ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆಯೇ ಪಂಚಖಾತ್ರಿ ಯೋಜನೆಗಳನ್ನು ಜಾರಿಗೆ ತರಲು ಪಣತೊಟ್ಟಿದೆ. ಇವುಗಳ ಪೈಕಿ 5 ಗ್ಯಾರಂಟಿ ಕಾರ್ಡ್ ಗಳಲ್ಲಿ ಎರಡನೇ ಗ್ಯಾರೆಂಟಿ ಆಗಿದ್ದ ಗೃಹಲಕ್ಷ್ಮಿ ಯೋಜನೆಗೆ ಲಾಂಚಿಂಗ್ ಡೇಟ್, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿ ಬೇಕಾದ ದಾಖಲೆಗಳು, ಯಾರೆಲ್ಲ ಅರ್ಜಿ ಸಲ್ಲಿಸಬಹುದು ಮತ್ತು ಯಾರು ಯೋಜನೆಗಳಿಗೆ ಫಲಾನುಭವಿಗಳಾಗಲು ಸಾಧ್ಯವಿಲ್ಲ.
ಮತ್ತು ಅರ್ಜಿ ಸಲ್ಲಿಸಲು ಆಫ್ಲೈನ್ ಮೂಲಕ ಆನ್ಲೈನ್ ಅಥವಾ ಆನ್ಲೈನ್ ಮೂಲಕ ಯಾವ ವ್ಯವಸ್ಥೆ ಮಾಡಲಾಗಿದೆ ಎನ್ನುವ ಎಲ್ಲಾ ವಿವರಗಳನ್ನು ಒಳಗೊಂಡ ಆದೇಶ ಪತ್ರವನ್ನು ಹೊರಡಿಸಿದೆ. ಅದರ ಪ್ರಕಾರ ಜೂನ್ 15ರಂದು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ ಆಗಬೇಕಿತ್ತು, ಆದರೆ ಒಂದು ದಿನದ ಮಟ್ಟಿಗೆ ಅದನ್ನು ಮುಂದೂಡಲಾಯಿತು.
ಈ ಯೋಜನೆಗೆ ಅಧಿಕಾರಿಗಳು ಸಿಬ್ಬಂದಿಗಳನ್ನು ತರಬೇತಿಗೊಳಿಸಲಾಗುತ್ತಿದೆ. ಒಂದು ದಿನ ಹೆಚ್ಚಿನ ಕಾಲಾವಕಾಶ ಬೇಕಾದ ಕಾರಣ ಜೂನ್ 16ರಂದು ಈ ಯೋಜನೆಗೆ ಚಾಲನೆ ಸಿಗಲಿದೆ. ಜೂನ್ 16ರ ಮಧ್ಯಾಹ್ನ 1:30 ಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೇ ಸಾಂಕೇತಿಕವಾಗಿ ಈ ಆಹ್ವಾನ ಪ್ರಕ್ರಿಯೆಗೆ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ ಎನ್ನುವ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹೊರಹಾಕಿತ್ತು.
ಆದರೆ ಗುರುವಾರ ಸಂಜೆ ನಡೆದ ಕ್ಯಾಬಿನೆಟ್ ಮೀಟಿಂಗ್ ಅಲ್ಲಿ ಕೆಲ ಮಾರ್ಪಾಡು ಆಗಿ ಈಗ ಇನ್ನು 3-4 ದಿನ ಈ ಯೋಜನೆಗೆ ಅರ್ಜಿ ಆಹ್ವಾನ ಮಾಡುವ ಪ್ರಕ್ರಿಯೆ ಮುಂದೆ ಹೋಗುತ್ತದೆ ಎನ್ನುವ ಮಾಹಿತಿಯನ್ನು ಇಲಾಖೆ ತಿಳಿಸಿದೆ. ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಈ ಯೋಜನೆಗೆ ಅರ್ಹ ಮಹಿಳಾ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು ಅಥವಾ ಆಫ್ಲೈನ್ ಅಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಛೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ಆದೇಶ ಪತ್ರದಲ್ಲಿ ತಿಳಿಸಿತ್ತು.
ಈಗ ಬಲವಾದ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಸರ್ಕಾರ ಇದಕ್ಕಾಗಿ ಆಪ್ ಒಂದನ್ನು ಸಿದ್ಧಗೊಳಿಸುತ್ತಿದೆಯಂತೆ. ಇದರ ರಚನೆಗೆ ಸಂಬಂಧ ಪಟ್ಟ ಹಾಗೆ ತಾಂತ್ರಿಕ ಸಮಸ್ಯೆ ಆಗಿರುವುದರಿಂದ ಇನ್ನೂ ಮೂರು ನಾಲ್ಕು ದಿನಗಳ ಕಾಲ ಅರ್ಜಿ ಆಹ್ವಾನ ಪ್ರಕ್ರಿಯೆಯನ್ನು ಮುಂದೂಡಲಾಗಿದೆಯಂತೆ. ಈ ಆಪ್ ಮೂಲಕ ಕುಟುಂಬದ ಯಜಮಾನಿಯು ಸರಳವಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗಲಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.
ಸದ್ಯಕ್ಕೀಗ ಸೇವಾ ಸಿಂಧು ಪೋರ್ಟಲ್ ನಲ್ಲಿ ಗೃಹಲಕ್ಷ್ಮಿ ಯೋಜನೆ ಕುರಿತು ಯಾವುದೇ ಸೇವೆಗಳು ಲಭ್ಯವಿಲ್ಲ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಅರ್ಜಿ ಆಹ್ವಾನ ಪತ್ರಿಕೆಯು ಆರಂಭ ಆಗಲಿದೆ ಅಲ್ಲಿಯವರೆಗೂ ಕೂಡ ಮಹಿಳೆಯರು ಇದಕ್ಕೆ ಬೇಕಾದ ಪ್ರಮುಖ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳಲು ತಿಳಿಸಲಾಗಿದೆ.
ಈ ಯೋಜನೆ ಅಡಿ ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಕುಟುಂಬಗಳ ಯಜಮಾನಿ ಮಹಿಳೆಖಾತೆಗೆ 2,000 ಸಹಾಯಧನವು ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು ಜಮೆ ಆಗಲಿದೆ. ಆದರೆ ಮಹಿಳೆ ಅಥವಾ ಮಹಿಳೆಯ ಪತಿ ಸರ್ಕಾರಿ ಉದ್ಯೋಗ ಮಾಡುತ್ತಿದ್ದರೆ ಅಥವಾ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ ಅವರು ಈ ಯೋಜನೆಗೆ ಫಲಾನುಭವಿಗಳು ಆಗಲು ಸಾಧ್ಯವಿಲ್ಲ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆ ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ವಿವರದ ಜೊತೆ ಪತಿ ಅಥವಾ ಮಗ ಟ್ಯಾಕ್ಸ್ ಕಟ್ಟುತ್ತಿಲ್ಲ ಎನ್ನುವುದಕ್ಕೆ ಒಂದು ಸರ್ಟಿಫಿಕೇಟ್ ಅನ್ನು ಅಗತ್ಯ ದಾಖಲೆಯಾಗಿ ನೀಡಬೇಕು ಎನ್ನುವ ಮಾಹಿತಿ ಕೇಳಿ ಬರುತ್ತಿದೆ. ಮೂರ್ನಾಲ್ಕು ದಿನಗಳ ನಂತರ ಯೋಜನೆಗೆ ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭಗೊಳ್ಳಲಿದೆ ಅಲ್ಲಿಯವರೆಗೂ ಕಾದುನೋಡೋಣ.