ಆಸ್ತಿಯ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಕಾನೂನು ಕೊಡುವ ನ್ಯಾಯಬದ್ದವಾದ ತೀರ್ಪು ಕೆಲವೊಮ್ಮೆ ನ್ಯಾಯಾಲಯದ ಮೇಲೆ ಇರುವ ಗೌರವ ಹಾಗೂ ನಂಬಿಕೆಯನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. ಮತ್ತೊಮ್ಮೆ ಇದೇ ರೀತಿಯಾದ ಘಟನೆ ಮುಂಬೈ ಸೆಷನ್ ಕೋರ್ಟ್ ಅಲ್ಲಿ ನಡೆದಿದೆ.
ದಂಪತಿಗಳ ಇಬ್ಬರ ವಿಚ್ಛೇದನಕ್ಕೆ ಸಂಬಂಧಪಟ್ಟ ಹಾಗೆ ಪತ್ನಿ ಕೋರಿದ ಜೀವನಾಂಶದ ಪ್ರಕರಣದಲ್ಲಿ ಕೋರ್ಟ್ ಪತಿಯ ಪರವಾಗಿ ತೀರ್ಪು ನೀಡಿರುವುದು ಮೊದಲ ನೋಟಕ್ಕೆ ಆಶ್ಚರ್ಯ ಎನಿಸಿದರು ಕೂಡ ಪ್ರಕರಣದ ತನಿಖೆ ನಡೆಸಿ ಕೋರ್ಟ್ ಕೊಟ್ಟಿರುವ ಈ ತೀರ್ಪಿಗೆ ತಲೆಬಾಗಲೇ ಬೇಕು ಎನಿಸುತ್ತದೆ.
ಇಂತಹ ಒಂದು ತೀರ್ಪಿಗೆ ಮೇ 28 ನೇ ತಾರೀಕು, ಮುಂಬೈ ಸೆಷನ್ನ ಕೋರ್ಟ್ ಸಾಕ್ಷಿ ಆಗಿದೆ. ಪ್ರಕರಣದ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ. ವಿ.ಚ್ಛೇದನ ಪಡೆದಿದ್ದ ಪತಿಯ ಮೇಲೆ ಪತ್ನಿಯು ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಮ್ಯಾಜಿಸ್ಟೇಟ್ ಕೋರ್ಟ್ ಪತ್ನಿಯು ಪತಿಗಿಂತ ಹೆಚ್ಚು ಆದಾಯ ಹೊಂದಿದ್ದಾರೆ ಎನ್ನುವುದನ್ನು ಪರಿಗಣಿಸಿ ಆಕೆ ಪತಿಗಿಂತ 4 ಲಕ್ಷ ಹೆಚ್ಚು ಆದಾಯವನ್ನು ಪಡೆಯುತ್ತಿರುವ ಕಾರಣ ಜೀವನಾಂಶವನ್ನು ನೀಡುವ ಅವಶ್ಯಕತೆ ಇಲ್ಲ ಎಂದು ತೀರ್ಪು ನೀಡಿತ್ತು.
ಆದರೆ ಆಕೆ ನಂತರ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಮುಂಬೈ ಸೆಷನ್ಸ್ ಕೋರ್ಟ್ ನ್ಯಾಯಾಲಯದ ನ್ಯಾಯಮೂರ್ತಿ ಸಿವಿ ಪಾಟೀಲ್ ನೇತೃತ್ವದ ಪೀಠವು ಈ ಕೇಸ್ ಅನ್ನು ಕೈಗೆತ್ತಿಕೊಂಡು ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿರುವ ತೀರ್ಪು ಈ ಪರಿಸ್ಥಿತಿಯ ದೃಷ್ಟಿಯಿಂದ ಸರಿಯಾಗಿದೆ ಎನ್ನುವುದನ್ನು ತಿಳಿಸಿ ಅದೇ ತೀರ್ಪನ್ನು ಎತ್ತಿ ಹಿಡಿದಿದೆ. ಪತಿಗಿಂತ ಪತ್ನಿ ಹೆಚ್ಚು ಸಂಪಾದನೆ ಮಾಡುತ್ತಾ ಇದ್ದರೆ ಜೀವನಾಂಶ ನೀಡುವ ಅವಶ್ಯಕತೆ ಇಲ್ಲ ಎನ್ನುವ ತೀರ್ಪನ್ನು ಈ ಪ್ರಕರಣಕ್ಕೆ ನೀಡಿದೆ.
ಪ್ರಕರಣದಲ್ಲಿ ಪತಿಯು ಲೈಂಗಿಕ ಸಮಸ್ಯೆ ಹೊಂದಿದ್ದು ಅದನ್ನು ಪತ್ನಿಯಿಂದ ಮುಚ್ಚಿಟ್ಟಿದ್ದರು. ಆದರೆ ಆಕೆ ಗರ್ಭಿಣಿ ಆಗಿದ್ದರಿಂದ ಆಕೆಯ ಚಾರಿತ್ಯದ ಮೇಲೆ ಅನುಮಾನ ಪಟ್ಟು ದಿನ ಜಗಳ ಆಡುತ್ತಿದ್ದರು. ಮಗು ಜನಿಸಿದ ಬಳಿಕ ಆಕೆಯನ್ನು ಬಲವಂತವಾಗಿ ತಾಯಿ ಮನೆಗೆ ಕಳಿಸಿದ್ದರು, ವಿಚ್ಛೇದನವು ಆಗಿತ್ತು. ನಂತರ ಪತ್ನಿಯು 2011ರಲ್ಲಿ ಮಾಜಿ ಪತಿ ಕುಟುಂಬದವರ ವಿರುದ್ಧ ಕೌಟುಂಬಿಕ ಹಿಂಸೆಯ ಪ್ರಕರಣ ದಾಖಲಿಸಿ, ಜೀವನಾಂಶ ಬೇಕು ಎಂದು ಕೋರ್ಟ್ ಮೆಟ್ಟಿಲು ಏರಿದ್ದರು.
ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಕೂಲಂಕುಶವಾಗಿ ತನಿಖೆ ನಡೆಸಿದ ಕೌಟುಂಬಿಕ ಕೋರ್ಟ್ ಈಗ ಇಂತಹ ನ್ಯಾಯಬದ್ಧವಾದ ತೀರ್ಪನ್ನು ನೀಡಿದೆ. ಇನ್ನು ಮುಂದೆ ಇದೇ ರೀತಿಯಾಗಿ ಪತ್ನಿಯು ಪತಿ ಆದಾಯಕ್ಕಿಂತ ಹೆಚ್ಚು ಆದಾಯ ಹೊಂದಿದ್ದು ನಂತರ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದರೆ ಅವರಿಗೂ ಸಹ ಇದು ಅನ್ವಯ ಆಗುವ ಸಾಧ್ಯತೆಯೂ ಇದೆ.
ಒಂದೇ ತರನಾದ ಕೇಸ್ಗಳಿಗೆ ಒಂದೇ ರೀತಿಯ ತೀರ್ಪುಗಳು ಹೊರ ಬೀಳುತ್ತವೆ ಎನ್ನುವುದನ್ನು ಕೂಡ ಖಂಡಿತವಾಗಿ ಊಹಿಸುವುದು ಅಸಾಧ್ಯ. ಯಾಕೆಂದರೆ ಪ್ರಕರಣಗಳನ್ನು ದಾಖಲಿಸಿಕೊಂಡು ಅದನ್ನು ಕುಲಂಕುಶವಾಗಿ ನೋಡಿ ನಂತರ ಅನ್ಯಾಯ ಆದವರ ಪರ ನ್ಯಾಯಾಲಯ ನಿಲ್ಲುತ್ತದೆ. ಆದ್ದರಿಂದ ಒಂದು ವೇಳೆ ಇಂತಹ ಪ್ರಕರಣಗಳಲ್ಲಿ ಪತಿ ನೊಂದಿದ್ದು ಪತ್ನಿಯು ಜೀವನಾಂಶವನ್ನು ಒಂದು ಅಸ್ತ್ರವನ್ನಾಗಿ ಬಳಸುತ್ತಿದ್ದರೆ.
ಇನ್ನು ಮುಂದೆ ಅವರ ಪರವಾಗಿ ಕೋರ್ಟ್ ಇರುತ್ತದೆ ಎನ್ನುವ ಧೈರ್ಯವನ್ನು ಈ ಪ್ರಕರಣ ನೀಡಿದೆ ಎಂದೇ ಭಾವಿಸಬಹುದು. ಒಟ್ಟಿನಲ್ಲಿ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಈ ಪ್ರಕರಣದ ವಿಷಯವು ಹೆಚ್ಚು ಗಮನ ಸೆಳೆಯುತ್ತಿದ್ದು ಎಲ್ಲರೂ ಈ ಬಗ್ಗೆ ಪರ ಹಾಗೂ ವಿರೋಧ ಚರ್ಚೆ ಮಾಡುತ್ತಿದ್ದಾರೆ.