ಆಂಕರ್ ಅನುಪಮ ಗೌಡ ಅವರು ನಿರೂಪಕಿ ಆಗುವ ಮೊದಲು ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿ ನಂತರ ಕೆಲವು ರಿಯಾಲಿಟಿ ಶೋಗಳನ್ನು ಕೂಡ ಭಾಗವಹಿಸಿ ಆಮೇಲೆ ನಿರೂಪಣೆಯನ್ನು ವೃತ್ತಿಯಾಗಿ ಆರಿಸಿಕೊಂಡರು. ಅನುಪಮ ಗೌಡ ಅವರು ಮೊದಲಿಗೆ ಕಸ್ತೂರಿ ವಾಹಿನಿಯಲ್ಲಿ ಚಿಕ್ಕದಾದ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅದಾದ ಮೇಲೆ ಅಣ್ಣ-ತಂಗಿ ಎನ್ನುವ ಕಳೆದ ಹತ್ತು ವರ್ಷಗಳ ಹಿಂದೆ ಸುವರ್ಣ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯಲ್ಲಿ ತಂಗಿ ಗೌರಿಯ ಪಾತ್ರ ಮಾಡಿ ಕನ್ನಡಿಗರ ಮನಗೆದ್ದರು. ನಂತರ ಜನರು ಇವರನ್ನು ಹೆಚ್ಚಾಗಿ ಗುರುತಿಸಿದ್ದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಚಿ ಸೌ ಸಾವಿತ್ರಿ ಎನ್ನುವ ಧಾರಾವಾಹಿಯಲ್ಲಿ. ಈ ಧಾರಾವಾಹಿಯಲ್ಲಿ ಸಾವಿತ್ರಿ ತಂಗಿಯಾಗಿ ಇವರು ನಿರ್ವಹಿಸುತ್ತಿದ್ದ ವಿನುತಾ ಎನ್ನುವ ಪಾತ್ರವು ಸಹ ಹಲವು ದಿನಗಳ ವರೆಗೆ ಜನರ ಮನಸಿನಲ್ಲಿ ಉಳಿದುಕೊಂಡಿತ್ತು. ನಂತರ ಅನುಪಮ ಗೌಡ ಅವರು ಯಾವಾಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಕ್ಕ ಎನ್ನುವ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಮೊದಲ ಬಾರಿಗೆ ಸ್ವತಂತ್ರ ನಾಯಕಿಯಾಗಿ ಮತ್ತು ವಿಶೇಷವಾಗಿ ದ್ವಿಪಾತ್ರದಲ್ಲಿ ಒಂದು ಪಾಸಿಟಿವ್ ಹಾಗೂ ಮತ್ತೊಂದು ನೆಗೆಟಿವ್ ಶೇಡ್ ನಲ್ಲಿ ತೆರೆಮೇಲೆ ಅಬ್ಬರಿಸಿದ್ದರು.

ಅಕ್ಕ ಧಾರಾವಾಹಿಯ ಇವರ ಪಾತ್ರವನ್ನು ನೋಡಿದ ಮೇಲೆ ಹಲವಾರು ಜನರು ಇವರ ಕಲೆಯ ಬಗ್ಗೆ ಪ್ರಶಂಸೆ ಮಾಡಿದ್ದರು. ಇವುಗಳ ಜೊತೆ ಜೊತೆಗೆ ಡಾರ್ಲಿಂಗ್ ಕೃಷ್ಣ ಅವರಿಗೆ ತಂಗಿಯಾಗಿ ಮದರಂಗಿ ಎನ್ನುವ ಸಿನಿಮಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ನಂತರ ಜೆಕೆ ನಾಯಕನಟನಾಗಿ ಅಭಿನಯಿಸಿದ ಕರಾಳ ರಾತ್ರಿ ಎನ್ನುವ ಸಿನಿಮಾದಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ಅನುಪಮ ಅಭಿನಯಿಸಿದ್ದರು. ಮತ್ತು ತ್ರಯಂಬಕಮ್ ಎನ್ನುವ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರ ಮಗಳಾಗಿ ಆ ಸಿನಿಮಾದಲ್ಲಿ ಕೂಡ ದ್ವಿ ಪಾತ್ರದಲ್ಲಿ ನಟಿಸಿದ್ದ ಖ್ಯಾತಿ ಇವರದು. ಇಷ್ಟೆಲ್ಲಾ ಹೆಸರು ಗಳಿಸಿರುವ ಅವರು ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಿದ್ದು ರಿಯಾಲಿಟಿ ಶೋಗಳ ಮೂಲಕ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸಿಂಗ್ ಸ್ಟಾರ್ ಎನ್ನುವ ರಿಯಾಲಿಟಿ ಶೋ ವೈಲ್ಡ್ ಕಾರ್ಡ್ ಎಂಟ್ರಿ ಎಲ್ಲರಿಗೂ ಸಕ್ಕತ್ ಟಫ್ ಕಾಂಪಿಟೇಶನ್ ಕೊಡುತ್ತಿದ್ದ ಅನುಪಮಾ ಅವರು ಕೂದಲೆಳೆ ಅಂತರದಲ್ಲಿ ವಿನ್ನರ್ ಆಗುವ ಅದೃಷ್ಟ ಕಳೆದುಕೊಂಡರು. ಆದರೆ ಅಷ್ಟರಲ್ಲೇ ಅವರಿಗೆ ಮತ್ತೊಂದು ಅದೃಷ್ಟದ ಮನೆಯ ಬಾಗಿಲು ಓಪನ್ ಆಗಿತ್ತು. ಬಿಗ್ ಬಾಸ್ ಸೀಸನ್ 5 ಅಲ್ಲಿ ಭಾಗವಹಿಸಿ ಹಲವು ದಿನಗಳವರೆಗೆ ದೊಡ್ಮನೆ ಒಳಗೆ ಇರುವ ಅದೃಷ್ಟವನ್ನು ಪಡೆದುಕೊಂಡಿದ್ದರು.

ಅವರ ವೃತ್ತಿ ಬದುಕಿನ ಮತ್ತೊಂದು ಅಧ್ಯಾಯ ಅಲ್ಲಿಂದ ಶುರುವಾಯಿತು ಎಂದೇ ಹೇಳಬಹುದು. ಅನುಪಮ ಅವರು ತುಂಬಾ ಶ್ರಮಜೀವಿ ಇಲ್ಲಿಯವರೆಗೂ ಅವರು ಅವರ ಪ್ರತಿಭೆ ಹಾಗೂ ಸ್ವಂತ ಪ್ರಯತ್ನದಿಂದ ಇಷ್ಟು ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಚಿಕ್ಕವಯಸ್ಸಿನಿಂದಲೇ ತುಂಬಾ ಕಷ್ಟ ಪಟ್ಟು ಬೆಳೆದಿರುವ ಅನುಪಮಾ ಅವರು ಈ ಮಟ್ಟದ ಸಾಧನೆ ಮಾಡುವವರೆಗೆ ಹಲವಾರು ಕಲ್ಲುಮುಳ್ಳಿನ ಹಾದಿಯಲ್ಲಿ ನಡೆದುಕೊಂಡು ಬಂದಿದ್ದಾರೆ. ಚಿಕ್ಕವಯಸ್ಸಿನಿಂದಲೇ ಕುಟುಂಬದ ಭಾರವನ್ನು ಹೊತ್ತಿದ್ದ ಇವರು ತಂದೆ ತಾಯಿಯನ್ನು ಸಾಕುವುದರ ಜೊತೆಗೆ ತಂಗಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಈಗ ಒಂದುಮಟ್ಟದ ನೆಲೆಯನ್ನು ಕಂಡಿರುವ ಇವರ ಪರಿಶ್ರಮವನ್ನು ಕಂಡು ಮತ್ತು ಇವರ ಸಾಧನೆಗೆ ಮೆಚ್ಚಿ ಕರ್ನಾಟಕದ ಹಲವಾರು ಕಿರುತೆರೆಯ ಪ್ರೇಕ್ಷಕರು ಇವರಿಗೆ ಅಭಿಮಾನಿಗಳಾಗಿದ್ದಾರೆ. ಧಾರಾವಾಹಿ ಸಿನಿಮಾ ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿದ್ದ ಅನುಪಮಾ ಗೌಡ ಅವರು ತಾವೊಬ್ಬರು ಅದ್ಭುತ ನಿರೂಪಕಿ ಎನ್ನುವುದನ್ನು ಕೂಡ ಈಗಾಗಲೇ ನಿರೂಪಿಸಿದ್ದಾರೆ.

ಕಲರ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾಭಾರತ ಎನ್ನುವ ಕಾಮಿಡಿ ಶೋ ನಡೆಸಿಕೊಡುತ್ತಿದ್ದ ಅನುಪಮ ಗೌಡ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಹಳ ಜನಪ್ರಿಯತೆ ಪಡೆದ ರಾಜ-ರಾಣಿ ಸೀಸನ್ 1 ಕೂಡ ನಡೆಸಿಕೊಟ್ಟಿದ್ದರು. ಇದರ ಜೊತೆಗೆ ಕಲರ್ಸ್ ನ ಹಲವಾರು ಇವೆಂಟ್ ಗಳಲ್ಲಿ ಇವರು ನಿರೂಪಕಿಯಾಗಿದ್ದರು. ರಾಜ-ರಾಣಿ ಶೋ ಮುಗಿದ ಬಳಿಕ ಸ್ವಲ್ಪ ಬ್ರೇಕ್ ತೆಗೆದುಕೊಂಡ ಇವರು ಇತ್ತೀಚೆಗಷ್ಟೇ ಗೆಳತಿಯರಾದ ನೇಹ ಗೌಡ ಹಾಗೂ ಇಶಿತ ಜೊತೆ ಗೋವಾಗೆ ಟ್ರಿಪ್ ಹೋಗಿ ಬಂದಿದ್ದರು. ಮತ್ತು ತಾವೊಬ್ಬರೇ ಸೋಲೋ ಆಗಿ ಥೈಲ್ಯಾಂಡ್ ಪ್ರವಾಸ ಹೋಗಿರುವ ಬಗ್ಗೆ ಸುಳಿವು ನೀಡಿದ್ದ ಅನುಪಮಾ ಅವರು ತಮ್ಮ ಪ್ರವಾಸಕ್ಕೆ ಸಂಬಂಧಪಟ್ಟ ಹಲವಾರು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಅನುಪಮಾ ಅವರು ಯೂಟ್ಯೂಬ್ ವ್ಲಾಗ್ ಹೊಂದಿದ್ದಾರೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಇವರ ಫಾಲವರ್ಸ್ ಆಗಲಿ ಅಥವಾ ಅಭಿಮಾನಿಗಳೇ ಆಗಲಿ ಯಾರೇ ಕಮೆಂಟ್ ಮಾಡಿದರು ಕೂಡ ಅವುಗಳನ್ನೆಲ್ಲ ಓದಿಕೊಂಡು ಸಾಧ್ಯವಾದಷ್ಟು ಎಲ್ಲರಿಗೂ ಉತ್ತರ ಕೊಟ್ಟು ಸ್ಪಂದಿಸುತ್ತಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಜಾರಾಣಿ ಸೀಸನ್-2 ಆರಂಭವಾದ ಬಳಿಕ ಆ ಕಾರ್ಯಕ್ರಮವನ್ನು ಬೇರೊಬ್ಬ ನಿರೂಪಕಿ ನಡೆಸಿಕೊಡುತ್ತಿದ್ದರು ಇದನ್ನು ನೋಡಿದ ಅಭಿಮಾನಿಗಳು ಬೇಸರಗೊಂಡು ಅನುಪಮಾ ಅವರನ್ನು ಯಾಕೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಎಂದು ಹಲವಾರು ಬಾರಿ ಪ್ರಶ್ನಿಸಿದರು. ಅಭಿಮಾನಿಗಳ ಮತ್ತು ಫಾಲವರ್ಸ್ ಗಳ ಪ್ರಶ್ನೆಗಳಿಗೆ ಉತ್ತರಿಸುವುದು ತನ್ನ ಜವಾಬ್ದಾರಿ ಎಂದು ತಿಳಿದ ಅನುಪಮ ಗೌಡ ಅವರು ಫೇಸ್ಬುಕ್ ಲೈವ್ ಬಂದು ಅಭಿಮಾನಿಗಳ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ನಾನು ಬೇರೆ ಚಾನೆಲ್ ಕಾರ್ಯಕ್ರಮಗಳನ್ನು ಒಪ್ಪಿಕೊಂಡಿದ್ದೇನೆ ಎಂದು ಹಲವರು ತಿಳಿದುಕೊಂಡಿದ್ದಾರೆ ಅಥವಾ ನಾನು ನನ್ನ ಪರ್ಸನಲ್ ಲೈಫ್ ನಲ್ಲಿ ಬ್ಯುಸಿ ಆಗಿದ್ದೇನೆ ಎಂದುಕೊಂಡಿದ್ದಾರೆ ಆದರೆ ಇದ್ಯಾವುದು ಇಲ್ಲ ನಾನು ಮನೆಯಲ್ಲಿಯೇ ಇದ್ದೇನೆ ಹಾಗೂ ಯಾವುದೇ ಪ್ರಾಜೆಕ್ಟ್ ಗಳಲ್ಲೂ ಬ್ಯುಸಿಯಾಗಿಲ್ಲ. ನನ್ನದೇ ಆದ ಹಲವಾರು ಕಾರಣಗಳಿಂದಾಗಿ ನಾನು ಕಾರ್ಯಕ್ರಮ ನಡೆಸಿಕೊಡಲು ಆಗುತ್ತಿಲ್ಲ ಈ ಬಗ್ಗೆ ನನಗೂ ಬೇಸರವಿದೆ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ಮತ್ತೊಮ್ಮೆ ಅನುಪಮ ಅವರನ್ನು ಆಂಕರ್ ಆಗಿ ನೋಡಬೇಕ.? ಕಾಮೆಂಟ್ ಮುಖಾಂತರ ನಮಗೆ ಉತ್ತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.
