
ಬೆಂಗಳೂರಿನಲ್ಲಿ ಆಟೋ ಚಾಲಕರ ಸುಲಿಗೆ ಮತ್ತು ದುರ್ವರ್ತನೆಯ ಕುರಿತು ಸಾಕಷ್ಟು ಆರೋಪಗಳು ಪ್ರತಿನಿತ್ಯವೂ ಕೂಡ ದಾಖಲಾಗುತ್ತಿವೆ. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಆಗುತ್ತಲೇ ಇವೆ. ಸೋಶಿಯಲ್ ಮೀಡಿಯಾದಲ್ಲೂ ಕೂಡ ಈ ರೀತಿ ಆಟೋ ಚಾಲಕರು ಪ್ರಯಾಣಿಕರ ಮೇಲೆ ಮಾಡುತ್ತಿರುವ ದೌರ್ಜನ್ಯಗಳ ಬಗ್ಗೆ ವಿಡಿಯೋಗಳು ವೈರಲ್ ಆಗುತ್ತಲಿವೆ.
ಬೆಂಗಳೂರಿನ ಮಹಾನಗರದಲ್ಲಂತೂ ಕೆಲ ಆಟೋ ಚಾಲಕರ ಈ ರೀತಿ ನಡತೆಯಿಂದ ಆಟೋ ಚಾಲಕರೆಲ್ಲರೂ ಗೂಂಡಾಗಳು ಎನ್ನುವಂತಹ ಭಾವನೆ ಬರುವ ರೀತಿ ಆಗಿಬಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಆಟೋ ಚಾಲಕರಿಗೂ ಕ್ಯಾಬ್ ವ್ಯವಸ್ಥೆಯು ಕಾಂಪಿಟೇಶನ್ ಆಗಿ ಕಾಡುತ್ತಿದೆ. ಇದರ ನಡುವೆ ಇವರು ಸಹ ಆನ್ಲೈನ್ ಬುಕಿಂಗ್, ಓಲಾ ಆಟೋ ಇಂತಹ ವ್ಯವಸ್ಥೆ ಮೂಲಕ ಇದಕ್ಕೆ ಕಾಂಪಿಟೇಶನ್ ಕೊಡುತ್ತಾ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾರೆ.
ನಮ್ಮ ನೆಲದಲ್ಲಿ ಆಟೋ ಚಾಲಕರ ಬಗ್ಗೆ ಒಂದು ಸೆಂಟಿಮೆಂಟ್ ಇದೆ. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಕೂಡ ಆಟೋ ಚಾಲಕರು ಹೀರೋ ಆಗಿರುವ ಉದಾಹರಣೆಗಳ ಬಗ್ಗೆ ಕೇಳಿದ್ದೇವೆ, ಹೊಗಳಿದ್ದೇವೆ. ಲಕ್ಷಾಂತರ ರೂಪಾಯಿಗಳನ್ನು ತಮ್ಮ ಗಡಿಬಿಡಿಯಲ್ಲಿ ಪ್ರಯಾಣಿಕರು ಮರೆತು ಹೋಗಿದ್ದಕ್ಕೆ ಆಸೆ ಪಡೆದೆ ಅದನ್ನು ಮಾಲೀಕರಿಗೂ ಅಥವಾ ಹತ್ತಿರದ ಠಾಣೆಗೂ ತಲುಪಿಸಿರುವ ಉದಾಹರಣೆಯ ಚಾಲಕರು ಇದ್ದಾರೆ.
ಅಥವಾ ಲಕ್ಷಾಂತರ ಮೌಲ್ಯದ ಬಂಗಾರದ ಒಡವೆಗಳು ಆಭರಣಗಳು, ದಾಖಲೆ ಪತ್ರಗಳನ್ನು ಕೂಡ ಈ ರೀತಿ ಪ್ರಾಮಾಣಿಕೆಯಿಂದ ವಾಪಸ್ಸು ಕೊಟ್ಟು ನಯಪೈಸೆಯನ್ನು ಕೂಡ ಕಾಣಿಕೆಯಾಗಿ ಪಡೆಯದ ಆಟೋ ಚಾಲಕರ ವ್ಯಕ್ತಿತ್ವದ ಮೇಲೆ ಅಭಿಮಾನವಿದೆ. ಅವರ ಬಗ್ಗೆ ಹೊಗಳಿ ನಾವೇ ಮಾತನಾಡಿರುತ್ತೇವೆ. ಗರ್ಭಿಣಿ ಹೆಂಗಸರಿಗೆ ಉಚಿತವಾಗಿ ಪ್ರಯಾಣ ಕಲ್ಪಿಸಿ ಕೊಡುವ, ವೃದ್ಧರು ಹಾಗೂ ಅಸಹಾಯಕರಿಗೆ ಮನೆ ಮಕ್ಕಳ ಹಾಗೆ ರಸ್ತೆ ಮಧ್ಯೆ ಸಹಾಯಕ್ಕೆ ನಿಲ್ಲುವ ಇವರ ಈ ಗುಣ ಇವರನ್ನು ಆಟೋ ರಾಜ ಎಂದು ಕರೆಯುವಂತೆ ಮಾಡಿದೆ.
ಅವರ ಮಧ್ಯೆ ಬೆರಳಣಿಕೆಯಷ್ಟು ಮಂದಿ ಆಟೋ ಚಾಲಕರು ಈಗ ಗೂಂಡಾಗ ರೀತಿ ವರ್ತನೆ ಮಾಡಿ ಸುದ್ದಿಯಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವರದಿಯಾಗಿದ್ದ ಅದೆಷ್ಟೋ ಉದಾಹರಣೆಗಳ ಜೊತೆ ಬೆಂಗಳೂರಿನಲ್ಲಿ ನಡೆದ ಒಂದು ಪ್ರಕರಣವು ಸೇರಿದೆ. ಬೆಂಗಳೂರಿನ ವ್ಯಕ್ತಿಯು ತನ್ನ ತಾಯಿಯ ಜೊತೆ ಪ್ರಯಾಣ ಮಾಡುವುದಕ್ಕಾಗಿ ಓಲಾ ಆಟೋ ಬುಕ್ ಮಾಡಿದ್ದಾರೆ, ಸ್ಥಳಕ್ಕೆ ಬಂದ ಆಟೋ ಚಾಲಕ ಆನ್ಲೈನ್ ಟ್ರಿಪ್ ಕ್ಯಾನ್ಸಲ್ ಮಾಡುವಂತೆ ಕೇಳಿದ್ದಾನೆ.
ಬಳಿಕ ಆಫ್ಲೈನ್ ಅಲ್ಲಿಯೇ ತನ್ನ ಜೊತೆ ಬರುವಂತೆ ಶರತ್ತು ಹಾಕಿದ್ದಾನೆ, ಇದಕ್ಕೆ ಒಪ್ಪದೆ ಆಟೋ ಹತ್ತದೆ ಹೋಗಿದಕ್ಕೆ ಹಿಂದಿನಿಂದ ಬಂದು ಆತನ ತಾಯಿಯ ಎದುರೇ ಆಟೋಯಿಂದ ಗುದ್ದಿ ಹಲ್ಲೆ ಮಾಡಿ ದುರ್ನಡತೆ ತೋರಿದ್ದಾನೆ ಆಟೋ ಚಾಲಕ. ಆಟೋ ಚಾಲಕನ ಉದ್ದಟತನ ಅಲ್ಲೇ ಹತ್ತಿರದಲ್ಲಿದ್ದ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. ಈಗ ಆ ವಿಡಿಯೋ ಕ್ಲಿಪ್ಪಿಂಗ್ ಜೊತೆ ತನಗಾದ ಅನ್ಯಾಯದ ಬಗ್ಗೆ ಆಟೋ ಚಾಲಕನ ಆಟೋ ಸಂಖ್ಯೆ ಸಮೇತ ದೂರು ಬರೆದು ತನಗಾದ ಅನುಭವದ ಬಗ್ಗೆ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.
ಈತನ ವರ್ತನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರ ಪೋಲಿಸರಿಗೆ ಆತ ಮನವಿ ಮಾಡಿಕೊಂಡಿದ್ದಾನೆ. ಅನೀಶ್. ಎಸ್ ಎನ್ನುವ ವ್ಯಕ್ತಿಯು ತಮ್ಮ @Anish0012 ಎನ್ನುವ ಹೆಸರಿನ ಟ್ವಿಟರ್ ಖಾತೆಯಲ್ಲಿ ಬೆಂಗಳೂರಿನಲ್ಲಿ ಈ ರೀತಿ ವರ್ತನೆ ಸರ್ವೇಸಾಮಾನ್ಯವಾಗುತ್ತಿದೆ. KA03AH7784 ಸಂಖ್ಯೆಯ ಆಟೋ ಚಾಲಕನಿಂದ ತನಗೆ ಈ ರೀತಿಯ ಹಲ್ಲೆಯಾಗಿದೆ ಎಂದು ಆರೋಪ ಮಾಡಿದ್ದಾರೆ. ನಗರದಲ್ಲಿ ನಡೆದ ವರ್ತನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.
This is an every day hustle for a banglorean. Book an UBER/OLA. The driver asks you to cancel the ride and take it offline.
And if you say No,
You get hit by an auto, get beaten up and yelled at.Please take action. Be safe
Auto: 7784#UBER #bangaloretraffic #bangalorepolice pic.twitter.com/KLgnlE8txY— Anish S (@Anish0012) June 16, 2023