ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಈಗಾಗಲೇ ಪ್ರಾರಂಭವಾಗಿದ್ದು ಮನೆಯಲ್ಲಿರುವಂತಹ ಯಜಮಾನಿ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಲ್ಲಿ ಅರ್ಹರಾಗಿರುತ್ತಾರೆ. ಹೌದು ಎಪಿಎಲ್ ಕಾರ್ಡ್ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಮನೆಯ ಮುಖ್ಯ ಸದಸ್ಯೆ ಅಂದರೆ ಯಜಮಾನಿ ಪ್ರತಿ ತಿಂಗಳು 2000 ಹಣವನ್ನು ಪಡೆದುಕೊಳ್ಳಬಹುದಾಗಿದೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಹಲವಾರು ಗ್ಯಾರಂಟಿಗಳನ್ನು ಈಡೇರಿಸುವಲ್ಲಿ ಮುಂದಾಗಿದ್ದು ಅದರಲ್ಲಿ ಒಂದಾಗಿರುವಂತಹ ಗೃಹಲಕ್ಷ್ಮಿ ಯೋಜನೆ ಗ್ಯಾರಂಟಿ ಕೂಡ ಒಂದಾಗಿದೆ ಹೌದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆಯೇ ನಾವೇನಾದರೂ ಅಧಿಕಾರಕ್ಕೆ ಬಂದರೆ. ಜನರಿಗೆ ಐದು ಗ್ಯಾರಂಟಿಯನ್ನು ಕೊಡುತ್ತೇವೆ ಎನ್ನುವಂತಹ ಭರವಸೆ ಯನ್ನು ನೀಡಿದ್ದರು. ಅದರಂತೆಯೇ ಹಲವಾರು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದ್ದು.
ಅದರಲ್ಲೂ ಶಕ್ತಿ ಯೋಜನೆ ಅಂದರೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ 200 ಯೂನಿಟ್ ವಿದ್ಯುತ್ ಉಚಿತ ಅಂದರೆ 200 ಯೂನಿಟ್ ಒಳಗಡೆ ವಿದ್ಯುತ್ ಬಳಸಿದವರು ಯಾವುದೇ ರೀತಿಯಾದಂತಹ ಹಣವನ್ನು ಪಾವತಿ ಮಾಡುವಂತಹ ಅವಶ್ಯಕತೆ ಇರುವುದಿಲ್ಲ. ಬದಲಿಗೆ 200 ಯೂನಿಟ್ ಮೇಲೆ ವಿದ್ಯುತ್ ಉಪಯೋ ಗಿಸಿದರೆ ಅವರು ಹಣವನ್ನು ಪಾವತಿಸಬೇಕಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಸಹ ಹೇಳಿದ್ದರು.
ಹಾಗೂ ಈ ಒಂದು ಯೋಜನೆಗೆ ಅರ್ಜಿ ಆಹ್ವಾನ ಈಗಾಗಲೇ ಬಿಟ್ಟಿದ್ದು ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದೇ ಹೇಳಬಹುದು. ಅದೇ ರೀತಿಯಾಗಿ ಉಚಿತ ಬಸ್ ಪ್ರಯಾಣದ ವ್ಯವಸ್ಥೆಯನ್ನು ಸಹ ಪ್ರತಿಯೊಬ್ಬ ಮಹಿಳೆಯು ಕೂಡ ಉಪಯೋಗ ಮಾಡಿಕೊಳ್ಳುತ್ತಿದ್ದು ಕೆಲವೊಂದಷ್ಟು ಸಂದರ್ಭಗಳಲ್ಲಿ ಈ ಒಂದು ಯೋಜನೆ ತುಂಬಾ ಅನಾ ನುಕೂಲವಾಗಿದೆ ಎಂದೇ ಹೇಳಬಹುದು.
ಒಟ್ಟಾರೆಯಾಗಿ ಯಾವ ಐದು ಗ್ಯಾರಂಟಿಯನ್ನು ನಾವು ಜನರಿಗೆ ಕೊಡುತ್ತೇವೆ ಎಂದು ಹೇಳಿದ್ದರೋ ಆ ಒಂದು ಯೋಜನೆಗಳಲ್ಲಿ ಈಗಾಗಲೇ ಮೂರು ಯೋಜನೆ ಜಾರಿಗೆ ಬಂದಿದ್ದು. ಅದರಲ್ಲಿ ಈ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ ಹೌದು ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಯಾರೆಲ್ಲ ಅರ್ಹರು ಎಲ್ಲಿ ಹೋಗಿ ನೀವು ಇದಕ್ಕೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಹೀಗೆ ಈ ವಿಷಯವಾಗಿ ಸಂಬಂಧಿಸಿ ದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಕೂಲಾಂಕುಶವಾಗಿ ತಿಳಿದು ಕೊಳ್ಳುತ್ತಾ ಹೋಗೋಣ.
• ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಮನೆಯ ಒಡತಿ ಅಂದರೆ ಮನೆಯ ಮುಖ್ಯ ಸದಸ್ಯೆ ಅರ್ಹಳಿರುತ್ತಾಳೆ.
• ಅರ್ಜಿಯನ್ನು ಹಾಕುವಂತಹ ಅಭ್ಯರ್ಥಿಯೇ ಹೋಗಿ ಅರ್ಜಿಯನ್ನು ಹಾಕಬೇಕು ಎನ್ನುವಂತಹ ನಿಯಮವೇನು ಇಲ್ಲ. ಬದಲಿಗೆ ಮನೆಯಲ್ಲಿ ರುವಂತಹ ಅವಳ ಪತಿ ಅಥವಾ ಅವರ ಮಕ್ಕಳು ಸೊಸೆಯಂದಿರು ಯಾರಾದರೂ ಹೋಗಿ ಈ ಒಂದು ಅರ್ಜಿಯನ್ನು ಸಲ್ಲಿಸಬಹುದು.
• ಆದರೆ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಅರ್ಜಿದಾರರ ಆಧಾರ್ ಕಾರ್ಡ್, ಹಾಗೂ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವಂತಹ ಮೊಬೈಲ್ ತೆಗೆದುಕೊಂಡು ಹೋಗುವುದು ಕಡ್ಡಾಯ. ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್. ರೇಷನ್ ಕಾರ್ಡ್ ಜೆರಾಕ್ಸ್. ಹೀಗೆ ಇಷ್ಟು ದಾಖಲಾತಿಗಳು ಇದ್ದರೆ ಸಾಕು, ನೀವು ಈ ಒಂದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
ಅದರಲ್ಲೂ ಆಧಾರ್ ಕಾರ್ಡ್ ಗೆ ಯಾವ ಒಂದು ಮೊಬೈಲ್ ನಂಬರ್ ಲಿಂಕ್ ಆಗಿರುತ್ತದೆಯೋ, ಅದೇ ಮೊಬೈಲ್ ನಂಬರ್ ತೆಗೆದುಕೊಂಡು ಹೋಗುವುದು ಕಡ್ಡಾಯ ಏಕೆ ಎಂದರೆ ಆ ಒಂದು ಮೊಬೈಲ್ ಗೆ ಒಂದು ಓಟಿಪಿ ಸಂಖ್ಯೆ ಬರುತ್ತದೆ ಅದನ್ನು ಹಾಕಿದರೆ ಮಾತ್ರ ನೀವು ಈ ಒಂದು ಅರ್ಜಿಯನ್ನು ಸಂಪೂರ್ಣವಾಗಿ ಹಾಕಬಹುದಾಗಿರುತ್ತದೆ. ಆದ್ದರಿಂದ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಇರುವುದು ಕಡ್ಡಾಯ.
• ಹಾಗೇನಾದರೂ ರೇಷನ್ ಕಾರ್ಡ್ ನಲ್ಲಿ ನಿಮ್ಮ ಯಜಮಾನರ ತಾಯಿಯ ಹೆಸರು ಇದ್ದರೆ ಹಾಗೂ ಅವರೇನಾದರೂ ತೀರಿಹೋಗಿದ್ದರೆ ನೀವು ಈ ಒಂದು ಯೋಜನೆಯನ್ನು ಪಡೆದುಕೊಳ್ಳಲು ಸಾಧ್ಯವಾಗುವು ದಿಲ್ಲ ಬದಲಿಗೆ ನೀವು ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಸಿ ನಿಮ್ಮ ಹೆಸರನ್ನು ಮನೆಯ ಒಡತಿಯ ಜಾಗದಲ್ಲಿ ಹಾಕಿಸಿ ನಂತರ ನೀವು ಅರ್ಜಿಯನ್ನು ಸಲ್ಲಿಸಬಹುದು.
• ಕೆಲವೊಂದಷ್ಟು ಜನ ರೇಷನ್ ಕಾರ್ಡ್ ನಲ್ಲಿ ಮೊದಲು ಅಂದರೆ ಮನೆ ಯ ಒಡತಿ ಎಂದು ಇದ್ದರೆ ಮಾತ್ರ ಈ ಒಂದು ಅರ್ಜಿಯನ್ನು ಪಡೆಯಲು ಅರ್ಹ ಎಂದು ಹೇಳುತ್ತಿದ್ದರು. ಆದರೆ ಆ ರೀತಿಯ ನಿಯಮವೇನು ಇಲ್ಲ ಬದಲಿಗೆ ಮನೆಯ ಯಜಮಾನನ ಫೋಟೋ ಮೊದಲು ಇದ್ದು ನಂತರ ಹಿಂದೆ ನಿಮ್ಮ ವಿವರಗಳಿದ್ದರೂ ಸಹ ಅಂತವರು ಈ ಒಂದು ಅರ್ಜಿ ಯನ್ನು ಸಲ್ಲಿಸಬಹುದು ಅದನ್ನು ಬದಲಾಯಿಸುವ ಅವಶ್ಯಕತೆ ಇರುವುದಿಲ್ಲ.
• ಇನ್ನು ಈ ಒಂದು ಅರ್ಜಿಯನ್ನು ಗ್ರಾಮವನ್ನು ಬೆಂಗಳೂರು 1, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ 1, ಈ ಒಂದು ಕೇಂದ್ರಗಳಿಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬಹುದು.