು ಅವರು ಸರ್ಕಾರದ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಆದ್ದರಿಂದ ಶೀಘ್ರವೇ ಈ ಹೊಸ ನಿಯಮದಂತೆ ನಿಮ್ಮ ಆಧಾರ್ ಕಾರ್ಡ್ ಮೂಲಕ ರೇಷನ್ ಕಾರ್ಡನ್ನು ತಿದ್ದುಪಡಿ ಮಾಡಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಅವರಿಗೂ ಈ ಮಾಹಿತಿ ತಿಳಿಯುವಂತೆ ಮಾಡಿ.