ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಮಾತು ಇರುವಂತೆ ಈಗಿನ ಕಾಲದ ಬೆಲೆಗಳಲ್ಲಿ ಮನೆ ಕಟ್ಟುವುದು ಅಷ್ಟು ಸುಲಭದ ಮಾತಲ್ಲ. ಆದರೆ ಮನೆ ಅಥವಾ ವಸತಿ ಎನ್ನುವುದು ಮನುಷ್ಯನೊಬ್ಬನ ಮೂಲಭೂತ ಅವಶ್ಯಕತೆ. ಈ ರೀತಿ ಸ್ವಂತ ಮನೆ ಇಲ್ಲದೆ ಹೋದರೆ ಬಾಡಿಗೆ ಮನೆಗಳಲ್ಲಿ ವಾಸಿಸಲು ಪ್ರತಿ ತಿಂಗಳು ಕೂಡ ಸಂಬಳದ ಭಾಗದಲ್ಲಿ ಅತಿ ದೊಡ್ಡ ಮೊತ್ತವನ್ನು ಅದಕ್ಕಾಗಿ ಮೀಸಲಿಡಬೇಕು.
ಹಾಗಾಗಿ ಪ್ರತಿಯೊಬ್ಬರೂ ಸಹ ಜೀವನದಲ್ಲಿ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಅಥವಾ ಕನಸಿನ ಮನೆಯನ್ನು ಕಟ್ಟುವ ಆಸೆಯನ್ನು ಹೊಂದಿರುತ್ತಾರೆ. ಕೆಲವರಿಗೆ ಇರುವ ಹಣದಲ್ಲಿಯೇ ಅಚ್ಚುಕಟ್ಟಾಗಿ ವಾಸಿಸಲು ಯೋಗ್ಯವಾದ ಎಲ್ಲ ಸೌಕರ್ಯಗಳನ್ನು ಒಳಗೊಂಡ ಮನೆ ಕಟ್ಟಿಕೊಂಡರೆ ಸಾಕು ಎನಿಸಿದರೆ ಕೆಲವರಿಗೆ ಇತರರಿಗಿಂತ ಭಿನ್ನವಾಗಿ ಮನೆ ಕಟ್ಟಿ ಹೊಗಳಿಸಿಕೊಳ್ಳಬೇಕು ಎನ್ನುವ ಆಸೆ.
ಈಗಿನ ಕಾಲದಲ್ಲಿ ಸಿಮೆಂಟು, ಜಲ್ಲಿಕಲ್ಲು, ಕಬ್ಬಿಣ ಸಮೇತ ಮನೆಗೆ ಬೇಕಾದ ಎಲ್ಲಾ ಕಚ್ಚಾ ವಸ್ತುಗಳ ಬೆಲೆಯು ಕೂಡ ಏರಿಕೆ ಆಗಿದೆ. ಹಾಗಾಗಿ ಬಡವರು ಸಾಧ್ಯವಾದಷ್ಟು ಕಡಿಮೆ ಖರ್ಚಿನಲ್ಲಿ ಮನೆಗಳನ್ನು ಕಟ್ಟಿಸಿಕೊಳ್ಳಲು ಇಚ್ಛೆ ಪಡುತ್ತಾರೆ ಅಥವಾ ಮಧ್ಯಮ ವರ್ಗದವರು ತಾವು ಮನೆ ಕಟ್ಟಿಕೊಂಡು ಅದರ ಜೊತೆಗೆ ತಮ್ಮ ಮನೆ ಮೇಲೆ ಕಡಿಮೆ ವೆಚ್ಚದಲ್ಲಿ ಮನೆ ಕಟ್ಟಿಸಿ ಇತರರಿಗೆ ಬಾಡಿಗೆ ಕೊಟ್ಟು ಹಣ ಪಡೆಯುವ ಉದ್ದೇಶ ಹೊಂದಿರುತ್ತಾರೆ.
ಈಗಾಗಲೇ ಗ್ರೌಂಡ್ ಫ್ಲೋರಲ್ಲಿ ಮನೆ ಹೊಂದಿದ್ದು ಅದರ ಮೇಲೆ ಮನೆ ಕಟ್ಟಿ ಬಾಡಿಗೆ ಕೊಡಬೇಕು ಎನ್ನುವ ಯೋಚನೆ ಹೊಂದಿದ್ದರೆ ಅಥವಾ ನಿಮ್ಮ ಮನೆಯಲ್ಲಿಯೇ ಸದಸ್ಯರು ಹೆಚ್ಚಾದಾಗ ಮೇಲೆ ಮತ್ತೊಂದು ಕುಟುಂಬ ವಾಸಿಸಲು ಅನುಕೂಲವಾಗುತ್ತದೆ ಎನ್ನುವ ಮುಂದಾಲೋಚನೆ ಇದ್ದರೆ ಕಡಿಮೆ ಹಣ ಉಪಯೋಗಿಸಿ ಮನೆಯನ್ನು ನಿರ್ಮಿಸಿ.
ಒಂದು ಸಿಂಪಲ್ ಆದ ಅಡುಗೆ ಮನೆ ಹಾಲ್ ಮತ್ತು ಬೆಡ್ರೂಮ್ ಹಾಗೂ ಬಾತ್ರೂಮ್ ಒಳಗೊಂಡ ಚಿಕ್ಕದಾದ ಚೊಕ್ಕದಾದ ಮನೆಯನ್ನು ಮನೆಯ ಮೇಲೆ ನಿರ್ಮಾಣ ಮಾಡಬಹುದು. ಅದರಲ್ಲಿ ಗಂಡ ಹೆಂಡತಿ ಇಬ್ಬರು ಮಕ್ಕಳು ಅನುಕೂಲತೆಯಿಂದ ವಾಸಿಸಬಹುದು ಅಥವಾ ಬಾಡಿಗೆ ಕೊಟ್ಟರೂ ಕೂಡ ಕನಿಷ್ಠ 4,000 – 5,000 ಬಾಡಿಗೆ ಸಿಗುತ್ತದೆ. ಈ ಮನೆ ನಿರ್ಮಾಣ ಮಾಡಬೇಕು ಎಂದರೆ ಹೆಚ್ಚು ಖರ್ಚಾಗುತ್ತದೆ ಎನ್ನುವ ಚಿಂತೆಯು ಬೇಡ.
ಕಡಿಮೆ ಖರ್ಚಿನಲ್ಲಿ ಮನೆ ಆದರೆ ಸಾಕು ಎಂದುಕೊಳ್ಳುವವರು ಸಿಂಪಲ್ ಟ್ರಿಕ್ ಗಳನ್ನು ಉಪಯೋಗಿಸಿ ಪಿರ್ಮಾಣ ಮಾಡಬಹುದು. ಮನೆಗೆ ಕಡಿಮೆ ಬೆಲೆಯ ಟೈಲ್ಸ್ ಗಳನ್ನು ಉಪಯೋಗಿಸಿದರೆ ಖರ್ಚು ಕಡಿಮೆ ಆಗುತ್ತದೆ. ಕಿಚನ್ ಮತ್ತು ವಾಶ್ ರೂಂ ಗಳ ಗೋಡೆಗಳನ್ನು ಕೂಡ ಟೈಲ್ಸ್ ಇಂದಲೇ ನಿರ್ಮಾಣ ಮಾಡಿದರೆ ಆಗಲು ಸಹ ಹೆಚ್ಚು ಖರ್ಚಾಗುವುದು ತಪ್ಪುತ್ತದೆ. ಜೊತೆಗೆ ಮನೆಗೆ ಬಳಸುವ ಕಿಟಕಿಗಳನ್ನು ಮರದ ಕಿಟಕಿ ಗಳ ಬದಲು ಕಬ್ಬಿಣದ ಕಿಟಕಿಗಳನ್ನು ಬಳಸಿದರೆ ಆಗಲು ಕೂಡ ಖರ್ಚು ಕಡಿಮೆಯಾಗುತ್ತದೆ.
ಉಳಿದ ಗೋಡೆಗಳಿಗೆ ಪ್ಲಾಸ್ಟಿಂಗ್ ಮಾಡಿಸುವುದು ಬೇಡ ಅನಿಸಿದರೆ ಸಿಂಪಲ್ ಆಗಿ ಕವರ್ ಮಾಡಿ ಅದಕ್ಕೆ ಇಟ್ಟಿಗೆ ಬಣ್ಣ ಹಾಗೂ ಜಾಯ್ಟಿಂಗ್ ಅಲ್ಲಿ ಬಿಳಿ ಬಣ್ಣ ಬಳಸಿ ಡೆಕೋರೇಟ್ ಮಾಡಿದರೆ ಅದು ಕೂಡ ಲುಕ್ ಆಗಿ ಹೊಸ ಡಿಸೈನ್ ರೀತಿ ಕಾಣುತ್ತದೆ ಮತ್ತು ಖರ್ಚು ಕೂಡ ಉಳಿಯುತ್ತದೆ. ಯಾವ ರೀತಿಯಲ್ಲಿ ಇದನ್ನು ಮಾಡಬೇಕು ಎನ್ನುವುದನ್ನು ವಿವರವಾಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.