ನಮಗೆ ಏನೇ ಸಮಸ್ಯೆ ಬಂದರೂ ನಮಗೆ ಬೇಗ ನೆನಪಾಗೋದು ದೇವರು. ಎಲ್ಲಾ ಸಮಸ್ಯೆಗೂ ಪರಿಹಾರ ನೀಡ್ತಾನೆ ಅನ್ನೋದು ಎಲ್ಲರ ನಂಬಿಕೆ. ಅದರಂತೆ, ಹಣಕಾಸಿನ ಸಮಸ್ಯೆ ಕೂಡ ಪ್ರತಿಯೊಬ್ಬರ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆಲ್ಲ ಪರಿಹಾರ ಬೇಕಂದ್ರೆ, ನೀವೊಮ್ ಈ ದೇವರ ದರ್ಶನ ಪಡೆದರೆ ಸಾಕು. ನಿಮ್ಮ ಹಣಕಾಸಿ ಕಷ್ಟಗಳೆಲ್ಲವೂ ಪರಿಹಾರವಾಗುವುದು.
ಹಣಕಾಸಿನ ಸಮಸ್ಯೆ ಇದ್ದರೆ ಹಿರಿಯರು ವೆಂಕಟೇಶ್ವರನ ಧ್ಯಾನ ಮಾಡಬೇಕು ಎಂದು ಹೇಳುತ್ತಾರೆ. ಎಷ್ಟೋ ಜನರು ಸಾಲದಿಂದ ಹೊರಬರಲಾಗದೆ ಕಷ್ಟಪಡುತ್ತಿರುತ್ತಾರೆ. ಅಂತವರು ವೆಂಕಟೇಶ್ವರ ಸ್ವಾಮಿಯ ಆರಾಧನೆ ಮಾಡಿ ಹಾಗೂ ಅವನ ಸನ್ನಿಧಾನಕ್ಕೆ ಭೇಟಿ ನೀಡಿ. ತಿರುಪತಿಯ ವೆಂಕಟೇಶ್ವರನ ಸ್ವಾಮಿಯ ಬಳಿ ಹೋಗಬೇಕೆಂದರೆ 2 ರಿಂದ 3 ದಿನ ತೆಗೆದುಕೊಳ್ಳುತ್ತದೆ ಇದು ಬಡವರಿಗೆ ಕಷ್ಟವಾಗಬಹುದು.
ಅದಕ್ಕಾಗಿಯೇ ಬೆಂಗಳೂರಿನಲ್ಲಿರುವ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನಕ್ಕೂ ಕೂಡ ನೀವು ಹೋಗಿ ನಿಮ್ಮ ಪ್ರಾರ್ಥನೆಯನ್ನು ಸಲ್ಲಿಸಬಹುದು. ಇದು ತಿರುಪತಿ (Tirupathi) ಅರ್ಚಕರು ಬಂದು ಇಲ್ಲಿ ಪ್ರತಿಷ್ಠಾಪನೆ ಮಾಡಿರುವುದು ಇಲ್ಲಿನ ಪೂಜೆಯ ವಿಧಾನ ದೇವರು ಎಲ್ಲವೂ ಕೂಡ ತಿರುಪತಿಯಲ್ಲಿ ಹೇಗೆ ನಡೆಯುತ್ತದೆ ಅದೇ ರೀತಿಯಾಗಿ ಪೂಜೆ ಸಲ್ಲಿಸುತ್ತಾರೆ.
ಶನಿವಾರದಂದು ತಿರುಪತಿ ಸ್ವಾಮಿಯ ಲಡ್ಡು ಕೂಡ ನಿಮಗೆ ಸಿಗುತ್ತದೆ. ಈ ದೇವಸ್ಥಾನಕ್ಕೆ ಹೋದಾಗ ಮನಸ್ಸಿಗೆ ಬಹಳ ಹಿತ ನೀಡುತ್ತದೆ ನಿಮಗೆ ಮನಸ್ಸು ಭಾರವೆನಿಸಿದಾಗ ನೀವು ಬೆಂಗಳೂರಿನಲ್ಲಿರುವ ತಿರುಪತಿ ದೇವಸ್ಥಾನಕ್ಕೆ ಹೋದರೆ, ನಿಮ್ಮ ಮನಸ್ಸಿನ ಕಳವಳ ದೂರವಾಗುತ್ತದೆ. ಈ ದೇವಸ್ಥಾನ ಬಹಳ ಅದ್ಭುತವಾಗಿದೆ. ಇಲ್ಲಿ ವೆಂಕಟೇಶ್ವರ ಸ್ವಾಮಿ ಅಷ್ಟೇ ಅಲ್ಲದೇ ಆಂಜನೇಯ ಹಾಗೂ ಲಕ್ಷ್ಮಿ ದೇವರ ಮೂರ್ತಿ ಕೂಡ ಇದೆ.
ಈ ದೇವಸ್ಥಾನ ಸಂಪೂರ್ಣವಾಗಿ ಕಲ್ಲಿನಿಂದ ಕಟ್ಟಲಾಗಿದೆ ಹಾಗೂ ಇದು ಬೆಲೆಂಡೂರ್ ಕೆರೆ ಪಕ್ಕ ಇದೆ. ಇಡೀ ದೇವಸ್ಥಾನ ತಿರುಪತಿಯಲ್ಲಿ ಇರುವ ಶೈಲಿಯಲ್ಲೇ ಇದೆ. ಹಿಂದೂ ಧರ್ಮದ ಪ್ರಕಾರ, ಮೊದಲ ಪೂಜೆ ಗಣೇಶನಿಗೆ ಸಲ್ಲಿಸಬೇಕಾಗುತ್ತದೆ. ಅದಕ್ಕಾಗಿ ಇಲ್ಲಿ ಮೊದಲು ಗಣೇಶನ ದೇವಸ್ಥಾನವಿದೆ. ಬೆಂಗಳೂರಿನ ತಿರುಪತಿ ದೇವಸ್ಥಾನದಲ್ಲಿ ಶನಿವಾರದಂದು ಬಹಳ ವಿಶೇಷವಾದ ಪೂಜೆ ಮಾಡುತ್ತಾರೆ.
ಮನಸ್ಪೂರ್ತಿಯಾಗಿ ನೀವು ವೆಂಕಟೇಶ್ವರ ಸ್ವಾಮಿಯಲ್ಲಿ ಬೇಡಿಕೊಂಡರೆ ನಿಮ್ಮ ಕಷ್ಟಗಳೆಲ್ಲ ಪರಿಹಾರಗೊಳ್ಳುತ್ತದೆ ಮತ್ತು ನಿಮ್ಮ ಸಾಲದ ಸಮಸ್ಯೆಗಳು ತೀರಿಹೋಗುತ್ತದೆ. ತಿರುಪತಿಗೆ ಹೋಗಲು ಆಗದೆ ಇದ್ದರೆ, ನೀವು ಹತ್ತಿರದಲ್ಲಿರುವ ನಮ್ಮ ಬೆಂಗಳೂರಿನ ತಿರುಪತಿಗೆ ಹೋಗಿ ನಮಸ್ಕರಿಸಿ. ಅಲ್ಲಿ ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳಿ ದೇವರು ನಿಮಗೆ ಒಳ್ಳೆಯದನ್ನು ಮಾಡುತ್ತಾನೆ. ವೆಂಕಟೇಶ್ವರನ ಆರಾಧನೆ ಮಾಡಿ ಸಾಲದ ಸಮಸ್ಯೆ ಬೇಗ ನಿವಾರಣೆ ಆಗುತ್ತದೆ.
ಹಲವಾರು ಜನರಿಗೆ ತಿರುಪತಿ ದೇವಸ್ಥಾನ ಅಂದ್ರೆ ಆಂದ್ರ ಪ್ರದೇಶದಲ್ಲಿರುವ ತಿಮ್ಮಪ್ಪನ ದೇವಸ್ಥಾನವೇ ಬೇಗ ನೆನಪಾಗುತ್ತೆ. ಆದ್ರೆ, ಬೆಂಗಳೂರಿನಲ್ಲಿರುವ ತಿರುಪತಿ ದೇವಸ್ಥಾನಕ್ಕೂ ನೀವು ಭೇಟಿ ನೀಡಿ ತಿಮ್ಮಪ್ಪನ ದರ್ಶನ ಭಾಗ್ಯ ಪಡೆಯಬಹುದಾಗಿದೆ. ತಿರುಪತಿ ಹೋಗಬೇಕು ಅನ್ಕೊಂಡು ಯಾವುದೋ ಕಾರಣದಿಂದ ಹೋಗಲು ಸಾಧ್ಯವಾಗದವರು ಇಲ್ಲಿಗೆ ಹೋಗಿ ದರ್ಶನ ಪಡೆಯಬಹುದು.
ತಿರುಮಲ ತಿರುಪತಿ ದೇವಾಲಯವನ್ನು ಹಿಂದೂ ಧರ್ಮಗ್ರಂಥಗಳಲ್ಲಿ ವಿಷ್ಣು ದೇವನು ಕಲಿಯುಗದಲ್ಲಿ ವಾಸಿಸುವ ಐಹಿಕ ಸ್ಥಳವೆಂದು ವೈಭವಯುತವಾಗಿ ವಿವರಿಸಲಾಗಿದೆ. ತಿರುಪತಿ ಬಾಲಾಜಿ ಅಥವಾ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಹಿಂದೂ ಪುರಾಣದ ಅತ್ಯಂತ ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾಗಿದೆ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಾವು ಈ ಅದ್ಭುತವಾದ ಹಾಗೂ ಪ್ರಭಾವಶಾಲಿಯಾದ ದೇವಾಲಯವನ್ನು ನೋಡಬಹುದು.