ಇಡೀ ಪ್ರಪಂಚ ಸುತ್ತಾಡಿದರು ಕೂಡ ಕೊನೆಗೆ ನಮಗೆ ನೆಮ್ಮದಿ ಸಿಗುವ ಸ್ಥಳ ನಮ್ಮ ಮನೆ. ಕೆಲವೊಮ್ಮೆ ಹಲವು ಕಾರಣಗಳಿಂದ ನಾವು ಮನೆಯಿಂದ ಹೊರ ಹೋಗುತ್ತೇವೆ ಆದರೆ ಮನಸ್ಸು ಪ್ರತಿ ಕ್ಷಣವು ಕೂಡ ಕೆಲಸ ಮುಗಿದು ಯಾವಾಗ ಮನೆಗೆ ವಾಪಸ್ಸು ಹೋಗುತ್ತೆವೋ ಎಂದು ಯೋಚಿಸುತ್ತಿರುತ್ತದೆ. ಯಾಕೆಂದರೆ ಮನೆ ಎನ್ನುವುದು ಒಂದು ಎಮೋಷನ್ ಕೂಡ ನಾವು ವಾಸಿಸುವ ಮನೆಯಲ್ಲಿ ನಮಗೆ ಸಂತಸ ನೀಡುವ ಅನೇಕ ವಿಚಾರಗಳು ಇರುತ್ತವೆ ಇಂತಹ ಮನೆಯಲ್ಲಿ ನಾವು ಮಾತ್ರವಲ್ಲದೆ ದೈವಶಕ್ತಿ ವಾಸವು ಕೂಡ ಇರುತ್ತದೆ.
ಆದರೆ ನಾವು ಕೆಲ ತಪ್ಪುಗಳನ್ನು ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಕುಂದು ಹೋಗಿ ನಕಾರಾತ್ಮಕ ಶಕ್ತಿಗಳ ವಾಸ ಆರಂಭವಾಗಿ ನಾವು ಎಷ್ಟೇ ದುಡಿದರೂ ಕೂಡ ಅಥವಾ ಎಷ್ಟೇ ಪ್ರಯತ್ನ ಪಟ್ಟರು ಕೂಡ ಮನೆ ಏಳಿಗೆ ಆಗುವುದೇ ಇಲ್ಲ. ಈ ರೀತಿ ಆಗಲು ಮನೆಯಲ್ಲಿ ವಾಸಿಸುವ ಗೃಹಿಣಿ ಹಾಗೂ ಇತರ ಸದಸ್ಯರ ವರ್ತನೆಯೂ ಕೂಡ ಕಾರಣ ಆಗುತ್ತದೆ.
ಮನೆ ಎಂದರೆ ಹೀಗೆ ಇರಬೇಕು, ಹೀಗಿರಬಾರದು ಎನ್ನುವ ನಿಯಮ ಇದೆ ಅದನ್ನು ಮೀರಿ ನಡೆದಾಗ ಅಥವಾ ಪದೇಪದೇ ಆ ರೀತಿ ಮಾಡುತ್ತಿದ್ದಾಗ ಅದು ದುರಭ್ಯಾಸವಾಗಿ ಬೆಳೆದು ಈ ವರ್ತನೆಗಳಿಂದ ಮನೆಯ ಮೇಲೆ ದೇವರ ಆಶೀರ್ವಾದ ಕಡಿಮೆ ಆಗಿ ಎಲ್ಲಾ ಸದಸ್ಯರ ಏಳಿಗೆ ಕುಂಠಿತವಾಗುತ್ತದೆ. ಆದ್ದರಿಂದ ಇನ್ನು ಮೇಲೆ ನೀವು ಈ ರೀತಿ ತಪ್ಪುಗಳನ್ನು ಮಾಡುತ್ತಿದ್ದರೆ ತಿದ್ದುಕೊಳ್ಳಿ. ಸೂರ್ಯೋದಯ ಆದರೂ ಕೂಡ ಇನ್ನೂ ಮಲಗೇ ಇರುವುದು, ತಡವಾಗಿ ಏಳುವುದು ಜೊತೆಗೆ ಸರಿಯಾದ ಸಮಯಕ್ಕೆ ಊಟ ಮಾಡದೆ ತಡವಾದ ಸಮಯಕ್ಕೆ ಊಟ ಮಾಡುವುದು.
ದಿನ ಪೂರ್ತಿ ಸ್ನಾನ ಮಾಡದೆ ಹಾಗೆ ಇರುವುದು, ಮನೆಯಲ್ಲಿ ದೇವರ ಪೂಜೆ ಮಾಡಿರದೆ ಇರುವುದು, ಕತ್ತಲಾದರೂ ಕೂಡ ಮನೆಯಲ್ಲಿ ದೀಪ ಬೆಳಗಿಸದೇ ಹಾಗೆ ಇರುವುದು, ಮನೆಯನ್ನು ಗಲೀಜಾಗಿ ಇಟ್ಟುಕೊಳ್ಳುವುದು ಮನೆಯಲ್ಲಿ ಎಲ್ಲ ವಸ್ತುಗಳನ್ನು ಅಸ್ತವ್ಯಸ್ತವಾಗಿ ಚೆಲ್ಲಾಡುವುದು, ಮನೆಯಲ್ಲಿ ಶೌಚಾಲಯ ಕೂಡ ಶುದ್ಧವಾಗದು ಅಷ್ಟೇ ಮುಖ್ಯ.
ಶೌಚಾಲಯವು ಗಲೀಜಾಗಿದ್ದರೆ ಕೆಟ್ಟ ವಾಸನೆ ಬರುತ್ತಿದ್ದರೆ ಅದು ಕೂಡ ಮನೆಗೆ ಅಶುಭ, ಜೊತೆಗೆ ದೇವರ ಕೋಣೆಯನ್ನು ದಿನ ಸ್ವಚ್ಛ ಮಾಡದೇ ಇರುವುದು, ಮನೆಯಲ್ಲೆ ದಿನ ದೇವರ ಪೂಜೆ ಮಾಡದೇ ಇರುವುದು, ಅಡುಗೆಮನೆಯನ್ನು ಗಲೀಜಾಗಿ ಇಟ್ಟುಕೊಳ್ಳುವುದು. ದಿನವೂ ಕೂಡ ಆಹಾರ ಪದಾರ್ಥಗಳನ್ನು ವೇಸ್ಟ್ ಮಾಡುವುದು ಹಿರಿಯರಿಗೆ ಗೌರವ ಕೊಡದೆ ಇರುವುದು ಹಿರಿಯರ ಎದುರು ತಿರುಗಿ ಮಾತನಾಡುವುದು, ಕೆಟ್ಟ ಶಬ್ದಗಳನ್ನು ಬಳಸಿ ಮನೆಯಲ್ಲಿ ಮಾತನಾಡುವುದು ಅಥವಾ ಮನೆಯಲ್ಲಿ ಸದಾ ಜಗಳ ಆಡುತ್ತಾ ಇರುವುದು.
ಕೈಕಾಲು ಅಲುಗಾಡಿಸುತ್ತಾ ಕುಳಿತುಕೊಳ್ಳುವುದು, ಮಹಿಳೆಯರು ಮುರಿದ ಬಾಚಣಿಕೆಯಲ್ಲಿ ತಲೆ ಬಾಚಿಕೊಳ್ಳುವುದು ಹಾಗೂ ಒಡೆದ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು, ಒಡೆದ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವುದು, ಅತಿಥಿಗಳು ಮನೆಗೆ ಬರುತ್ತಿದ್ದಾರೆ ಎಂದು ಗೊತ್ತಾದರೆ ಬೇಸರ ಮಾಡಿಕೊಳ್ಳುವುದು, ಅತಿಥಿಗಳಿಗೆ ಗೌರವ ಕೊಡದೆ ಇರುವುದು, ಅವರ ಜೊತೆ ಒರಟಾಗಿ ವರ್ತಿಸುವುದು, ಯಾವಾಗಲೂ ಅಕ್ಕಪಕ್ಕದವರ ಮನೆಯಿಂದ ಮನೆಗೆ ಬೇಕಾದ ವಸ್ತುಗಳನ್ನು ಸಾಲ ತೆಗೆದುಕೊಳ್ಳುವುದು.
ಮನೆಯಲ್ಲಿ ನಲ್ಲಿಗಳು ಸೋರುತ್ತಿದ್ದರೆ ಅವುಗಳನ್ನು ಸರಿ ಮಾಡದೆ ಹಾಗೆ ಬಿಡುವುದು, ಮನೆಯಲ್ಲಿ ಯಾವುದಾದರೂ ವಸ್ತು ಒಡೆದು ಹೋಗಿದ್ದರೆ ಅಥವಾ ಹಾಳಾಗಿದ್ದರೆ ಅದನ್ನು ಸರಿ ಮಾಡಿಸದೆ ಹಾಗೆ ಬಿಡುವುದು ಇದೆಲ್ಲವೂ ಕೂಡ ಮನೆ ಅಭಿವೃದ್ಧಿ ಆಗದೆ ಇರುವುದಕ್ಕೆ ಮುಖ್ಯ ಕಾರಣಗಳಾಗಿರುತ್ತವೆ. ಆದ್ದರಿಂದ ಇನ್ನು ಮುಂದೆ ಈ ತಪ್ಪುಗಳನ್ನು ಮಾಡದಿರಿ.