
ಸದ್ಯಕ್ಕೆ ಸೋಶಿಯಲ್ ಮೀಡಿಯಾ ಬಳಕೆ ಹೆಚ್ಚಾದ ಮೇಲೆ ಸೆಲೆಬ್ರಿಟಿಗಳ ಒಂದೊಂದು ನಡಿಗೆಯ ಬಗ್ಗೆಯೂ ಜನರು ಗಮನ ಹರಿಸಿ ಅದರ ಬಗ್ಗೆ ಚರ್ಚೆ ಮಾಡುತ್ತಾರೆ. ಅದರಲ್ಲೂ ಕ್ರಿಕೆಟರ್ ಗಳು ಸ್ಟಾರ್ ಹೀರೋಗಳು ಫೇಮಸ್ ಹೀರೋಯಿನ್ ಗಳು ರಿಯಾಲಿಟಿ ಶೋ ವಿನ್ನರ್ ಗಳು ಹೀಗೆ ಇಂತಹ ಚರ್ಚೆಗೆ ಒಳಗಾಗುವ ಮಂದಿ ಇವರೇ. ಇವರ ಸಿನಿಮಾ ಚಟುವಟಿಕೆಗಳು, ಅವರ ಮುಂದಿನ ನಡೆಗಳು ಇನ್ನಿತರ ಪ್ರಾಜೆಕ್ಟ್ ಗಳು, ಇವರು ಮಾಡುವ ಸಮಾಜಮುಖೀ ಕೆಲಸಗಳು, ಭಾಗವಹಿಸುವ ಕಾರ್ಯಕ್ರಮಗಳು, ಇವರ ಪ್ರತಿನಿತ್ಯದ ಚಟುವಟಿಕೆ, ಇವರ ಹವ್ಯಾಸ ಅಭ್ಯಾಸಗಳು, ಅವರ ಬಳಿ ಇರುವ ದುಬಾರಿ ಬೆಲೆಯ ವಾಹನಗಳು, ಹೆಚ್ಚು ಮೌಲ್ಯದ ಆಸ್ತಿಗಳು ಇವರು ವಾಸಿಸುವ ಮನೆಗಳು ಇವರ ಪ್ರತಿನಿತ್ಯದ ಆಹಾರ ಶೈಲಿ ಕೊನೆಗೆ ಇವರು ಧರಿಸುವ ಬಟ್ಟೆ ಜ್ಯುವೆಲರಿ ಚಪ್ಪಲಿ ಹೀಗೆ ಎಲ್ಲ ವಿಷಯವೂ ಕೂಡ ಜನರ ಚರ್ಚೆಗೆ ಒಂದು ವಿಷಯವಾಗುತ್ತದೆ. ಈ ರೀತಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುವುದು ನಟಿ ರಾಧಿಕಾ ಪಂಡಿತ್ ಧರಿಸುವ ಬಟ್ಟೆಗಳ ಬಗ್ಗೆ. ನಟಿ ರಾಧಿಕಾ ಪಂಡಿತ್ ಅವರು ಸ್ಯಾಂಡಲ್ವುಡ್ನ ನಂಬರ್ ಒನ್ ಹೀರೋಯಿನ್ ಆಗಿ ಮಿಂಚುತ್ತಿದ್ದರು. ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಇವರು ಮೊಗ್ಗಿನ ಮನಸ್ಸು ಎನ್ನುವ ಸಿನಿಮಾದ ಮೂಲಕ ಸಿನಿಮಾ ಲೋಕವನ್ನು ಪ್ರವೇಶ ಮಾಡಿ ನಂತರ ಚಂದನವನದ ಭರವಸೆಯ ನಾಯಕಿ ಎನಿಸಿಕೊಂಡರು.
ನಟಿ ರಾಧಿಕಾ ಪಂಡಿತ್ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರಾಕಿಂಗ್ ಸ್ಟಾರ್ ಯಶ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸೇರಿದಂತೆ ಹಲವಾರು ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಮಿಂಚಿದ್ದಾರೆ. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ವುಡ್ನ ಲಕ್ಕಿ ಡಾಲ್ ರಾಧಿಕಾ ಪಂಡಿತ್ ಜೋಡಿಯಂತೂ ತೆರೆಮೇಲೆ ಮೋಡಿ ಮಾಡಿದೆ. ಮೊಗ್ಗಿನ ಮನಸ್ಸು, ಡ್ರಾಮಾ, ಸಂತು ಸ್ಟ್ರೈಟ್ ಫಾರ್ವರ್ಡ್, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸೇರಿದಂತೆ ನಾಲ್ಕು ಸಿನಿಮಾಗಳಲ್ಲಿ ಜೋಡಿಯಾಗಿ ಕಾಣಿಸಿಕೊಂಡಿರುವ ಇವರು ನಿಜ ಜೀವನದಲ್ಲೂ ಸಹ ದಂಪತಿಗಳಾಗಿ ಸಂತೋಷವಾಗಿ ಜೀವನ ನಡೆಸುತ್ತಿರುತ್ತಾರೆ. ಈ ಮುದ್ದಾದ ಜೋಡಿಗೆ ಅಥರ್ವ ಮತ್ತು ಐರಾ ಎನ್ನುವ ಎರಡು ಮುದ್ದಾದ ಮಕ್ಕಳಿವೆ. ಮದುವೆಯಾದ ಬಳಿಕ ಸಿನಿಮಾಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ನಟಿ ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಫಾಲವರ್ಸ್ ಇದ್ದಾರೆ. ಇದರ ಜೊತೆಗೆ ಅಭಿಮಾನಿಗಳು ಸಹ ಇವರ ಪ್ರತಿಯೊಂದು ಅಪ್ಡೇಟ್ಸ್ ಗಾಗಿ ಕಾಯುತ್ತಿರುತ್ತಾರೆ. ಸದ್ಯಕ್ಕೆ ಇವರ ಪತಿ ರಾಕಿಂಗ್ ಸ್ಟಾರ್ ಯಶ್ ಅವರು ಸಿನಿಮಾಗಳಲ್ಲಿ ಬ್ಯುಸಿ ಇರುವುದರಿಂದ ಮಕ್ಕಳ ಲಾಲನೆ-ಪಾಲನೆ ಸಂಪೂರ್ಣ ಜವಾಬ್ದಾರಿಯನ್ನು ರಾಧಿಕಾ ಪಂಡಿತ್ ಅವರೇ ಹೊತ್ತಿದ್ದಾರೆ.
ಯಶ್ ಅವರು ಕೂಡ ಸಮಯ ಸಿಕ್ಕಾಗಲೆಲ್ಲ ಕುಟುಂಬದ ಜೊತೆ ಕಾಲ ಕಳೆಯುತ್ತಾರೆ ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳ ಜೊತೆ ಕಾಲ ಕಳೆಯುವ ಸಮಯದ ವೀಡಿಯೋಗಳನ್ನು, ಹಾಗೂ ಇವರು ಹೋಗುವ ಟ್ರಿಪ್ ಗಳಿಗೆ ಸಂಬಂಧಪಟ್ಟ ಫೋಟೋಗಳನ್ನು, ಮತ್ತೆ ಇವರು ಅಟೆಂಡ್ ಆಗುವ ಫಂಕ್ಷನ್ ಗಳ ಫೋಟೋಗಳನ್ನು ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇವರ ಈ ಫೋಟೋಗಳನ್ನು ನೋಡಿ ಜನ ಮೆಚ್ಚುಗೆ ನೀಡಿ ಕಮೆಂಟ್ ನೀಡುವುದರ ಜೊತೆಗೆ ಇವರ ಪ್ರತಿಯೊಂದು ಅಂಶವನ್ನು ಅಭಿಮಾನಿಗಳು ಹಾಗೂ ನೆಟ್ಟಿಗರು ಗಮನಿಸುತ್ತಿರುತ್ತಾರೆ. ಹೀಗಾಗಿ ರಾಧಿಕಾ ಪಂಡಿತ್ ಅವರು ಇತ್ತೀಚೆಗೆ ಧರಿಸುತ್ತಿರುವ ಬಟ್ಟೆಗಳ ಬಗ್ಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಚರ್ಚೆಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ಅವರು ಧರಿಸುತ್ತಿರುವ ಬಟ್ಟೆಗಳ ಡಿಸೈನ್ ಹಾಗೂ ಅವುಗಳ ದುಬಾರಿ ಬೆಲೆಗಳ ವಿಷದಿಂದಾಗಿ ರಾಧಿಕಾ ಪಂಡಿತ್ ಅವರು ಸುದ್ದಿಯಾಗುತ್ತಿದ್ದಾರೆ ರಾಧಿಕಾ ಪಂಡಿತ್ ಅವರು ಮೊದಲಿನಿಂದಲೂ ತಾವು ಧರಿಸಿದ ಬಟ್ಟೆಯ ಬಗ್ಗೆ ತುಂಬಾ ಫ್ಯಾಷನ್ ಹೊಂದಿದ್ದಾರೆ ಸಿನಿಮಾದಲ್ಲಿಯೂ ಸಹ ಇವರ ಧರಿಸುವ ಬಟ್ಟೆಗಳು ತುಂಬಾ ಇಂಪ್ರೆಸ್ಸಿವ್ ಆಗಿರುತ್ತವೆ ನಿಜ ಜೀವನದಲ್ಲೂ ಸಹ ತುಂಬಾ ಆಕರ್ಷಕ ರೀತಿಯ ಬಟ್ಟೆಗಳನ್ನು ಧರಿಸುತ್ತಾರೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ನಟಿ ಅಮೂಲ್ಯ ಅವರ ಸೀಮಂತ ಕಾರ್ಯಕ್ರಮಕ್ಕೆ ಹೋಗಿ ರಾಧಿಕಾ ಪಂಡಿತ್ ಅವರು ತೆಗೆಸಿಕೊಂಡಿದ್ದ ಫೋಟೋಗಳು ವೈರಲ್ ಆಗಿದ್ದವು. ಈ ಫೋಟೋಗಳಲ್ಲಿ ರಾಧಿಕಾ ಪಂಡಿತ್ ಅವರು ಧರಿಸಿದ್ದ ಹಸಿರು ಬಣ್ಣದ ಗೌನ್ ತುಂಬಾ ಸೀದಾ ಸಾದವಾಗಿ ಕಾಣುತ್ತಿತ್ತು. ಆದರೆ ಆ ಬಟ್ಟೆಯ ಮೌಲ್ಯವು 19999 ರೂಗಳು ಆಗಿತ್ತು ಈ ಬಟ್ಟೆಗೆ ಇಷ್ಟೊಂದು ಬೆಲೆ ಬಾಳಲು ಕಾರಣ ಆ ರೀತಿ ಡಿಸೈನ್ ಮಾಡಿಸಿದ್ದರಿಂದ ಬಾಲಿವುಡ್ ನಾ ಖ್ಯಾತ ಡಿಸೈನರ್ ಆದ ಮಸಾಪ ಗುಪ್ತಾ ಅವರು ಈ ಬಟ್ಟೆಯನ್ನು ಡಿಸೈನ್ ಮಾಡಿದ್ದರು ಮಾಲ್ಡೀವ್ಸ್ ಗೆ ಹೋಗಿ ಮಕ್ಕಳೊಂದಿಗೆ ರಜಾ ದಿನಗಳನ್ನು ಸಂತೋಷದಿಂದ ಕಳೆದ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಆ ಫೋಟೋಗಳನ್ನು ಕೂಡ ಅವರು ಧರಿಸಿದ್ದ ಬಟ್ಟೆ ಪ್ರೀಟ್ ಚಾರ್ಟರ್ ಲಾಂಗ್ ಬೆಲೆ 13250 ಆಗಿತ್ತು ಮತ್ತು ಇದೆಲ್ಲಕ್ಕಿಂತ ಹೆಚ್ಚಾಗಿ ಕೆಜಿಎಫ್ ಟೂ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ರಾಧಿಕಾ ಪಂಡಿತ್ ಅವರ ಧರಿಸಿದ ಬಟ್ಟೆಯು ಎಲ್ಲರ ಗಮನ ಸೆಳೆದಿತ್ತು ಆ ಬಟ್ಟೆಯ ಮೌಲ್ಯ ಬರೋಬ್ಬರಿ 31 ಸಾವಿರ ರೂಪಾಯಿಗಳು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ.