ಈಗಾಗಲೇ ಎಲ್ಲರಿಗೂ ತಿಳಿದಿದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೂ ಮುಂಚೆಯೇ ನಾವೇನಾದರೂ ಈ ಬಾರಿ ಅಧಿಕಾರಕ್ಕೆ ಬಂದರೆ ಜನರಿಗೆ 5 ಗ್ಯಾರಂಟಿಯನ್ನು ಉಚಿತವಾಗಿ ಕೊಡುತ್ತೇವೆ ಎನ್ನುವಂತಹ ಭರವಸೆಯನ್ನು ಕೊಟ್ಟಿದ್ದರು ಅದೇ ರೀತಿಯಾಗಿ ಈ ಬಾರಿ ಸಿಎಂ ಆಗಿ ಸಿದ್ದರಾಮಯ್ಯ ಅವರು ಆಯ್ಕೆಗೊಂಡಿದ್ದಾರೆ ಇವರು ಅಧಿಕಾರಕ್ಕೆ ಬಂದ ನಂತರ ಮೊಟ್ಟಮೊದಲನೆಯದಾಗಿ ಮಹಿಳೆಯರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವಂತಹ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದು.
ಈ ಒಂದು ಯೋಜನೆಯಲ್ಲಿ ಮಹಿಳೆಯರು ನಮ್ಮ ಕರ್ನಾಟಕ ರಾಜ್ಯದ ಒಳಗಡೆ ಎಲ್ಲಿ ಬೇಕಾದರೂ ಅಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದ್ದು ಅಲ್ಲಿ ಯಾವುದೇ ರೀತಿಯ ಹಣವನ್ನು ಪಾವತಿ ಮಾಡುವಂತಹ ಅವಶ್ಯಕತೆ ಇಲ್ಲ ಎಂದು ಹೇಳಿದ್ದರು. ಹೌದು ಅದೇ ರೀತಿಯಾಗಿ ಈ ಯೋಜನೆಯನ್ನು ಈಗಾಗಲೇ ಜಾರಿ ಮಾಡಿದ್ದು ಅದರ ಪ್ರಯೋಜನವನ್ನು ಮಹಿಳೆಯರು ಪಡೆದು ಕೊಳ್ಳುತ್ತಿದ್ದಾರೆ ಎಂದು ಹೇಳಬಹುದು.
ಅದರಲ್ಲೂ ಹಣಕಾಸಿನ ಸಮಸ್ಯೆ ಇರುವಂತಹ ಮಹಿಳೆಯರು ಅಂದರೆ ಕಡಿಮೆ ಹಣವನ್ನು ಸಂಪಾದನೆ ಮಾಡುವಂತಹ ಮಹಿಳೆಯರು ಬೇರೆ ಕಡೆ ಕಂಪನಿಗಳಿಗೆ ಹೋಗಿ ಫ್ಯಾಕ್ಟರಿಗಳಿಗೆ ಹೋಗಿ ಕೆಲಸ ಮಾಡುವಂತಹ ಮಹಿಳೆಯರಿಗೆ ಈ ಒಂದು ಯೋಜನೆ ತುಂಬಾ ಅನುಕೂಲವಾಗುತ್ತದೆ ಎಂದು ಹೇಳ ಬಹುದು. ಆದರೆ ಇದರ ಒಂದು ಸಮಸ್ಯೆ ಏನು ಎಂದರೆ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ತೊಂದರೆಯಾಗುತ್ತಿದೆ.
ಹೌದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಓಡಾಡುವುದರಿಂದ ಶಾಲೆಗೆ ಹೋಗುವಂತಹ ಕಾಲೇಜುಗಳಿಗೆ ಹೋಗುವಂತಹ ಮಕ್ಕಳಿಗೆ ಬಸ್ ಗಳು ನಿಲ್ಲಿಸುತ್ತಿಲ್ಲ ಹಾಗೂ ಹೆಚ್ಚಿನ ಜನಸಂಖ್ಯೆ ಇರುವುದರಿಂದ ಅವರಿಗೆ ತುಂಬಾ ತೊಂದರೆಯಾಗುತ್ತಿದೆ. ಆದರೆ ಈ ಒಂದು ಯೋಜನೆ ಹೆಚ್ಚಿನ ಜನಕ್ಕೆ ಪ್ರಯೋಜನವನ್ನು ಉಂಟು ಮಾಡಿದೆ ಅದೇ ರೀತಿಯಾಗಿ ಇನ್ನು ಎರಡನೆಯ ಗ್ಯಾರಂಟಿಯನ್ನು ನೋಡುವುದಾದರೆ.
ಮನೆಯಲ್ಲಿರುವಂತಹ ಮಹಿಳೆಯರಿಗೆ ಅಂದರೆ ಮನೆಯ ಮುಖ್ಯ ಸದಸ್ಯಗೆ ಪ್ರತಿ ತಿಂಗಳು 2000 ಹಣವನ್ನು ಕೊಡುವುದಾಗಿಯೂ ಸಹ ಆದೇಶವನ್ನು ಹೊರಡಿಸಿದ್ದರು. ಅದೇ ರೀತಿಯಾಗಿ ಈ ಒಂದು ಆದೇಶವನ್ನು ಈಗ ಜಾರಿ ಮಾಡಿದ್ದು ಇದಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಹೌದು ಈಗ ಆನ್ಲೈನ್ ನಲ್ಲಿ ಅರ್ಜಿಯನ್ನು ಬಿಟ್ಟಿದ್ದು ಇಲ್ಲಿ ಮಹಿಳೆಯರು ಅರ್ಜಿ ಯನ್ನು ಸಲ್ಲಿಸಬಹುದಾಗಿದೆ.
ಹಾಗಾದರೆ ಈ ಒಂದು ಅರ್ಜಿಯನ್ನು ಸಲ್ಲಿಸುವುದಕ್ಕೆ ಮಹಿಳೆಯರು ಯಾವುದೆಲ್ಲ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಹಾಗೂ ಯಾವುದೆಲ್ಲ ಶರತ್ತುಗಳು ಇರುತ್ತದೆ ಹಾಗೂ ಯಾವುದೆಲ್ಲ ನಿಯಮಗಳನ್ನು ಅನುಸರಿಸಬೇಕು ಹೀಗೆ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
https://sevasindhugs1.karnataka.gov.in/gl-sp/
ಮೇಲಿರುವ ಲಿಂಕ್ ಮೇಲೆ ಮೊದಲು ಕ್ಲಿಕ್ ಮಾಡಿ👆
* ಈ ಒಂದು ಅರ್ಜಿಯನ್ನು ಸಲ್ಲಿಸುವುದಕ್ಕೆ ಆಧಾರ್ ಕಾರ್ಡ್ ಉಪಯೋಗಿಸಿ ಅರ್ಜಿ ಸಲ್ಲಿಸಬಹುದು ಅಥವಾ ರೇಷನ್ ಕಾರ್ಡ್ ಉಪಯೋಗಿಸಿ ಅರ್ಜಿಯನ್ನು ಸಲ್ಲಿಸಬಹುದು.
* ಸೇವಾ ಸಿಂಧು ಮೂಲ ವೆಬ್ಸೈಟ್ ಗೆ ಹೋಗಿ ಅಲ್ಲೇ ಗೃಹಲಕ್ಷ್ಮಿ ಯೋಜನೆಯನ್ನು ಆಯ್ಕೆ ಮಾಡಿದಾಗ ಅದರಲ್ಲಿ ಎರಡು ರೀತಿಯ ಆಯ್ಕೆಗಳು ಬರುತ್ತದೆ ಅದರಲ್ಲಿ ಪ್ರೀ ಅಪ್ರೂಡ್ ಎನ್ನುವುದನ್ನು ಆಯ್ಕೆ ಮಾಡಿಕೊಂಡು ನೀವು ಮೊದಲನೆಯದಾಗಿ ರೇಷನ್ ಕಾರ್ಡ್ ಉಪಯೋಗಿಸಿ ಅರ್ಜಿಯನ್ನು ಸಲ್ಲಿಸಬಹುದು.
* ಅಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್, ನಿಮ್ಮ ಮೊಬೈಲ್ ಸಂಖ್ಯೆ, ನೀವು ಯಾವ ವರ್ಗಕ್ಕೆ ಸೇರುತ್ತೀರಿ, ಹಾಗೂ ನಿಮ್ಮ ಹೆಸರು ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಅಂದರೆ ಅಕೌಂಟ್ ನಂಬರ್ ಐ ಎಫ್ ಎಸ್ ಸಿ ಕೋಡ್ ಎಲ್ಲವೂ ಸಹ ಭರ್ತಿ ಮಾಡಿದ ನಂತರ ಆಧಾರ್ ಕಾರ್ಡ್ ವೆರಿಫಿಕೇಶನ್ ಎನ್ನುವುದರ ಮೇಲೆ ಆಯ್ಕೆ ಮಾಡಬೇಕು.
* ಆನಂತರ ಅಲ್ಲಿ ನಿಮಗೆ ಆಧಾರ್ ಸಂಖ್ಯೆ ಕೇಳುತ್ತದೆ ಆಧಾರ್ ಸಂಖ್ಯೆ ಯನ್ನು ಹಾಕಿದರೆ ಯಾವ ಮೊಬೈಲ್ ನಂಬರ್ ಲಿಂಕ್ ಆಗಿರುತ್ತದೆಯೋ ಅದಕ್ಕೆ ಒಂದು ಓಟಿಪಿ ಬರುತ್ತದೆ ಆನಂತರ ಅದನ್ನು ಅರ್ಜಿಯಲ್ಲಿ ಸಲ್ಲಿಸಿ ಓಕೆ ಮಾಡಿದರೆ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್ ಸಿದ್ಧವಾಗುತ್ತದೆ. ಹೌದು ಈ ವಿಧಾನಗಳನ್ನು ಅನುಸರಿಸುವುದರ ಮೂಲಕ ನೀವು ಗೃಹಲಕ್ಷ್ಮಿ ಯೋಜನೆಯ ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದು.