ಅಶ್ವಗಂಧ ಈ ಹೆಸರೇ ಸೂಚಿಸುವಂತೆ ಅದೇ ರೀತಿಯ ಶಕ್ತಿಯ ಗುಣವನ್ನು ಹೊಂದಿದೆ ಇದು. ಅಶ್ವಗಂಧಕ್ಕೆ ಈ ಹೆಸರು ಬರಲು ಕಾರಣ ಇದರ ಬೇರಿನ ವಾಸನೆಯು ಕುದುರೆಯ ವಾಸನೆಯ ರೀತಿ ಇರುವುದು. ಜೊತೆಗೆ ಈ ಅಶ್ವಗಂಧದಿಂದ ತಯಾರಿಸಿದ ಔಷಧಿಯು ಅನೇಕ ರೋಗಗಳಿಗೆ ಚಿಕಿತ್ಸೆಯಾಗಿರುವುದರಿಂದ ಈ ಮೂಲಕ ಅವರ ಕಾಯಿಲೆ ಗುಣವಾಗಿ ಸದೃಢರಾಗುವ ಕಾರಣ ಇದಕ್ಕೆ ಅಶ್ವದಷ್ಟು ಶಕ್ತಿ ಇದೆ ಎಂದು ಅಶ್ವಗಂಧ ಎಂದು ಕರೆದಿರಬಹುದು.
ಆಯುರ್ವೇದ ಪದ್ಧತಿಯಲ್ಲಿ ಅನೇಕ ಸಂಹಿತೆಗಳಲ್ಲಿ ಅಶ್ವಗಂಧದ ಬಗ್ಗೆ ಸವಿವರವಾದ ಉಲ್ಲೇಖಗಳು ಇದೆ. ಇಂದಿಗೂ ಕೂಡ ಮನುಷ್ಯರನ್ನು ಬಾಧಿಸುತ್ತಿರುವ ಸಾಮಾನ್ಯ ಕಾಯಿಲೆಯಿಂದ ಹಿಡಿದು ಗಂಭೀರ ಅನಾರೋಗ್ಯದ ತನಕ ಅನೇಕ ಸಮಸ್ಯೆಗಳಿಗೆ ಅಶ್ವಗಂಧ ದಿವ್ಯ ಔಷಧ ಆಗಿದೆ. ಅವುಗಳಲ್ಲಿ ಕೆಲವೊಂದರ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
● ಅಶ್ವಗಂಧದ ಬೇರನ್ನು ಒಣಗಿಸಿ ಸುಟ್ಟು ಭಸ್ಮ ಮಾಡಿ, ಇದರ ಜೊತೆಗೆ ಅಮೃತಬಳ್ಳಿ ಕಾಂಡವನ್ನು ಕೂಡ ಸುಟ್ಟು ಭಸ್ಮ ಮಾಡಿ ಇವೆರಡನ್ನು ತುಲಾ ಕಾಲು ಚಮಚ ತೆಗೆದುಕೊಂಡು ಒಂದು ಚಮಚ ಜೇನುತುಪ್ಪದ ಜೊತೆ ಮಿಕ್ಸ್ ಮಾಡಿ ಸೇವಿಸಿದರೆ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸರ್ವ ಸಮಸ್ಯೆಗಳು ನಿವಾರಣೆ ಆಗುತ್ತವೆ.
● ಚರ್ಮವ್ಯಾಧಿಗಳಿಂದ ಬಳಯುತ್ತಾ ಇರುವವರಿಗೆ ಪಿತ್ತವಿಕಾರದಿಂದ ಚರ್ಮವ್ಯಾಧಿ ಹೆಚ್ಚಾಗುತ್ತಾ ಇದ್ದರೆ ಅಶ್ವಗಂಧದ ಬೇರಿನ ಪುಡಿಯನ್ನು ಕಷಾಯದ ರೂಪದಲ್ಲಿ ಸೇವಿಸಿದರೆ ಗುಣವಾಗುತ್ತದೆ. ಅಶ್ವಗಂಧ ಕ್ವಾತ ಚೂರ್ಣವನ್ನು ಕಷಾಯ ಮಾಡಿಕೊಂಡು ಸೇವಿಸಿದರೂ ಕೂಡ ಚರ್ಮರೋಗಗಳು ನಿವಾರಣೆ ಆಗುತ್ತವೆ.
● ಅಶ್ವಗಂಧದ ಭಸ್ಮವನ್ನು ಕೊಬ್ಬರಿ ಎಣ್ಣೆ ಜೊತೆ ಮಿಕ್ಸ್ ಮಾಡಿ ಶ್ವೇತ ಕುಟಜ (ತೊನ್ನು), ಬಿಳಿ ಮಚ್ಚೆ ಸಮಸ್ಯೆ ಇರುವವರು ಹಚ್ಚುವುದರಿಂದ ಈ ಸಮಸ್ಯೆ ಕಡಿಮೆ ಆಗುತ್ತದೆ.
● ಅಶ್ವಗಂಧ ಕ್ವಾತಚೂರ್ಣ, ಅಮೃತ ಬಳ್ಳಿ ಕ್ವಾತ ಚೂರ್ಣ, ಮಂಜಿಷ್ಠ ಕ್ವಾತಚೂರ್ಣ ಈ ಮೂರನ್ನು ಎರಡು ಚಮಚಗಳಷ್ಟು ತೆಗೆದುಕೊಂಡು ಒಂದು ಲೀಟರ್ ನೀರಿಗೆ ಸೇರಿಸಿ ಅದು ಕಾಲು ಲೀಟರ್ ಆಗುವವರೆಗೂ ಕುದಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಸೋರಿಯಾಸಿಸ್ ನಂತಹ ಕಾಯಿಲೆಗಳು ಕೂಡ ಗುಣವಾಗುತ್ತವೆ. ಹುಳಕಡ್ಡಿ, ಗ್ಯಾಂಗ್ರಿನ್ ಇಂತಹ ಸಮಸ್ಯೆಗಳು ಕೂಡ ದೂರವಾಗುತ್ತವೆ.
● ಅಶ್ವಗಂಧವನ್ನು ಸತ್ ಅಥವಾ ರಸಾಯನ ರೂಪದಲ್ಲಿ ಸೇವನೆ ಮಾಡುವುದರಿಂದ ನರಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ಬರುವುದಿಲ್ಲ.
● ರಕ್ತನಾಳಗಳು ಬಂದಿ ಆಗುವುದರಿಂದ ವೃಷಣದಲ್ಲಿ ಉಂಟಾಗುವ ವೆರಿಕೋಸಿಲ್, ಮತ್ತು ದೇಹದ ಇತರೆ ಭಾಗದಲ್ಲಿ ಕಂಡುಬರುವ ಹೈಡ್ರೋಸಿನ್ ಇಂತಹ ಕಾಯಿಲೆಗಳು ಕೂಡ ಬರುವುದಿಲ್ಲ, ಹೃದಯದಲ್ಲಿ ರಕ್ತನಾಳಗಳು ಬ್ಲಾಕ್ ಆಗಿದ್ದರೆ ಅದು ಕೂಡ ಕ್ಲಿಯರ್ ಆಗುತ್ತದೆ.
● ಅಶ್ವಗಂಧವನ್ನು ರಸಾಯನ ರೂಪದಲ್ಲಿ ಸೇವನೆ ಮಾಡಿದರೆ ಮೆದುಳಿಗೆ ಮೇಧ್ಯವಾಗಿ ಕೆಲಸ ಮಾಡುತ್ತದೆ.
● ಅಶ್ವಗಂಧದ ಮಾತ್ರೆಗಳನ್ನು ಸೇವನೆ ಮಾಡುವುದರಿಂದ ನಿದ್ರಾಹೀನತೆ, ಒತ್ತಡ, ಡಿಪ್ರೆಶನ್ ಮುಂತಾದ ಮಾನಸಿಕ ವಿಕಾರಗಳು ದೂರ ಆಗುತ್ತವೆ.
● ಅಶ್ವಗಂಧದ ಸೇವನೆಯಿಂದ ಕೂದಲು ಹಾಗೂ ಕಣ್ಣಿನ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು.
● ಸುಸ್ತು, ನಿಶಕ್ತಿ, ಆಯಾಸ ಈ ರೀತಿ ಸಮಸ್ಯೆಗಳಿಗೂ ಕೂಡ ಔಷಧಿಯಾಗಿ ಇದು ಕೆಲಸ ಮಾಡುತ್ತದೆ. ಇದರೊಂದಿಗೆ ಕೆಮ್ಮು, ಕಫ, ನೆಗಡಿ ಇವುಗಳಿಗೂ ಕೂಡ ಅಶ್ವಗಂಧದ ಸೇವನೆ ಒಳ್ಳೆಯ ಔಷಧ. ಅಶ್ವಗಂಧದ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.