Friday, April 18, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeUseful InformationHDFC ಬ್ಯಾಂಕ್ ನಾ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ 5 ವರ್ಷಕ್ಕೆ 30 ಲಕ್ಷ ಹಣ...

HDFC ಬ್ಯಾಂಕ್ ನಾ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ 5 ವರ್ಷಕ್ಕೆ 30 ಲಕ್ಷ ಹಣ ಪಡೆಯಬಹುದು.! ಹಣ ಉಳಿತಾಯ ಮಾಡುವವರಿಗೆ ಬೆಸ್ಟ್ ಯೋಜನೆ ಇದು.

 

ಈ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಇಂದು ಎಲ್ಲರಿಗೂ ಕೂಡ ಬದುಕಲು ಹಣವೇ ಮುಖ್ಯ. ಒಂದರ್ಥದಲ್ಲಿ ದಿನ ಆರಂಭ ಆಗುವುದೇ ಹಣದ ಮೂಲಕ ಎಂದರೂ ಅದು ತಪ್ಪಾಗುವುದಿಲ್ಲ. ಯಾಕೆಂದರೆ ಹಣವಿಲ್ಲದೆ ಇಂದು ಯಾವ ಕೆಲಸವೂ ಕೂಡ ನಡೆಯುತ್ತಿಲ್ಲ, ನಮಗೆ ಏನು ಕೂಡ ಸಿಗುವುದಿಲ್ಲ. ಆದ್ದರಿಂದ ಹಣವನ್ನು ಉಳಿಸುವುದು ಅಥವಾ ಆದಾಯವನ್ನು ಗಳಿಸುವುದರ ಹಿಂದೆಯೇ ಪ್ರತಿಯೊಬ್ಬರ ಜೀವನ ಸುತ್ತುತ್ತಿದೆ ಎಂದರೆ ಸುಳ್ಳಲ್ಲ.

ಹಣ ಗಳಿಸುವುದು ಮಾತ್ರವಲ್ಲದೆ ಅದನ್ನು ಉಳಿತಾಯ ಮಾಡುವುದು ಅಥವಾ ಅದರಿಂದ ಹೆಚ್ಚುವರಿ ಗಳಿಕೆ ಮಾಡುವುದು ಕೂಡ ಆದಾಯದ ಒಂದು ಮೂಲವೇ. ಅದಕ್ಕಾಗಿ ಜನ ಹಣ ಉಳಿದ ಮಾಡಲು ಬ್ಯಾಂಕ್ ಗಳು, ಅಂಚೆಕಚೇರಿಯ ಯೋಜನೆಗಳು, LIC ಯೋಜನೆಗಳ ಮೊರೆ ಹೋಗುತ್ತಾರೆ. ಇವುಗಳಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಸರ್ಕಾರವೇ ಗ್ಯಾರಂಟಿ ಆಗಿರುವುದರಿಂದ ಹಣಕಾಸಿನ ಮೇಲೆ ಯಾವುದೇ ಅಪಾಯ ಇರುವುದಿಲ್ಲ.

ಆದ್ದರಿಂದ ಜನ ತಮ್ಮ ಕೈಲಾದಷ್ಟು ಹಣವನ್ನು ಭವಿಷ್ಯದ ಉದ್ದೇಶಕ್ಕಾಗಿ ಅಥವಾ ಯಾವುದೋ ಕನಸನ್ನು ಸಾಕಾರ ಮಾಡಿಕೊಳ್ಳುವ ಸಲುವಾಗಿ ಇವುಗಳಲ್ಲಿ ಹಣ ಉಳಿಸುತ್ತಾ ಬರುತ್ತಾರೆ. ಇನ್ನೊಂದು ಮೂಲಕವಾಗಿ ಕೂಡ ಹೆಚ್ಚುವರಿ ಹಣವನ್ನು ಹೂಡಿಕೆ ಮಾಡಿ ಹೆಚ್ಚು ಆದಾಯ ಗಳಿಸಬಹುದು. ಇದರ ಬಗ್ಗೆ ಆಸಕ್ತಿ ಇರುವವರು ಶೇರ್ ಮಾರ್ಕೆಟ್ ಗಳು, ಸ್ಟಾಕ್ ಗಳು, ಮ್ಯೂಚುವಲ್ ಫಂಡ್ಗಳನ್ನು ಬಳಸಿಕೊಳ್ಳುತ್ತಾರೆ.

ಆದರೆ ಇಲ್ಲಿ ಹಣಕಾಸಿಗೆ ಯಾವುದೇ ಗ್ಯಾರಂಟಿ ಇರುವುದಿಲ್ಲ ಮತ್ತು ನಿಶ್ಚಿತ ಮೊತ್ತದ ಲಾಭವೇ ಬರುತ್ತದೆ ಎಂದು ಊಹೆ ಮಾಡಲು ಕೂಡ ಸಾಧ್ಯವಿಲ್ಲ. ಹಾಗಾಗಿ ರಿಸ್ಕ್ ತೆಗೆದುಕೊಳ್ಳಲು ಇಷ್ಟ ಇಲ್ಲದೆ ಇರುವವರು ಇಲ್ಲಿ ಹೂಡಿಕೆ ಮಾಡಲು ಹೋಗುವುದಿಲ್ಲ. ಬ್ಯಾಂಕ್ ಗಳಲ್ಲಿ ಇರುವ ಯೋಜನೆಗಳ ಮೂಲಕವೇ ಅಧಿಕಲಾಭ ಪಡೆಯಲು ಇಚ್ಚಿಸಿದರೆ HDFC ಬ್ಯಾಂಕಿನ ಎರಡು ಯೋಜನೆಗಳಿವೆ.

● HDFC ನಿವೃತ್ತಿ ಉಳಿತಾಯ ನಿಧಿ ಇಕ್ವಿಟಿ ಯೋಜನೆ:-
ಇದು HDFC ಬ್ಯಾಂಕ್ ನಲ್ಲಿ ಹೆಚ್ಚು ಲಾಭ ಕೊಡುವ ಒಂದು ಮ್ಯೂಚುವಲ್ ಫಂಡ್ ಯೋಜನೆ ಆಗಿದೆ. HDFC ಬ್ಯಾಂಕ್ ಇದೀಗ ಇಂತಹ ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಇದರಲ್ಲಿ ಹೂಡಿಕೆ ಮಾಡಿದ ಗ್ರಾಹಕರಿಗೆ ವರ್ಷಕ್ಕೆ 15% ಗಿಂತಲೂ ಹೆಚ್ಚಿನ ಲಾಭ ಸಿಗಲಿದೆ. ಈ ಯೋಜನೆಗಳಲ್ಲಿ ಐದು ವರ್ಷ ಉಳಿತಾಯ ಮಾಡಿದರು ಸಾಕು 15 ಲಕ್ಷದಿಂದ 30 ಲಕ್ಷದವರೆಗೆ ಲಾಭ ಪಡೆಯಬಹುದು.

ಕಡಿಮೆ ಸಮಯದಲ್ಲಿ ಅಧಿಕ ಲಾಭ ಗಳಿಸಬೇಕು ಎನ್ನುವ ಆಸಕ್ತಿ ಇರುವವರು ಈ HDFC ನಿವೃತ್ತಿ ಉಳಿತಾಯ ನಿಧಿ ಇಕ್ವಿಟಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ನೀವು ಹೂಡಿಕೆ ಮಾಡುವ ಹಣದ ಮೊತ್ತ ಹೆಚ್ಚಾಗುತ್ತಾ ಹೋದಂತೆ ಇನ್ನು ಹೆಚ್ಚಿನ ಲಾಭವನ್ನು ಕೂಡ ನೀವು ಗಳಿಸಬಹುದು.

● ಹಿರಿಯ ನಾಗರಿಕರ ಉಳಿತಾಯ ಯೋಜನೆ:-
ಹಿರಿಯ ನಾಗರಿಕರಿಗೆ ಅವರ ಜೀವನದ ಸಂಧ್ಯಾ ಕಾಲದಲ್ಲಿ ಜೀವನ ನಿರ್ವಹಣೆಗೆ ಮತ್ತು ವೈದ್ಯಕೀಯ ವೆಚ್ಚಗಳಿಗೆ ಸೇರಿದಂತೆ ಹಣಕಾಸಿನ ಅವಶ್ಯಕತೆ ಬಹಳ ಇರುತ್ತದೆ. ಹಾಗಾಗಿ ದುಡಿಯುವ ಸಮಯದಿಂದಲೇ ಇದರ ಬಗ್ಗೆ ಗಮನಹರಿಸಬೇಕು. ದುಡಿದ ಹಣದಲ್ಲಿ ಉಳಿತಾಯ ಮಾಡಿದ ಹಣವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಕೂಡ ಅವರ ಉಳಿತಾಯಕ್ಕೆ ಅನುಗುಣವಗಿ ಬಡ್ಡಿರೂಪದಲ್ಲಿ ಆದಾಯವನ್ನು ಪಡೆಯಬಹುದು.

ಅದು ಅವರ ತಿಂಗಳ ಖರ್ಚಿಗೆ ಸಹಾಯಕ್ಕೆ ಬರಲಿದೆ. ಪ್ರಸ್ತುತವಾಗಿ HDFC ಬ್ಯಾಂಕ್ ನ ಹಿರಿಯ ನಾಗರಿಕರ ಉಳಿತಾಯ ಯೋಜನೆ ಮೇಲೆ 8.7% ಬಡ್ಡಿ ದರದ ಲಾಭ ಇರುವುದರಿಂದ ಈ ಯೋಜನೆಯಲ್ಲಿ ಹಿರಿಯ ನಾಗರಿಕರು ಹೂಡಿಕೆ ಮಾಡಿ ಲಾಭ ಪಡೆಯಬಹುದು