ಹನುಮಂತ, ಆಂಜನೇಯ, ಮಾರುತಿ ಎಂದರೆ ಎಲ್ಲರಿಗೂ ಕೂಡ ವಿಶೇಷ ಪ್ರೀತಿ. ಭಕ್ತಿಗೆ, ಯುಕ್ತಿಗೆ ಸಾಹಸಕ್ಕೆ ಹೆಸರುವಾಸಿಯಾದ ಈ ಅಂಜನೀಪುತ್ರ ಕಷ್ಟ ಕಾಲದಲ್ಲಿ ನೆರವಾಗುವ ರಾಮ ಭಂಟ. ಭಾರತದಾದ್ಯಂತ ಆಂಜನೇಯನಿಗೆ ಭಕ್ತಾದಿಗಳು ಇದ್ದಾರೆ. ಆಂಜನೇಯ ಮೇಲಿನ ಭಕ್ತಿಯಿಂದ ಪ್ರೀತಿಯಿಂದ ಭಾರತದಾದ್ಯಂತ ಲಕ್ಷಾಂತರ ದೇವಾಲಯಗಳನ್ನು ನಿರ್ಮಾಣ ಮಾಡಲಾಗಿದೆ.
ಅದರಲ್ಲಿ ಕೆಲ ದೇವಾಲಯಗಳು ತಮ್ಮ ವಿಶೇಷತೆಯಿಂದ ಎಲ್ಲರ ಗಮನ ಸೆಳೆಯುತ್ತವೆ. ಇಂತಹದ್ದೇ ಒಂದು ವಿಶೇಷವಾದ ದೇವಸ್ಥಾನ ರಾಜಸ್ಥಾನದಲ್ಲಿದೆ. ಇಂದಿಗೂ ಕೂಡ ವೈದ್ಯ ಹಾಗೂ ವಿಜ್ಞಾನ ಲೋಕಕ್ಕೆ ಸವಾಲಾಗುವಂತಹ ಪವಾಡಗಳು ಇಲ್ಲಿರುವ ಆಂಜನೇಯನ ವಿಗ್ರಹದಲ್ಲಿ ನಡೆಯುತ್ತಿವೆ. ಜೊತೆಗೆ ಈ ದೇವಾಲಯಕ್ಕೆ ಮೊದಲ ಬಾರಿಗೆ ಭೇಟಿ ಕೊಡುವವರು ಡಬಲ್ ಗುಂಡಿಗೆ ಹೊಂದಿರಬೇಕು ಎಂದು ಹೇಳಲಾಗುತ್ತದೆ, ಇಂತಹ ದೇವಸ್ಥಾನದ ಬಗ್ಗೆ ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.
ಸಾಮಾನ್ಯವಾಗಿ ಆಂಜನೇಯನನ್ನು ಏಕಾಗ್ರತೆಗಾಗಿ ಮತ್ತು ಧೈರ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಹನುಮಾನ್ ಚಾಲೀಸವನ್ನು ಪಟಿಸುವುದರಿಂದ ಮತ್ತು ಆಂಜನೇಯನ ಫೋಟೋ ಹಾಗೂ ವಿಗ್ರಹಗಳನ್ನು ಇಟ್ಟುಕೊಳ್ಳುವುದರಿಂದ ಯಾವುದೇ ದುಷ್ಟ ಶಕ್ತಿಗಳ ಮತ್ತು ನಕಾರಾತ್ಮಕ ಶಕ್ತಿಗಳ ಪ್ರಭಾವ ನಮ್ಮ ಮೇಲೆ ಬೀಳುವುದಿಲ್ಲ ಎನ್ನುವುದು ಹಿಂದೂ ಧರ್ಮದ ನಂಬಿಕೆ ಹಾಗೆಯೇ ನಕರಾತ್ಮಕ ಶಕ್ತಿಗಳಿಂದ ಕಾಟ ಆಗುತ್ತಿದೆ ಎನ್ನುವ ಮಾತುಗಳನ್ನು ನಾವು ಕೇಳಿದ್ದೇವೆ.
ಅವರು ರಾಜಸ್ಥಾನದಲ್ಲಿರುವ ಈ ಆಂಜನೇಯನ ದೇವಸ್ಥಾನಕ್ಕೆ ಒಮ್ಮೆ ಭೇಟಿ ಕೊಟ್ಟರೆ ಸಾಕು ಮೈ ಮೇಲೆ ಇರುವ ದೆವ್ವ ಭೂತ ಇದ್ದರೂ ಕೂಡ ಬಿಟ್ಟು ಹೋಗುತ್ತದೆ. ಅವುಗಳಿಗೆ ಮುಕ್ತಿ ಸಿಕ್ಕಿ ಇನ್ನೆಂದು ಅವರನ್ನು ಕಾಡದ ರೀತಿ ಆಗುತ್ತದೆ. ಇದೇ ಕಾರಣಕ್ಕಾಗಿ ಈ ದೇವಸ್ಥಾನವು ಫೇಮಸ್ ಆಗಿದೆ. ದೇವಸ್ಥಾನದ ವಿಚಾರವನ್ನು ಹೇಳುವುದಾದರೆ ತಿರುಪತಿಯ ದೇವಸ್ಥಾನ ಕ್ಕಿಂತ ಕೂಡ ದೊಡ್ಡದಾಗಿರುವ ಈ ದೇವಸ್ಥಾನವು ವಿಶ್ವದಲ್ಲೇ ಅತಿ ದೊಡ್ಡ ದೇವಸ್ಥಾನ ಎಂದು ಕರೆಸಿಕೊಂಡಿದೆ.
ಈ ದೇವಸ್ಥಾನಕ್ಕೆ ದಿನಕ್ಕೆ ಲಕ್ಷಕ್ಕಿಂತ ಹೆಚ್ಚು ಜನರು ಭೇಟಿ ಕೊಡುತ್ತಾರೆ ಇವುಗಳಲ್ಲಿ ಹೆಚ್ಚಿನ ಜನಸಂಖ್ಯೆ, ಈ ರೀತಿ ದೆವ್ವ ಭೂತಗಳ ಕಾಟದಿಂದ ಬಳಲುತ್ತಿರುವವರು ಆಗಿರುತ್ತಾರೆ. ಪ್ರತಿಯೊಬ್ಬರಿಗೂ ಕೂಡ ಆಂಜನೇಯ ದರ್ಶನ ಸಿಗುತ್ತದೆ ಆದರೆ ದೇವಸ್ಥಾನದ ಪೂರ್ತಿ ಈ ರೀತಿ ವಿಚಿತ್ರ ವರ್ತನೆಗಳಿಂದ ನರಳುವವರು ಇರುವುದರಿಂದ ಕನಿಷ್ಠ 3-4 ತಾಸುಗಳನ್ನಾದರೂ ಕಾಯಲೇಬೇಕು. ಇಲ್ಲಿರುವ ಆಂಜನೇಯ ವಿಗ್ರಹದ ಪವಾಡದ ಬಗ್ಗೆ ಕೂಡ ಈ ದೇವಸ್ಥಾನದಲ್ಲಿ ಕಾಣಬಹುದು.
ಆಂಜನೇಯನ ಹೃದಯ ಭಾಗದಿಂದ ಒಂದು ಪವಿತ್ರವಾದ ಜಲ ಹರಿದು ಬರುತ್ತದೆ ಇದನ್ನು ಅಮೃತ ಜಲ ಎಂದು ಕರೆಯಲಾಗುತ್ತಿದೆ. ಈ ನೀರು ಪ್ರತಿದಿನ ಬೆಳಿಗ್ಗೆ 5:30 ರಿಂದ 7 ಗಂಟೆ ಸಮಯದವರೆಗೆ ಮಾತ್ರ ಈ ರೀತಿ ಹೊರ ಬೀಳುತ್ತದೆ. ಅದನ್ನು ಶೇಖರಿಸಿಕೊಂಡು ದೇವಸ್ಥಾನಕ್ಕೆ ದೆವ್ವ ಭೂತಗಳ ಕಾಟದಿಂದ ಬರುವವರ ಮೇಲೆ ಸಿಂಪಡಿಸಲಾಗುತ್ತದೆ. ಆ ತಕ್ಷಣವೇ ಅತೃಪ್ತ ಆತ್ಮಗಳು ಅವರನ್ನು ಬಿಟ್ಟು ಹೋಗುತ್ತವೆ.
ಮೊದಲಿಗೆ ಈ ನೀರನ್ನು ಗಂಗಾ ನದಿಯ ನೀರು ಎಂದು ಭಾವಿಸಲಾಗಿತ್ತು ಆದರೆ ಪರೀಕ್ಷೆ ಮಾಡಿದ ಬಳಿಕ ಎರಡು ನೀರಿಗೆ ವ್ಯತ್ಯಾಸಗಳಿವೆ ಮತ್ತು ಈ ನೀರಿನ ಮೂಲ ಯಾವುದು ಎನ್ನುವುದೇ ಇನ್ನು ಪತ್ತೆ ಆಗಿಲ್ಲ. ಜೊತೆಗೆ ದೇವಸ್ಥಾನಕ್ಕೆ ಬಂದ ಪ್ರತಿಯೊಬ್ಬರೂ ಕೂಡ ಈ ನೀರನ್ನು ತಪ್ಪದೆ ಪ್ರಸಾದವಾಗಿ ಮನೆಗೆ ತೆಗೆದುಕೊಂಡು ಹೋಗುತ್ತಾರೆ.
ಮನೆಯಲ್ಲಿ ಈ ನೀರನ್ನು ಪೂಜಿಸಿದ ಮೂರು ದಿನಗಳ ಒಳಗೆ ಎಂತಹದ್ದೇ ಕಷ್ಟಗಳಿದ್ದರೂ ಕೂಡ ಪರಿಹಾರ ಆಗುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ನಂಬಿಕೆ. ಇಷ್ಟು ಫೇಮಸ್ ಆದ ಈ ದೇವಸ್ಥಾನವು ರಾಜಸ್ಥಾನದ ದೌಸ ಎಂಬ ಊರಿನಿಂದ 48 ಕಿಲೋಮೀಟರ್ ದೂರದಲ್ಲಿದೆ. ಆಂಜನೇಯನ ಬಾಲ್ಯದ ಹೆಸರು ಬಾಲ ಆದಕಾರಣ ಇಲ್ಲಿನ ಭಾಗದ ಜನರು ಆಂಜನೇಯನನ್ನು ಬಾಲಾಜಿ ಎಂದು ಕರೆಯುತ್ತಾರೆ. ಆಂಜನೇಯ ನೆಲ ನಿಂತಿರುವ ಸ್ಥಳವನ್ನು ಮೆಹಂದಿಪುರ್ ಬಾಲಾಜಿ ದೇವಸ್ಥಾನ ಎಂದು ಕರೆಯುತ್ತಾರೆ.