ಪಡಿತರ ಚೀಟಿ ಈಗ ಒಂದು ಮುಖ್ಯ ದಾಖಲೆ ಎಂದೇ ಹೇಳಬಹುದು. ಯಾಕೆಂದರೆ ಸರ್ಕಾರವು ಬಡ ಜನರಿಗೆ ಕನಿಷ್ಠ ಬೆಲೆಯಲ್ಲಿ ಅಥವಾ ಉಚಿತವಾಗಿ ಆಹಾರ ಧಾನ್ಯಗಳನ್ನು ತಲುಪಿಸುವ ಕಾರಣದಿಂದಾಗಿ ಪಡಿತರ ವ್ಯವಸ್ಥೆ ಮಾಡಿ ಈ ಸೌಲಭ್ಯ ಪಡೆಯಲು ಪಡಿತರ ಚೀಟಿಯನ್ನು ಒಂದು ಮಾನದಂಡವಾಗಿ ನೀಡಿತ್ತು. ನಂತರದ ದಿನಗಳಲ್ಲಿ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳಿಗೆ ಪಡಿತರ ಚೀಟಿಯನ್ನು ಒಂದು ಪ್ರಮುಖ ದಾಖಲೆಯಾಗಿ ಕೇಳಲಾಗುತ್ತಿದೆ.
ಈಗ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಪಡಿತರ ಚೀಟಿ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯನ್ನು ತಂದಿದೆ. ಇನ್ನು ಮುಂದೆ ಕೂಡ ಬಡ ಜನರಿಗೆ ಹಾಗೂ ಬಡತನ ರೇಖೆಗಿಂತ ಕೆಳಗಿರುವವರಿಗೆ ಈ ಪಡಿತರ ಚೀಟಿ ಆಧಾರದ ಮೇಲೆ ರೇಷನ್ ಹಂಚಿ ಅಗತ್ಯ ಹಾಗೂ ಗುಣಮಟ್ಟದ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ತಲುಪಿಸಿ ಹಸಿವುಮುಕ್ತ ಸದೃಢ ಭಾರತವನ್ನು ಕಟ್ಟಬೇಕು ಎನ್ನುವುದು ಸರ್ಕಾರಗಳ ಧ್ಯೇಯವಾಗಿದೆ.
ಮತ್ತೊಂದೆಡೆ ಅನಧಿಕೃತ ವ್ಯಕ್ತಿಗಳು ಕೂಡ ಜೊತೆಗೆ ಅನುಕೂಲತೆ ಇರದವರು ಕೂಡ ಸುಳ್ಳು ದಾಖಲೆಗಳನ್ನು ತೋರಿ, ಈ ಉಚಿತ ಪಡಿತರವನ್ನು ಪಡೆದುಕೊಳ್ಳುವ ಕಾರಣಕ್ಕಾಗಿ ನಕಲಿ ರೇಷನ್ ಕಾರ್ಡ್ ಗಳನ್ನು ಅರ್ಹತೆ ಇಲ್ಲದಿದ್ದರೂ ಪಡೆದಿದ್ದಾರೆ ಎನ್ನುವ ದಾಖಲೆ ಸರ್ಕಾರಕ್ಕೆ ಸಿಕ್ಕಿದೆ. ಕಳೆದ ವರ್ಷದಿಂದಲೂ ಕೂಡ ಕೇಂದ್ರ ಸರ್ಕಾರವು ಈ ರೀತಿ ನಕಲಿ ರೇಷನ್ ಕಾರ್ಡ್ ಹೊಂದಿರುವವರ ಮಾಹಿತಿಯನ್ನು ಕಲೆ ಹಾಕುತ್ತಿದ್ದು ಶೀಘ್ರದಲ್ಲಿಯೇ ಆ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಿದೆ.
ಇದಕ್ಕಾಗಿಯೇ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಕಟ್ಟುನಿಟಿನ ನಿಯಮ ಹಾಗೂ ಇನ್ನಿತರ ನಿಯಮಗಳನ್ನು ಜಾರಿಗೆ ತಂದಿದೆ. ಜೊತೆಗೆ ಸರ್ಕಾರವು ಅರ್ಹತೆ ಇಲ್ಲದಿದ್ದರೂ ಕೂಡ ಕಾರ್ಡ್ ಹೊಂದಿ ಈ ಉಚಿತ ಪಡಿತರ ಪಡೆಯುತ್ತಿರುವವರಿಗೆ ಎಚ್ಚರಿಕೆಯನ್ನು ಕೂಡ ನೀಡಿದೆ.
ಆ ಪ್ರಕಾರವಾಗಿ 100 ಚದರ ಮೀಟರ್ ಮನೆಯನ್ನು ಸ್ವಂತ ಖರ್ಚಿನಲ್ಲಿ ಕಟ್ಟಿಸಿರುವವರು ಅಥವಾ ಮನೆ ತೆಗೆದು ಕೊಂಡಿರುವವರು, ಮನೆಯಲ್ಲಿ ನಾಲ್ಕು ಚಕ್ರದ ವಾಹನ ಮತ್ತು ಟ್ರಾಕ್ಟರ್ ಅಂತಹ ವಾಹನಗಳನ್ನು ಹೊಂದಿರುವವರು, ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕವಾಗಿ 2 ಲಕ್ಷ ಆದಾಯ ಮತ್ತು ಪಟ್ಟಣ ಪ್ರದೇಶದಲ್ಲಿ ವಾರ್ಷಿಕವಾಗಿ 3 ಲಕ್ಷ ಆದಾಯ ಹೊಂದಿರುವವರು ಬಡತನ ರೇಖೆಗಿಂತ ಕೆಳಗೆ ಇರುವುದಿಲ್ಲ.
ಇಂಥವರು ಸರ್ಕಾರ ಬಡಜನರಿಗೆ ನೀಡುತ್ತಿರುವ ಪ್ರಯೋಜನ ಪಡೆಯಲು ಬಡತನ ರೇಖೆಗಿಂತ ಕೆಳಗಿರುವವರಿಗೆ ಹಾಗೂ ಬಡ ಜನರಿಗೆ ನೀಡುವ ಕಾರ್ಡುಗಳನ್ನು ಪಡೆದಿದ್ದರೆ ತಕ್ಷಣವೇ ಅದನ್ನು ತಹಶೀಲ್ದಾರ್ ಆಫೀಸ್, DSO ಆಫೀಸ್ ಅಲ್ಲಿ ಸರಂಡರ್ ಮಾಡಬೇಕು ಎಂದು ಸುತ್ತೊಲೆಯನ್ನು ಹೊರಡಿಸಿದೆ.
ಒಂದು ವೇಳೆ ಸರ್ಕಾರ ನಡೆಸುತ್ತಿರುವ ಕ್ರಾಸ್ ಚೆಕ್ ವೇಳೆ ಸಿಕ್ಕಿ ಬಿದ್ದರೆ ಅಂತಹ ಕಾರ್ಡುಗಳನ್ನು ರದ್ದುಪಡಿಸುವುದು ಮಾತ್ರವಲ್ಲದೆ ಈ ರೀತಿ ಕಾರ್ಡ್ ಗಳನ್ನು ಹೊಂದಿರುವವರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಮತ್ತು ಇಷ್ಟು ವರ್ಷಗಳಿಂದ ಅವರು ಪಡೆದಿದ್ದ ರೇಷನ್ ಕೂಡ ಹಿಂಪಡೆಯುವ ನಿರ್ಧಾರಕ್ಕೂ ಬರಬಹುದು ಎನ್ನುವ ಎಚ್ಚರಿಕೆ ಕೂಡ ಸರ್ಕಾರದ ಕಡೆಯಿಂದ ಕೇಳಿ ಬಂದಿದೆ.
ಇಂತಹ ಉಪಯುಕ್ತ ಮಾಹಿತಿಯನ್ನು ಶೀಘ್ರವಾಗಿ ಎಲ್ಲರ ಜೊತೆ ಹಂಚಿಕೊಳ್ಳಿ ಯಾಕೆಂದರೆ ಬಡತನ ಪರಿಧಿಗೆ ಬರದೇ ಇದ್ದರು ಅಂತಹ ಸೌಲಭ್ಯಗಳನ್ನು ಪಡೆದಿರುವವರು ತಕ್ಷಣವೇ ಸರ್ಕಾರ ನಿಯಮವನ್ನು ಒಪ್ಪಿಕೊಳ್ಳದೆ ಹೋದಲ್ಲಿ ಮುಂದೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.