ಈ ಸಮಾಜದಲ್ಲಿ ಗಂಡು ಹಾಗೂ ಹೆಣ್ಣು ಕಾನೂನಿನ ಪ್ರಕಾರ ಸಮಾನರು. ಹುದ್ದೆ, ವೇತನ, ಅವಕಾಶಗಳು ಮಾತ್ರವಲ್ಲದೆ ಆಸ್ತಿ ವಿಷಯದಲ್ಲೂ ಕೂಡ ನಮ್ಮ ಕಾನೂನಿನಲ್ಲಿ ಒಬ್ಬ ತಂದೆಯ ಆಸ್ತಿಯಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳು ಇಬ್ಬರಿಗೂ ಕೂಡ ಸಮಾನವಾದ ಪಾಲಿದೆ.
ಹೆಣ್ಣು ಮಗಳು ಮದುವೆಯಾಗಿ ಬೇರೆ ಮನೆಗೆ ಹೋಗಿದ್ದಾಳೆ ಎನ್ನುವ ಕಾರಣಕ್ಕೆ ಆಕೆಗೆ ತಂದೆ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ ಎಂದು ಹೇಳಲು ಬರುವುದಿಲ್ಲ ಆದರೆ ತಂದೆಯ ಎಲ್ಲಾ ಆಸ್ತಿಯಲ್ಲೂ ಕೂಡ ಹೆಣ್ಣು ಮಕ್ಕಳಿಗೆ ಪಾಲು ಇರುವುದಿಲ್ಲ. ತಂದೆಯ ಜೀವಂತ ಇರುವಾಗಲೇ ಪಾಲು ಕೇಳುವ ಹೆಣ್ಣು ಮಕ್ಕಳು ಅಥವಾ ಆಸ್ತಿವಾಗಿ ಕೇಸ್ ಹಾಕುವ ಹೆಣ್ಣು ಮಕ್ಕಳು ತಮ್ಮ ಹಕ್ಕನ್ನು ಕೇಳುವ ಮುನ್ನ ಕೆಲ ವಿಚಾರಗಳನ್ನು ಅರಿತುಕೊಂಡಿರಬೇಕು.
ಇಲ್ಲವಾದಲ್ಲಿ ಮುಂದೆ ಸಿಗಬಹುದಾ ಲಾಭವನ್ನು ಕೂಡ ಕಳೆದುಕೊಳ್ಳಬೇಕಾಗುತ್ತದೆ. ಅವುಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ. ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗಾಗಲಿ ಅಥವಾ ಗಂಡು ಮಕ್ಕಳಿಗಾಗಲಿ, ಪಾಲು ಕೇಳುವ ಹಕ್ಕು ತಂದೆಯ ಜೀವಿತಾವಧಿಯಲ್ಲಿ ಇರುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದೇ ಇದೆ.
ಅವರು ಇಷ್ಟ ಪಟ್ಟವರಿಗೆ ಅವರು ದುಡಿದು ಸಂಪಾದನೆ ಮಾಡಿದ ಆಸ್ತಿ ಹಕ್ಕನ್ನು ವರ್ಗಾಯಿಸಿ ಹೋಗಬಹುದು ಅಥವಾ ಮರಣದ ನಂತರ ಯಾರಿಗೆ ಸೇರಬೇಕು ಎಂದು ವೀಲ್ ಮಾಡಿ ಹೋಗಬಹುದು. ಒಂದು ವೇಳೆ ಉತ್ತರಾಧಿಕಾರಿಯನ್ನು ಸೂಚಿಸದೇ ಮೃತರಾಗಿದಲ್ಲಿ ಆನಂತರ ತಂದೆಯ ಎಲ್ಲಾ ಮಕ್ಕಳು ಸಮಾನ ಪಾಲುದಾರರಾಗಿ ಅರ್ಹರಿರುತ್ತಾರೆ. ಇದು ಬಹುತೇಕ ಎಲ್ಲರಿಗೂ ಕೂಡ ತಿಳಿದಿದೆ.
ಇದರಂತೆಯೇ ಒಬ್ಬ ತಂದೆಗೆ ಆತನ ತಂದೆಯು ಅವರ ಸ್ವಯಾರ್ಜಿತ ಆಸ್ತಿಯನ್ನು ಪ್ರೀತಿಯಿಂದ ಕೊಟ್ಟಿದ್ದರೆ ಅದು ಪಿತ್ರಾಜಿತ ಆಸ್ತಿ ಎನಿಸಿಕೊಳ್ಳುವುದಿಲ್ಲ. ತಾತನ ಆಸ್ತಿ ತಂದೆಗೆ ಬಂದಿದೆ ಎನ್ನುವ ಕಾರಣಕ್ಕೆ ಹೆಣ್ಣು ಮಕ್ಕಳು ಅದು ಪಿತ್ರಾಜಿತ ಆಸ್ತಿ, ಪಾಲು ಬೇಕು ಎಂದು ಕೇಳುವಂತಿಲ್ಲ. ತಂದೆ ಇಚ್ಛೆಪಟ್ಟಲ್ಲಿ ಎಲ್ಲಾ ಮಕ್ಕಳಿಗೂ ಕೂಡ ಆಸ್ತಿಯಲ್ಲಿ ಸಮಾನ ಪಾಲು ಕೊಡಬಹುದು.
ಒಂದು ವೇಳೆ ನೀವು ಪಾಲು ಕೇಳಿದ ವಿಚಾರ ಅವರಿಗೆ ಇಷ್ಟವಾಗದೆ ಹೋದಲ್ಲಿ ಅವರು ನಿಮ್ಮನ್ನು ಬಿಟ್ಟು ಉಳಿದ ಮಕ್ಕಳಿಗೆ ಪಾಲು ಕೊಟ್ಟರೆ ನೀವು ಪ್ರಶ್ನಿಸಲು ಬರುವುದಿಲ್ಲ. ಹಾಗಾಗಿ ತಂದೆಗೆ ಆಸ್ತಿಯು ವಿಭಾಗದ ಮೂಲಕ ಬಂದಿದೆಯೋ, ಉಡುಗೊರೆ ಮೂಲಕ ಬಂದಿದೆಯೋ ಅಥವಾ ಸ್ವಯಾರ್ಜಿತವಾದ ಆಸ್ತಿಯೋ ಅಥವಾ ವೀಲ್ ಮೂಲಕ ಬಂದಿದೆಯೋ ಎನ್ನುವುದನ್ನು ನೀವು ತಿಳಿದುಕೊಂಡಿರಬೇಕು.
ಅದೇ ರೀತಿ ತಂದೆಗೆ ಆಸ್ತಿಯು, ತಂದೆಯ ತಾಯಿ ಕಡೆಯಿಂದ ಬಂದಿದ್ದರೆ ಅದು ಕೂಡ ಪಿತ್ರಾರ್ಜಿತ ಆಸ್ತಿ ಆಗುವುದಿಲ್ಲ. ತಂದೆಯ ತಾಯಿ ಅಂದರೆ ನಿಮ್ಮ ಅಜ್ಜಿ ಪ್ರೀತಿಯಿಂದ ಅವರ ಪಾಲಿಗೆ ಬಂದ ಆಸ್ತಿಯನ್ನು ನಿಮ್ಮ ತಂದೆಗೆ ಕೊಟ್ಟಿದ್ದರಿಂದ ಅದನ್ನು ಸಹ ಪಿತ್ರಾರ್ಜಿತ ಆಸ್ತಿ ಎಂದು ಪರಿಗಣನೆಗೆ ತೆಗೆದುಕೊಳ್ಳಲು ಬರುವುದಿಲ್ಲ. ನೀವು ಅದರಲ್ಲಿ ಪಾಲು ಕೊಡು ಎಂದು ತಂದೆ ಜೀವಿತಾವಧಿಯಲ್ಲಿ ಕೇಳಲು ಸಾಧ್ಯವಿಲ್ಲ.
ತಂದೆಯ ಮರಣದ ನಂತರ ತಂದೆಯು ಆಸ್ತಿ ಹಕ್ಕು ಯಾರಿಗೆ ಹೋಗಬೇಕು ಎಂದು ವೀಲ್ ಕೂಡ ಮಾಡದೆ ಹೋಗಿದ್ದಲ್ಲಿ ಎಲ್ಲಾ ಮಕ್ಕಳು ಸಮಾನವಾದ ಹಕ್ಕುದಾರರು ಆಗಿರುತ್ತಾರೆ. ತಂದೆ ತಾಯಿ ಜೀವಂತ ಇರುವಾಗ ಚೆನ್ನಾಗಿ ನೋಡಿಕೊಂಡರೆ ಅವರೇ ಪ್ರೀತಿಯಿಂದ ಆಸ್ತಿ ಹಕ್ಕನ್ನು ವರ್ಗಾವಣೆ ಮಾಡಿಕೊಡುತ್ತಾರೆ. ಅಥವಾ ಮಕ್ಕಳಿಗೆಲ್ಲಾ ಹಂಚಿ ಹೋಗುತ್ತಾರೆ.
ಆಗ ವಿನಾಕಾರಣ ಕೋರ್ಟು ಕೇಸು ಎಂದು ಅಲೆಯುವುದು ತಪ್ಪುತ್ತದೆ. ಹಾಗಾಗಿ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಿ ಆಸ್ತಿ ಹಕ್ಕಿನ ಕುರಿತು ಯಾವುದೇ ಗೊಂದಲಗಳಿದ್ದರೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಕಾನೂನು ಸಲಹಾ ಕೇಂದ್ರದಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ.