Home Devotional ಈ ದೇವಸ್ಥಾನದಲ್ಲಿ ಮಕ್ಕಳ ನಾಲಿಗೆ ಮೇಲೆ ಓಂಕಾರ ಬರೆಯುತ್ತಾರೆ. ಹೀಗೆ ಬರೆದ ಐದೇ ನಿಮಿಷಗಳಲ್ಲಿ ಮಕ್ಕಳು ಬುದ್ಧಿವಂತರಾಗುತ್ತಾರೆ.!

ಈ ದೇವಸ್ಥಾನದಲ್ಲಿ ಮಕ್ಕಳ ನಾಲಿಗೆ ಮೇಲೆ ಓಂಕಾರ ಬರೆಯುತ್ತಾರೆ. ಹೀಗೆ ಬರೆದ ಐದೇ ನಿಮಿಷಗಳಲ್ಲಿ ಮಕ್ಕಳು ಬುದ್ಧಿವಂತರಾಗುತ್ತಾರೆ.!

0
ಈ ದೇವಸ್ಥಾನದಲ್ಲಿ ಮಕ್ಕಳ ನಾಲಿಗೆ ಮೇಲೆ ಓಂಕಾರ ಬರೆಯುತ್ತಾರೆ. ಹೀಗೆ ಬರೆದ ಐದೇ ನಿಮಿಷಗಳಲ್ಲಿ ಮಕ್ಕಳು ಬುದ್ಧಿವಂತರಾಗುತ್ತಾರೆ.!

ನಮ್ಮ ಕರ್ನಾಟಕ ರಾಜ್ಯದಲ್ಲಿರುವ ಪ್ರತಿಯೊಂದು ದೇವಸ್ಥಾನಗಳು ಕೂಡ ಒಂದೊಂದು ರೀತಿಯಲ್ಲಿ ಪ್ರಖ್ಯಾತಿಗೊಂಡಿದೆ. ಮನುಷ್ಯರಿಂದ ಪರಿಹರಿಸಲಾಗದ ಕಷ್ಟಗಳು ಬಂದಾಗ ನಾವು ದೇವರುಗಳ ಮೋರೆ ಹೋಗುತ್ತೇವೆ. ನಮ್ಮ ಹಿಂದೂ ಧರ್ಮದ ಪ್ರಕಾರ ಹಾಗೂ ನಾವು ಪುರಾಣಗಳಲ್ಲಿ ಕೇಳಿರುವ ಪ್ರಕಾರ ನಮ್ಮಲ್ಲಿ ಒಂದೊಂದು ವಿಷಯಕ್ಕೂ ಕೂಡ ಒಂದೊಂದು ದೇವರುಗಳು ಅಧಿ ದೇವತೆಗಳಾಗಿರುತ್ತಾರೆ.

ಹಣಕ್ಕೆ ಲಕ್ಷ್ಮಿ , ಶಕ್ತಿಗೆ ದುರ್ಗೆ, ಹಾಗೆಯೇ ವಿದ್ಯೆಗೆ ಶಾರದ ಮಾತೆಯನ್ನು ಅಧಿದೇವತೆಯೆಂದು ನಾವು ನಂಬಿದ್ದೇವೆ. ಸರಸ್ವತಿ ಪೂಜೆಯನ್ನು ಮಾಡುವುದರಿಂದ ಆರಾಧಿಸುವುದರಿಂದ ತಾಯಿ ಶಾರದೆ ಮಾತೆಯ ಅನುಗ್ರಹ ದೊರೆತು ಅವರು ಬುದ್ಧಿವಂತರಾಗುತ್ತಾರೆ ಎನ್ನುವುದು ನಮ್ಮ ನಂಬಿಕೆ. ಹಾಗೆ ಕರ್ನಾಟಕದಲ್ಲಿರುವ ಈ ಶಾರದಮಾತೆಯ ದೇವಸ್ಥಾನಕ್ಕೆ ಹೋಗಿ ನಾಲಿಗೆ ಮೇಲೆ ಓಂಕಾರ ಬರೆಸಿದರೆ ಸಾಕು ಎಂತಹ ದಡ್ಡ ಮಕ್ಕಳಿದ್ದರೂ ಕೂಡ ಬುದ್ಧಿವಂತರಾಗುತ್ತಾರೆ.

ಈ ರೀತಿಯ ಅನೇಕ ಪವಾಡಗಳು ಅನೇಕ ದೇವಾಲಯಗಳಲ್ಲಿ ನಡೆಯುತ್ತವೆ. ಪ್ರತಿಯೊಬ್ಬರೂ ಕೂಡ ತಮ್ಮ ಮಕ್ಕಳ ವಿದ್ಯಾಭ್ಯಾಸ ಆರಂಭಿಸುವ ಮುನ್ನ ತಾಯಿ ಶಾರದೆಯ ಸನ್ನಿಧಿಗೆ ಹೋಗಿ ಆರಂಭಿಸುವುದು ರೂಢಿ ಆಗಿದೆ. ಹೆಚ್ಚಿನ ಜನರು ಶೃಂಗೇರಿಗೆ ತೆರಳಿ ಅಲ್ಲಿ ಅಕ್ಷರಭ್ಯಾಸ ಮಾಡಿಸುತ್ತಾರೆ.

ಹೀಗೆ ಆರಂಭ ಮಾಡುವುದರಿಂದ ಆ ಮಕ್ಕಳ ವಿದ್ಯಾಭ್ಯಾಸಕ್ಕೆ ಏನೂ ಅಡೆ ತಡೆಗಳು ಬರುವುದಿಲ್ಲ ಅವರು ಉನ್ನತ ಶಿಕ್ಷಣ ಪಡೆದು ಜೀವನದಲ್ಲಿ ಒಳ್ಳೆ ಸ್ಥಾನಕ್ಕೆ ಏರುತ್ತಾರೆ ಎನ್ನುವ ನಂಬಿಕೆ. ಅದೇ ರೀತಿ ಕರ್ನಾಟಕದಲ್ಲಿ ಮತ್ತೊಂದು ಶಾರದಾ ದೇವಿಯ ದೇವಸ್ಥಾನ ಇದೆ ಈ ದೇವಸ್ಥಾನದಲ್ಲಿ ವಿದ್ಯಾಭ್ಯಾಸದ ಜೊತೆಗೆ ಅವರು ಬುದ್ಧಿವಂತರಾಗಲಿ ಎನ್ನುವ ಕಾರಣಕ್ಕೆ ನಾಲಿಗೆ ಮೇಲೆ ಓಂಕಾರ ಬರೆಸುತ್ತಾರೆ.

ಕವಿರತ್ನ ಕಾಳಿದಾಸನ ಕಥೆ ಕೇಳಿದ ನಮಗೆ ಪ್ರಪಂಚಜ್ಞಾನ ಇಲ್ಲದ ಕಾಳಿದಾಸನು ಕಾಳಿ ಮಾತೆಯ ಅನುಗ್ರಹದಿಂದ ನಾಲಿಗೆ ಮೇಲೆ ಓಂಕಾರ ಬಳಸಿಕೊಂಡ ನಂತರ ಮಹಾವಿದ್ವಾಂಸನಾಗಿ ಕವಿರತ್ನನಾದ ಎನ್ನುವುದು ಗೊತ್ತಿದೆ. ಇದೇ ರೀತಿಯ ಪವಾಡ ಈ ದೇವಾಲಯದಲ್ಲೂ ಜರುಗುತ್ತದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅಮೃತಪುರ ಎನ್ನುವಲ್ಲಿ ಈ ದೇವಾಲಯ ಇದೆ. ಈ ಸ್ಥಳದ ವಿಶೇಷ ಏನು ಎಂದರೆ ಶಾರದಮಾತೆಯ ಜೊತೆ ಶಿವನು ಕೂಡ ಈ ದೇವಾಲಯದಲ್ಲಿ ನೆಲೆಸಿದ್ದಾರೆ. ಇಡೀ ಭಾರತ ದೇಶದಲ್ಲಿಯೇ ಅಗ್ನಿ ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾದ ಶಿವನ ವಿಗ್ರಹವು ಈ ದೇವಾಲಯದಲ್ಲಿ ಮಾತ್ರ ಇದೆ. ಇದನ್ನು ನೇಪಾಳದ ಗಂಡತ್ತಿ ನದಿಯಿಂದ ತಂದು ನಿರ್ಮಿಸಿದ್ದು ಎನ್ನುವ ಪ್ರಸಿದ್ಧಿ ಇದೆ.

1196 ನೇ ಇಸವಿಯಲ್ಲಿ ಹೊಯ್ಸಳ ಸಾಮ್ರಾಜ್ಯ ಕರ್ನಾಟಕವನ್ನು ಆಳುತ್ತಿದ್ದ ಸಮಯದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎನ್ನುವುದನ್ನು ಇತಿಹಾಸ ಹೇಳುತ್ತದೆ. ಹೊಯ್ಸಳರ ವಾಸ್ತುಶಿಲ್ಪದಂತೆ ದೇವಾಲಯ ನಿರ್ಮಾಣವಾಗಿತ್ತು ಒಳಾಂಗಣದಲ್ಲಿ ನಿರ್ಮಾಣವಾಗಿರುವ 56 ಕಂಬಗಳು ಇಂದಿಗೂ ಸಹ ಪಳಪಳ ಹೊಳೆಯುತ್ತಿವೆ, ಜೊತೆಗೆ ನಕ್ಷತ್ರದ ಆಕಾರದಲ್ಲಿ ದೇವಸ್ಥಾನವು ಇದ್ದು ಇದು ಸ್ವಾತಿ ನಕ್ಷತ್ರವನ್ನು ಹೋಲುತ್ತದೆ ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.

ದೇವಸ್ಥಾನದಲ್ಲಿರುವ ಶಾರದಾ ದೇವಿಯ ಅನುಗ್ರಹದ ಬಗ್ಗೆ ಕೇಳಿ ರಾಜ್ಯದ ಮೂಲೆ ಮೂಲೆಗಳಿಂದಲೂ ಕೂಡ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಪ್ರತಿ ಶನಿವಾರ ಮತ್ತು ಭಾನುವಾರ ದೇವಸ್ಥಾನವು ಸಾವಿರಾರು ಭಕ್ತಾದಿಗಳಿಂದ ತುಂಬಿರುತ್ತದೆ. ಪ್ರತಿದಿನವೂ ಕೂಡ ಬೆಳಿಗ್ಗೆ 6 ರಿಂದ ಸಂಜೆ 6 ರವರಿಗೆ ದೇವಸ್ಥಾನ ತೆರೆದಿರುತ್ತದೆ. ಇಂತಹ ಪುರಾಣ ಪ್ರಸಿದ್ಧವಾದ ದೇವಸ್ಥಾನಕ್ಕೆ ನೀವು ಕೂಡ ಒಮ್ಮೆ ಭೇಟಿ ಕೊಟ್ಟು ತಾಯಿ ಶಾರದ ದೇವಿ ಹಾಗೂ ಶಿವನ ಕೃಪಾಕಟಾಕ್ಷಕ್ಕೆ ಒಳಗಾಗಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

 

LEAVE A REPLY

Please enter your comment!
Please enter your name here