ಲಕ್ಷ್ಮಣನನ್ನು ಬದುಕಿಸಲು ಸಂಜೀವಿನಿ ಪರ್ವತವನ್ನು ಅಂಗೈಯಲ್ಲಿ ತೆಗೆದು ಕೊಂಡು ಬಂದಂತಹ ಸಾಹಸವಂತ ಈ ಧೀರ ಆಂಜನೇಯ. ಸೀತಾ ಮಾತೆಯು ಲಂಕೆಯಲ್ಲಿ ಅಶೋಕವನದಲ್ಲಿ ಬಂದಿ ಆಗಿದ್ದಾಗ ಆಕೆಯನ್ನು ರಾವಣನ ಬಂಧನದಿಂದ ಬಿಡಿಸಲು ಶ್ರೀರಾಮನಿಗೆ ಯುದ್ಧದಲ್ಲಿ ಸಹಾಯ ಮಾಡಿದಂತ ಹನುಮಂತ. ಈ ರೀತಿ ದೇವಾನುದೇವತೆಗಳಿಗೆ ಅವರ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದ ಈ ಅಂಜನಿಪುತ್ರ ಭಕ್ತಿಯಿಂದ ಕೈ ಮುಗಿದು ಬೇಡಿದರೆ ತಕ್ಷಣವೇ ಒಯ್ಯುವಂತಹ ಕಲಿಯುಗದ ಪ್ರತ್ಯಕ್ಷ ದೈವ.
ಹಾಗಾಗಿ ಈತನ ಪ್ರಭಾವವನ್ನು ಕಂಡಿರುವ ಅನುಭವಿಸಿರುವ ಈತನ ಭಕ್ತರು ಸಂಕಷ್ಟಕರ ಆಂಜನೇಯ ಎಂದು ಈತನನ್ನು ಸ್ಮರಿಸುತ್ತಾರೆ. ಮಂಗಳವಾರ ಮತ್ತು ಶನಿವಾರ ಬಹಳ ವಿಶೇಷ. ಈ ದಿನ ಭಕ್ತಿಯಿಂದ ಆಂಜನೇಯನಿಗೆ ಇಷ್ಟ ಆಗುವ ರೀತಿ ಪೂಜೆ ಮಾಡಿ ತಮ್ಮ ಕಷ್ಟಗಳನ್ನು ಕೇಳಿಕೊಂಡರೆ ಅಥವಾ ಇಷ್ಟಾರ್ಥಗಳಿಗಾಗಿ ಬೇಡಿಕೊಂಡರೆ ಅದು ಶೀಘ್ರವಾಗಿ ನೆರವೇರುತ್ತದೆ ಎನ್ನುವ ನಂಬಿಕೆ ಇದೆ.
ಪ್ರಮುಖವಾಗಿ ಮಂಗಳವಾರ ಮತ್ತು ಶನಿವಾರದಂದು ಆಂಜನೇಯನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಈ ಹತ್ತು ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಅವುಗಳು ಯಾವುದೆಂದರೆ, ಆರೋಗ್ಯ ಸಮಸ್ಯೆಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದರು ಕಾಯಿಲೆ ಕಷ್ಟಗಳು ಬಂದಿದ್ದರು ಕೂಡ ಅವುಗಳು ಪರಿಣಾಮಕಾರಿಯಾಗಿ ಫಲ ಕೊಡಬೇಕು ಎಂದರೆ ಆಂಜನೇಯನನ್ನು ಭಕ್ತಿಯಿಂದ ಪ್ರಾರ್ಥಿಸಬೇಕು.
ಈ ರೀತಿ ಆಂಜನೇಯನ ಪೂಜೆ ಮಾಡುವವರ ಆರೋಗ್ಯ ವೃದ್ಧಿ ಆಗುತ್ತದೆ. ಯಾವುದೇ ರೀತಿಯ ಭಯ ಆತಂಕಗಳು ಇದ್ದರೂ ಕೂಡ ಆಂಜನೇಯನ ಸ್ಮರಣೆಯಿಂದ ದೂರ ಆಗುತ್ತದೆ. ದೆವ್ವ ಭೂತಗಳ ಕಾಟದಿಂದ ಹಿಡಿದು ಯಾವುದೇ ವಿಷಯಕ್ಕೆ ಭಯ ಪಡುತ್ತಿದ್ದರು ಕೂಡ ಆಂಜನೇಯನನ್ನು ಬಲವಾಗಿ ನಂಬಿದರೆ ಕ್ರಮೇಣವಾಗಿ ಈ ಭಯವು ಹೊರಟುಹೋಗುತ್ತದೆ.
ಕೆಲವರಿಗೆ ಜಾತಕದಲ್ಲಿ ಮಂಗಳ ದೋಷಗಳು ಇರುತ್ತವೆ. ರಾಹು ದೋಷ, ಶನಿ ದೋಷ, ಕೇತು ದೋಷ ಈ ರೀತಿ ಯಾವುದೇ ರೀತಿಯ ದೋಷಗಳು ಇದ್ದರೂ ಕೂಡ ಮಂಗಳವಾರ ಮತ್ತು ಶನಿವಾರದಂದು ಆಂಜನೇಯನನ್ನು ಪ್ರಾರ್ಥಿಸಿ ಹನುಮಾನ್ ಚಾಲೀಸ ಪಠಿಸಿದರೆ ಯಾವುದೇ ರೀತಿಯ ಸಂಕಷ್ಟಗಳು ಸಮಸ್ಯೆಗಳು ಇದ್ದರೂ ಕೂಡ ಅವುಗಳು ಪರಿಹಾರ ಆಗುತ್ತವೆ.
ಶತ್ರುಗಳ ಕಾಟ ಎದುರಿಸುತ್ತ ಇರುವವರು ಅದರ ಮುಕ್ತಿಗಾಗಿ ಆಂಜನೇಯನನ್ನು ಪ್ರಾರ್ಥಿಸಬಹುದು. ಯಾವುದೇ ಕಾರಣ ಇಲ್ಲದೆ ಶತ್ರುಗಳು ಉಂಟಾಗಬಹುದು ಅಥವಾ ಜೀವನದಲ್ಲಿ ನಾವಿರುವ ಸ್ಥಾನದಿಂದಲೆ ಶತ್ರುಗಳು ಸೃಷ್ಟಿ ಆಗಬಹುದು ಆ ಸಮಯದಲ್ಲಿ ಇವರನ್ನೆಲ್ಲಾ ಧೈರ್ಯವಾಗಿ ಎದುರಿಸಲು ಆಂಜನೇಯ ಸ್ವಾಮಿಯ ಕೃಪಾಕಟಾಕ್ಷ ಶಕ್ತಿಯಾಗುತ್ತದೆ. ಹಾಗೆಯೇ ಕೋರ್ಟು ಕೇಸು ಇವುಗಳಿಗೆ ಸಂಬಂಧಪಟ್ಟ ಸಮಸ್ಯೆಗಳಲ್ಲಿ ಸಿಲುಕಿಕೊಂಡಿರುವವರು ಕೂಡ ಆಂಜನೇಯನನ್ನು ಪ್ರಾರ್ಥಿಸಿದರೆ ಬೇಗ ಇದಕ್ಕೆಲ್ಲಾ ಪರಿಹಾರ ಸಿಗುತ್ತದೆ.
ರಸ್ತೆ ಅಪಘಾತ ಅಥವಾ ಇನ್ಯಾವುದೇ ಅಪಘಾತಗಳ ಭಯ ಪಡುತ್ತಿರುವವರು ಕೂಡ ಆಂಜನೇಯನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಅವರಿಗೂ ಆ ಭಯವು ನಿವಾರಣೆ ಆಗುತ್ತದೆ. ಕೆಲಸ ಕಾರ್ಯಗಳನ್ನು ಆರಂಭಿಸುವಾಗ ವಿಜ್ಞಗಳು ಉಂಟಾಗುತ್ತಿದ್ದರೆ ಆ ವಿಜ್ಞಗಳ ಪರಿಹಾರಕ್ಕಾಗಿ ಕೂಡ ಆಂಜನೇಯನನ್ನು ಪ್ರಾರ್ಥಿಸುತ್ತಾರೆ.
ಗಣಪತಿಯನ್ನು ಮೊದಲು ಪ್ರಾರ್ಥಿಸಿ ನಂತಹ ಆಂಜನೇಯನನ್ನು ಕೂಡ ಪ್ರಾರ್ಥಿಸಿ, ಕೆಲಸ ಆರಂಭ ಮಾಡಿದರೆ ಅದು ನಿರ್ವಿಘ್ನವಾಗಿ ಸಾಗುತ್ತದೆ. ದುಷ್ಟ ಶಕ್ತಿಗಳ ಭಯವಿದ್ದರೂ ಕೂಡ ಆಂಜನೇಯನನ್ನು ಪೂಜಿಸಿದರೆ ಅದು ನಿವಾರಣೆ ಆಗುತ್ತದೆ ಈ ರೀತಿ ದೈನಂದಿಕ ಜೀವನದ ಎಲ್ಲಾ ಸಮಸ್ಯೆಗಳು ಕೂಡ ಆಂಜನೇಯನ ಸ್ಮರಣೆಯಿಂದ ಪರಿಹಾರವಾಗುತ್ತದೆ.