ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಸದ್ಯಕ್ಕೆ ಕನ್ನಡ ಚಲನಚಿತ್ರರಂಗದಲ್ಲಿ ಬಹುಬೇಡಿಕೆ ಹೊಂದಿರುವ ಸ್ಟಾರ್ ನಟ. ಮೂಲತಃ ಕಲಾವಿದರ ಕುಟುಂಬದಿಂದಲೇ ಬೆಳೆದು ಬಂದಿರುವ ಧ್ರುವ ಸರ್ಜಾ ಅವರು ಶಕ್ತಿ ಪ್ರಸಾದ್ ಅವರ ಮೊಮ್ಮಗ ಮತ್ತು ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರಿಗೆ ಸೋದರಳಿಯ. ಹೀಗೆ ಶಕ್ತಿಪ್ರಸಾದ್ ಕುಟುಂಬದ ಹಲವು ಕುಡಿಗಳು ಕನ್ನಡ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದು ಕಲಾ ಸೇವೆ ಮಾಡುತ್ತಿದ್ದಾರೆ. ಅರ್ಜುನ್ ಸರ್ಜಾ ಅವರ ಪತ್ನಿಯೂ ಸಹ ಕಲಾವಿದೆಯಾಗಿದ್ದರು. ಮತ್ತು ಅರ್ಜುನ್ ಸರ್ಜಾ ಅವರ ಹಿರಿಯ ಪುತ್ರಿಯಾದ ಐಶ್ವರ್ಯ ಸರ್ಜಾ ಅವರು ಕೂಡ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ತಂದೆಯ ನಿರ್ದೇಶನದ ಪ್ರೇಮಬರಹ ಎನ್ನುವ ಸಿನಿಮಾದಲ್ಲಿ ಐಶ್ವರ್ಯ ಸರ್ಜ ಅವರು ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡರು. ಅಲ್ಲದೆ ಧ್ರುವ ಸರ್ಜಾ ಅವರ ಅಣ್ಣನಾದ ಚಿರಂಜೀವಿ ಸರ್ಜಾ ಹಾಗೂ ಮೇಘನಾರಾಜ್ ಕೂಡ ಕನ್ನಡ ಸಿನಿಮಾಗಳಲ್ಲಿ ಹೆಸರಾಂತ ಜೋಡಿಯಾಗಿದ್ದರು. ಧ್ರುವ ಸರ್ಜಾ ಅವರು ಕಲಾವಿದ ಕುಟುಂಬದಿಂದಲೇ ಬಂದಿರುವುದರಿಂದ ಸಹಜವಾಗಿ ಅವರಿಗೆ ಸಿನಿಮಾ ಪ್ರಪಂಚದ ಬಗ್ಗೆ ಆಕರ್ಷಣೆ ಉಂಟಾಗಿರುತ್ತದೆ.

ಈ ರೀತಿಯಾಗಿ ತಮ್ಮ ಆಸಕ್ತಿ ಹಾಗೂ ಸ್ವಂತ ಪರಿಶ್ರಮದಿಂದ 2012ರಲ್ಲಿ ಮೊದಲ ಬಾರಿಗೆ ಧ್ರುವ ಸರ್ಜಾ ಅವರು ನಾಯಕನಟನಾಗಿ ಕಾಣಿಸಿಕೊಂಡಿದ್ದರು. ಕೆಪಿ ಅರ್ಜುನ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಅದ್ದೂರಿ ಸಿನಿಮಾಕ್ಕಾಗಿ ನಡೆಸಿದ್ದ ಆಡಿಶನ್ ಅಲ್ಲಿ ಧ್ರುವ ಸರ್ಜಾ ಅವರು ಸೆಲೆಕ್ಟ್ ಆಗಿದ್ದರು. ಅದ್ದೂರಿ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಧ್ರುವ ಸರ್ಜಾ ಅವರು ಕನ್ನಡಿಗರ ಮನಸ್ಸನ್ನು ಸೆಳೆದಿದ್ದರು. ಅದ್ದೂರಿ ಸಿನಿಮಾದಲ್ಲಿ ರಾಧಿಕಾ ಪಂಡಿತ್ ಅವರು ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿ ಅಭಿನಯಿಸಿದ್ದರು. ಈ ಮುದ್ದಾದ ಜೋಡಿ ಸ್ಯಾಂಡಲ್ ವುಡ್ ನಲ್ಲಿ ಹಿಟ್ ಜೋಡಿ ಆಗಿ ಪಾಪುಲರ್ ಜೋಡಿ ಎನಿಸಿಕೊಂಡಿತ್ತು. ಅದ್ದೂರಿ ಸಿನಿಮಾದ ಬಳಿಕ ಧ್ರುವ ಸರ್ಜಾ ಅವರು ಮತ್ತು ರಾಧಿಕಾ ಪಂಡಿತ್ ಅವರು ಮತ್ತೊಮ್ಮೆ ತೆರೆಮೇಲೆ ಒಟ್ಟಾಗಿ ಬಹುದ್ದೂರ್ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾವು 2013ರಲ್ಲಿ ಸೆಟ್ಟೇರಿತ್ತು. ಈ ಸಿನಿಮಾ ಕೂಡ ಭರ್ಜರಿ ಪ್ರದರ್ಶನ ಕಂಡು ಮತ್ತೊಮ್ಮೆ ಧ್ರುವ ಸರ್ಜಾ ಅವರಿಗೆ ಗೆಲುವು ತಂದುಕೊಟ್ಟಿತ್ತು. ಈ ಎರಡು ಸಿನಿಮಾಗಳಾದ ಬಳಿಕ ಸ್ವಲ್ಪ ಡಿಫರೆಂಟ್ ಲುಕ್ಕಿನಲ್ಲಿ ಧ್ರುವ ಸರ್ಜಾ ಅವರು ಭರ್ಜರಿ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಜೊತೆಯಲ್ಲಿ ರಚಿತಾ ರಾಮ್ ಮತ್ತು ಹರಿಪ್ರಿಯಾ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಸಾಯಿಕುಮಾರ್ ತಾರಾ ಸುಚೇಂದ್ರ ಪ್ರಸಾದ್ ಇನ್ನು ಮುಂತಾದ ಹಲವಾರು ಹಿರಿಯ ಕಲಾವಿದರುಗಳು ಈ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಹಿಟ್ ಆದ ಬಳಿಕ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಹ್ಯಾಟ್ರಿಕ್ 3 ಹಿಟ್ ಗಳನ್ನು ಬ್ಯಾಕ್ 2 ಬ್ಯಾಕ್ ಪಡೆದ ಹೀರೋ ಎನಿಸಿಕೊಂಡರು. ಇಲ್ಲಿಯವರೆಗೂ ಕ್ಲಾಸ್ ಲುಕ್ಕಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಧ್ರುವ ಸರ್ಜಾ ಅವರು ತಮ್ಮ ನಾಲ್ಕನೇ ಸಿನಿಮಾವಾದ ಪೊಗರು ಎನ್ನುವ ಸಿನಿಮಾದಲ್ಲಿ ಸಕ್ಕತ್ ಮಾಸ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಹಾಡುಗಳು ಹಿಟ್ ಆಗುವುದರ ಜೊತೆಗೆ ಸಿನಿಮಾ ಬಗ್ಗೆ ಕೆಲವೊಂದಿಷ್ಟು ವಿವಾದಗಳು ಉಂಟಾಗಿದ್ದವು. ಎಲ್ಲಾ ವಿವಾದಗಳನ್ನು ಬಗೆಹರಿಸಿಕೊಂಡ ಮೇಲೆ ಸಿನಿಮಾ ತುಂಬಾ ಯಶಸ್ಸನ್ನು ಗಳಿಸಿತ್ತು. ತಮ್ಮ ವೃತ್ತಿ ಬದುಕಿನಲ್ಲಿ ಇಷ್ಟೊಂದು ಯಶಸ್ಸು ಗಳಿಸಿರುವ ದ್ರುವ ಸರ್ಜಾ ಅವರ ವೈಯುಕ್ತಿಕ ಬದುಕು ಕೂಡ ಅಷ್ಟೇ ಸುಂದರವಾಗಿತ್ತು. ಧ್ರುವ ಸರ್ಜಾ ಅವರು ಅವರ ಸಹೋದರನಾದ ಚಿರಂಜೀವಿ ಸರ್ಜಾ ಅವರನ್ನು ಬಹಳ ಇಷ್ಟಪಡುತ್ತಿದ್ದರು. ಜೊತೆಗೆ ಚಿರಂಜೀವಿ ಸರ್ಜಾ ಅವರ ಪತ್ನಿಯಾದ ಮೇಘನಾರಾಜ್ ಅವರನ್ನು ಕೂಡ ಬಹಳ ಪ್ರೀತಿ ಹಾಗೂ ವಿಶ್ವಾಸದಿಂದ ಕಾಣುತ್ತಿದ್ದರು.

ಧ್ರುವ ಸರ್ಜಾ ಅವರು ಪ್ರೇರಣಾ ಎನ್ನುವ ತಮ್ಮ ಬಾಲ್ಯ ಸ್ನೇಹಿತೆಯನ್ನು ಪ್ರೀತಿಸಿ ಕುಟುಂಬದವರ ಒಪ್ಪಿಗೆ ಮೇಲೆ ಅದ್ದೂರಿಯಾಗಿ ವಿವಾಹವಾದರು. ಇವರ ವಿವಾಹವನ್ನು ಚಿರಂಜೀವಿ ಸರ್ಜಾ ಹಾಗೂ ಮೇಘನಾರಾಜ್ ಅವರೇ ಜವಾಬ್ದಾರಿ ಹೊತ್ತುಕೊಂಡು ನಡೆಸಿಕೊಟ್ಟಿದ್ದರು. ಅಣ್ಣ-ತಮ್ಮಂದಿರ ಬಾಂಧವ್ಯದ ಮೇಲೆ ಯಾರ ಕೆಟ್ಟ ದೃಷ್ಟಿ ಬಿದ್ದಿದೆ ಏನೋ ಚಿರು ಇನ್ನೆಂದು ಬಾರದಂತೆ ಎಲ್ಲರನ್ನೂ ಆಗಲಿ ಚಿರನಿದ್ರೆಗೆ ಜಾರಿದರು. ಇದಾದ ಬಳಿಕ ಪತ್ನಿ ಮೇಘನರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಕುಟುಂಬದ ಸದಸ್ಯರ ಅನುಭವಿಸಿದ ದುಃಖವನ್ನು ಹೇಳಲು ಅಸಾಧ್ಯ. ಇದರ ನಡುವೆ ಚಿರಂಜೀವಿ ಸರ್ಜಾ ಅವರ ಪುತ್ರ ರಾಯನ್ ಸರ್ಜಾ ಅವರು ಜನಿಸಿದ ಸ್ವಲ್ಪ ಸ್ವಲ್ಪವಾಗಿ ಎಲ್ಲರೂ ಸುಧಾರಿಸಿಕೊಳ್ಳುತ್ತಿದ್ದಾರೆ ಎನ್ನಬಹುದು. ಈ ವರ್ಷ ಚಿರಂಜೀವಿ ಸರ್ಜಾ ಅವರ ಪುಣ್ಯಸ್ಮರಣೆ ಎಂದು ಅವರ ಸ’ಮಾ’ಧಿಯನ್ನು ತಮ್ಮ ಧ್ರುವ ಸರ್ಜಾ ಅವರು ಅಮೃತಶಿಲೆಯಿಂದ ಕಟ್ಟಿಸಿದ್ದಾರೆ. ಅಷ್ಟೇ ಅಲ್ಲದೆ ಬೆಂಗಳೂರಿನ ಹೊರವಲಯದಲ್ಲಿರುವ ತಮ್ಮ ಫಾರಂನಲ್ಲೇ ಅಣ್ಣನ ಸ’ಮಾ’ಧಿಯನ್ನು ಮಾಡಿಸಿಕೊಂಡಿದ್ದರು. ಈಗ ಧ್ರುವ ಸರ್ಜಾ ಅವರು ಬೆಂಗಳೂರಿನ ಮನೆಯನ್ನು ಬಿಟ್ಟು ಫಾರಂ ಹೌಸ್ ನಲ್ಲಿ ಹೋಗಿ ವಾಸಿಸಲು ನಿರ್ಧರಿಸಿದ್ದಾರೆ. ಇವರ ಈ ನಿರ್ಧಾರದ ಬಗ್ಗೆ ಇವರ ಕುಟುಂಬದ ಹತ್ತಿರದ ಸ್ನೇಹಿತರಾದ ದರ್ಶನ್ ಅವರು ಕೂಡ ಒಳ್ಳೆಯ ನಿರ್ಧಾರ ಇದು ಎಂದು ತಿಳಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ಕಾಮೆಂಟ್ ಮುಖಾಂತರ ತಿಳಿಸಿ.