ಭಾರತ ದೇಶದಾದ್ಯಂತ ಅನೇಕ ದೇವಾಲಯಗಳು ಇವೆ. ಅದರಲ್ಲೂ ದಕ್ಷಿಣ ಆಗದಲ್ಲಂತೂ ಇವುಗಳ ಸಂಖ್ಯೆ ಇನ್ನೂ ಅಧಿಕ. ಇಲ್ಲಿ ಒಂದೊಂದು ದೇವಸ್ಥಾನದಲ್ಲಿ ನೆಲೆಸಿರುವ ಒಂದೊಂದು ತಾಯಿಯದು ವಿಶೇಷ ಶಕ್ತಿ ಹಾಗೂ ಒಂದೊಂದು ದೇವಸ್ಥಾನದ ನಿರ್ಮಾಣದ ಬಗ್ಗೆಯೂ ಕೂಡ ಒಂದೊಂದು ದಂತ ಕಥೆ ಇದೆ. ಇದೇ ರೀತಿಯ ಒಂದು ಪುರಾತನ ಪ್ರಸಿದ್ಧವಾದ ಭದ್ರಕಾಳಿ ಅಮ್ಮನವರ ದೇವಾಲಯವು ಪಕ್ಕದ ರಾಜ್ಯವಾದ ತೆಲಂಗಾಣದ ವಾರಂಗಲ್ ಸಮೀಪದಲ್ಲಿ ಇದೆ.
ವಾರಂಗಲ್ ನಗರದಿಂದ ಈ ದೇವಸ್ಥಾನಕ್ಕೆ 10 ಕಿಲೋಮೀಟರ್ ಆಗುತ್ತದೆ. ಇಲ್ಲಿ ಸುಮಾರು 7,000 ವರ್ಷಗಳ ಹಿಂದೆ ನಿರ್ಮಿತವಾದ ಭದ್ರಕಾಳಿ ಅಮ್ಮನವರ ದೇವಾಲಯ ಇದೆ. ಇಲ್ಲಿ ನಡೆಯುವ ಒಂದು ಚಮತ್ಕಾರವನ್ನು ಪ್ರತಿಯೊಬ್ಬರೂ ಕೂಡ ಕಣ್ಣಾರೆ ನೋಡಬಹುದು. ಈ ವಿಶೇಷತೆಯಿಂದಲೇ ಪ್ರತಿದಿನವೂ ಕೂಡ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಇಲ್ಲಿ ಭದ್ರಕಾಳಿ ಅಮ್ಮನವರ 10 ಅಡಿ ಎತ್ತರದ ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾದ ವಿಗ್ರಹ ಇದೆ. ಈ ವಿಗ್ರಹಕ್ಕೆ ಪ್ರತಿದಿನವೂ ಕೂಡ ವಿವಿಧ ರೀತಿಯ ಅಭಿಷೇಕ ನಡೆಯುತ್ತದೆ. ಈ ರೀತಿ ಅಭಿಷೇಕ ಮಾಡುವಾಗ ಒಂದು ಅಚ್ಚರಿಯ ಘಟನೆ ನಡೆಯುತ್ತದೆ. ಅದೇನೆಂದರೆ, ವಿಗ್ರಹಕ್ಕೆ ಅಭಿಷೇಕ ಮಾಡುವಾಗ ಅಮ್ಮನವರು ಕಣ್ಣುಮುಚ್ಚುತ್ತಾರೆ, ಭಾರತದಲ್ಲಿರುವ ಯಾವ ದೇವಾಲಯದಲ್ಲೂ ಕೂಡ ಇಂತಹದೊಂದು ವಿಸ್ಮಯವನ್ನು ಕಾಣಲು ಸಾಧ್ಯವಿಲ್ಲ.
ಈ ವಿಗ್ರಹವು ಭಾರತದಲ್ಲಿರುವ ಅತ್ಯಂತ ಪುರಾತನವಾದ ಭದ್ರಕಾಳಿ ಅಮ್ಮನವರ ವಿಗ್ರಹ. ಮತ್ತು ಈ ಚಮತ್ಕಾರವು ಇಂದಿಗೂ ಕೂಡ ಪ್ರತಿನಿತ್ಯವೂ ನಡೆಯುತ್ತಿರುವ ಒಂದು ವಿಸ್ಮಯಕಾರಿ ಸಂಗತಿ ಆಗಿದೆ. ಸುಮಾರು 2000 ವರ್ಷಗಳಿಂದಲೂ ಕೂಡ ಇದೇ ರೀತಿ ನಡೆದುಕೊಂಡು ಬಂದಿದೆ ಎನ್ನುವ ಮಾತಿದೆ. ಸಾಕ್ಷಾತ್ ಭದ್ರಕಾಳಿ ಅಮ್ಮನವರೇ ಈ ವಿಗ್ರಹದ ಒಳಗೆ ನೆಲೆಸಿದ್ದಾರೆ ಎನ್ನುವ ನಂಬಿಕೆಗಳು ಕೂಡ ಭಕ್ತರ ಮನದಲ್ಲಿ ಮನೆ ಮಾಡಿದೆ.
ಇದಕ್ಕೆ ಸಾಕ್ಷಿಯಾಗಿ ಇತಿಹಾಸದ ಕೆಲ ಘಟನೆಗಳು ಕೂಡ ಇವೆ ಅದೇನೆಂದರೆ, ಚಾಲುಕ್ಯರ ದೊರೆ ಇಮ್ಮಡಿ ಪುಲಕೇಶಿಯು ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿ, ಭದ್ರಕಾಳಿ ಅಮ್ಮನವರ ಮಹಾನ್ ಭಕ್ತರಾಗಿರುತ್ತಾರೆ. ಆದರೆ 1312 ಇಸವಿಯಲ್ಲಿ ದೆಹಲಿಯ ದೊರೆ ಅಲ್ಲಾವುದ್ದೀನ್ ಖಿಲ್ಜಿಯು ದೇವಸ್ಥಾನದ ಮೇಲೆ ಕಣ್ಣಿಟ್ಟು ದೇವಸ್ಥಾನವನ್ನು ದ್ವಂಸ ಮಾಡಲು 70,000 ಕಾಳುಗಳನ್ನು ಕಳುಹಿಸುತ್ತಾನೆ.
ಆದರೆ ಆ 70,000 ಆಳುಗಳು ಕೂಡ ದೇವಸ್ಥಾನವನ್ನು ಪ್ರವೇಶ ಕೂಡ ಮಾಡಲಾಗದೆ ಅಲ್ಲಿಯೇ ಕುಸಿದು ಬಿದ್ದಿದ್ದರು ಮತ್ತು ಸ್ವತಃ ಅಲ್ಲಾವುದ್ದೀನ್ ಖಿಲ್ಜಿಯೇ ದೇವಸ್ಥಾನವನ್ನು ಕೆಡವಲು ಹೋದಾಗ ಸಾಕ್ಷಾತ್ ಭಧ್ರಕಾಳಿ ಅಮ್ಮನವರು ಪ್ರತ್ಯಕ್ಷವಾಗಿ ಆತನನ್ನು ಹಿಮ್ಮೆಟ್ಟಿಸಿದ್ದರು ಎನ್ನುವ ಕಥೆಗಳು ಇವೆ. ಮರುದಿನವೇ ಆತ ತನ್ನ ದಂಡನಾಯಕನಾದ ಮಲ್ಲಿಕಾಫರ್ ಇಂದ ಹತನಾದ ಎನ್ನುವ ಉಲ್ಲೇಖ ಇದೆ.
ದೇವಸ್ಥಾನದ ಕುರಿತ ಇನ್ನೊಂದು ಕುತೂಹಲಕಾರಿ ವಿಷಯ ಏನೆಂದರೆ ದೇವಸ್ಥಾನದ ಒಳಗೆ ಒಂದು ಸುರಂಗ ಮಾರ್ಗ ಇದೆ. ಈ ಸುರಂಗ ಮಾರ್ಗವು ದೇವಲೋಕವನ್ನು ತಲುಪುತ್ತದೆ ಎಂದು ಹೇಳಲಾಗುತ್ತದೆ. ಹಿಂದೆ ಭದ್ರಕಾಳಿ ಅಮ್ಮನವರು ದೇವಲೋಕದಿಂದ ಇದೇ ಮಾರ್ಗವಾಗಿ ಸಂಚಾರ ಮಾಡಿ ದೇವಸ್ಥಾನಕ್ಕೆ ಬರುತ್ತಿದ್ದರು ಎನ್ನುವುದನ್ನು ಭಕ್ತಾದಿಗಳು ಮಾತನಾಡುತ್ತಾರೆ. ಆದರೆ ಇಂದು ಈ ಸುರಂಗ ಮಾರ್ಗವು ಸಂಪೂರ್ಣವಾಗಿ ಮುಚ್ಚಿ ಹೋಗಿದೆ.
ಭದ್ರಕಾಳಿ ಅಮ್ಮನವರು ಇಂದಿಗೂ ಕೂಡ ವಿಗ್ರಹ ರೂಪದಲ್ಲಿ ನೆಲೆಸಿ ಬಂದ ಭಕ್ತಾದಿಗಳ ಕಷ್ಟವನ್ನು ಪರಿಹರಿಸುವ ಜಗನ್ಮಾತೆಯಾಗಿ ತನ್ನ ಭಕ್ತಾದಿಗಳನ್ನು ಕಾಯುತ್ತಿದ್ದಾರೆ. ಈ ದೇವಸ್ಥಾನದ ಕುರಿತ ಕಥೆಗಳನ್ನು ಕೇಳಿದರೆ ಜೀವನದಲ್ಲಿ ಒಮ್ಮೆ ಆದರೂ ದೇವಸ್ಥಾನಕ್ಕೆ ಹೋಗಬೇಕು ಎಂದು ಅನಿಸಿದೇ ಇರಲಾರದು. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.