ಮನೆಗೆ ಬಾಗಿಲು ಬಾಗಿಲಿಗೆ ಒಂದು ಹೊಸ್ತಿಲು ಇದ್ದೇ ಇರುತ್ತದೆ ಅದರಲ್ಲಿ ಹೊಸತೇನಿದೆ ಎಂದು ಅಸಡ್ಡೆ ಮಾಡುವವರೇ ಜಾಸ್ತಿ. ಆದರೆ ಹೊಸ್ತಿಲು ಮನೆಯ ಒಂದು ಮುಖ್ಯವಾದ ಸ್ಥಳ ಮನೆಯ ಸದಸ್ಯರಾದರೂ ಹೊರ ಗಿನವರಾದರೂ ಅಥವಾ ಅದೃಷ್ಟ ಲಕ್ಷ್ಮೀ ಬರುವುದಾದರೂ. ನೆಗೆಟಿವಿಟಿ ಪ್ರವೇಶಿಸುವುದಾದರೂ ಎಲ್ಲವೂ ಆ ಹೊಸ್ತಿಲನ್ನು ದಾಟಿಯೇ ಬರುವುದು ಎಂಬುದನ್ನು ಮರೆಯಬೇಡಿ.
ಕೆಳಗಿನ ಹೊಸ್ತಿಲಿನಲ್ಲಿ ಶ್ರೀ ಮಹಾಲಕ್ಷ್ಮಿ ಮೇಲಿನ ಭಾಗದಲ್ಲಿ ಗೌರಿ ದೇವಿ ನೆಲೆಸಿರುತ್ತಾರೆ ಆದ್ದರಿಂದ ಹೊಸ್ತಿಲಿನ ವಿಚಾರವನ್ನು ಕಡೆಗಣಿಸಬೇಡಿ ಎಚ್ಚರಿಕೆ. ಮನೆಯಲ್ಲಿ ಮಕ್ಕಳು ಹೊಸ್ತಿಲನ್ನು ತುಳಿಯುವುದು ಅದರಲ್ಲೂ ಪಾದರಕ್ಷೆ ಹಾಕಿ ಕೊಂಡು ತುಳಿಯುವುದು ಇಂಥದೆಲ್ಲ ಮಾಡುವಾಗ ತಿಳಿಸಿ ಹೇಳುವುದು ಬಹಳ ಮುಖ್ಯ. ಹೊಸ್ತಿಲಿನ ಬಳಿ ಕುಳಿತುಕೊಂಡು ತಲೆ ಬಾಚುವ ಅಭ್ಯಾಸ ಕೆಲವರಿಗೆ ಇರುತ್ತೆ ಇದನ್ನು ಮಾಡಬೇಡಿ.
ಹೊಸ್ತಿಲಿನ ಬಳಿ ಡಸ್ಟ್ ಬಿನ್ ಇಡಬೇಡಿ ಹೊಸ್ತಿಲಿನ ಬಳಿ ವರಂಡ ಎಲ್ಲವನ್ನು ಸ್ವಚ್ಛವಾಗಿಡಿ. ಯಾರಾದರೂ ಮಾತನಾಡಿಸುವಾಗ ಅಥವಾ ಏನಾದರೂ ಕೊಡುವಾಗ ಹೊಸ್ತಿಲಿನ ಒಳಗೆ ಒಂದು ಕಾಲು ಹೊರಗೆ ಒಂದು ಕಾಲು ಇಟ್ಟು ನಿಲ್ಲುವುದು ದಟ್ಟ ದಾರಿದ್ರ ತರುತ್ತದೆ ನೆನಪಿರಲಿ. ಹೀಗಂತೂ ಎಲ್ಲರೂ ಬಹಳ ಬ್ಯುಸಿ ಇರುವ ಪರಿಸ್ಥಿತಿ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿದರೆ.
ಉಪ್ಪು ಹುಣಸೆ ಹುಟ್ಟುವ ಕಾಲ ಇದು ಇಂತಹ ಸಂದರ್ಭದಲ್ಲಿ ಇದನ್ನೆಲ್ಲಾ ಪಾಲಿಸುವುದು ಅಸಾಧ್ಯ ಎನಿಸಿ ದರೂ ಕೆಲವೊಂದು ಸೂಕ್ಷ್ಮತೆ ತಿಳಿಯುವುದು ಬಹಳ ಮುಖ್ಯ. ಹೊಸ್ತಿ ಲಿನ ಬಳಿ ಚಪ್ಪಲಿ ಬಿಡುವುದನ್ನು ಮಾಡಬೇಡಿ ತುಸು ದೂರ ಪ್ರತ್ಯೇಕ ಸ್ಥಳ ವಿವರಿಸಿ ಅಲ್ಲೇ ಬಿಡಿ. ಹೊಸ್ತಿಲಿಗೆ ಚಪ್ಪಲಿ ತಾಕುವುದು ನಿಮಗೆ ದುರಾದೃಷ್ಟ ತರುತ್ತದೆ ಎಚ್ಚರ.
ಕಸ ಗುಡಿಸುವಾಗ ಕಸ ಪೊರಕೆಯಿಂದ ಹೊಸ್ತಿಲನ್ನು ಗುಡಿಸಬೇಡಿ ಹೊಸ್ತಿಲನ್ನು ಒಂದು ಬಟ್ಟೆಯಿಂದ ಶುಚಿ ಮಾಡಿ ಅಥವಾ ನೀರಿನಿಂದ ಶುಚಿ ಮಾಡಿ. ಅರಿಶಿಣ ಕುಂಕುಮ ಹಚ್ಚಿ ರಂಗೋಲಿ ಇಟ್ಟು ಹೂವು ಇಟ್ಟು ಅಲಂಕರಿಸಿ ಲಕ್ಷ್ಮಿ ದೇವಿ ಸಂತೃಪ್ತಿಗೊಳ್ಳುತ್ತಾರೆ. ಕೆಲವರು ಪದೇ ಪದೇ ಇದನ್ನೆಲ್ಲಾ ಮಾಡಲು ಸಾಧ್ಯವಿಲ್ಲ ಎಂದು ಹರಿಶಿಣ ಬಣ್ಣದ PAINT ಬಳಿದು ಕುಂಕುಮ ಬಣ್ಣದ PAINT ಬಳಿದು ಬಿಳಿ ಬಣ್ಣದ PAINT ಬಳಸಿ ಶಾಶ್ವತ ರಂಗೋಲಿ ಹಾಕಿರುತ್ತಾರೆ.
ಆದರೆ ಅದು ತಪ್ಪು ನಮ್ಮ ಹಿರಿಯರು ಪಾಲಿಸಿರುವ ಈ ಸಂಪ್ರದಾಯಗಳು ನಮ್ಮ ಆರೋಗ್ಯ ಕ್ಕೂ ಅದೃಷ್ಟಕ್ಕೂ ಬಹಳ ಒಳಿತನ್ನು ಮಾಡುತ್ತದೆ. ಇದರಿಂದ ನಮ್ಮ ಮನೆಯಲ್ಲಿ ಸದಾ ಸುಖ ಶಾಂತಿ ಸಂತೋಷ ಹಾಗೂ ಮಹಾಲಕ್ಷ್ಮಿಯ ಕೃಪಾಕಟಾಕ್ಷ ತುಂಬಿ ತುಳುಕುತ್ತದೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಹೊಸ್ತಿಲಿನ ಬಳಿ ಯಾವ ಕೆಲಸವನ್ನು ಮಾಡಬಾರದು ಅವುಗಳನ್ನು ಮಾಡದೆ ಮೇಲೆ ಹೇಳಿದಂತಹ ಕೆಲ ವೊಂದಷ್ಟು ವಿಚಾರಗಳನ್ನು ತಿಳಿದುಕೊಂಡು ಅದನ್ನು ಪಾಲಿಸುವುದು ಉತ್ತಮ. ಅದರಿಂದ ನಿಮ್ಮ ಮುಂದಿನ ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಸಹ ಪಡೆಯಬಹುದು ಬದಲಿಗೆ ನೀವೇನಾದರೂ ಅಂತಹ ಕೆಲಸವನ್ನು ಮಾಡಿದ್ದೆ ಆದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಏಳಿಗೆಯನ್ನು ಪ್ರಗತಿಯನ್ನು ಹೊಂದಲು ಸಾಧ್ಯವಾಗುವುದಿಲ್ಲ ಹಾಗೂ ಇನ್ನೂ ಹೆಚ್ಚಿನ ಬಡತನವನ್ನು ಅನುಭವಿಸುತ್ತೀರಿ.
ಹಾಗಾಗಿ ಬಹಳ ಹಿಂದಿನ ದಿನ ದಿಂದಲೂ ಯಾವ ವಿಧಾನಗಳನ್ನು ಪಾಲಿಸಿಕೊಂಡು ಬಂದಿರುತ್ತೇವೆ ಯೋ ಅವುಗಳನ್ನು ನಮ್ಮ ಜೀವನದಲ್ಲಿ ಪಾಲಿಸುವುದು ಅಷ್ಟೇ ಮುಖ್ಯವಾಗಿರುತ್ತದೆ. ಯಾವುದೇ ಒಂದು ವಿಧಾನವನ್ನು ಸರಿ ಇಲ್ಲದೆ ಹಿಂದಿನವರು ಪಾಲಿಸುತ್ತಿರಲಿಲ್ಲ ಆದ್ದರಿಂದ ನಾವು ಕೂಡ ಅದೇ ವಿಧಾನವನ್ನು ಅನುಸರಿಸುವುದು ಉತ್ತಮ.