ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ.!

 

ಕಾಂಗ್ರೆಸ್ ಪಕ್ಷವು ಚುನಾವಣೆಗೂ ಮುಂಚೆ ರಾಜ್ಯದ ಜನತೆಗೆ ಭರವಸೆ ಕೊಟ್ಟಿದ್ದ ಗ್ಯಾರೆಂಟಿ ಕಾರ್ಡ್ ಯೋಜನೆಗಳನ್ನು, ಗೆದ್ದು ಸರ್ಕಾರ ಸ್ಥಾಪಿಸಿದ ಬಳಿಕ ಕೊಟ್ಟ ಮಾತಿಗೆ ತಪ್ಪದೆ ಜಾರಿಗೆ ತರುತ್ತಿದೆ. ಪ್ರತಿಯೊಂದು ಯೋಜನೆಗೂ ಕೂಡ ಶರತ್ತು ಹಾಗೂ ನಿಬಂಧನೆಗಳ ಜೊತೆ ಮಾರ್ಗಸೂಚಿಯನ್ನು ರೂಪಿಸಿ ಆದೇಶ ಪತ್ರವನ್ನು ಹೊರಡಿಸುತ್ತಿದೆ.

ಅದರ ಸಂಬಂಧ ಗೃಹಜ್ಯೋತಿ ಯೋಜನೆಯು ಕಾಂಗ್ರೆಸ್ ಪಕ್ಷ ಘೋಷಿಸಿದ ಮೊದಲ ಗ್ಯಾರಂಟಿ ಕಾರ್ಡ್ ಯೋಜನೆ ಆಗಿದ್ದು, ಈ ಯೋಜನೆಯಡಿ ಪ್ರತಿ ಕುಟುಂಬಕ್ಕೂ ಕೂಡ 200 ಯೂನಿಟ್ ವಿದ್ಯುತ್ ಅನ್ನು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಉಚಿತವಾಗಿ ಕೊಡುತ್ತೇವೆ ಎಂದು ಗ್ಯಾರಂಟಿ ಕಾರ್ಡ್ ಗಳಲ್ಲಿ ಸಹಿ ಮಾಡಿ ಪಕ್ಷದ ವರಿಷ್ಠರುಗಳು ನೀಡಿದ್ದರು. ಅಂತೆಯೇ ಜುಲೈ ತಿಂಗಳಿನಿಂದಲೇ ರಾಜ್ಯಾದ್ಯಂತ ಈ ಯೋಜನೆ ಜಾರಿಗೆ ಬರಲಿದೆ. ಇದಕ್ಕೆ ಸಂಬಂಧಪಟ್ಟ ಹಾಗೆ ಮುಖ್ಯಮಂತ್ರಿಗಳ ಆದೇಶ ಪತ್ರದಲ್ಲಿರುವ ಪ್ರಮುಖ ಅಂಶಗಳು ಈ ರೀತಿ ಇವೆ.

● ಈ ಯೋಜನೆಯನ್ನು ಜುಲೈ ವಿದ್ಯುತ್ ಬಳಕೆಗೆ ಆಗಸ್ಟ್ ನಲ್ಲಿ ನೀಡುವ ಬಿಲ್ ಗೆ ಅನ್ವಯವಾಗುವಂತೆ ಶರತ್ತುಗಳೊಂದಿಗೆ ಜಾರಿಗೆ ತರಲು ನಿರ್ಧರಿಸಲಾಗಿದೆ.
● ಈ ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ. ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ.
● ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದರೆ ಒಂದು ಮೀಟರ್ ಗೆ ಮಾತ್ರ ಈ ಯೋಜನೆ ಐಡಿಯ ಸೌಲಭ್ಯಕ್ಕೆ ಮಾತ್ರ ಅರ್ಹರಾಗುವರು.
● ಸರಾಸರಿ ಯೂನಿಟ್ ಜೊತೆಗೆ 10%ರ ಮಿತಿ. ಮಿತಿ ದಾಟಿದ ಪ್ರಮಾಣದಷ್ಟು ಬಿಲ್ ಕಟ್ಟಬೇಕಾಗುತ್ತದೆ, 200 ಯೂನಿಟ್ ವಿದ್ಯುತ್ ಗಿಂತ ಹೆಚ್ಚು ಬಳಕೆ ಮಾಡಿದ ಗ್ರಾಹಕರು ಪೂರ್ಣ ಬಿಲ್ ಮೊತ್ತವನ್ನು ಕಟ್ಟಬೇಕಾಗುತ್ತದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಏನೆಂದರೆ ಒಂದು ವರ್ಷದಿಂದ ಕುಟುಂಬಗಳು ಬಳಸಿರುವ ವಿದ್ಯುತ್ ನ ಸರಾಸರಿ ಮೇಲೆ 10% ಮಾತ್ರ ಹೆಚ್ಚು ವಿದ್ಯುತ್ ಬಳಕೆಗೆ ಅವಕಾಶ ನೀಡಲಾಗಿದೆ. ಹೆಚ್ಚು ವಿದ್ಯುತ್ ಪೋಲು ಮಾಡುವುದನ್ನು ತಡೆಗಟ್ಟಲು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಇದರ ಜೊತೆಗೆ ಇಂದಿನ ಸಚಿವರಾದ ಕೆಜೆ ಜಾರ್ಜ್ ಅವರು ಒಂದು R.R ಸಂಖ್ಯೆಗೆ ಮಾತ್ರ ಉಚಿತ ವಿದ್ಯುತ್ ಇರುತ್ತದೆ ರಾಜ್ಯದಲ್ಲಿ 2.15 ಕೋಟಿ R.Rಸಂಖ್ಯೆಗಳು ಇವೆ.

ಈ ಯೋಜನೆಗೆ ಅಂದಾಜು 13,000 ಕೋಟಿ ರೂ ವೆಚ್ಚವಾಗಬಹುದು ಆದರೂ ಕೂಡ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಮತ್ತೊಂದು ಸುದ್ದಿ ಪ್ರಸಾರವಾಗುತ್ತಿದೆ. ಅದೇನೆಂದರೆ ಫಲಾನುಭವಿಗಳು ತಮ್ಮ ಕಸ್ಟಮರ್ ಐಡಿ ಮತ್ತು ಅಕೌಂಟ್ ಐಡಿಯನ್ನು ಆಧಾರ್ ಕಾರ್ಡ್ ಲಿಂಕ್ ಮಾಡಬೇಕು. ಅದರ ಮೂಲಕ ಫಲಾನುಭವಿಗಳನ್ನು ಸರ್ಕಾರ ಗುರುತಿಸುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆಯಲು ಇಚ್ಛಿಸುವ ಗ್ರಾಹಕರುಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು. ಅರ್ಜಿ ಸಲ್ಲಿಸಿದವರು ಮಾತ್ರ ಯೋಜನ ವ್ಯಾಪ್ತಿಗೆ ಒಳಪಡುತ್ತಾರೆ ಎನ್ನುವ ಸುದ್ದಿಗಳು ಕೂಡ ಹರಿದಾಡುತ್ತಿವೆ.

ಸರ್ಕಾರವು ಇದಕ್ಕೆ ವೆಬ್ಸೈಟ್ ಸಿದ್ಧಪಡಿಸಿರುವ ಬಗ್ಗೆ ಆಗಲಿ ಅಥವಾ ಈ ರೀತಿ ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಾಯಿಸುವ ಬಗ್ಗೆ ಆಗಲಿ ಸ್ಪಷ್ಟವಾದ ಆದೇಶ ಹೊರಡಿಸಿಲ್ಲ. ಆದರೆ ಈ ಯೋಜನೆಯನ್ನು ಗ್ಯಾರೆಂಟಿಯಾಗಿ ಜಾರಿಗೆ ತರುವುದು ಗ್ಯಾರಂಟಿಯಾಗಿದ್ದು, ಜುಲೈ ತಿಂಗಳಿನಿಂದಲೇ ಇದನ್ನು ಅನುಷ್ಠಾನಕ್ಕೆ ತರಲು ಸರ್ಕಾರವು ಇದಕ್ಕೆ ಪೂರಕವಾದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದೆ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

Leave a Comment

WhatsApp Group Join Now
Telegram Group Join Now